ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀವನ ಶೈಲಿಗೆ ತಕ್ಕ ಆರೋಗ್ಯ ಅಗತ್ಯ

ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ತಾಂತ್ರಿಕವಾಗಿ ಮುಂದುವರಿದಿದ್ದರೂ, ದೈಹಿಕವಾಗಿ ದುರ್ಬಲನಾಗುತ್ತಿದ್ದಾನೆ. ಸಂಸ್ಕರಿಸಿದ ಆಹಾರ , ದೈಹಿಕ ಶ್ರಮದ ಕೊರತೆ ಮತ್ತು ಅತಿಯಾದ ಮಾನಸಿಕ ಒತ್ತಡಗಳು ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಽ ಕಾಯಿಲೆಗಳಿಗೆ ದಾರಿ ಕಲ್ಪಿಸಿ ಕೊಡುತ್ತಿವೆ.

ಜೀವನ ಶೈಲಿಗೆ ತಕ್ಕ ಆರೋಗ್ಯ ಅಗತ್ಯ

-

Profile
Ashok Nayak Apr 7, 2026 11:39 PM

ವಿನುತಾ ಹೆಗಡೆ ಶಿರಸಿ

ಇಂದು ವಿಶ್ವ ಆರೋಗ್ಯ ದಿನಾಚರಣೆ

ರೋಗ ಮುಕ್ತವಾಗುವುದೇ ಬದುಕಿನ ಗುರಿ ಆಗಲಿ

ಆರೋಗ್ಯವೇ ಭಾಗ್ಯ ಎಂಬುದು ಕೇವಲ ಗಾದೆಯಲ್ಲ, ಅದು ಬದುಕಿನ ಪರಮ ಸತ್ಯ. ಪ್ರತಿ ವರ್ಷ ಏ.7ರಂದು ಜಗತ್ತಿನಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಸ್ತಿತ್ವಕ್ಕೆ ಬಂದ ದಿನವನ್ನು ಸ್ಮರಿಸಲು ಮತ್ತು ಜಾಗತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.

2026ರ ಈ ಸಂದರ್ಭದಲ್ಲಿ, ಬದಲಾಗುತ್ತಿರುವ ಜೀವನಶೈಲಿಯ ನಡುವೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದು ಮುಖ್ಯ ಚಿಂತನೆಯಾಗಿದೆ.

ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ತಾಂತ್ರಿಕವಾಗಿ ಮುಂದುವರಿದಿದ್ದರೂ, ದೈಹಿಕವಾಗಿ ದುರ್ಬಲನಾಗುತ್ತಿದ್ದಾನೆ. ಸಂಸ್ಕರಿಸಿದ ಆಹಾರ , ದೈಹಿಕ ಶ್ರಮದ ಕೊರತೆ ಮತ್ತು ಅತಿಯಾದ ಮಾನಸಿಕ ಒತ್ತಡಗಳು ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಽ ಕಾಯಿಲೆಗಳಿಗೆ ದಾರಿ ಕಲ್ಪಿಸಿ ಕೊಡುತ್ತಿವೆ.

ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವ ಈ ‘ಜೀವನಶೈಲಿ ಕಾಯಿಲೆಗಳು’ ಇಡೀ ಸಮಾಜವನ್ನು ಆತಂಕಕ್ಕೆ ದೂಡಿವೆ. ಈ ವರ್ಷದ ಆಚರಣೆಯು ಕೇವಲ ರೋಗಮುಕ್ತರಾಗುವುದಕ್ಕೆ ಸೀಮಿತ ವಾಗಿಲ್ಲ. ಗುಣಮಟ್ಟದ ಆರೋಗ್ಯ ಸೇವೆಗಳು ಪ್ರಪಂಚದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದು ಇದರ ಆಶಯ. ಆರ್ಥಿಕ ಅಡಚಣೆಯಿಂದಾಗಿ ಯಾರೊಬ್ಬರೂ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬ ಸಮಾನತೆಯ ಸಂದೇಶವನ್ನು ಈ ದಿನ ಸಾರುತ್ತದೆ.

ಇದನ್ನೂ ಓದಿ: Kidney Health : ಎಲ್ಲಾ ವಯಸ್ಸಿನವರಲ್ಲೂ ಮೂತ್ರಪಿಂಡದ (ಕಿಡ್ನಿ) ಆರೋಗ್ಯ: ತಡೆಗಟ್ಟುವಿಕೆ, ಆರೈಕೆ ಮತ್ತು ಜಾಗೃತಿ

ನಾವು ಅನುಸರಿಸಬೇಕಾದ ಕ್ರಮಗಳು: ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಈ ಕೆಳಗಿನ ಕ್ರಮಗಳನ್ನು ಪಾಲಿಸುವುದು ಅಗತ್ಯ.

