ಮಕ್ಕಳನ್ನೂ ಬಿಡದ ದುಷ್ಕರ್ಮಿಗಳು... ಆಸ್ಟ್ರೇಲಿಯಾ ಬೀಚ್‌ನಲ್ಲಿ ಗುಂಡಿನ ದಾಳಿಗೆ 10 ಬಲಿ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಕ್ಕಳು, ಪೊಲೀಸ್ ಅಧಿಕಾರಿ ಸೇರಿದಂತೆ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಬೀಚ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಬಂದೂಕುಧಾರಿಯೊಬ್ಬನಿಗೆ ಗಾಯವಾಗಿದ್ದು, ಇನ್ನೊಬ್ಬನಿಗೆ ಪೊಲೀಸರು ಗುಂಡು ಹರಿಸಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಒಟ್ಟು ಮೂರು ಬಂದೂಕು ಪತ್ತೆಯಾಗಿದೆ ಎನ್ನಲಾಗಿದೆ.
(ಸಂಗ್ರಹ ಚಿತ್ರ) -
ಸಿಡ್ನಿ: ಬಂದೂಕುಧಾರಿಗಳಿಬ್ಬರು (Gunman) ನಡೆಸಿದ ಗುಂಡಿನ ದಾಳಿಯಲ್ಲಿ (Firing) ಹತ್ತು ಮಂದಿ ಸಾವನ್ನಪ್ಪಿದ ಘಟನೆ ಆಸ್ಟ್ರೇಲಿಯಾದ (Australia) ಸಿಡ್ನಿಯಲ್ಲಿ (Sydney) ನಡೆದಿದೆ. ಬೋಂಡಿ ಬೀಚ್‌ನಲ್ಲಿ (Bondi Beach) ಭಾನುವಾರ ಸಂಜೆ ನಡೆದ ಯಹೂದಿ ಹನುಕ್ಕಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 10 ಮಂದಿ ಸಾವನ್ನಪ್ಪಿದ್ದು, 190ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದು ಪೂರ್ವ ಯೋಜಿತ ದಾಳಿಯಾಗಿದೆ ಎಂದು ಪೊಲೀಸರು (Australia police) ಶಂಕಿಸಿದ್ದು, ಓರ್ವ ಬಂದೂಕುಧಾರಿ ಕೂಡ ಗಾಯಗೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಭಾನುವಾರ ಸಂಜೆ ಆಯೋಜಿಸಲಾದ ಯಹೂದಿ ಹನುಕ್ಕಾ ಕಾರ್ಯಕ್ರಮದ ವೇಳೆ ಈ ದಾಳಿ ನಡೆದಿದೆ. ಬಂದೂಕುಧಾರಿಗಳಿಬ್ಬರು ಗುಂಡಿನ ದಾಳಿ ನಡೆಸಿದ್ದು, ಮಕ್ಕಳು ಮತ್ತು ಪೊಲೀಸ್ ಅಧಿಕಾರಿ ಸೇರಿದಂತೆ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. 190ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ.
ಮಹಿಳೆಗೆ ವಂಚನೆ, ಲೈಂಗಿಕ ಕಿರುಕುಳ ಆರೋಪ; ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್‌ಐಆರ್
ಘಟನೆಯಲ್ಲಿ ಒಬ್ಬ ಬಂದೂಕುಧಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗುಂಡು ಹಾರಿಸಲಾಗಿದೆ. ಇಬ್ಬರು ಕೂಡ ತುರ್ತು ಸೇವೆ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಒಬ್ಬ ವ್ಯಕ್ತಿ ಗುಂಡು ಹಾರಿಸಿದ ವ್ಯಕ್ತಿಯನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತೆ ಅವನತ್ತ ಗುರಿಯಿಟ್ಟು ಗುಂಡು ಹಾರಿಸುವುದನ್ನು ಕಾಣಬಹುದು. ಇನ್ನೊಬ್ಬ ವ್ಯಕ್ತಿ ಸೇತುವೆ ಬಳಿಯಿಂದ ಗುಂಡು ಹಾರಿಸುವುದನ್ನು ಮುಂದುವರಿಸಿದ್ದಾನೆ. ಸುಮಾರು ಮೂರು ಬಂದೂಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮದ್ದುಗುಂಡು ಬೆಲ್ಟ್‌ಗಳನ್ನು ಧರಿಸಿದ್ದರು.
