Star Monsoon Fashion 2025: ಮಾನ್ಸೂನ್‌ನಲ್ಲಿ ಬದಲಾಗುವ ನಟ ಕಾರ್ತಿಕ್ ಆರ್ಯನ್ ಫ್ಯಾಷನ್ ಲುಕ್
ಮಾನ್ಸೂನ್‌ನಲ್ಲಿ ನನ್ನ ಫ್ಯಾಷನ್ ಬದಲಾಗುತ್ತದೆ ಎನ್ನುವ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್, ತಮ್ಮ ಫ್ಯಾಷನ್ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಮಾಧ್ಯಮಗಳೊಂದಿಗೆ ಒಂದಿಷ್ಟು ಮಾತನಾಡಿದ್ದಾರೆ. ಹುಡುಗರಿಗೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ. ಅವರು ಹೇಳುವಂತೆ, ಮಾನ್ಸೂನ್‌ಗೆ ಕೇವಲ ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಒಂದಿಷ್ಟು ಅಂಶಗಳನ್ನು ತಿಳಿದುಕೊಂಡಿರಬೇಕು.

ಚಿತ್ರಗಳು: ಕಾರ್ತಿಕ್ ಆರ್ಯನ್, ಬಾಲಿವುಡ್ ನಟ.

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನನ್ನ ಫ್ಯಾಷನ್ ಮಾನ್ಸೂನ್‌ನಲ್ಲಿ ಬದಲಾಗುತ್ತದೆ ಎನ್ನುವ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Kartik Aaryan), ಸೀಸನ್‌ಗೆ ತಕ್ಕಂತೆ ಮ್ಯಾಚ್ ಆಗುವುದು ಈ ಜನರೇಷನ್ ಹುಡುಗರ ಫ್ಯಾಷನ್ ಮಂತ್ರವಾಗಬೇಕು ಎನ್ನುತ್ತಾರೆ. ಅವರ ಪ್ರಕಾರ, ಸೀಸನ್‌ವೈಸ್ ಲೇಯರ್ಡ್ ಲುಕ್ ಹುಡುಗರಿಗೆ ಡಿಫರೆಂಟ್ ಲುಕ್ ನೀಡುತ್ತದೆ (Star Monsoon Fashion 2025). ಜತೆಗೆ ಈ ಲುಕ್ ಮಾನ್ಸೂನ್‌ಗೆ ತಕ್ಕಂತೆ ಇಮೇಜ್ ಬದಲಿಸಲು ಸಹಕಾರಿಯಾಗುತ್ತದೆ ಎನ್ನುತ್ತಾರೆ. ಅವರು ಹೇಳುವಂತೆ, ಮಾನ್ಸೂನ್‌ಗೆ ಕೇವಲ ಹುಡುಗಿಯರು ಮಾತ್ರವಲ್ಲ, ಹುಡುಗರು ಕೂಡ ಒಂದಿಷ್ಟು ಅಂಶಗಳನ್ನು ತಿಳಿದುಕೊಂಡಿರಬೇಕು. ಹುಡುಗರು ಈ ಸೀಸನ್‌ನಲ್ಲಿಆದಷ್ಟೂ ಸ್ಕಿನ್‌ಗೆ ಅಂಟಿಕೊಳ್ಳುವಂತಹ ಟೈಟ್ ಹಾಗೂ ಸ್ಪ್ರೇಟ್ ಕಟ್ ಇರುವ ಫಿಟ್ಟೆಡ್ ಡೆನಿಮ್ ಪ್ಯಾಂಟ್‌ಗಳನ್ನು ಅವಾಯ್ಡ್ ಮಾಡಬೇಕು. ಲೇಝಿ ಫೀಲ್ ಆದಲ್ಲಿ ಬೀಚಿ ಲುಕ್‌ಗೆ ಮೊರೆ ಹೋಗಬಹುದು. ನಿ ಲೆಂಥ್ ಕಾರ್ಗೋ ಕ್ರೂಕ್ ಧರಿಸಬಹುದು ಎನ್ನುತ್ತಾರೆ.