ಸಮತೋಲಿತ ಆಹಾರ: ದಿನನಿತ್ಯದ ಆಹಾರದಲ್ಲಿ ಹಣ್ಣು, ತರಕಾರಿ ಮತ್ತು ಪ್ರೋಟೀನ್ ಅಂಶಗಳಿರಲಿ. ಉಪ್ಪು ಮತ್ತು ಸಕ್ಕರೆಯ ಬಳಕೆ ಮಿತವಾಗಿರಲಿ.

ನಿಯಮಿತ ವ್ಯಾಯಾಮ: ದಿನಕ್ಕೆ ಕನಿಷ್ಠ 30 ನಿಮಿಷಗಳ ನಡಿಗೆ ಅಥವಾ ಯೋಗಾಭ್ಯಾಸವು ದೇಹವನ್ನು ಚಟುವಟಿಕೆಯಿಂದ ಇಡುತ್ತದೆ.

ಮಾನಸಿಕ ಸ್ವಾಸ್ಥ್ಯ: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಧ್ಯಾನ ಮತ್ತು ಉತ್ತಮ ಹವ್ಯಾಸಗಳ ಮೂಲಕ ಒತ್ತಡವನ್ನು ನಿರ್ವಹಿಸಿ.

ಪರಿಶುದ್ಧ ಕುಡಿಯುವ ನೀರು: ರೋಗಗಳ ತಡೆಗಟ್ಟುವಿಕೆಯಲ್ಲಿ ಶುದ್ಧ ನೀರು ಮತ್ತು ನೈರ್ಮಲ್ಯದ ಪಾತ್ರ ದೊಡ್ಡದು.

ಆರೋಗ್ಯ ಎನ್ನುವುದು ಕೇವಲ ಆಸ್ಪತ್ರೆ ಮತ್ತು ಔಷಧಿಗಳಿಗೆ ಸೀಮಿತವಾದುದಲ್ಲ, ಅದು ನಮ-- ದೈನಂದಿನ ಶಿಸ್ತು. ದೇಶದ ಪ್ರಗತಿಯು ಆ ದೇಶದ ಜನರ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ಈ ವಿಶ್ವ ಆರೋಗ್ಯ ದಿನದಂದು, ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ಸ್ವಚ್ಛ ಮತ್ತು ಸುಸ್ಥಿರ ಪರಿಸರ ನಿರ್ಮಾಣಕ್ಕೆ ಪಣ ತೊಡೋಣ.

ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ

ಉತ್ತರ ಕನ್ನಡ ಜಿಲ್ಲೆಯು ಭೌಗೋಳಿಕವಾಗಿ ಗುಡ್ಡಗಾಡು, ಅರಣ್ಯ ಮತ್ತು ಕರಾವಳಿ ತೀರಗಳನ್ನು ಹೊಂದಿರುವ ವಿಶಿಷ್ಟ ಪ್ರದೇಶವಾಗಿದೆ. ಇಲ್ಲಿನ ಜನರ ಆರೋಗ್ಯ ಸ್ಥಿತಿಗತಿಗಳು ಇಲ್ಲಿನ ಪರಿಸರ ಮತ್ತು ಜೀವನಶೈಲಿಗೆ ನೇರವಾಗಿ ಸಂಬಂಧಿಸಿವೆ. ಉತ್ತರ ಕನ್ನಡ ಜಿಲ್ಲೆಯ ಜನರು ನೈಸರ್ಗಿಕವಾಗಿ ಸದೃಢರಾಗಿದ್ದರೂ, ಆಧುನಿಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಚಿಕಿತ್ಸೆಗಾಗಿ ಪರದಾ ಡುವ ಸ್ಥಿತಿ ಇದೆ. ಜಿಲ್ಲೆಯ ಆರೋಗ್ಯ ಮೂಲಸೌಕರ್ಯದ ಬಗ್ಗೆ ಜನರಲ್ಲಿ ದೊಡ್ಡ ಮಟ್ಟದ ಜಾಗೃತಿ ಮತ್ತು ಹೋರಾಟಗಳು ನಡೆಯುತ್ತಿರುವುದು ಗಮನಾರ್ಹ.