ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ಕಾಶ್ಮೀರವನ್ನು ನಮಗೆ ಬಿಟ್ಟು ಕೊಡದೇ ಭಾರತಕ್ಕೆ ಬೇರೆ ದಾರಿಯೇ ಇಲ್ಲ" ; ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ

ಕಾಶ್ಮೀರವನ್ನು ಭಾರತ ಬಿಟ್ಟು ಕೊಡಲೇಬೇಕು. ಇದಕ್ಕಾಗಿ ಬೇರೆ ಆಯ್ಕೆಯೇ ಇಲ್ಲ ಎಂದುಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ನಾಯಕರಾದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದ್ದು, ಇದು ಉದ್ವಿಗ್ನತೆಗೆ ಕಾರಣವಾಗಿದೆ. ಇವರ ಪ್ರಚೋದನಕಾರಿ ಹೇಳಿಕೆಯು ಸುತ್ತಮುತ್ತಲಿನ ಪ್ರದೇಶದಲ್ಲಿ ರಾಜಕೀಯ ಮತ್ತು ಮಿಲಿಟರಿ ಘರ್ಷಣೆಗೆ ಕಾರಣವಾಗಿದೆ.

ಕಾಶ್ಮೀರ ವಿಮೋಚನೆ; ಪಾಕಿಸ್ತಾನ ಮತ್ತೆ ತಗಾದೆ

ಸಂಗ್ರಹ ಚಿತ್ರ -

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ( Pakistan-Occupied Kashmir) ಇತ್ತೀಚೆಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ (army chief Field Marshal Asim Munir), ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistani PM Shehbaz Sharif) ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಉದ್ವಿಗ್ನತೆಗೆ ಕಾರಣವಾಗಿದೆ. ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಶೆಹಬಾಜ್ ಷರೀಫ್, ಅಸಿಮ್ ಮುನೀರ್ ಪ್ರಾದೇಶಿಕ ಸ್ಥಿರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಉದ್ರಿಕ್ತ ಭಾಷಣಗಳನ್ನು ಮಾಡಿದ್ದಾರೆ. ಇದು ಸುತ್ತಮುತ್ತಲಿನ ಪ್ರದೇಶದಲ್ಲಿ ರಾಜಕೀಯ ಮತ್ತು ಮಿಲಿಟರಿ ಘರ್ಷಣೆಗೆ ಕಾರಣವಾಗಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿಗೆ ಭೇಟಿ ನೀಡಿದ್ದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಜಿಹಾದ್ ಅನ್ನು ಬಹಿರಂಗವಾಗಿ ಪ್ರಚಾರ ಮಾಡಿದರು ಎನ್ನಲಾಗಿದೆ.

Drug Case: ಡ್ರಗ್ಸ್ ಕೇಸ್‌; ನಟಿ ಅಂಜು ಕೃಷ್ಣ ಸೇರಿ ಎಂಟು ಮಂದಿ ಬಂಧನ

ಕಾಶ್ಮೀರ ಶೀಘ್ರದಲ್ಲೇ ವಿಮೋಚನೆಗೊಳ್ಳಲಿದೆ ಎಂದು ಹೇಳಿರುವ ಅವರು, ಕಾಶ್ಮೀರಿ ಜನರ ಸ್ವ-ನಿರ್ಣಯದ ಹಕ್ಕಿಗೆ ಪಾಕಿಸ್ತಾನ ಅಚಲ ರಾಜಕೀಯ, ನೈತಿಕ ಮತ್ತು ರಾಜತಾಂತ್ರಿಕ ಬೆಂಬಲವನ್ನು ನೀಡಲಿದೆ. ಇಲ್ಲಿ ನಿಯೋಜಿಸಲಾಗಿರುವ ಅಧಿಕಾರಿಗಳು, ಸೈನಿಕರು ಸದಾ ಯುದ್ಧಕ್ಕೆ ಸನ್ನದ್ಧರಾಗಿರುತ್ತಾರೆ ಎಂದು ಹೇಳಿ ಅವರನ್ನು ಶ್ಲಾಘಿಸಿದರು.

ಪ್ರಧಾನಿ ಶೆಹಬಾಜ್ ಷರೀಫ್ ಮಾಡನಾಡಿ, ಕಾಶ್ಮೀರ ವಿಚಾರದಲ್ಲಿ ಭಾರತ ಸ್ವನಿರ್ಣಯ ಮಾಡಬೇಕು. ಅದು ಬಿಟ್ಟು ಬೇರೆ ದಾರಿಯಿಲ್ಲ. ಭಾರತದ ಆಕ್ರಮಣಕಾರಿ, ವಿಸ್ತರಣಾವಾದಿ ಯೋಜನೆಗಳು ಮತ್ತು ದುಷ್ಟ ಪಿತೂರಿಗಳು ಎಂದು ಹೇಳಿರುವ ಅವರು, ಇದನ್ನು ತ್ಯಜಿಸುವವರೆಗೆ ದಕ್ಷಿಣ ಏಷ್ಯಾದಲ್ಲಿ ಶಾಶ್ವತ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಾರಿಷಸ್ ಬಳಿ ಒಡಿಶಾ ಮೂಲದ ನೌಕಾಪಡೆ ಅಧಿಕಾರಿ ನಾಪತ್ತೆ; ಹುಡುಕಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬ ಮನವಿ

ಇವರಿಬ್ಬರ ಈ ಮಾತುಗಳು ಸ್ಥಳೀಯವಾಗಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಒಳನುಸುಳುವಿಕೆ ಮತ್ತು ಹಿಂಸಾಚಾರಕ್ಕೆ ಕಾರಣವಾಗುವುದರಿಂದ ಇದು ಸ್ಥಳೀಯರಲ್ಲಿ ಹತಾಶೆ, ಭಯದ ಭಾವನೆಯನ್ನು ಹೆಚ್ಚಿಸುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.