ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿ; ಅವಮಾನಕ್ಕೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ನಂತರ ಅವಮಾನ ತಾಳಲಾರದೆ 19 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ನಿರ್ಮಾಣ ಹಂತದಲ್ಲಿರುವ ಕಟ್ಟಡದ 12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಶನಿವಾರ ಬಾಗ್ರು ಪ್ರದೇಶದಲ್ಲಿ ನಡೆದಿದೆ.

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ  ಬಿದ್ದಿದ್ದಕ್ಕೆ ಆತ್ಮಹತ್ಯೆಗೆ ಶರಣು

ಸಾಂದರ್ಭಿಕ ಚಿತ್ರ -

Vishakha Bhat
Vishakha Bhat Dec 29, 2025 4:08 PM

ಜೈಪುರ: ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ನಂತರ ಅವಮಾನ ತಾಳಲಾರದೆ 19 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ನಿರ್ಮಾಣ ಹಂತದಲ್ಲಿರುವ ಕಟ್ಟಡದ 12 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಶನಿವಾರ ಬಾಗ್ರು ಪ್ರದೇಶದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಬಿಹಾರದ ಪಾಟ್ನಾ ಮೂಲದ ಪ್ರಿಯಾಂಶು ರಾಜ್ ಎಂದು ಗುರುತಿಸಲಾಗಿದ್ದು, ಈತ ಮಣಿಪಾಲ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ (ಮೊದಲ ವರ್ಷ) ಓದುತ್ತಿದ್ದ ಮತ್ತು ಕಾಲೇಜು ಹಾಸ್ಟೆಲ್‌ನಲ್ಲಿ ತಂಗಿದ್ದ ಎಂದು ಎಸ್‌ಎಚ್‌ಒ ರಾಜೇಂದ್ರ ಕುಮಾರ್ ಗೋದಾರ ತಿಳಿಸಿದ್ದಾರೆ.

ಸ್ಕೂಟರ್ ಬಾಡಿಗೆಗೆ ಪಡೆದು ಕಾಲೇಜಿನಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಪ್ರಯಾಣಿಸಿ, ಅಲ್ಲಿ ತನ್ನ ಬ್ಯಾಗ್ ಮತ್ತು ಮೊಬೈಲ್ ಫೋನ್ ಅನ್ನು 12 ನೇ ಮಹಡಿಯ ಗೋಡೆಯ ಮೇಲೆ ಇಟ್ಟು ಕೆಳಗೆ ಜಿಗಿದಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿದ್ದ ಕಾರ್ಮಿಕರು ಜೋರಾಗಿ ಬಡಿಯುವ ಶಬ್ದ ಕೇಳಿದ ನಂತರ ಅದನ್ನು ಕಾರ್ಮಿಕ ಬಿದ್ದಿದ್ದಾನೆಂದು ತಪ್ಪಾಗಿ ಭಾವಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಗಂಭೀರಾವಸ್ಥೆಯಲ್ಲಿ ಈತನನ್ನು ಬಗ್ರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆತನನ್ನು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕಟ್ಟಡದಲ್ಲಿ ಶೋಧ ನಡೆಸಿದಾಗ, ಪೊಲೀಸರು 12 ನೇ ಮಹಡಿಯಿಂದ ವಿದ್ಯಾರ್ಥಿಯ ಬ್ಯಾಗ್ ಮತ್ತು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬ್ಯಾಗ್‌ನಲ್ಲಿ ಆತನ ಗುರುತನ್ನು ದೃಢೀಕರಿಸುವ ದಾಖಲೆಗಳು, ವಿಷ ಮತ್ತು ನೀರಿನ ಬಾಟಲಿ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓದುವಂತೆ ಹೇಳಿದ್ದಕ್ಕೆ ಆತ್ಮಹತ್ಯೆ

ಓದುವಂತೆ ಬುದ್ದಿ ಹೇಳಿದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟು ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಬಾಲ್ಕಟ್ಟು ನಿವಾಸಿ ಮಲ್ಲಿಕಾ ಎಂಬವರ ಮಗಳು ಸಮನ್ವಿ ಎಂದು ಗುರುತಿಸಲಾಗಿದೆ. ಉಡುಪಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಎರಡನೇ ವರ್ಷದ ಪಿಯುಸಿ ವಿಧ್ಯಾಬ್ಯಾಸ ಮಾಡುತ್ತಿದ್ದ ಸಮನ್ವಿಗೆ ಡಿ.26ರಂದು ಸಂಜೆ ವೇಳೆ ತಾಯಿ ಮುಂಬರುವ ಪರೀಕ್ಷೆಯ ಬಗ್ಗೆ ಓದಲು ಹೇಳಿದ್ದರು. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಇದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.