ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಹಾರದಲ್ಲಿ ಪೊಲೀಸರ ಮೇಲೆ ಜನರಿಂದ ಕಲ್ಲು ತೂರಾಟ: ಬಂಧಿಸಲ್ಪಟ್ಟಿದ್ದ ಅಪರಾಧಿ ಬಿಡುಗಡೆ

ಶಸ್ತ್ರಾಸ್ತ್ರ ವ್ಯವಹಾರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿರುವ ಅಪರಾಧಿಯನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಪೊಲೀಸರ ಮೇಲೆ ಸುಮಾರು 200 ಜನರ ತಂಡವೊಂದು ಕಲ್ಲು ತೂರಾಟ ನಡೆಸಿದೆ. ಇದರಿಂದ ಅಪರಾಧಿ ತಪ್ಪಿಸಿಕೊಂಡಿರುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.

ಬಿಹಾರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ

ಸಂಗ್ರಹ ಚಿತ್ರ -

ಬಿಹಾರ: ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ಪೊಲೀಸರ (bihar police) ಮೇಲೆ ಕಲ್ಲು ತೂರಾಟ (stone pelt) ನಡೆಸಿರುವ ಘಟನೆ ಬಿಹಾರದ (bihar) ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ. ಶಸ್ತ್ರಾಸ್ತ್ರ ವ್ಯವಹಾರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿರುವ ಅಪರಾಧಿ ವೈಶಾಲಿ ಜಿಲ್ಲೆಯ ಮಹ್ನಾರ್ ಪ್ರದೇಶದಲ್ಲಿ ಇದ್ದಾನೆ ಎನ್ನುವ ಸುಳಿವಿನ ಮೇರೆಗೆ ಅಲ್ಲಿಗೆ ತೆರಳಿದ ಪೊಲೀಸರು ಆತನನ್ನು ಬಂಧಿಸಿ ಕರೆದುಕೊಂಡು ಬರುತ್ತಿದ್ದ ವೇಳೆ ಸುಮಾರು 200 ಜನರ ಗುಂಪೊಂದು ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ಅಪರಾಧಿ ತಪ್ಪಿಸಿಕೊಂಡಿದ್ದಾನೆ.

ವೈಶಾಲಿ ಜಿಲ್ಲೆಯಲ್ಲಿ ಗುಂಪೊಂದು ಪೊಲೀಸ್ ತಂಡದ ಮೇಲೆ ದಾಳಿ ಮಾಡಿದ್ದರಿಂದ ಬಂಧಿತ ಅಪರಾಧಿ ಪರಾರಿಯಾಗಿದ್ದಾನೆ. ಬೆದರಿಕೆ ಮತ್ತು ಗುಂಡು ಹಾರಿಸಿದ ಆರೋಪದ ಮೇರೆಗೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಅಂತ್ಯಕ್ರಿಯೆಗೆ ಮುನ್ನ ಖಾಲಿ ಕಾಗದಗಳಲ್ಲಿ ಮೃತ ತಂದೆಯ ಹೆಬ್ಬೆರಳಿನ ಗುರುತು ಪಡೆದ ಮಗ! ವಿಡಿಯೋ ನೋಡಿ

ಅಪರಾಧಿಯನ್ನು ಬಂಧಿಸಿದ ಸ್ವಲ್ಪ ಸಮಯದ ಬಳಿಕ ಪೊಲೀಸರ ಮೇಲೆ ಸುಮಾರು 200 ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಇದರಿಂದ ಅಪರಾಧಿ ತಪ್ಪಿಸಿಕೊಂಡಿದ್ದಾನೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.



Chikkaballapur News: ವಿದ್ಯಾರ್ಥಿ ಪರಿಷತ್ತು ಅಕಾಡೆಮಿಕ್ ಹಾಗೂ ಸೇವಾ ಪರಂಪರೆಯನ್ನು ಎತ್ತಿಹಿಡಿಯಲಿ: ಡಾ.ಕೋಡಿ ರಂಗಪ್ಪ

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು ಶಸ್ತ್ರಾಸ್ತ್ರ ವ್ಯವಹಾರ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿಯೊಬ್ಬನನ್ನು ಮಹ್ನಾರ್ ಪ್ರದೇಶದಲ್ಲಿ ಬಂಧಿಸಲಾಗಿತ್ತು. ಇದರ ಸ್ವಲ್ಪ ಸಮಯದ ಬಳಿಕ ಸ್ಥಳದಲ್ಲಿ ಸೇರಿದ ಜನರ ಗುಂಪು ಪೋಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಇದರಂದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾನೆ. ದಾಳಿಯಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಮತ್ತು ಬಂಧಿಸಲು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.