Jewel Fashion 2026: ಮಾನಿನಿಯರನ್ನು ಸಿಂಗರಿಸುತ್ತಿರುವ 3 ಬಗೆಯ ಕುಂದನ್ ಚೋಕರ್ ನೆಕ್ಲೇಸ್‌ಗಳಿವು!
ಇದೀಗ ಕುಂದನ್ ಚೋಕರ್ ನೆಕ್ಲೇಸ್‌ಗಳಲ್ಲಿ ನಾನಾ ಡಿಸೈನ್‌ನವು ಬಿಡುಗಡೆಗೊಂಡಿದ್ದು, ಅವುಗಳಲ್ಲಿ 3 ಶೈಲಿಯವು ಮಾತ್ರ ಸಖತ್ ಟ್ರೆಂಡಿಯಾಗಿವೆ. ಜ್ಯುವೆಲ್ ಸ್ಟೈಲಿಸ್ಟ್ ರೀಟಾ ಪ್ರಕಾರ, ಎಲ್ಲಾ ವಯಸ್ಸಿನ ನಾರಿಯರೂ ಕೂಡ ಇವುಗಳನ್ನು ಧರಿಸತೊಡಗಿದ್ದಾರೆ. ಗೋಲ್ಡ್ ಮಾತ್ರವಲ್ಲ, ಕೈಗೆಟಕುವ ಬೆಲೆಯಲ್ಲಿ ದೊರೆಯುವ ಇಮಿಟೇಷನ್ ಶೈಲಿಯವು ಕೂಡ ಪ್ರಚಲಿತದಲ್ಲಿವೆ. ಅವು ಯಾವುವು? ಇಲ್ಲಿದೆ ಡಿಟೇಲ್ಸ್.
ಚಿತ್ರಗಳು: ಹೃಷಿತಾ ಭಟ್, ಬಾಲಿವುಡ್ ನಟಿ -
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉಡುಗೆಗಳನ್ನು ಮತ್ತಷ್ಟು ಗ್ರ್ಯಾಂಡ್ ಆಗಿ ಬಿಂಬಿಸುವ ವೆರೈಟಿ ಕುಂದನ್ ಚೋಕರ್‌ಗಳು (Jewel Fashion 2026) ಮಾನಿನಿಯರ ಕತ್ತನ್ನು ಸಿಂಗರಿಸುತ್ತಿವೆ. ಹೌದು, ಇದಕ್ಕೆ ಪೂರಕ ಎಂಬಂತೆ, ನಾನಾ ಡಿಸೈನ್‌ನವು ಜ್ಯುವೆಲ್ ಫ್ಯಾಷನ್ ಲೋಕದಲ್ಲಿ ಬಿಡುಗಡೆಗೊಂಡಿದ್ದು, ಅವುಗಳಲ್ಲಿ 3 ಶೈಲಿಯವು ಮಾತ್ರ ಸಖತ್ ಟ್ರೆಂಡಿಯಾಗಿವೆ.
ಉತ್ತರ ಭಾರತದಿಂದ ದಕ್ಷಿಣದವರೆಗೆ ಕಾಲಿಟ್ಟ ಕುಂದನ್ ಚೋಕರ್ಸ್
ರಾಜರ ಕಾಲದಿಂದಲೂ ಕುಂದನ್ ಚೋಕರ್‌ಗಳು ನಾರ್ತ್ ಇಂಡಿಯಾ ಭಾಗದ ಜ್ಯುವೆಲ್ ಫ್ಯಾಷನ್‌ನ ಭಾಗವಾಗಿದ್ದವು. ಇದೀಗ ಗಡಿ ದಾಟಿ ನಮ್ಮಲ್ಲೂ ಆಗಮಿಸಿ, ಟ್ರೆಂಡಿಯಾಗಿವೆ ಎನ್ನುವ ಜ್ಯುವೆಲ್ ಸ್ಟೈಲಿಸ್ಟ್ ರೀಟಾ ಪ್ರಕಾರ, ಎಲ್ಲಾ ವಯಸ್ಸಿನ ನಾರಿಯರೂ ಕೂಡ ಇವುಗಳನ್ನು ಧರಿಸತೊಡಗಿದ್ದಾರೆ. ಗೋಲ್ಡ್ ಮಾತ್ರವಲ್ಲ, ಕೈಗೆಟಕುವ ಬೆಲೆಯಲ್ಲಿ ದೊರೆಯುವ ಇಮಿಟೇಷನ್ ಶೈಲಿಯವು ಕೂಡ ಪ್ರಚಲಿತದಲ್ಲಿವೆ.
ಕ್ಲಾಸಿಕ್ ಮೀನಾಕಾರಿ ಕುಂದನ್ ಚೋಕರ್ಸ್
ಟ್ರೆಡಿಷನಲ್ ಮೀನಾಕಾರಿ ಕಲಾತ್ಮಕ ಕುಸುರಿ ವಿನ್ಯಾಸ ಹೊಂದಿರುವ ಈ ಶೈಲಿಯವು ರೆಡ್, ಗ್ರೀನ್, ಬ್ಲ್ಯೂ ಅನ್‌ಕಟ್ ಡೈಮಂಡ್ ಒಳಗೊಂಡಿರುತ್ತವೆ. ಧರಿಸಿದಾಗ ರಿಚ್ ಲುಕ್ ನೀಡುತ್ತವೆ.
ಪರ್ಲ್ ಲೇಯರ್ಡ್ ಚೋಕರ್ಸ್
ಕುಂದನ್ ಫ್ರೇಮ್ ವಿನ್ಯಾಸದೊಂದಿಗೆ ಹೆವ್ವಿ ಪರ್ಲ್ ಡಿಸೈನ್‌ನಿಂದ ಸಮಾಗಮಗೊಂಡಿರುವ ಡಿಸೈನ್‌ನ ಚೋಕರ್‌ಗಳಿವು ಎನ್ನಬಹುದು. ನೆಕ್ಲೇಸ್‌ನ ಕೆಳಭಾಗದಲ್ಲಿ ಫ್ರಿಂಜ್‌ನಂತಿರುತ್ತವೆ. ಬ್ರೈಡಲ್ ಲುಕ್‌ಗೆ ಸಾಥ್ ನೀಡುತ್ತವೆ.
Lehenga Fashion 2026: ಸೆಲೆಬ್ರಿಟಿ ಲುಕ್‌ಗಾಗಿ ಧರಿಸಿ ಎಂಬ್ರಾಯ್ಡರಿ ಜಾಕೆಟ್ ಲೆಹೆಂಗಾ
ಫ್ಯೂಶನ್ ಕುಂದನ್ ಚೋಕರ್ಸ್
ಮಾಡರ್ನ್ ಅಥವಾ ವೆಸ್ಟೆರ್ನ್ ನೆಕ್ಲೇಸ್‌ಗಳ ಫ್ರಭಾವವನ್ನು ಇವುಗಳಲ್ಲಿ ಕಾಣಬಹುದು. ಪಾಸ್ಟೆಲ್ ಶೇಡ್‌ನ ಪ್ರಿಶಿಯಸ್ ಸ್ಟೋನ್ಸ್ ಒಳಗೊಂಡಿರುತ್ತವೆ. ಇವನ್ನು ಮಲ್ಟಿ ಕಲರ್ ಔಟ್‌ಫಿಟ್‌ಗಳಿಗೆ ಇವನ್ನು ಮ್ಯಾಚ್ ಮಾಡಿ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)