ರಷ್ಯಾದ ಮೇಲೆ ಉಕ್ರೇನ್ ಡ್ರೋನ್ ದಾಳಿ: 13 ಮಂದಿ ಸಾವು; ಮತ್ತೆ ಭುಗಿಲೆದ್ದ ಸಂಘರ್ಷ
Ukraine Drone Attack: ರಷ್ಯಾದ ನಿಜ್ನೆಕಾಮ್ಸ್ಕ್ ನಗರದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ ಒಂದು ಮಗು ಸೇರಿ 13 ಜನರು ಮೃತಪಟ್ಟು, 48 ಜನರು ಗಾಯಗೊಂಡಿದ್ದಾರೆ. ನಿಜ್ನೆಕಾಮ್ಸ್ಕ್ ನಗರದ ಕೈಗಾರಿಕಾ ಹಾಗೂ ನಾಗರಿಕ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ಭಾರಿ ಡ್ರೋನ್ ದಾಳಿ ನಡೆದಿದೆ.
ರಷ್ಯಾದ ತೈಲ ಕೇಂದ್ರದ ಮೇಲೆ ಉಕ್ರೇನ್ ಡ್ರೋನ್ ದಾಳಿ -
ಮಾಸ್ಕೋ, ಆ. 10: ರಷ್ಯಾದ (Russia) ನಿಜ್ನೆಕಾಮ್ಸ್ಕ್ ನಗರದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ (Drone Attack) ಒಂದು ಮಗು ಸೇರಿ 13 ಜನರು ಮೃತಪಟ್ಟು, 48 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ಅಧಿಕಾರಿಗಳು ಈ ದಾಳಿಯ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿಲ್ಲ. ಈ ಆಕ್ರಮಣ ರಷ್ಯಾದೊಳಗಿನ ತೈಲ ಘಟಕಗಳು ಸೇರಿ ವಿವಿಧ ಗುರಿಗಳ ಮೇಲೆ ಉಕ್ರೇನ್ ಮುಂದುವರಿಸಿರುವ ದೀರ್ಘ-ದೂರದ ಡ್ರೋನ್ ದಾಳಿ ಭಾಗವಾಗಿರುವಂತೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.
ಈ ಅಭಿಯಾನದ ಉದ್ದೇಶ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಮಾತುಕತೆಗೆ ಬರುವಂತೆ ಒತ್ತಾಯಿಸುವುದು ಮತ್ತು ನಾಲ್ಕು ವರ್ಷಕ್ಕೂ ಹೆಚ್ಚು ಕಾಲದಿಂದ ಮುಂದುವರಿದಿರುವ ರಷ್ಯಾದ ಉಕ್ರೇನ್ ಆಕ್ರಮಣವನ್ನು ಅಂತ್ಯಗೊಳಿಸುವುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ರಷ್ಯಾದಲ್ಲಿ ಡ್ರೋನ್ ದಾಳಿ:
At least 13 people were killed in a Ukrainian drone attack on the city Nizhnekamsk––home to one of Russia’s largest oil refineries––about 550 miles east of Moscow.
— Alex Salvi (@alexsalvinews) August 10, 2026
The strike was among the deadliest Ukrainian attacks on Russian territory since the full-scale war began in 2022. pic.twitter.com/LOZQpBmPDk
ನಿಜ್ನೆಕಾಮ್ಸ್ಕ್ ನಗರದ ಕೈಗಾರಿಕಾ ಹಾಗೂ ನಾಗರಿಕ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಭಾರಿ ಡ್ರೋನ್ ದಾಳಿ ನಡೆದಿದೆ ಎಂದು ಟಾಟರ್‌ಸ್ತಾನ್ ಮುಖ್ಯಸ್ಥ ರುಸ್ತಮ್ ಮಿನ್ನಿಖಾನೋವ್ ಖಚಿತಪಡಿಸಿದ್ದಾರೆ. ಡ್ರೋನ್‌ಗಳು ಯಾವ ಗುರಿಗಳನ್ನು ನಿಖರವಾಗಿ ಟಾರ್ಗೆಟ್ ಮಾಡಿದ್ದವು ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ. ಆದರೆ ನಿಜ್ನೆಕಾಮ್ಸ್ಕ್ ಪ್ರಮುಖ ತೈಲ ಸಂಸ್ಕರಣಾ ಕೇಂದ್ರವಾಗಿದ್ದು, ಇಲ್ಲಿ ಎರಡು ತೈಲ ಸಂಸ್ಕರಣಾ ಘಟಕಗಳು ಮತ್ತು ಒಂದು ಪೆಟ್ರೋಕೆಮಿಕಲ್ ಘಟಕ ಇದೆ.
