ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಷ್ಕರ್-ಎ-ತೈಬಾ ಜೊತೆ ನಂಟು: ಹರಿಯಾಣ, ರಾಜಸ್ಥಾನದ ಹಲವರ ಬಂಧನ

ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಹರಿಯಾಣ ಮತ್ತು ರಾಜಸ್ಥಾನದ ಹಲವಾರು ಮಂದಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ನಕಲಿ ಆಧಾರ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್‌ಗಳನ್ನು ಮಾಡಿ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿತ್ತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಹಲವರ ಬಂಧನ

ಸಂಗ್ರಹ ಚಿತ್ರ -

ನವದೆಹಲಿ: ಕೇಂದ್ರ ಗುಪ್ತಚರ ಮಾಹಿತಿ (central intelligence agencies) ಮೇರೆಗೆ ನಕಲಿ ಪ್ಯಾನ್ ಕಾರ್ಡ್ (Fake pan card), ಆಧಾರ್ ಕಾರ್ಡ್ (Aadhaar card), ಮತದಾರರ ಗುರುತು ಚೀಟಿ (Voter id), ಪಾಸ್‌ಪೋರ್ಟ್‌ಗಳನ್ನು (fake passports) ತಯಾರಿಸಿ ಭಯೋತ್ಪಾದಕರ (terror) ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದ ಹರಿಯಾಣ (Haryana) ಮತ್ತು ರಾಜಸ್ಥಾನದ (Rajasthan) ಹಲವಾರು ಮಂದಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು (jammu and kashmir police) ಬಂಧಿಸಿದ್ದಾರೆ. ಈ ಗುಂಪು ಲಷ್ಕರ್-ಎ-ತೈಬಾದ ( Lashkar-e-Taiba) ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕದಲ್ಲಿತ್ತು ಎನ್ನಲಾಗಿದೆ. ಈ ಕುರಿತು ಭಾನುವಾರ ಮಾಹಿತಿ ನೀಡಿದ ಅಧಿಕಾರಿಗಳು, ಭಯೋತ್ಪಾದಕರು ನಕಲಿ ಗುರುತುಗಳನ್ನು ಪಡೆಯಲು ಅನುಕೂಲವಾಗುವಂತೆ ಸಹಾಯ ಮಾಡುತ್ತದೆ ಹಲವಾರು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಲಷ್ಕರ್-ಎ-ತೈಬಾ ಭಯೋತ್ಪಾದಕ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದ ಜಾಲವನ್ನು ಬೇಧಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣ ಮತ್ತು ರಾಜಸ್ಥಾನದ ಹಲವಾರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರು ಭಯೋತ್ಪಾದಕರಿಗೆ ಆಧಾರ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್‌ಗಳಂತಹ ದಾಖಲೆಗಳನ್ನು ಮಾಡಲು ಸಹಾಯ ಮಾಡುತ್ತಿದ್ದರು.

ಕಟ್ಟಡದ ಮೇಲಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ; ಉಪನ್ಯಾಕರಿಂದ ಕಿರುಕುಳ ಆರೋಪ

ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಆರಂಭದಲ್ಲಿ ಶ್ರೀನಗರ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಇದು ದೊಡ್ಡ ಜಾಲವೆಂದು ಅರಿವಾಗಿದ್ದರಿಂದ ಇದರ ತನಿಖೆಯಲ್ಲಿ ಕೇಂದ್ರ ಸಂಸ್ಥೆಗಳು ಮತ್ತು ಇತರ ರಾಜ್ಯಗಳ ಪೊಲೀಸ್ ಪಡೆಗಳನ್ನು ಸೇರಿಕೊಂಡವು.

ಭಯೋತ್ಪಾದಕರಲ್ಲಿ ಒಬ್ಬನಾದ ಉಮರ್ ಅಲಿಯಾಸ್ ಖಾರ್ಘೋಷ್ ಇದೇ ತಂಡದಿಂದ ನಕಲಿ ಪಾಸ್‌ಪೋರ್ಟ್ ಪಡೆದು ಇಂಡೋನೇಷ್ಯಾಕ್ಕೆ ಪಲಾಯನ ಮಾಡಿದ್ದಾನೆ. ಬಳಿಕ ಅಲ್ಲಿಂದ ಆತ ಮತ್ತೊಂದು ನಕಲಿ ದಾಖಲೆ ಪಡೆದು ಗಲ್ಫ್ ಗೆ ಹೋಗಿದ್ದಾನೆ. ಪಾಕಿಸ್ತಾನದ ಕರಾಚಿಯವನಾದ ಉಮರ್ 2012ರ ಅನಂತರ ಭಾರತಕ್ಕೆ ಬಂದಿದ್ದನು. 2024ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಾಕಿಸ್ತಾನಿ ಭಯೋತ್ಪಾದಕ ಅಬ್ದುಲ್ಲಾ ಅಲಿಯಾಸ್ ಅಬು ಹುರೇರಾ ಸೇರಿದಂತೆ ಐವರನ್ನು ಶ್ರೀನಗರ ಪೊಲೀಸರು ಬಂಧಿಸಿದ ಬಳಿಕ ಅಂತರ್ ರಾಜ್ಯ ಎಲ್‌ಇಟಿ ಮಾಡ್ಯೂಲ್ ವಿಸ್ತರಿಸಿರುವುದು ಬೆಳಕಿಗೆ ಬಂದಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಡೆದ ಕೆಂಪು ಕೋಟೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯ ಕೇಂದ್ರೀಕೃತವಾಗಿದ್ದ ಭಯೋತ್ಪಾದನಾ ಜಾಲವನ್ನು ಬೇಧಿಸಿದ ಬಳಿಕ ಇದೀಗ ಶ್ರೀನಗರ ಪೊಲೀಸರ ಮತ್ತೊಂದು ಪ್ರಮುಖ ಕಾರ್ಯಾಚರಣೆ ಇದಾಗಿದೆ.

