Lekana Hegde interview: ಇಲ್ಲಿದೆ, ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಲೇಖನಾ ಹೆಗ್ಡೆ ಮೊದಲ ಫ್ಯಾಷನ್ ಮಾತು!
Miss universe Karnataka 2026: ಮಿಸ್ ಯೂನಿವರ್ಸ್ ಕರ್ನಾಟಕ 2026 ಕಿರೀಟ ಗೆದ್ದ ನಂತರ ಲೇಖನಾ ಹೆಗ್ಡೆ ಮೊತ್ತ ಮೊದಲ ಸಂದರ್ಶನ ವಿಶ್ವವಾಣಿ ನ್ಯೂಸ್‌ಗೆ ನೀಡಿದ್ದು, ಅವರ ಮೊದಲ ಫ್ಯಾಷನ್ ಸಂದರ್ಶನದ ಸಂಕ್ಷಿಪ್ತ ಸಾರಾಂಶ ಇಲ್ಲಿದೆ.
ಚಿತ್ರಗಳು: ಲೇಖನಾ ಹೆಗ್ಡೆ, ಮಿಸ್ ಯೂನಿವರ್ಸ್ ಕರ್ನಾಟಕ 2026ರ ವಿಜೇತೆ -
ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ, ಫ್ಯಾಷನ್ ಪತ್ರಕರ್ತೆ
ಈ ಸಾಲಿನ ಮಿಸ್ ಯೂನಿವರ್ಸ್ ಕರ್ನಾಟಕ ಸೌಂದರ್ಯ ಸ್ಪರ್ಧೆಯ (Miss universe Karnataka 2026) ಕಿರೀಟವನ್ನು ಲೇಖನಾ ಹೆಗ್ಡೆ (Lekana Hegde) ಮುಡಿಗೇರಿಸಿಕೊಂಡಿದ್ದಾರೆ. ಕಿರೀಟ ಗೆದ್ದ ನಂತರ ಡಿಜಿಟಲ್ ಪಾರ್ಟ್ನರ್ ವಿಶ್ವವಾಣಿ ಟಿವಿ ಸ್ಪೆಷಲ್‌ನೊಂದಿಗೆ ಮೊಟ್ಟ ಮೊದಲ ಫ್ಯಾಷನ್ ಸಂದರ್ಶನ ನೀಡಿದ ಲೇಖನಾ ಹೆಗ್ಡೆ ತಮ್ಮ ಸಂತಸವನ್ನು ಮಾತುಗಳ ಮೂಲಕ ಹಂಚಿಕೊಂಡರು. ಅವರ ಫ್ಯಾಷನ್ ಮಾತುಗಳ ಪ್ರಶ್ನೋತ್ತರದ ಸಾರಾಂಶ ಇಲ್ಲಿದೆ.
ವಿಶ್ವವಾಣಿ ನ್ಯೂಸ್: ಮಿಸ್ ಯೂನಿವರ್ಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ತಕ್ಷಣ ನಿಮಗನಿಸಿದ್ದೇನು?
ಲೇಖನಾ ಹೆಗ್ಡೆ: ಸಂತಸವಾಯಿತು. ಬಹುದಿನಗಳ ಕನಸು ನನಸಾಯಿತು.
ವಿಶ್ವವಾಣಿ ನ್ಯೂಸ್: ಕ್ರೀಡಾಪಟುವಾಗಿರುವ ನಿಮಗೆ ಈ ಬ್ಯೂಟಿ ಪೇಜೆಂಟ್ ನೀಡಿದ ಕೊಡುಗೆ ಏನು?
ಲೇಖನಾ ಹೆಗ್ಡೆ: ಆತ್ಮವಿಶ್ವಾಸ
ವಿಶ್ವವಾಣಿ ನ್ಯೂಸ್: ಈ ಸೌಂದರ್ಯ ಸ್ಪರ್ಧೆಯ ಸವಾಲುಗಳನ್ನು ಹೇಗೆ ಎದುರಿಸಿದಿರಿ?
ಲೇಖನಾ ಹೆಗ್ಡೆ: ಎಲ್ಲವನ್ನೂ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಎಲ್ಲಾ ರೌಂಡ್‌ಗಳನ್ನು ಎದುರಿಸಿದೆ. ಜ್ಯೂರಿ ಪ್ಯಾನೆಲ್‌ನ ಪ್ರಶ್ನೆಗಳನ್ನು ಜಾಣತನದಿಂದ ಉತ್ತರಿಸಿ, ಎಲ್ಲರ ಮನ ಗೆದ್ದೆ.
ವಿಶ್ವವಾಣಿ ನ್ಯೂಸ್: ಈ ಟೈಟಲ್ ಗೆದ್ದ ನಂತರ ನೀವು ಮಾಡುವುದೇನು?
ಲೇಖನಾ ಹೆಗ್ಡೆ: ಆತ್ಮವಿಶ್ವಾಸದಿಂದ ಟೀಮ್‌ನ ಸಹಯೋಗದೊಂದಿಗೆ ಮುಂಬರುವ ಪೇಜೆಂಟ್‌ಗೆ ತಯಾರಿ ನಡೆಸಲಿದ್ದೇನೆ.
ವಿಶ್ವವಾಣಿ ನ್ಯೂಸ್: ಯಾರಿಗೆಲ್ಲಾ ಥ್ಯಾಂಕ್ಸ್ ಹೇಳಲು ಬಯಸುತ್ತೀರಾ?
ಲೇಖನಾ ಹೆಗ್ಡೆ: ಈ ಬ್ಯೂಟಿ ಪೇಜೆಂಟ್‌ನ ರಿಜಿನಲ್ ಡೈರೆಕ್ಟರ್ ನಂದಿನಿ ನಾಗರಾಜ್ ಹಾಗೂ ಬೆಂಬಲ ನೀಡಿದ ನಮ್ಮ ಕುಟುಂಬದವರಿಗೆಲ್ಲರಿಗೂ ಪ್ರೀತಿಯಿಂದ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ.
ಲೇಖನಾ ಹೆಗ್ಡೆ ಮುಡಿಗೇರಿದ ಮಿಸ್ ಯೂನಿವರ್ಸ್ ಕರ್ನಾಟಕ 2026ರ ಕಿರೀಟ
(ಮತ್ತಷ್ಟು ಮಾಹಿತಿಗಾಗಿ ವಿಶ್ವವಾಣಿ ಟಿವಿ ಸ್ಪೆಷಲ್ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾಗುವ ಸೌಂದರ್ಯ ಸ್ಪರ್ಧೆಯ ಸುದ್ದಿ ಹಾಗೂ ಫ್ಯಾಷನ್ ಸಂದರ್ಶಗಳನ್ನು ವೀಕ್ಷಿಸಿ)
(ಲೇಖಕಿ: ಫ್ಯಾಷನ್ ಪತ್ರಕರ್ತೆ)