ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

18 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಇಬ್ಬರು ಮಕ್ಕಳ ತಾಯಿ

ಇಬ್ಬರು ಮಕ್ಕಳ ತಾಯಿಯೊಬ್ಬಳು 18 ವರ್ಷದ ಯುವತಿಯನ್ನು ಪ್ರೀತಿಸಿ ಮದುವೆಯಾದ ಘಟನೆ ಬಿಹಾರದಲ್ಲಿ ನಡೆದಿದೆ. ಸಾಮಾಜಿಕ ನಿಯಮಗಳನ್ನು ಮುರಿದು ವಿವಾಹದ ಇಬ್ಬರು ಕೂಡ ಇದೀಗ ರಕ್ಷಣೆಗಾಗಿ ಆಡಳಿತದ ಮೊರೆ ಹೋಗಿದ್ದಾರೆ. ಏಪ್ರಿಲ್ 4ರಂದು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ವಿಂಧ್ಯಾಚಲ ದೇವಸ್ಥಾನದಲ್ಲಿ ಹಾಗೂ ಏಪ್ರಿಲ್ 6ರಂದು ರಾಮರೇಖಾ ಘಾಟ್‌ನಲ್ಲಿರುವ ಹಳೆಯ ಮದುವೆ ಮಂಟಪದಲ್ಲಿ ಅವರು ಸಂಪ್ರದಾಯಿಕ ವಿಧಿ ವಿಧಾನಗಳನ್ನು ಅನುಸರಿಸಿ ವಿವಾಹವಾದರು.

18 ವರ್ಷದ ಯುವತಿಯನ್ನು ವಿವಾಹವಾದ 2 ಮಕ್ಕಳ ತಾಯಿ

ಸಂಗ್ರಹ ಚಿತ್ರ -

ಬಿಹಾರ: ಸಾಮಾಜಿಕ ನಿಯಮಗಳನ್ನು ಮುರಿದು 18 ವರ್ಷದ ಯುವತಿ ಮತ್ತು 32 ವರ್ಷದ ಮಹಿಳೆ ವಿವಾಹವಾಗಿರುವ (wedding) ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಬಕ್ಸಾರ್‌ (Buxar) ಜಿಲ್ಲೆಯ ಡುಮ್ರಾನ್ ಉಪವಿಭಾಗದ ಬಾಗೆನ್ ಪೊಲೀಸ್ ಠಾಣೆ (Bagen police station) ಪ್ರದೇಶದಲ್ಲಿ ನಡೆದಿರುವ ಈ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. 32 ವರ್ಷದ ನಿಶಾ ಎಂಬಾಕೆ 18 ವರ್ಷದ ಪೂಜಾ ಎಂಬವಳನ್ನು ವಿವಾಹವಾಗಿದ್ದಾಳೆ. ನಿಶಾ ಇಬ್ಬರು ಮಕ್ಕಳ ತಾಯಿಯಾಗಿದ್ದು, ಇವರಿಬ್ಬರ ವಿವಾಹವು ನಗರದ ಐತಿಹಾಸಿಕ ರಾಮರೇಖಾ ಘಾಟ್‌ನಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ನಡೆದಿದೆ. ಇದಕ್ಕೆ ಅರ್ಚಕ ಮತ್ತು ನೂರಾರು ಸ್ಥಳೀಯರು ಸಾಕ್ಷಿಯಾಗಿದ್ದಾರೆ.

ಪೂಜಾ ಮತ್ತು ನಿಶಾ ಮೊದಲು ಏಪ್ರಿಲ್ 4ರಂದು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ವಿಂಧ್ಯಾಚಲ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಬಳಿಕ ಏಪ್ರಿಲ್ 6ರಂದು ರಾಮರೇಖಾ ಘಾಟ್‌ನಲ್ಲಿರುವ ಹಳೆಯ ಮದುವೆ ಮಂಟಪದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಪಾಲಿಸಿ ಮತ್ತೆ ವಿವಾಹವಾದರು. ಇವರ ವಿವಾಹದ ಸುದ್ದಿ ಕೇಳಿ ನೂರಾರು ಜನರು ಸ್ಥಳದಲ್ಲಿ ಸೇರಿದ್ದರು. ವಿವಾಹ ವಿಧಿ ವಿಧಾನಗಳನ್ನು ಪೂಜಾ ಗಂಡನಾಗಿ, ನಿಶಾ ಪತ್ನಿಯಾಗಿ ನೆರವೇರಿಸಿದ್ದಾರೆ.

