ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕದ ಓಹಿಯೋ ಉತ್ಸವದಲ್ಲಿ ಹರಿದ ನೆತ್ತರು; ಗುಂಡಿನ ದಾಳಿ ನಡೆಸಿದವರಿಗಾಗಿ ತೀವ್ರ ಶೋಧ

Ohio Festival in US: ಅಮೆರಿಕದ ಪ್ರಸಿದ್ಧ ಓಹಿಯೋ ಉತ್ಸವದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಅಮೆರಿಕದ ಓಹಿಯೋ ಉತ್ಸವದಲ್ಲಿ ಗುಂಡಿನ ದಾಳಿ

ಅಮೆರಿಕದ ಓಹಿಯೋ ಉತ್ಸವದಲ್ಲಿ ಗುಂಡಿನ ದಾಳಿ -

Priyanka P
Priyanka P Jun 7, 2026 8:00 PM

ವಾಷಿಂಗ್ಟನ್, ಜೂ. 7: ಅಮೆರಿಕದ (America) ಓಹಿಯೋ ಉತ್ಸವದಲ್ಲಿ ದುಷ್ಕರ್ಮಿಗಳು ಗುಂಡು ಹಾರಿಸಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಈ ಉತ್ಸವವು ಟೊಲೆಡೊದ ನಗರದ ಐತಿಹಾಸಿಕ ಪ್ರದೇಶದಲ್ಲಿ ಪ್ರತಿವರ್ಷ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮವಾಗಿದೆ. ನೇರ ಸಂಗೀತ ಕಾರ್ಯಕ್ರಮಗಳಾಗಿದ್ದು, ಸಾವಿರಾರು ಜನರು ಕುಟುಂಬ ಸಮೇತರಾಗಿ ಭಾಗವಹಿಸುತ್ತಾರೆ. ಇಂತಹ ಜನಸಂದಣಿ ಇರುವ ಕಾರ್ಯಕ್ರಮದಲ್ಲಿ ಏಕಾಏಕಿ ಗುಂಡಿನ ದಾಳಿ (firing) ನಡೆದಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯಲ್ಲಿ 12 ಮಂದಿಗೆ ಗುಂಡೇಟು ತಗುಲಿದೆ. ದಾಳಿಯ ಕಾರಣ ಮತ್ತು ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಆರಂಭದಲ್ಲಿ ಉತ್ಸವದ ಸ್ಥಳದ ಸಮೀಪ ಒಂದೇ ಒಂದು ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾಹಿತಿ ಪಡೆದಿದ್ದರು. ಸ್ಥಳಕ್ಕೆ ತಲುಪಿದ ಬಳಿಕ, ಗುಂಡೇಟಿನಿಂದ ಗಾಯಗೊಂಡಿದ್ದ ಇನ್ನೂ ಹಲವರನ್ನು ಪೊಲೀಸರು ಪತ್ತೆಹಚ್ಚಿದರು. ಗಾಯಗೊಂಡ ಎಲ್ಲರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಗುಂಡಿನ ದಾಳಿಯ ಕಾರಣ ಮತ್ತು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇಲ್ಲಿದೆ ವಿಡಿಯೊ:



ಗುಂಡಿನ ಚಕಮಕಿ ನಡೆಯುತ್ತಿದ್ದಂತೆ ಆ ಪ್ರದೇಶದಲ್ಲಿ ಭೀತಿ ಆವರಿಸಿದ್ದು, ಜನಸಮೂಹ ಸುರಕ್ಷತೆಗಾಗಿ ಓಡಿದ್ದಾರೆ. ಶಂಕಿತರನ್ನು ಗುರುತಿಸಲು ಮತ್ತು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಲಾಗಿದೆ. ಓಹಿಯೋ ಗವರ್ನರ್ ಮೈಕ್ ಡಿವೈನ್ ಮತ್ತು ಟೊಲೆಡೊ ನಗರ ಮಂಡಳಿ ಸದಸ್ಯೆ ಥೆರೆಸಾ ಮೋರಿಸ್, ಹಿಂಸಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಬೇಡ ಅಂದಿದ್ದೇ ತಪ್ಪಾಯ್ತೇ? ಅಮೆರಿಕದಲ್ಲಿ ಭಾರತೀಯನ ಶೂಟೌಟ್‌!

ಗುಂಡಿನ ದಾಳಿ ಪ್ರಕರಣದಲ್ಲಿ ಖಾನ್ ಸರ್ ವಿರುದ್ಧ ಎಫ್‌ಐಆರ್

ಪಾಟ್ನಾ: ಖಾನ್ ಗ್ಲೋಬಲ್ ಅಕಾಡೆಮಿಯ ಹೊರಗೆ ನಡೆದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಫೈಸಲ್ ಖಾನ್ ಎಂದೂ ಕರೆಯಲ್ಪಡುವ ಖಾನ್ ಸರ್ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಪೊಲೀಸರು ಫೈಸಲ್ ಖಾನ್ ಹೆಸರನ್ನು ಸೇರಿಸಿದ್ದಾರೆ. ಅವರ ಇಬ್ಬರು ವೈಯಕ್ತಿಕ ಭದ್ರತಾ ಸಿಬ್ಬಂದಿಯ ಹೆಸರನ್ನೂ ನೀಡಲಾಗಿದೆ.

ಪೊಲೀಸರ ಪ್ರಕಾರ, ಬಂಧಿತ ಇಬ್ಬರು ಗಾರ್ಡ್‌ಗಳು ವಿಚಾರಣೆಯ ಸಮಯದಲ್ಲಿ ಖಾನ್ ಸರ್ ಅವರ ಆದೇಶದ ಮೇರೆಗೆ ಜನಸಮೂಹದ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಗುಂಡಿನ ದಾಳಿಯ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಲು ಪ್ರಾರಂಭಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಡಿಯೊದಲ್ಲಿ ಇಬ್ಬರು ಯುವಕರು ರೈಫಲ್‌ಗಳಿಂದ ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ. ವೈರಲ್ ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ, ಈ ವಿಷಯದ ಬಗ್ಗೆ ತನಿಖೆ ಆರಂಭಿಸಿತು.

ಕಡಮ್ಕುವಾನ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಅವರ ಲಿಖಿತ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಖಾನ್ ಸರ್ ಅಲಿಯಾಸ್ ಫೈಸಲ್ ಖಾನ್, ಅವರ ಇಬ್ಬರು ವೈಯಕ್ತಿಕ ಅಂಗರಕ್ಷಕರು ಮತ್ತು ಇತರ ಗುರುತಿಸಲಾಗದ ಸಹಚರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.