Duleep Trphy 2026: ಕೇಂದ್ರ ವಲಯವನ್ನು ಮಣಿಸಿ ಫೈನಲ್‌ಗೇರಿದ ಪೂರ್ವ ವಲಯ!
ಮುಖೇಶ್ ಕುಮಾರ್ ಶಿಸ್ತುಬದ್ಧ ಬೌಲಿಂಗ್ ಸಹಾಯದಿಂದ ಪೂರ್ವ ವಲಯ ತಂಡ, 2026ರ ದುಲೀಪ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯ ಎದುರು 4 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ.
ಕೇಂದ್ರ ವಲಯ ಎದುರು ಗೆದ್ದು ಫೈನಲ್‌ಗೇರಿದ ಪೂರ್ವ ವಲಯ. -
ಬೆಂಗಳೂರು: ಕೇಂದ್ರ ವಲಯ(Central Zone) ಎದುರು ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಪೂರ್ವ ವಲಯ (East Zone) ತಂಡ 2026ರ ದುಲೀಪ್ ಟ್ರೋಫಿ ಫೈನಲ್‌ಗೆ (Duleep Trophy 2026) ಪ್ರವೇಶ ಮಾಡಿದೆ. ನಾಯಕ ಇಶಾನ್ ಕಿಶನ್ ತಂಡವನ್ನು ಸವಾಲಿನ ಮೈದಾನದಲ್ಲಿ ರೋಮಾಂಚಕ ಗೆಲುವಿನತ್ತ ಮುನ್ನಡೆಸಿದರು. ಈ ಗೆಲುವಿನೊಂದಿಗೆ ಪೂರ್ವ ವಲಯ 13 ವರ್ಷಗಳ ಬಳಿಕ ಇದೇ ಮೊದಲ ಬಾರಿ ಪ್ರಶಸ್ತಿ ಸತ್ತಿಗೆ ಪ್ರವೇಶ ಮಾಡಿತು.
ನಾಲ್ಕನೇ ಇನಿಂಗ್ಸ್‌ನಲ್ಲಿ ಕೇಂದ್ರ ವಲಯ, ಪೂರ್ವ ವಲಯಕ್ಕೆ 159 ರನ್‌ಗಳ ಗುರಿಯನ್ನು ನೀಡಿತು. ವೈಭವ್ ಸೂರ್ಯವಂಶಿ ತಂಡಕ್ಕೆ ಚುರುಕಾದ ಆರಂಭವನ್ನು ನೀಡಿದರು, ಆದರೆ ಹರ್ಷ್ ದುಬೆ ಅವರ ಬೌಲಿಂಗ್ ಪೂರ್ವ ವಲಯವನ್ನು ಹಿನ್ನಡೆಗೆ ತಳ್ಳಿತು. ಆದಾಗ್ಯೂ, ನಾಯಕ ಇಶಾನ್ ಕಿಶನ್ (Ishan Kishan) ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿ ತಮ್ಮ ತಂಡಕ್ಕೆ 4 ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಅಲ್ಲದೆ ಪೂರ್ವ ವಲಯ ತಂಡವನ್ನು ಫೈನಲ್ ಅರ್ಹತೆ ಪಡೆಯಲು ನೆರವು ನೀಡಿದರು. ಇದರೊಂದಿಗೆ ಪೂರ್ವ ವಲಯ 13 ವರ್ಷಗಳ ಬಳಿಕ ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶ ಮಾಡಿದಂತಾಗಿದೆ.
ಬಿಸಿಸಿಐ ಚೀಫ್ ಸೆಲೆಕ್ಟರ್ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಅಜಿತ್ ಅಗರ್ಕರ್! ಇದಕ್ಕೆ ಕಾರಣವೇನು?
