ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pak Army: ಪಾಕ್‌ ಸೇನೆ ಮೇಲೆ ಬಲೂಚ್‌ ಬಂಡುಕೋರರ ದಾಳಿ; 12 ಗಂಟೆಯಲ್ಲಿ 29 ಸೈನಿಕರು ಸಾವು

ಬಲೂಚಿಸ್ತಾನ ಹಾಗೂ ಪಾಕಿಸ್ತಾನದ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಬಲೂಚಿಸ್ತಾನದಲ್ಲಿರುವ ಅವರನ್, ಕ್ವೆಟ್ಟಾ ಮತ್ತು ಕಲಾತ್ ಜಿಲ್ಲೆಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಮೇಲೆ ದಂಗೆಕೋರರು ಸಶಸ್ತ್ರ ದಾಳಿ ನಡೆಸಿದ್ದಾರೆ. ಬಲೂಚ್ ಲಿಬರೇಷನ್‌ ಆರ್ಮಿ ನಡೆಸಿದ ದಾಳಿಯಲ್ಲಿ ಹಿರಿಯ ಅಧಿಕಾರಿ ಮೇಜರ್ ರಬಿ ನವಾಜ್ ಸೇರಿದಂತೆ 29 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಪಾಕ್‌ ಸೇನೆ ಮೇಲೆ ಬಲೂಚ್‌ ಬಂಡುಕೋರರ ದಾಳಿ; 29 ಸೈನಿಕರು ಸಾವು

Profile Vishakha Bhat Jul 17, 2025 10:11 AM

ಇಸ್ಲಾಮಾಬಾದ್‌: ಬಲೂಚಿಸ್ತಾನ ಹಾಗೂ ಪಾಕಿಸ್ತಾನದ ನಡುವೆ ನಿರಂತರ (Pak Army) ಸಂಘರ್ಷ ನಡೆಯುತ್ತಿದೆ. ಬಲೂಚಿಸ್ತಾನದಲ್ಲಿರುವ ಅವರನ್, ಕ್ವೆಟ್ಟಾ ಮತ್ತು ಕಲಾತ್ ಜಿಲ್ಲೆಗಳಲ್ಲಿ ಪಾಕಿಸ್ತಾನಿ ಭದ್ರತಾ ಪಡೆಗಳ ಮೇಲೆ ದಂಗೆಕೋರರು ಸಶಸ್ತ್ರ ದಾಳಿ ನಡೆಸಿದ್ದಾರೆ. ಬಲೂಚ್ ಲಿಬರೇಷನ್‌ ಆರ್ಮಿ (Balochistan Liberation Army) ನಡೆಸಿದ ದಾಳಿಯಲ್ಲಿ ಹಿರಿಯ ಅಧಿಕಾರಿ ಮೇಜರ್ ರಬಿ ನವಾಜ್ ಸೇರಿದಂತೆ 29 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಈ ದಾಳಿಗಳನ್ನು ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ. ಈ ದಾಳಿಗಳಿಗೆ ಯಾವುದೇ ಗುಂಪು ಇನ್ನೂ ಹೊಣೆ ಹೊತ್ತಿಲ್ಲವಾದರೂ, ಬಲೂಚ್ ಲಿಬರೇಷನ್‌ ಆರ್ಮಿ ನಡೆಸಿರಬಹುದು ಎಂದು ಊಹಿಸಲಾಗಿದೆ.

ಈ ಘಟನೆಯ ನಂತರ, ಭದ್ರತಾ ಪಡೆಗಳು, ಸುತ್ತಮುತ್ತಲಿನ ಪ್ರದೇಶದಲ್ಲಿ ತೀವೃ ತರನಾದ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಜನರಲ್ಲಿ ತೀವ್ರ ಭಯ ಮತ್ತು ಭೀತಿ ಆವರಿಸಿದೆ.

ಕಳೆದ ವಾರವಷ್ಟೇ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಶಸ್ತ್ರ ಸಜ್ಜಿತ ವ್ಯಕ್ತಿಗಳು ಬಸ್ ಪ್ರಯಾಣಿಕರನ್ನು ಅಪಹರಿಸಿ, 9 ಮಂದಿಯ ಹತ್ಯೆ ಮಾಡಿರುವ ಭಯಾನಕ ಘಟನೆ ನಡೆದಿತ್ತು. ದುಷ್ಕರ್ಮಿಗಳು ಬಸ್ಸಿನಲ್ಲಿದ್ದ ಪಂಜಾಬ್​ನ 9 ಪ್ರಯಾಣಿಕರಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪ್ರಾಂತ್ಯದ ಝೋಬ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ವರದಿಯಾಗಿತ್ತು.

ಈ ಸುದ್ದಿಯನ್ನೂ ಓದಿ: Baloch Liberation Army: ಪಾಕಿಸ್ತಾನದ 14 ಸೈನಿಕರ ಹತ್ಯೆ ಮಾಡಿದ ಬಲೂಚ್‌ ಲಿಬರೇಷನ್‌ ಆರ್ಮಿ; ವಿಡಿಯೊ ರಿಲೀಸ್‌

ಕ್ವೆಟ್ಟಾ, ಲೊರಾಲೈ ಮತ್ತು ಮಸ್ತುಂಗ್‌ನಲ್ಲಿ ದಂಗೆಕೋರರು ಇತರ ಮೂರು ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದರು. ಆದರೆ ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್, ಭದ್ರತಾ ಪಡೆಗಳು ಈ ದಾಳಿಗಳನ್ನು ಹಿಮ್ಮೆಟ್ಟಿಸಿದವು ಎಂದು ಹೇಳಿದ್ದಾರೆ. ದಂಗೆಕೋರರು ರಾತ್ರಿಯ ಸಮಯದಲ್ಲಿ ಪ್ರಾಂತ್ಯದ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಮತ್ತು ಚೆಕ್ ಪೋಸ್ಟ್‌ಗಳು, ಸರ್ಕಾರಿ ಸ್ಥಾಪನೆಗಳು, ಪೊಲೀಸ್ ಠಾಣೆಗಳು, ಬ್ಯಾಂಕುಗಳು ಮತ್ತು ಟವ್ ಮೇಲೆ ದಾಳಿ ಮಾಡಿದ್ದಾರೆ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನದಲ್ಲಿ ದೀರ್ಘಕಾಲದಿಂದ ಧಂಗೆಗಳು ನಡೆಯುತ್ತಿವೆ. ಮಾರ್ಚ್‌ನಲ್ಲಿ, ಗ್ವಾದರ್ ಬಂದರಿನ ಬಳಿಯ ಕಲ್ಮತ್ ಪ್ರದೇಶದಲ್ಲಿ ಲಾಂಗ್ ಬಾಡಿ ಟ್ರೇಲರ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಐದು ಜನರನ್ನು ಗುಂಡಿಕ್ಕಿ ಕೊಲ್ಲಲಾಯಿತು, ಫೆಬ್ರವರಿಯಲ್ಲಿ, ದಂಗೆಕೋರರು ಪಂಜಾಬ್ ಪ್ರಾಂತ್ಯಕ್ಕೆ ಸೇರಿದ ಏಳು ಪ್ರಯಾಣಿಕರನ್ನು ಇಳಿಸಿ ಬರ್ಖಾನ್ ಪ್ರದೇಶದಲ್ಲಿ ಸ್ಥಳದಲ್ಲೇ ಕೊಂದಿದ್ದರು.