ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

KCET Counselling 2026: ಎಂಜಿನಿಯರಿಂಗ್ ಸೇರಿ ಇತರ ಕೋರ್ಸ್‌ ಪ್ರವೇಶಾತಿ; 3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಲಿಂಕ್ ಬಿಡುಗಡೆ

UGCET-2026: ಎಂಜಿನಿಯರಿಂಗ್‌ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಹಾಗೂ ಅಪ್ ಗ್ರೆಡೇಷನ್‌ಗೆ ಹೋಗಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸೆ.2ರಂದು ಬೆಳಿಗ್ಗೆ 11ರಿಂದ ಸೆ.3ರ ಸಂಜೆ‌ 6 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ‌ ನೀಡಲಾಗಿದೆ.

ಎಂಜಿನಿಯರಿಂಗ್ ಸೀಟು ಹಂಚಿಕೆ; ಆಪ್ಷನ್ಸ್ ದಾಖಲಿಸಲು ಲಿಂಕ್ ಬಿಡುಗಡೆ

-

Prabhakara R
Prabhakara R Sep 1, 2026 6:01 PM

ಬೆಂಗಳೂರು: ಎಂಜಿನಿಯರಿಂಗ್ ಸೇರಿ ಇತರ ಸಿಇಟಿ ಕೋರ್ಸ್‌ಗಳ (KCET Counselling 2026) ಮೂರನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವಿ (KEA) ಲಿಂಕ್ ಬಿಡುಗಡೆ ಮಾಡಿದೆ. ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದವರು/ ಹಂಚಿಕೆ ನಂತರ ದಂಡ ಪಾವತಿಸಿ ಸೀಟು ರದ್ದು ಮಾಡಿಕೊಂಡವರು ಹೊಸದಾಗಿ ಆಪ್ಷನ್ಸ್ ದಾಖಲಿಸಲು ಸೆ.3ರ ಸಂಜೆ 6 ಗಂಟೆವರೆಗೆ ಅವಕಾಶ ನೀಡಲಾಗಿದೆ.

ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ. ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಕಾಲೇಜಿನಲ್ಲಿ ಪ್ರವೇಶ ಪಡೆದಿರುವ ಹಾಗೂ ಅಪ್ ಗ್ರೆಡೇಷನ್‌ಗೆ ಹೋಗಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸೆ.2ರಂದು ಬೆಳಿಗ್ಗೆ 11ರಿಂದ ಸೆ.3ರ ಸಂಜೆ‌ 6 ಗಂಟೆವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ‌ ನೀಡಲಾಗಿದೆ.

ಮೂರನೇ ಸುತ್ತಿನಲ್ಲಿ ಭಾಗವಹಿಸುವವರು ಹೊಸದಾಗಿಯೇ ಆಪ್ಷನ್ಸ್ ದಾಖಲಿಸಬೇಕು. ಈ ಹಿಂದಿನ ಆಪ್ಷನ್ಸ್ ಗಣನೆಗೆ ತೆಗೆದುಕೊಳ್ಳುವುದಿಲ್ಲ. 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದರೆ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಶುಲ್ಕದ ಐದು ಪಟ್ಟು ದಂಡ ಪಾವತಿಸಬೇಕಾಗುತ್ತದೆ. ಹೀಗಾಗಿ ಇಷ್ಟ ಇರುವ ಕಾಲೇಜು ಮತ್ತು ಕೋರ್ಸ್‌ಗಳನ್ನೇ ಆಪ್ಷನ್ಸ್ ದಾಖಲಿಸುವಾಗ ಪರಿಗಣಿಸಲು ಕೋರಲಾಗಿದೆ.



KEA Recruitment: ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ; 4,744 ಹುದ್ದೆಗಳ ನೇಮಕಾತಿಗೆ ಕೆಇಎ ಸಿದ್ಧತೆ, ಇದೇ ತಿಂಗಳಲ್ಲಿ ಅಧಿಸೂಚನೆ!

ಎರಡನೇ ಸುತ್ತಿನ ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ಆಯ್ಕೆ ಮಾಡದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವುದಿಲ್ಲ. ಹಾಗೆಯೇ ಎರಡನೇ ಸುತ್ತಿನಲ್ಲಿ ಚಾಯ್ಸ್-4 ಹಾಕಿರುವ ಅಭ್ಯರ್ಥಿಗಳು ಕೂಡ ಭಾಗವಹಿಸಲು ಆಗುವುದಿಲ್ಲ. ಆದರೆ ಅಂತಹವರು ವೈದ್ಯಕೀಯ ಕೋರ್ಸ್‌ಗಳ ಆಪ್ಷನ್ಸ್ ಇದ್ದರೆ ಮಾತ್ರ ಎರಡನೇ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು. ಎರಡನೇ ಸುತ್ತಿನ ನಂತರ ಉಳಿದಿರುವ ಸೀಟುಗಳ ವಿವರಗಳನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಿದ್ದು, ಅವುಗಳನ್ನು ನೋಡುವಂತೆ ಕೋರಿದ್ದಾರೆ.