ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sabarimala Temple: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಚಿನ್ನ ಕಳವು: 6 ವಾರದೊಳಗೆ ತನಿಖೆ ಪೂರ್ಣಗೊಳಿಸಲು SITಗೆ ಕೇರಳ ಹೈಕೋರ್ಟ್ ಸೂಚನೆ

SIT: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನದ ಕಳ್ಳತನ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಆರು ವಾರಗಳ ಒಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಕೇರಳ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್ ವಿ . ಮತ್ತು ಕೆ.ವಿ. ಜಯಕುಮಾರ್ ಅವರ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ.

ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್

-

Profile Sushmitha Jain Oct 10, 2025 10:25 PM

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ(Sabarimala Temple)ದಲ್ಲಿನ ಚಿನ್ನ ಕಳ್ಳತನ ಪ್ರಕರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡ (SIT) ಆರು ವಾರದೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಕೆ ಮಾಡುವಂತೆ ಕೇರಳ ಹೈಕೋರ್ಟ್(Kerala Highcourt) ಶುಕ್ರವಾರ ಆದೇಶ ನೀಡಿದೆ.

ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್ ವಿ. ಹಾಗೂ ಕೆ.ವಿ. ಜಯಕುಮಾರ್ ಅವರ ದ್ವಿಸದಸ್ಯ ಪೀಠವು, ಚಿನ್ನದ ಲೇಪನ ಕೆಲಸದ ಪ್ರಾಯೋಜಕರಾದ ಉಣ್ಣಿಕೃಷ್ಣನ್ ಪೊಟ್ಟಿ ಅವರಿಗೆ ಸರಿಸುಮಾರು 474.9 ಗ್ರಾಂ ಚಿನ್ನವನ್ನು ಹಸ್ತಾಂತರಿಸಲಾಗಿದೆ ಎಂದು ವರದಿ ಬಹಿರಂಗಪಡಿಸಿದ್ದು, ದೇವಾಲಯದ ಪಕ್ಕದ ಚೌಕಟ್ಟುಗಳ ಚಿನ್ನದ ದುರುಪಯೋಗದ ಬಗ್ಗೆ ಅಪರಾಧ ಪಕರಣ ದಾಖಲಿಸುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ.

ಈ ಸುದ್ದಿಯನ್ನು ಓದಿ: Lokayukta Raid: ನಿವೃತ್ತ ಎಂಜಿನಿಯರ್‌ ಮನೆ ಮೇಲೆ ಲೋಕಾಯುಕ್ತ ದಾಳಿ; ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಪತ್ತೆ

ಈ ತನಿಖೆಯ ಕುರಿತು ಗೌಪ್ಯತೆ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಯಾವುದೇ ಮಾಹಿತಿ ಸೋರಿಕೆಯಾಗಬಾರದು ಎಂದು ಹೈಕೋರ್ಟ್ ನಿರ್ದೇಶನ ಕೊಟ್ಟಿದೆ. ಎಸ್‌ಐಟಿ ಪ್ರಕರಣದ ಮಾಹಿತಿಯ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸುವಂತೆ ಆದೇಶ ನೀಡಿದೆ. ಎರಡು ವಾರಗಳಿಗೊಮ್ಮೆ ಪ್ರಗತಿ ವರದಿ ಸಲ್ಲಿಸಬೇಕು ಹಾಗೂ ತನಿಖಾ ತಂಡದಲ್ಲಿ ಇಬ್ಬರು ಹೆಚ್ಚುವರಿ ಡಿವೈಎಸ್‌ಪಿಗಳನ್ನು ಸೇರಿಸಬೇಕು. ಈ ಪ್ರಕರಣದಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಕಕ್ಷಿದಾರರನ್ನಾಗಿ ಮಾಡಲಾಗಿದೆ. ಜತೆಗೆ ಉಣ್ಣಿಕೃಷ್ಣನ್ ಪೊಟ್ಟಿ ಈ ವಿಷಯದ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡದಂತೆ ಸೂಚಿಸಿದೆ.

2019ರಲ್ಲಿ ದ್ವಾರಪಾಲಕ ವಿಗ್ರಹಗಳ ಜೀರ್ಣೋದ್ಧಾರ ಕಾರ್ಯದ ವೇಳೆ 4.5 ಕೆಜಿಗೂ ಹೆಚ್ಚು ಚಿನ್ನ ಕಾಣೆಯಾಗಿದೆ ಎಂಬುದು ತಿಳಿದಿದೆ. ಈ ಸಮಯದಲ್ಲಿ ಎಲೆಕ್ಟ್ರೋಪ್ಲೇಟಿಂಗ್‌ಗಾಗಿ ಪೊಟ್ಟಿಗೆ ಚಿನ್ನದ ಲೇಪಿತ ತಾಮ್ರದ ತಟ್ಟೆಗಳನ್ನು ನೀಡುವಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಕ್ರಮವನ್ನು ಗಮನಿಸಿದ ಹೈಕೋರ್ಟ್ ದ್ವಾರಪಾಲಕ ಶಿಲ್ಪಗಳು, ದೇವಾಲಯದ ಮುಂಭಾಗ ಹಾಗೂ ಹಿಂಭಾಗದ ಬಾಗಿಲುಗಳು ಚಿನ್ನದಿಂದ ಮುಚ್ಚಲ್ಪಟ್ಟಿದ್ದವು. ಈ ವೇಳೆಯಲ್ಲಿ ವಿವಿಧ ಅಧಿಕಾರಿಗಳು ಹಾಜರಿದ್ದರು ಎಂದು ನ್ಯಾಯಾಲಯ ಹೇಳಿದೆ.

ಚಿನ್ನದ ಕಳ್ಳತನ ಮಾಡಿರುವುದು ಹಾಗೂ ತಿರುಚುವಿಕೆಯ ಹಿಂದಿನ ನಿಜವಾದ ಅಪರಾಧಿಗಳನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಯಿಂದ ಪತ್ತೆ ಮಾಡಬೇಕು. ತನಿಖೆ ವೇಳೆ ವಶಪಡಿಸಿಕೊಂಡ ಎಲ್ಲ ದಾಖಲೆಗಳನ್ನು ರಿಜಿಸ್ಟ್ರಾರ್ ಬಳಿ ಸುರಕ್ಷಿತವಾಗಿಡಬೇಕು ಎಂದು ಹೈಕೋರ್ಟ್ ಎಸ್‌ಐಟಿ ಮುಖ್ಯಸ್ಥ ಎಸ್‌ಪಿ ಎಸ್. ಶಶಿಧರನ್, ವಿಜಿಲೆನ್ಸ್ ಎಸ್‌ಪಿ ಅಂತಿಮ ವರದಿಯನ್ನು ಸಲ್ಲಿಸಿದರು. ನಂತರ ತನಿಖೆಯ ಬಗ್ಗೆ ಸ್ಪಷ್ಟತೆ ಖಚಿತಪಡಿಸಿಕೊಳ್ಳಲು ಹೈಕೋರ್ಟ್ ಪೀಠವು ಅವರೊಂದಿಗೆ ಪ್ರತ್ಯೇಕ ಚರ್ಚೆಗಳನ್ನು ನಡೆಸಿತು ಎಂಬುದು ತಿಳಿದಿದೆ.