ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ; ಕುರಾನ್‌ ಓದುತ್ತಿದ್ದ 10 ಮಂದಿ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ

ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ತರ್ಲೈ ಪ್ರದೇಶದ ಇಮಾಮ್‌ಬರ್ಗಾ ಕಸ್ರ್-ಎ-ಖದೀಜತುಲ್ ಕುಬ್ರಾದಲ್ಲಿ ಶುಕ್ರವಾರ ಪ್ರಾರ್ಥನೆ ನಡೆಯುತ್ತಿರುವಾಗ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Feb 6, 2026 3:57 PM

ಇಸ್ಲಾಮಾಬಾದ್‌: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ತರ್ಲೈ ಪ್ರದೇಶದ ಇಮಾಮ್‌ಬರ್ಗಾ ಕಸ್ರ್-ಎ-ಖದೀಜತುಲ್ ಕುಬ್ರಾದಲ್ಲಿ ಶುಕ್ರವಾರ (Pakistan Bomb Blast) ಪ್ರಾರ್ಥನೆ ನಡೆಯುತ್ತಿರುವಾಗ ಸ್ಫೋಟ ಸಂಭವಿಸಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 20 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಶಿಯಾ ಪ್ರಾರ್ಥನಾ ಸ್ಥಳದ ಮುಖ್ಯ ದ್ವಾರದಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ಸ್ಫೋಟಿಸಲಾಗಿದೆ. ಗಾಯಾಳುಗಳನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕ್ಲಿನಿಕ್ ಸೇರಿದಂತೆ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು.

ಸ್ಫೋಟದ ನಂತರ, ಇಸ್ಲಾಮಾಬಾದ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ನಗರಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದರು. ರಕ್ಷಣಾ ಮತ್ತು ಕಾನೂನು ಜಾರಿ ತಂಡಗಳು ಸ್ಥಳಕ್ಕೆ ಧಾವಿಸಿದ್ದು ಸದ್ಯ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ನವೆಂಬರ್ 11, 2025 ರಂದು ಇಸ್ಲಾಮಾಬಾದ್‌ನ ಜಿ -11 ಪ್ರದೇಶದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಟ್ಟಡದ ಹೊರಗೆ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿದ ಮೂರು ತಿಂಗಳೊಳಗೆ ಈ ಘಟನೆ ನಡೆದಿದೆ. ಈ ಸ್ಫೋಟದಲ್ಲಿ ಹನ್ನೆರಡು ಜನರು ಸಾವನ್ನಪ್ಪಿದರು ಮತ್ತು 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಸದ್ಯ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದು, ಹತ್ತಿರದ ಕಟ್ಟಡಗಳ ಕಿಟಕಿಗಳು ಒಡೆದುಹೋಗಿವೆ ಮತ್ತು ರಸ್ತೆಯುದ್ದಕ್ಕೂ ಭಗ್ನಾವಶೇಷಗಳು ಹರಡಿಕೊಂಡಿವೆ. ವಿಡಿಯೋದಲ್ಲಿ ಮೃತ ದೇಹಗಳಿ ಛಿದ್ರಗೊಂಡಿರುವುದನ್ನು ತೋರಿಸಲಾಗಿದೆ.

ಕಳೆದ ನವೆಂಬರ್‌ನಲ್ಲಿ ಇಸ್ಲಾಮಾಬಾದ್‌ನ ಜಿಲ್ಲಾ ನ್ಯಾಯಾಲಯದ ಹೊರಭಾಗದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಾರೀ ತೀವ್ರತೆಯ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದರು. ನ್ಯಾಯಾಲಯದ ಹೊರಗೆ ನಿಲ್ಲಿಸಿದ್ದ ಹಲವಾರು ವಾಹನಗಳಿಗೆ ಹಾನಿ ಉಂಟಾಗಿತ್ತು.

Pak Army: ಪಾಕ್‌ ಸೇನೆ ಮೇಲೆ ಬಲೂಚ್‌ ಬಂಡುಕೋರರ ದಾಳಿ; 12 ಗಂಟೆಯಲ್ಲಿ 29 ಸೈನಿಕರು ಸಾವು

ಬಲೂಚ್‌ನಿಂದ ಆತ್ಮಹುತಿ ದಾಳಿ!

2022 ಏಪ್ರಿಲ್‌ನಲ್ಲಿ ಶಾರಿ ಬಲೂಚ್ ಕರಾಚಿ ವಿಶ್ವವಿದ್ಯಾಲಯದ ಕನ್ಫ್ಯೂಷಿಯಸ್ ಸಂಸ್ಥೆಯ ಮೇಲೆ ಆತ್ಮಹತ್ಯಾ ದಾಳಿ ನಡೆಸಿದ್ದು, ಬಲೂಚ್ ಹೋರಾಟದ ಮೊದಲ ಮಹಿಳಾ ಬಾಂಬರ್ ಎಂದು ಗುರುತಿಸಲಾಯಿತು. ನಂತರ 2023ರಲ್ಲಿ ಸುಮೈಯಾ ಖಲಂದ್ರಾನಿ ಟರ್ಬತ್‌ನಲ್ಲಿ ಸೇನಾ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದರು. 2024ರಲ್ಲಿ ಮಹಲ್ ಬಲೂಚ್ ಹಾಗೂ 2025ರಲ್ಲಿ ಮಹಿಕನ್ ಬಲೂಚ್ ನಡೆಸಿದ ದಾಳಿಗಳು ಈ ಪ್ರವೃತ್ತಿ ಹೆಚ್ಚುತ್ತಿರುವುದನ್ನು ತೋರಿಸುತ್ತವೆ.