ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rashmika Mandanna: ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್​​ನಲ್ಲಿ ರಶ್ಮಿಕಾ ಮಂದಣ್ಣ?

Rashmika Mandanna: ಭಾರತೀಯ ಸಂಗೀತ ಲೋಕದಲ್ಲಿ ಪ್ರಸಿದ್ಧ ಗಾಯಕಿ (ಕರ್ನಾಟಕ ಗಾಯಕಿ) ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನದ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ, ಈಗ ಹೊರಬಿದ್ದಿರುವ ಮಾಹಿತಿಯಂತ ರಶ್ಮಿಕಾ ಮಂದಣ್ಣ ಅವರಿಗೆ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರ ದೊರೆತಿದೆ. ಮಾತ್ರವಲ್ಲದೆ ರಶ್ಮಿಕಾ ಅವರ ಫೋಟೊಶೂಟ್ ಸಹ ಆಗಿದೆ ಎನ್ನಲಾಗುತ್ತಿದೆ.

ಎಂಎಸ್ ಸುಬ್ಬುಲಕ್ಷ್ಮಿ ಬಯೋಪಿಕ್​​ನಲ್ಲಿ ರಶ್ಮಿಕಾ ಮಂದಣ್ಣ?

ರಶ್ಮಿಕಾ ಮಂದಣ್ಣ -

Yashaswi Devadiga
Yashaswi Devadiga Jun 7, 2026 8:46 PM

ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ನಾಯಕಿ. ಅವರು ಟಾಲಿವುಡ್ ಮತ್ತು ಬಾಲಿವುಡ್ ಎರಡರಲ್ಲೂ ಸ್ಟಾರ್ ಹೀರೋಗಳೊಂದಿಗೆ ಚಿತ್ರಗಳನ್ನು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಹಿಟ್‌ಗಳನ್ನು ಮಾಡಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಐತಿಹಾಸಿಕ ನಾಟಕ 'ಛಾವಾ'ದಲ್ಲಿ ನಿಜ ಜೀವನಆಧಾರಿತ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗ ಅವರು ಮತ್ತೊಂದು ಪಾತ್ರವನ್ನು ಮಾಡಲಿದ್ದಾರೆ. ಇದ ೀಗ ರಶ್ಮಿಕಾಗೆ ಬಹಳ ಭಾರತದ ಸಂಗೀತ ಕ್ಷೇತ್ರದ ಪ್ರಾತಃ ಸ್ಮರಣೀಯ ಗಾಯಕಿಯೊಬ್ಬರ (Singer) ಜೀವನ ಆಧರಿತ ಸಿನಿಮಾನಲ್ಲಿ ನಟಿಸುವ ಅವಕಾಶ ಅರಸಿ ಬಂದದೆ. ಯಾವುದದು?

ಸುಬ್ಬುಲಕ್ಷ್ಮಿ ಜೀವನದ ಮೇಲೆ ಸಿನಿಮಾ ನಿರ್ಮಾಣ

ಭಾರತೀಯ ಸಂಗೀತ ಲೋಕದಲ್ಲಿ ಪ್ರಸಿದ್ಧ ಗಾಯಕಿ (ಕರ್ನಾಟಕ ಗಾಯಕಿ) ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನದ ಮೇಲೆ ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ, ಈಗ ಹೊರಬಿದ್ದಿರುವ ಮಾಹಿತಿಯಂತ ರಶ್ಮಿಕಾ ಮಂದಣ್ಣ ಅವರಿಗೆ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರ ದೊರೆತಿದೆ. ಮಾತ್ರವಲ್ಲದೆ ರಶ್ಮಿಕಾ ಅವರ ಫೋಟೊಶೂಟ್ ಸಹ ಆಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ಶೋಗಾಗಿ ಈ ಧಾರಾವಾಹಿಗಳು ಅಂತ್ಯ? ಯಾವುದೆಲ್ಲ?

ಈ ಬಯೋಪಿಕ್ ನಲ್ಲಿ ರಾಷ್ಟ್ರೀಯ ಕ್ರಶ್ ರಶ್ಮಿಕಾ ಮಂದಣ್ಣ ಎಂ.ಎಸ್. ಸುಬ್ಬುಲಕ್ಷ್ಮಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಸಾಯಿ ಪಲ್ಲವಿ ಮತ್ತು ರುಕ್ಮಿಣಿ ವಸಂತ್ ಈ ಪಾತ್ರಕ್ಕೆ ಪರಿಗಣಿಸಲ್ಪಟ್ಟಿದ್ದರೂ ಅಂತಿಮವಾಗಿ ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರ ಮನೆಯಲ್ಲಿ ಲುಕ್ ಟೆಸ್ಟ್ ಕೂಡ ನಡೆಸಲಾಗಿತ್ತು ಎಂದು ವರದಿ ಆಗಿದೆ. ರಶ್ಮಿಕಾ ಪ್ರಸಿದ್ಧ ವಸ್ತ್ರ ವಿನ್ಯಾಸಕ ನೀರಜ್ ಕೋನಾ ವಿಶೇಷವಾಗಿ ವಿನ್ಯಾಸಗೊಳಿಸಿದ ಉಡುಪನ್ನು ಧರಿಸಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಲುಕ್ ಇಷ್ಟವಾದ ನಂತರ ಅವರನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ.

'ಜೆರ್ಸಿ' ಯಶಸ್ಸಿನಿಂದ ಹೆಸರು ಮಾಡಿರುವ ಗೌತಮ್ ತಿನ್ನನುರಿ ನಿರ್ದೇಶನ ಮಾಡಲಿದ್ದಾರೆ. 'ಜೆರ್ಸಿ' ಮತ್ತು 'ಕಿಂಗ್‌ಡಮ್' ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಸೆನ್ಸೇಷನಲ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಎಂ.ಎಸ್. ಸುಬ್ಬಲಕ್ಷ್ಮಿ ಜೀವನಚರಿತ್ರೆಗೆ ಸಂಗೀತ ಸಂಯೋಜಿಸುವ ಅವಕಾಶ ಪಡೆದಿದ್ದಾರೆ. ಪ್ರಸ್ತುತ ಪೂರ್ವ-ನಿರ್ಮಾಣ ಕೆಲಸಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: Drishyam 3: ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗದಿರಲು ಕಾರಣ ಇದು!

ಸಿನಿಮಾದ ಕೆಲಸಗಳು ಅತ್ಯಂತ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಸಾಗುತ್ತಿದ್ದು. ಮುಂಬರುವ ವಾರಗಳಲ್ಲಿ ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.