ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vande Mataram Row: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು; ಎಫ್‌ಐಆರ್‌ ದಾಖಲಿಸದಿದ್ದರೆ ಹೈಕೋರ್ಟ್‌ ಮೊರೆ ಹೋಗುವುದಾಗಿ ಬಿಜೆಪಿ ಮುಖಂಡ ವಿಕಾಸ್ ಎಚ್ಚರಿಕೆ

BJP Leader Vikas Puttur: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್‌ ನಾಯಕರು ರಾಷ್ಟ್ರೀಯ ಗೀತೆ ʼವಂದೇ ಮಾತರಂʼಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ವಿಕಾಸ್‌ ಪುತ್ತೂರು ದೂರು ದಾಖಲಿಸಿದ್ದಾರೆ.

ʼವಂದೇ ಮಾತರಂʼ ವಿವಾದ: ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನಲ್ಲಿ ದೂರು

ಮಂಗಳೂರಿನಲ್ಲಿ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲು -

Ramesh Ballamoole
Ramesh Ballamoole Aug 16, 2026 10:08 PM

ಮಂಗಳೂರು, ಆ. 16: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಸೇರಿ ಕಾಂಗ್ರೆಸ್‌ ನಾಯಕರು ರಾಷ್ಟ್ರೀಯ ಗೀತೆ ʼವಂದೇ ಮಾತರಂʼಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ವಿವಾದ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ (Vande Mataram Row). ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲೂ ʼವಂದೇ ಮಾತರಂʼ ಕಿಚ್ಚು ಜೋರಾಗಿದೆ. ಸೋನಿಯಾ ಗಾಂಧಿ ವಿರುದ್ಧ ಮಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ದೂರು ದಾಖಲಿಸಿದ್ದು, ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲು ಆಗ್ರಹಿಸಿರುವ ವಿಕಾಸ್‌, ಇಲ್ಲದಿದ್ದರೆ ಹೈಕೋರ್ಟ್ ಮೂಲಕ ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ದೂರು ನೀಡಿದ ಬಳಿಕ ಮಾತನಾಡಿದ ಅವರು, ʼʼಇಡೀ ಭಾರತ ದೇಶ 80ನೇ ವರ್ಷದ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆದರೆ ಕಾಂಗ್ರೆಸ್ 140 ಕೋಟಿ ಜನರಿಗೆ ಅವಮಾನ ಮಾಡಿದೆʼʼ ಎಂದು ಕಿಡಿಕಾರಿದ್ದಾರೆ.

ದೂರು ನೀಡಿದ ಬಿಜೆಪಿ ನಾಯಕ ವಿಕಾಸ್‌ ಪುತ್ತೂರು:



ಕಾಂಗ್ರೆಸ್‌ ಕಚೇರಿಯಲ್ಲಿ ಅವಮಾನ

ʼʼಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ʼವಂದೇ ಮಾತರಂʼ ಗೀತೆಗೆ ಅವಮಾನವಾಗಿದೆ. ಧ್ವಜಾರೋಹಣದ ವೇಳೆ ʼವಂದೇ ಮಾತರಂʼಗೆ ಕಾಂಗ್ರೆಸ್‌ ನಾಯಕರು ಅಗೌರವ ತೋರಿದ್ದಾರೆ. ʼವಂದೇ ಮಾತರಂʼ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಕೊಟ್ಟ ಕ್ರಾಂತಿ ಗೀತೆ. ಅಂತಹ ರಾಷ್ಟ್ರ ಗಾನವನ್ನ ಪೂರ್ಣ ಪ್ರಮಾಣದಲ್ಲಿ ಪ್ರಸ್ತುತ ಪಡಿಸಬಾರದು. ಅರ್ಧಕ್ಕೆ ನಿಲ್ಲಿಸಬೇಕು ಎಂದು ಸೋನಿಯಾ ಗಾಂಧಿ ಸೂಚನೆ ಕೊಟ್ಟಿದ್ದನ್ನು ಇಡೀ ದೇಶದ ಜನತೆ ನೋಡಿದ್ದಾರೆʼʼ ಎಂದು ಆರೋಪಿಸಿದ್ದಾರೆ.

ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಗೆ ಸೋನಿಯಾ ಗಾಂಧಿ ಆಕ್ಷೇಪ? ಬಿಜೆಪಿ ಆರೋಪ, ಕಾಂಗ್ರೆಸ್ ಸ್ಪಷ್ಟನೆ

ʼʼರಾಷ್ಟ್ರೀಯ ಚಿಹ್ನೆ, ಸಂಕೇತದ ಘನತೆಗೆ ಅವಮಾನ ಮಾಡೋದು ಕಾನೂನಿನ ಪ್ರಕಾರ ಅಪರಾಧ. ʼಜನ ಗಣ ಮನʼದಷ್ಟೆ ʼವಂದೇ ಮಾತರಂʼಗೆ ಸ್ಥಾನಮಾನ, ಗೌರವ ಮಾನ್ಯತೆ ಇದೆ . ಈ ನೆಲೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಭಾರತೀಯ ನ್ಯಾಯ ಸಂಹಿತೆಯ ಆಧಾರದಲ್ಲಿ ಸೆಕ್ಷನ್‌ಗಳನ್ನೂ ಹಾಕಬೇಕು ಎಂದು ಉರ್ವ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ಸೋನಿಯಾ ಗಾಂಧಿ ಮೇಲೆ ಎಫ್‌ಐಆರ್ ದಾಖಲಿಸದೇ ಹೋದರೆ ಈ ರಾಜ್ಯದಲ್ಲಿ ರಾಷ್ಟ್ರ ವಿರೋಧಿ ಸರ್ಕಾರ ಇದೆ ಎಂದು ಭಾವಿಸಲಾಗುತ್ತೆʼʼ ಎಂದು ಹೇಳಿದ್ದಾರೆ.

ʼʼಕಾಂಗ್ರೆಸ್‌ ನಾಯಕರ ಪ್ರಭಾವಕ್ಕೆ ಒಳಪಟ್ಟು ಪೊಲೀಸರು ಎಫ್‌ಐಆರ್ ದಾಖಲಿಸದೆ ಹೋದರೆ ನಾವು ಹೈ ಕೋರ್ಟ್ ಮೊರೆ ಹೋಗುತ್ತೇವೆ. ಪ್ರೈವೇಟ್ ಕಂಪ್ಲೇಂಟ್ ಮೂಲಕ ಕಾನೂನು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಯಾವಾಗಲೂ ʼವಂದೇ ಮಾತರಂʼ ಗೀತೆಗೆ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. 1937ರಲ್ಲಿಯೇ ಕಾಂಗ್ರೆಸ್ ಪೂರ್ಣ ಪ್ರಮಾಣದ ʼವಂದೇ ಮಾತರಂʼ ಹಾಡಬಾರದು ಎಂದು ವಿರೂಪಗೊಳಿಸಿ ಕತ್ತರಿ ಹಾಕಿತ್ತುʼʼ ಎಂದು ದೂರಿದ್ದಾರೆ.

ವಂದೇ ಮಾತರಂ ವಿವಾದ: ಕ್ಷಮೆಯಾಚಿಸುವಂತೆ ಸೋನಿಯಾ ಗಾಂಧಿಗೆ ಒತ್ತಾಯಿಸಿದ ಬಂಕಿಮ್ ಚಟ್ಟೋಪಾಧ್ಯಾಯರ ಕುಟುಂಬ

ಬಿಜೆಪಿ ಪ್ರತಿಭಟನೆ

ಸದ್ಯ ಬಿಜೆಪಿ ದೇಶಾದ್ಯಂತ ಕಾಂಗ್ರೆಸ್‌ ವಿರುದ್ಧ ಹೋರಾಟ ಹಮ್ಮಿಕೊಂಡಿದೆ. ʼವಂದೇ ಮಾತರಂʼಗೆ ಅಗೌರವ ತೋರಿದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಮತ್ತಿ ಮಲ್ಲಿಕಾರ್ಜುಬ ಖರ್ಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ. ಇತ್ತ ಕೈ ಪಡೆ ಬಿಜೆಪಿ ಆರೋಪವನ್ನು ತಳ್ಳಿ ಹಾಕಿದೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.