ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪದೇ ಪದೆ ಕಾಡುವ ಹೊಟ್ಟೆನೋವಿಗೆ ಕಾರಣವೇನು? ಪರಿಹಾರ ಹೇಗೆ? ಇಲ್ಲಿದೆ ತಜ್ಞರ ಸಲಹೆ

Health Tips: : IBS ಎಂದರೆ ಇರಿಟೇಬಲ್‌ ಬವಲ್‌ ಸಿಂಡ್ರೋಮ್‌ ಎಂದರ್ಥ. ಅಂದ್ರೆ ಹೊಟ್ಟೆ ಮತ್ತು ಕರುಳಲ್ಲಿ ಆಗುವ ಸಾಮಾನ್ಯವಾದ ಕಾರ್ಯಾತ್ಮಕ ಸಮಸ್ಯೆ. ಇದು ಅಪಾಯಕಾರಿ ಆರೋಗ್ಯ ಸಮಸ್ಯೆಯೇನೂ ಅಲ್ಲ. ಆದರೆ ಆಗಾಗ ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗಬಹುದು. ಈ ಸಮಸ್ಯೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಡುವುದು ಸಾಮಾನ್ಯ. ಇದಕ್ಕೆ ಯಾವೆಲ್ಲ ಚಿಕಿತ್ಸಾ ಕ್ರಮಗಳಿವೆ? ಪದೇ ಪದೆ ಕಾಡುವ ಹೊಟ್ಟೆ ನೋವಿಗೆ ಯಾವ ಬಗೆಯ ಆಹಾರ ಸೇವಿಸಬೇಕು? ಎನ್ನುವುದರ ಬಗ್ಗೆ ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ ಮಾಹಿತಿ ನೀಡಿದ್ದಾರೆ.

ಇರಿಟೇಬಲ್ ಬೋವೆಲ್ ಸಿಂಡ್ರೋಮ್ ಬಗ್ಗೆ ಎಚ್ಚರ ವಹಿಸಿ

ಡಾ. ಮಲ್ಲಿಕಾರ್ಜುನ್‌ ಡಂಬಳ -

Profile
Pushpa Kumari Mar 4, 2026 7:00 AM

ಬೆಂಗಳೂರು, ಮಾ. 4: IBS ಎಂದರೆ ಇರಿಟೇಬಲ್‌ ಬವಲ್‌ ಸಿಂಡ್ರೋಮ್‌ (Irritable bowel syndrome) ಎಂದರ್ಥ. ಅಂದರೆ ಹೊಟ್ಟೆ ಮತ್ತು ಕರುಳಲ್ಲಿ ಆಗುವ ಸಾಮಾನ್ಯವಾದ ಕಾರ್ಯಾತ್ಮಕ ಸಮಸ್ಯೆ. ಇದು ಅಪಾಯಕಾರಿ ಆರೋಗ್ಯ ಸಮಸ್ಯೆಯೇನು ಅಲ್ಲ. ಆದರೆ ಆಗಾಗ ಹೊಟ್ಟೆ ನೋವಿನ ಸಮಸ್ಯೆಗೆ ಕಾರಣವಾಗಬಹುದು. ಈ ಸಮಸ್ಯೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಡುವುದು ಸಾಮಾನ್ಯ. IBS ಇದ್ದಾಗ ವ್ಯಕ್ತಿ ಊಟ ತಿಂಡಿ ಮಾಡಲು ಯಾಕೆ ಹಿಂಜರಿಯುತ್ತಾನೆ? ಇದಕ್ಕೆ ಯಾವೆಲ್ಲ ಚಿಕಿತ್ಸಾ ಕ್ರಮಗಳಿವೆ? ಪದೇ ಪದೆ ಕಾಡುವ ಹೊಟ್ಟೆ ನೋವಿಗೆ ಯಾವ ಬಗೆಯ ಆಹಾರ ಸೇವಿಸ ಬೇಕು? ಎನ್ನುವುದರ ಬಗ್ಗೆ ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ್‌ ಡಂಬಳ ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ಗೆ ಮಾಹಿತಿ ನೀಡಿದ್ದಾರೆ.

IBS ಇರಿಟೇಬಲ್‌ ಬವಲ್‌ ಸಿಂಡ್ರೋಮ್‌ ಹೆಚ್ಚಾಗಿ ದೊಡ್ಡ ಕರುಳಿಗೆ ಸಮಸ್ಯೆಯನ್ನು ಉಂಟು ಮಾಡಬಹುದು.‌ ಇದು ಸಣ್ಣ ಕರುಳಿನಲ್ಲಿ ಅತಿಯಾದ ಬ್ಯಾಕ್ಟೀರಿಯಾದ ಬೆಳವಣಿಗೆಯಾಗಿ ಉಬ್ಬರ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಸೂಕ್ತ ಪ್ರಮಾಣದ ನೀರು ದೇಹಕ್ಕೆ ಸಿಗದಿದ್ದಾಗ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು.

ವಿಡಿಯೊ ನೋಡಿ:



ಹೆಚ್ಚಿದ ಒತ್ತಡದ ಸಮಯದಲ್ಲಿ ಐಬಿಎಸ್ ಹೊಂದಿರುವ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಇದರಿಂದ ಹೊಟ್ಟೆ ಭಾರವಾದಂತೆ ಅನುಭವವಾಗಿ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಪದೇ ಪದೆ ಹೊಟ್ಟೆ ನೋವು, ಅತಿಯಾದ ವಾಯು, ಅತಿಸಾರ, ಮಲಬದ್ಧತೆ , ಮಲದಲ್ಲಿ ಲೋಳೆಯ ಅಂಶ ಇತ್ಯಾದಿ ಸಮಸ್ಯೆ ಕಂಡು ಬರುವುದು ಈ ಸಮಸ್ಯೆಯ ಪ್ರಮುಖ ಲಕ್ಷಣ.

ಬಳಲದೆಯೇ ತೂಕ ಇಳಿಸಬಹುದೇ? ಈ ಟಿಪ್ಸ್‌ ಅನುಸರಿಸಿದರೆ ಸಾಧ್ಯವಿದೆ

ಪರಿಹಾರವೇನು?

  • ಜೀವನಶೈಲಿ ಮತ್ತು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಈ ರೋಗಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು.
  • ಗ್ಯಾಸ್ಟ್ರಿಕ್ ಉಂಟು ಮಾಡುವ ಆಹಾರಗಳನ್ನು ತಪ್ಪಿಸಿ. ಹೆಚ್ಚು ಎಣ್ಣೆ, ಮಸಾಲೆ, ಕೆಫೀನ್ ಆಹಾರ ದೂರ ಮಾಡಿ.
  • ಹೊರಗಿನ ಮಸಾಲಯುಕ್ತ ಆಹಾರ ತಪ್ಪಿಸಿ. ಬಿಸಿಬಿಸಿ, ತಾಜಾ ಆಹಾರ ಸೇವನೆ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು.
  • ಕಾರ್ಬೋಹೈಡ್ರೇಟ್‌ ಆಹಾರಗಳಾದ ಅಕ್ಕಿ, ಓಟ್ಸ್, ಕ್ವಿನೋವಾ, ರಾಗಿ, ಜೋವರ್ ಸೇವನೆ ಉತ್ತಮ.