ಟ್ರೆಂಡಿ ಪಾಸ್ಟೆಲ್ ವರ್ಣ
ಪಾಸ್ಟೆಲ್ ವರ್ಣದ ಪ್ರಿಂಟ್ ಶರ್ಟ್‌ಗಳು ಹಾಗೂ ಪ್ಲೈಡ್ ಸೂಟ್ಸ್ ಅಥವಾ ಡೆನಿಮ್ ಈ ಸೀಸನ್‌ಗೆ ಹೊಂದುತ್ತವೆ. ಇವು ಆಕರ್ಷಕವಾಗಿ ಕಾಣಲು ಸಹಕಾರಿ. ಈ ಸೀಸನ್‌ನಲ್ಲಿ ಹುಡುಗರು ಆದಷ್ಟೂ ಕ್ಯಾನ್ವಾಸ್ ಶೂ ಧರಿಸಕೂಡದು. ಮಾನ್ಸೂನ್‌ನಲ್ಲಿ ಒದ್ದೆಯಾಗಿರುವ ಶೂಗಳನ್ನು ಧರಿಸಲು ಆರಾಮ ಎಂದನಿಸದು. ಹಾಗಾಗಿ ಹಾಲಿಡೇ ಹೋಗುವುದಾದಲ್ಲಿ ಸ್ಲಿಪ್ಪರ್ಸ್ ಬೆಸ್ಟ್ ಎನ್ನುತ್ತಾರೆ.

ಔಟಿಂಗ್ ಔಟ್‌ಫಿಟ್ಸ್ ಹೀಗಿರಲಿ
ಅಫಿಶೀಯಲ್ ಕೆಲಸ ಹೊರತುಪಡಿಸಿದರೆ ಹುಡುಗರು ಹೊರಗಡೆ ತಿರುಗಾಡಲು ಹಾಗೂ ವೀಕೆಂಡ್‌ನಲ್ಲಿ ಶಾರ್ಟ್ಸ್ ಧರಿಸಬಹುದು. ಇದಕ್ಕೆ ಪ್ರಿಂಟೆಡ್ ಟೀ ಶರ್ಟ್ ಓಕೆ. ಇನ್ನು ಪ್ಯಾಂಟ್ ವಿಷಯಕ್ಕೆ ಬಂದರೇ ಹೈಟ್‌ಗೆ ತಕ್ಕಂತೆ ಡಿಸೈನ್ಸ್ ಸೆಲೆಕ್ಟ್ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ.

ಕಾಲೇಜು ಹುಡುಗರಾದಲ್ಲಿ...
ಕಾಲೇಜ್ ಹುಡುಗರಾದಲ್ಲಿಆದಷ್ಟೂ ಟ್ರೆಂಡಿಯಾಗಿರುವ ಉಡುಪುಗಳನ್ನೇ ಆಯ್ಕೆ ಮಾಡಿ. ಸಮ್ಮರ್-ಸ್ಟ್ರಿಂಗ್‌ನಲ್ಲಿರುವ ಫಂಕಿ ಹೇರ್‌ಸ್ಟೈಲ್ ಇಲ್ಲಿಯೂ ಮುಂದುವರಿಸಬಹುದು. ಲೇಯರ್ ಲುಕ್ ಸ್ಟಾರ್ಟ್ ಮಾಡಬಹುದು. ಕೋಟ್, ಜಾಕೆಟ್‌ಗಳನ್ನು ಟೀ ಶರ್ಟ್ ಹಾಗೂ ಶರ್ಟ್ ಮೇಲೆ ಪ್ರಯೋಗಿಸಬಹುದು ಎನ್ನುತ್ತಾರೆ ಕಾರ್ತಿಕ್ ಆರ್ಯನ್.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Monsoon Fashion 2025: ಮಾನ್ಸೂನ್ ಮಳೆ ಗಾಳಿಗೆ ಮರಳಿದ ಫ್ಯಾಷನ್ ಪ್ರಿಯರ ಟರ್ಟಲ್ ನೆಕ್ ಡ್ರೆಸ್