ಅದಾನಿ ಗ್ರೂಪ್ ಗೆ ಬಿಗ್ ರಿಲೀಫ್; ಗೌತಮ್, ಸಾಗರ್ ಅದಾನಿ ವಿರುದ್ಧದ ಕ್ರಿಮಿನಲ್ ಆರೋಪ ವಜಾಗೊಳಿಸಿದ ಅಮೆರಿಕ ನ್ಯಾಯಾಲಯ
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ಅಮೆರಿಕ ನ್ಯಾಯಾಲಯವು ವಜಾಗೊಳಿಸಿದೆ. ವಂಚನೆ ಮತ್ತು ಲಂಚ ಪ್ರಕರಣದ ಆರೋಪದಲ್ಲಿ ಅವರನ್ನು ಎರಡು ವರ್ಷಗಳ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ವಿಚಾರಣೆ ಕೊನೆಗೊಳಿಸಿರುವುದಾಗಿ ಹೇಳಿದೆ.
ಸಂಗ್ರಹ ಚಿತ್ರ -
ನ್ಯೂಯಾರ್ಕ್: ಸುಮಾರು ಎರಡು ವರ್ಷಗಳಿಂದ ಕ್ರಿಮಿನಲ್ ಆರೋಪಗಳನ್ನು (Criminal Charges) ಎದುರಿಸುತ್ತ ಅದಾನಿ ಗ್ರೂಪ್ (adani group) ಅಧ್ಯಕ್ಷ ಗೌತಮ್ ಅದಾನಿ ( Adani Group chairman Gautam Adani) ಮತ್ತು ಅವರ ಸೋದರಳಿಯ ಸಾಗರ್ ಅದಾನಿ (sagar adani) ಅವರಿಗೆ ಈಗ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ಆರೋಪಗಳನ್ನು ಅಮೆರಿಕ ನ್ಯಾಯಾಲಯ (america court) ವಜಾಗೊಳಿಸಿದೆ. ವಂಚನೆ ಮತ್ತು ಲಂಚ ಪ್ರಕರಣದಲ್ಲಿ ಸುಮಾರು ಎರಡು ವರ್ಷಗಳ ವಿಚಾರಣೆ ನಡೆಸಿದ ಬಳಿಕ ಇದೀಗ ಅವರ ವಿರುದ್ಧ ಆರೋಪಗಳನ್ನು ವಜಾಗೊಳಿಸಿರುವುದಾಗಿ ನ್ಯಾಯಾಲಯ ದೃಢಪಡಿಸಿದೆ.
ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಮಾಜಿ ಅದಾನಿ ಗ್ರೀನ್ ಸಿಇಒ ವಿನೀತ್ ಜೈನ್ ವಿರುದ್ಧದ ದೋಷಾರೋಪಣೆಯನ್ನು ವಜಾಗೊಳಿಸಿರುವುದಾಗಿ ಹೇಳಿರುವ ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಲಯವು, ಅವರ ವಿರುದ್ಧ ವಂಚನೆ, ಸಂಚು ಆರೋಪಗಳು ದಾಖಲಾಗಿತ್ತು. ಇದನ್ನು ಕೈಬಿಡುವ ನಿರ್ಧಾರದ ಕುರಿತು ಪ್ರಾಸಿಕ್ಯೂಟರ್‌ಗಳಿಂದ ಹೆಚ್ಚುವರಿ ವಿವರಣೆಗಳನ್ನು ಕೇಳಿದ ಬಳಿಕ ದೋಷಾರೋಪಣೆ ವಜಾ ಅರ್ಜಿಯನ್ನು ನ್ಯಾಯಾಧೀಶ ನಿಕೋಲಸ್ ಗರೌಫಿಸ್ ಅಂಗೀಕರಿಸಿದ್ದಾರೆ ಎಂದು ತಿಳಿಸಿದೆ.
ಟ್ರಂಪ್ ಕೊಲೆಗೆ ಇರಾನ್ ಸಂಚು? ಏರ್ ಫೋರ್ಸ್ ಒನ್ ಬದಲು ರಹಸ್ಯ ವಿಮಾನದಲ್ಲಿ ಪ್ರಯಾಣಿಸಿದ ಅಮೆರಿಕ ಅಧ್ಯಕ್ಷ
ಈ ಮೂಲಕ ಅವರ ವಿರುದ್ದದ ಕ್ರಿಮಿನಲ್ ವಿಚಾರಣೆಗಳನ್ನು ಶಾಶ್ವತವಾಗಿ ಮುಕ್ತಾಯಗೊಳಿಸಲಾಗುತ್ತದೆ. ಈ ಆರೋಪಗಳ ಬಗ್ಗೆ ಮರು ಅರ್ಜಿ ಸಲ್ಲಿಸುವಂತಿಲ್ಲ ಎಂದು ತಿಳಿಸಿದೆ.