ಇಶಾನ್ ಕಿಶನ್ 41 ಎಸೆತಗಳಲ್ಲಿ 39 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರು ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಈ ಮಧ್ಯೆ, ಆರಂಭಿಕ ವೈಭವ್ ಸೂರ್ಯವಂಶಿ 43 ಎಸೆತಗಳಲ್ಲಿ 40 ರನ್ ಗಳಿಸಿದರು, ಇದರಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿವೆ. ಆರಂಭಿಕ ಅಭಿಮನ್ಯು ಈಶ್ವರನ್ 24 ರನ್‌ಗಳ ಕೊಡುಗೆ ನೀಡಿದರು.
ಹರ್ಷ್ ದುಬೆ ಉತ್ತಮ ಲಯದಲ್ಲಿ ಬೌಲ್ ಮಾಡುವುದರೊಂದಿಗೆ ಪೂರ್ವ ವಲಯ 124 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಸುದೀಪ್ ಕುಮಾರ್ ಘರಾಮಿ 14 ರನ್ ಗಳಿಸಿದರು ಮತ್ತು ಇಶಾನ್ ಅವರೊಂದಿಗೆ ತಂಡವು 150 ರನ್‌ಗಳ ಗಡಿ ತಲುಪಲು ಸಹಾಯ ಮಾಡಿದರು. ಅಂತಿಮವಾಗಿ, ಮೊಹಮ್ಮದ್ ಶಮಿ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಹರ್ಷ್ ದುಬೆ ನಾಲ್ಕು ವಿಕೆಟ್ ಪಡೆದರೆ, ಯಶ್ ಠಾಕೂರ್ ಮತ್ತು ಸಾರಾಂಶ್ ಜೈನ್ ತಲಾ ಒಂದು ವಿಕೆಟ್ ಪಡೆದರು.
East Zone are into the final 👏
— BCCI Domestic (@BCCIdomestic) September 1, 2026
Mohd. Shami hits the winning runs 👌
They beat defending champions Central Zone by 4⃣ wickets 🙌#DuleepTrophy | #CZvEZ
Scorecard ▶️ https://t.co/kyExeix2VY pic.twitter.com/yzYIVMctVH
ಮೊದಲ ಇನಿಂಗ್ಸ್‌ನಲ್ಲಿ ಸ್ಕೋರ್‌ಗಳು ಸಮಬಲ
ಕೇಂದ್ರ ವಲಯ ಪ್ರಥಮ ಇನಿಂಗ್ಸ್‌ನಲ್ಲಿ 266 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಒಂದು ಹಂತದಲ್ಲಿ, ಪೂರ್ವ ವಲಯದ ಸ್ಕೋರ್ ವಿಕೆಟ್ ನಷ್ಟವಿಲ್ಲದೆ 161 ರನ್‌ಗಳಾಗಿತ್ತು; ಆದಾಗ್ಯೂ, ಅವರ ಇನಿಂಗ್ಸ್ ಅಂತಿಮವಾಗಿ 266 ರನ್‌ಗಳಿಗೆ ಅಂತ್ಯಗೊಂಡಿತು. ಎರಡನೇ ಇನಿಂಗ್ಸ್‌ನಲ್ಲಿ ಕೇಂದ್ರ ವಲಯವು 158 ರನ್‌ಗಳನ್ನು ಗಳಿಸಿತು. ಆರಂಭಿಕ ಆಟಗಾರ ಅಮನ್ ಮೊಖಡೆ 41 ರನ್‌ಗಳನ್ನು ಗಳಿಸಿದರು.
ಈ ತಂಡ ಕೇವಲ 63 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಹರ್ಷ್ ದುಬೆ (24) ಮತ್ತು ಅರ್ಷದ್ ಖಾನ್ (25) ತಂಡವು ಒಟ್ಟು 158 ರನ್‌ಗಳನ್ನು ತಲುಪಲು ಸಹಾಯ ಮಾಡಿದರು. ಮುಖೇಶ್ ಕುಮಾರ್ ನಾಲ್ಕು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರೆ, ಮೊಹಮ್ಮದ್ ಶಮಿ ಮೂರು ವಿಕೆಟ್‌ಗಳನ್ನು ಪಡೆದರು. ಮುಖೇಶ್ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.