ಪ್ರಕರಣದಲ್ಲಿ ಬಂಧಿತರಾಗಿರುವ ಅಬ್ದುಲ್ಲಾ ಮತ್ತು ಇನ್ನೊಬ್ಬ ಪಾಕಿಸ್ತಾನಿ ಪ್ರಜೆ ಉಸ್ಮಾನ್ ಅಲಿಯಾಸ್ ಖುಬೈಬ್ ವಿಚಾರಣೆ ವೇಳೆ ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ಗಳಲ್ಲಿ ಉಮರ್‌ ನಡೆಸುತ್ತಿದ್ದ ಚಟುವಟಿಕೆ ಬಗ್ಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ಕಾರ್ಯಾಚರಣೆ ಪ್ರಾರಂಭಿಸಿದ ಶ್ರೀನಗರ ಪೊಲೀಸರು ಎಲ್‌ಇಟಿಯ ಹಣಕಾಸು ಮೂಲಗಳನ್ನು ಪತ್ತೆ ಮಾಡಿದೆ. ಬಳಿಕ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವಲ್ಲದೆ ಇತರ ಹಲವಾರು ರಾಜ್ಯಗಳಲ್ಲಿ ಜಾಲವನ್ನು ರಚಿಸಲು ನಕಲಿ ದಾಖಲೆ ಮತ್ತು ಗುರುತುಗಳನ್ನು ಬಳಸಿರುವುದನ್ನು ಬಹಿರಂಗ ಪಡಿಸಿದೆ.

ಇದಕ್ಕೆ ಸಂಬಂಧಿಸಿ ಶ್ರೀನಗರ ನಿವಾಸಿಗಳಾದ ಮೊಹಮ್ಮದ್ ನಕೀಬ್ ಭಟ್, ಆದಿಲ್ ರಶೀದ್ ಭಟ್ ಮತ್ತು ಗುಲಾಮ್ ಮೊಹಮ್ಮದ್ ಮಿರ್ ಅಲಿಯಾಸ್ ಮಾಮಾ ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಇವರು ಭಯೋತ್ಪಾದಕರಿಗೆ ಆಶ್ರಯ, ಆಹಾರವನ್ನು ಒದಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ನಕೀಬ್ ಭಟ್‌ ನ ಬಳಿ ಪಿಸ್ತೂಲ್ ಸೇರಿದಂತೆ ಹಲವು ಅಪರಾಧ ಸಾಮಗ್ರಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ವಿಚಾರಣೆ ವೇಳೆ ಜಕೂರಿನ ಆದಿಲ್ ರಶೀದ್ ಬಗ್ಗೆ ಮಾಹಿತಿ ನೀಡಿದ್ದಾನೆ. ಮೊಹಮ್ಮದ್ ಮಿರ್ ಮತ್ತು ರಶೀದ್ ಭಟ್‌ ಬಂಧನದ ಬಳಿಕ ಭಯೋತ್ಪಾದಕರ ಹಲವು ಅಡಗುತಾಣಗಳನ್ನುಪತ್ತೆ ಹಚ್ಚಲಾಯಿತು.

ಬಂಧಿತರಾಗಿರುವ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು 'ಎ' ದರ್ಜೆಯ ಉಗ್ರರು ಎಂದು ವರ್ಗೀಕರಿಸಲಾಗಿದೆ. ಇವರು ಸುಮಾರು 16 ವರ್ಷಗಳ ಹಿಂದೆ ಭಾರತಕ್ಕೆ ನುಸುಳಿದ್ದರು. ಬಳಿಕ ಕಾಶ್ಮೀರ ಕಣಿವೆಯ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯರಾಗಿದ್ದರು. ಇವರ ಮೂಲಕ 40 ವಿದೇಶಿ ಭಯೋತ್ಪಾದಕರು ಭಾರತಕ್ಕೆ ಬಂದಿದ್ದು, ಅವರಲ್ಲಿ ಬಹುತೇಕ ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತದಲ್ಲಿ ಭಯೋತ್ಪಾದನಾ ಜಾಲ ವಿಸ್ತರಣೆ; ಬಯಲಾಯಿತು ಪಾಕಿಸ್ತಾನದ ಉಗ್ರರ ಸಂಚು

ಶ್ರೀನಗರ ಸೇರಿದಂತೆ ನಗರದ ಹಲವು ಭಾಗಗಳಿಂದ ಮೂರು ಎಕೆ-47 ರೈಫಲ್‌ಗಳು, ಒಂದು ಎಕೆ-ಕ್ರಿಂಕೋವ್ ರೈಫಲ್, ಪಿಸ್ತೂಲ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಗ್ಯಾಜೆಟ್‌ಗಳನ್ನು ಒಳಗೊಂಡಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.