🇦🇺🔫‼️#BREAKING • Sydney Bondi Beach mass shooting — 10 dead and atleast 12 injured in a shooting incident at Sydney’s famous Bondi Beach during a Hanukkah gathering. One suspected shooter has been killed and another is in custody. pic.twitter.com/spdteamXwn
— GeopoliticsDawid (@RusUkrDawid) December 14, 2025
ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾ ಪೊಲೀಸರು ಮತ್ತು ತುರ್ತು ಸೇವೆ ವಿಭಾಗವು ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್, ತೀವ್ರ ನಿಗಾ ಅರೆವೈದ್ಯರು ಮತ್ತು ವಿಶೇಷ ಕಾರ್ಯಾಚರಣೆ ತಂಡಗಳು ಸೇರಿದಂತೆ 26 ಘಟಕಗಳನ್ನು ನಿಯೋಜಿಸಿತ್ತು. ಗಾಯಾಳುಗಳಿಗೆ ಸ್ಥಳದಲ್ಲಿ ತುರ್ತು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸೇಂಟ್ ವಿನ್ಸೆಂಟ್, ರಾಯಲ್ ಪ್ರಿನ್ಸ್ ಆಲ್ಫ್ರೆಡ್ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ಆಂಥೋನಿ ಅಲ್ಬನೀಸ್, ಇದು ತುಂಬಾ ಆಘಾತಕಾರಿ ಮತ್ತು ದುಃಖಕರವಾಗಿದ್ದು. ಸಂತ್ರಸ್ತರೊಂದಿಗೆ ನಾವಿದ್ದೇವೆ. ಸಾರ್ವಜನಿಕರು ಪೊಲೀಸ್ ಮಾರ್ಗದರ್ಶನವನ್ನು ಅನುಸರಿಸುವಂತೆ ತಿಳಿಸಿದ್ದಾರೆ.
ಉಗ್ರ ಮಸೂದ್ ಅಝರ್‌ನ ಭಯಾನಕ ಸಂಚನ್ನು ವಿಫಲಗೊಳಿಸಿದ ಭಾರತೀಯ ಸೇನೆ; ಅತೀ ದೊಡ್ಡ ದುರಂತ ತಪ್ಪಿದ್ದು ಹೇಗೆ?
ಸ್ಥಳೀಯರಾದ ಹ್ಯಾರಿ ವಿಲ್ಸನ್, ಬೋಂಡಿ ಬೀಚ್‌ನಲ್ಲಿ ತುಂಬಾ ಜನರು ಸೇರಿದ್ದರು. ಘಟನೆಯ ಬಳಿಕ ಕ್ರಿಸ್‌ಮಸ್ ಮಾರುಕಟ್ಟೆಗಳು ಅಸ್ತವ್ಯಸ್ತವಾಗಿತ್ತು. ಸುಮಾರು 10 ಜನರು ನೆಲದಲ್ಲಿ ಬಿದ್ದಿದ್ದರು. ಎಲ್ಲೆಡೆ ರಕ್ತವನ್ನು ನೋಡಿದೆ. ಭಯಭೀತರಾದ ಅನೇಕರು ಸ್ಥಳೀಯರ ಮನೆಗಳಲ್ಲಿ ಆಶ್ರಯ ಪಡೆದರು ಎಂದು ತಿಳಿಸಿದ್ದಾರೆ.
ಸಿಡ್ನಿಯ ಪೂರ್ವ ಕರಾವಳಿಯ ಅತ್ಯಂತ ಪ್ರಮುಖ ಪ್ರವಾಸಿ ತಾಣವಾದ ಬೋಂಡಿ ಬೀಚ್ ಗೆ ಪ್ರತಿದಿನ ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ಇಲ್ಲಿನ ಬೀಚ್ ನಲ್ಲಿ ಹಿಂದೆಯೂ ಗುಂಡಿನ ದಾಳಿ ನಡೆದಿತ್ತು. ಸುಮಾರು 11 ವರ್ಷಗಳ ಹಿಂದೆ ಸಿಡ್ನಿಯ ಲಿಂಡ್ಟ್ ಕೆಎಫ್‌ನಲ್ಲಿ ಬಂದೂಕುಧಾರಿಯೊಬ್ಬ 18 ಜನರನ್ನು ಒತ್ತೆಯಾಳಾಗಿ ಇರಿಸಿ ಇಬ್ಬರನ್ನು ಕೊಂದು ಹಾಕಿದ್ದನು.