ಕಿಡ್ನ್ಯಾಪ್‌ ಪ್ರಕರಣ ಬಯಲಿಗೆಳೆದ ರಸ್ತೆ ಅಪಘಾತ; ಮೂವರು ಅಪಹರಣಕಾರರು ಸಾವು: ಮಕ್ಕಳು ಸೇರಿ ಮೂವರ ರಕ್ಷಣೆ

ಪೂಜಾ ಮತ್ತು ನಿಶಾ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಚಿತರಾಗಿದ್ದು, ಜೊತೆಗೆ ರೀಲ್‌ಗಳನ್ನು ರಚಿಸುತ್ತಿದ್ದರು. ಈ ನಡುವೆ ಇವರಿಬ್ಬರ ಮಧ್ಯೆ ಪ್ರೀತಿಯಾಗಿದೆ. ಅವರಿಬ್ಬರ ಕುಟುಂಬಗಳಿಂದ ನಿರಂತರ ಕೊಲೆ ಬೆದರಿಕೆ ಬರುತ್ತಿರುವುದರಿಂದ ಈಗ ಅವರಿಬ್ಬರೂ ರಕ್ಷಣೆಗಾಗಿ ಆಡಳಿತದ ಮೊರೆ ಹೋಗಿದ್ದಾರೆ.

ಈ ಕುರಿತು ಮಾಧ್ಯಮವೊಂದರ ಜೊತೆ ಮಾತನಾಡಿದ ಪೂಜಾ, ನನ್ನ ಪೋಷಕರು ಮತ್ತು ನಿಶಾಳ ಪತಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಿಶಾ ಇಬ್ಬರು ಮಕ್ಕಳ ತಾಯಿ. ನಮಗೆ ಬೆಂಬಲ ಬೇಕು. ನಾವು ಹಳ್ಳಿಗೆ ಹೋಗಬಾರದು ಎಂದು ನಮ್ಮ ಕುಟುಂಬಗಳು ಹೇಳುತ್ತಿವೆ. ಮದುವೆಯಾಗಿದ್ದೀರಿ, ಎಲ್ಲಿ ಬೇಕಾದರೂ ಹೋಗಿ ಎನ್ನುತ್ತಿದ್ದಾರೆ ಎಂದು ತಿಳಿಸಿದರು.

ಶಾರ್ಟ್‌ಕಟ್ ರೂಟ್‌ನಿಂದ ಭಾರಿ ದುರಂತ: ಬಾವಿಯೊಳಗೆ ಕಾರು ಬಿದ್ದು 9 ಮಂದಿ ಜಲ ಸಮಾಧಿ

ನಿಶಾ ಪ್ರತಿಕ್ರಿಯಿಸಿ, ಕಳೆದ ಹಲವಾರು ವರ್ಷಗಳಿಂದ ನನ್ನ ಮಕ್ಕಳು ತಮ್ಮ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಾನು ನನ್ನ ಪತಿಯೊಂದಿಗೆ ವಾಸಿಸುತ್ತಿದ್ದೆ. ಆದರೆ ಅವರು ಕೆಲಸ ಹುಡುಕಿಕೊಂಡು ಬೇರೆಡೆಗೆ ಹೋದರು. ಬಳಿಕ ನಾವಿಬ್ಬರೂ ಒಟ್ಟಿಗೆ ವಿಡಿಯೊಗಳನ್ನು ಮಾಡಲು ಪ್ರಾರಂಭಿಸಿದೆವು.

ಪೂಜಾ ನನ್ನ ಮನೆಗೆ ಹಲವಾರು ಬಾರಿ ಬಂದಿದ್ದಳು. ಬಳಿಕ ನಮ್ಮ ನಡುವೆ ಪ್ರೀತಿ ಹುಟ್ಟಿಕೊಂಡಿದೆ. ನಾವಿಬ್ಬರೂ ವಿಂಧ್ಯಾಚಲಕ್ಕೆ ಹೋದಾಗ ಮದುವೆಯಾಗಿ ಒಟ್ಟಿಗೆ ಇರಲು ನಿರ್ಧರಿಸಿದೆವು. ನಮ್ಮ ಮದುವೆಯ ಬಳಿಕ ಪತಿ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ನಮಗೆ ಸಹಾಯ ಬೇಕು ಎಂದು ಹೇಳಿದರು.