Update from Infrastructure Sector! #AdaniCaseDismissed
— Infra News India (INI) (@TheINIofficial) August 11, 2026
▪️US District Court for the Eastern District of New York dismisses with prejudice criminal charges against Gautam Adani, Sagar Adani and former Adani Green CEO Vneet Jaain.
▪️Charges included securities-fraud conspiracy,… pic.twitter.com/UGT16eYlnV
ಏನಿದು ಪ್ರಕರಣ ?
ಅಮೆರಿಕದ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಯುಎಸ್ ಡಿ 250 ಮಿಲಿಯನ್ ಲಂಚ ನೀಡಿದ ಪ್ರಕರಣದಲ್ಲಿ ಗೌತಮ್ ಅದಾನಿ, ಸಾಗರ್ ಅದಾನಿ, ವಿನೀತ್ ಜೈನ್ ಮತ್ತು ಇತರರು ಭಾಗಿಯಾಗಿದ್ದಾರೆ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದರು. ಇದರಲ್ಲಿ ಹೂಡಿಕೆದಾರರ ದಾರಿ ತಪ್ಪಿಸಲಾಗಿದೆ. ಅದಾನಿ ಗ್ರೂಪ್ ಯುಎಸ್ ಮಾರುಕಟ್ಟೆಗಳಲ್ಲಿ ಸಾಲ ಮತ್ತು ಬಾಂಡ್‌ಗಳನ್ನು ವಿತರಿಸಿ 3 ಬಿಲಿಯನ್ ಡಾಲರ್ ಗಿಂತಲೂ ಹೆಚ್ಚು ಅಕ್ರಮ ಆದಾಯ ಗಳಿಸಿದೆ ಎಂದು ಆರೋಪಿಸಲಾಗಿತ್ತು. ಆದರೆ ಈ ಆರೋಪವನ್ನು ಅದಾನಿ ಗ್ರೂಪ್ ನಿರಂತರವಾಗಿ ನಿರಾಕರಿಸಿತ್ತು.
ಇದೀಗ ನ್ಯಾಯಾಲಯವು ಗೌತಮ್ ಅದಾನಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಅಂತಿಮ ತೀರ್ಪು ನೀಡಿದೆ. ಈ ಮೂಲಕ ಎಸ್ ಇಸಿ ಯ ಪ್ರತ್ಯೇಕ ಸಿವಿಲ್ ಮೊಕದ್ದಮೆ ಕೂಡ ಪರಿಹಾರವಾಗಿದೆ. ಇದರಲ್ಲಿ ಅವರು ಆರೋಪದ ಆದೇಶಕ್ಕೆ ಒಪ್ಪಿಗೆ ನೀಡಿರುವುದಕ್ಕೆ 30 ದಿನಗಳಲ್ಲಿ ಅದಾನಿ ಎಸ್ ಇಸಿ ಗೆ 6 ಮಿಲಿಯನ್ ಡಾಲರ್ ಸಿವಿಲ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.
ಇದಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಪ್ರತಿಕ್ರಿಯಿಸಿದ್ದು, ಇನ್ನು ಈ ವಿಚಾರಣೆಯನ್ನು ಮುಂದುವರಿಸುವುದು ನ್ಯಾಯಾಲಯದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್ ಅದಾನಿ ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದಿದ್ದು, ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಆಳವಾದ ಗೌರವವಿದೆ. ಸವಾಲಿನ ಅವಧಿಯಲ್ಲಿ ಸತ್ಯ, ನ್ಯಾಯ ಮತ್ತು ಕಾನೂನಿನ ಮೇಲಿನ ನಮ್ಮ ನಂಬಿಕೆ ಅಚಲವಾಗಿತ್ತು ಎಂದು ಹೇಳಿದ್ದಾರೆ.
ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ
2023ರ ಹಿಂಡೆನ್‌ಬರ್ಗ್ ವರದಿಯ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಈ ವಿಚಾರಣೆಯನ್ನು ಎದುರಿಸಬೇಕಾಯಿತು. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರುಗಳಲ್ಲಿ ತೀವ್ರ ಕುಸಿತದಿಂದ ಸುಮಾರು 150 ಶತಕೋಟಿ ಡಾಲರ್ ನಷ್ಟವಾಗಿದೆ.