ದೀರ್ಘ-ಶ್ರೇಣಿಯ ಡ್ರೋನ್ ಬಳಕೆ
ಉಕ್ರೇನ್ ಇತ್ತೀಚಿನ ದಿನಗಳಲ್ಲಿ ರಷ್ಯಾದ ತೈಲ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಪ್ರತಿದಿನ ದೀರ್ಘ-ಶ್ರೇಣಿಯ ಡ್ರೋನ್‌ಗಳನ್ನು ಬಳಸಿ ದಾಳಿ ಮಾಡುತ್ತಿದೆ. ಈ ದಾಳಿಗಳು ರಷ್ಯಾದಲ್ಲಿ ಇಂಧನ ಕೊರತೆಯನ್ನು ಉಂಟು ಮಾಡಿದೆ. ನಿಜ್ನೆಕಾಮ್ಸ್ಕ್ ಉಕ್ರೇನ್ ಗಡಿಯಿಂದ ಪೂರ್ವಕ್ಕೆ ಸುಮಾರು 1,200 ಕಿಲೋ ಮೀಟರ್ ದೂರದಲ್ಲಿದ್ದು, ಸುಮಾರು 2,40,000 ಜನಸಂಖ್ಯೆಯನ್ನು ಹೊಂದಿದೆ.
ಉಕ್ರೇನ್ ಸ್ವದೇಶದಲ್ಲೇ ಅಭಿವೃದ್ಧಿಪಡಿಸಿರುವ ದೀರ್ಘ-ದೂರದ ಡ್ರೋನ್‌ಗಳು ರಷ್ಯಾದೊಳಗೆ ಇನ್ನಷ್ಟು ಆಳವಾಗಿ ಪ್ರವೇಶಿಸುತ್ತಿದ್ದು, ಕೆಲವು ಗಡಿಯಿಂದ ಸುಮಾರು 2,000 ಕಿಲೋ ಮೀಟರ್ ದೂರದಲ್ಲಿರುವ ಸೈಬೀರಿಯಾವರೆಗೂ ತಲುಪುತ್ತಿವೆ.
“ನಾವು ಸಂಪೂರ್ಣವಾಗಿ ಸಮರ್ಥನೀಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದೇವೆ. ರಷ್ಯಾದ ಪ್ರತಿಯೊಂದು ದಾಳಿಗೂ ನಾವು ತಿರುಗೇಟು ನೀಡುತ್ತೇವೆ. ಯುದ್ಧದ ಪರಿಣಾಮವನ್ನು ರಷ್ಯಾದಲ್ಲೇ ಅವರ ಸ್ವಂತ ನೆಲದಲ್ಲಿ ಇನ್ನಷ್ಟು ಅನುಭವಿಸುವಂತೆ ಮಾಡಲಾಗುವುದು. ಈ ಯುದ್ಧ ಇನ್ನೂ ಮುಂದುವರಿಯುತ್ತಿರುವ ಏಕೈಕ ಕಾರಣವೆಂದರೆ ರಷ್ಯಾ ಯುದ್ಧವನ್ನು ಅಂತ್ಯಗೊಳಿಸಲು ಸಿದ್ಧವಿಲ್ಲದಿರುವುದು” ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಭಾರತ, ಚೀನಾಕ್ಕೆ ಶೇಕಡಾ 100 ಸುಂಕ: ಅಮೆರಿಕ ಸೆನೆಟ್‌ನಲ್ಲಿ ರಷ್ಯಾ, ಇರಾನ್ ಮೇಲಿನ ನಿರ್ಬಂಧಕ್ಕೆ ಮಸೂದೆ ಮಂಡನೆ
ರಷ್ಯಾ ಕೂಡ ಉಕ್ರೇನ್ ಮೇಲೆ ಕ್ಷಿಪಣಿಗಳು, ಶಕ್ತಿಶಾಲಿ ಗ್ಲೈಡ್ ಬಾಂಬ್‌ಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಮಾಡುವುದನ್ನು ಮುಂದುವರಿಸಿದೆ. ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ ಮತ್ತು ಸಾವಿರಾರು ನಾಗರಿಕರ ಸಾವುನೋವುಗಳಿಗೆ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಉಕ್ರೇನ್‌ನ ಮಧ್ಯ ಡ್ನಿಪ್ರೊ ಪ್ರದೇಶದಲ್ಲಿರುವ ಗೋದಾಮುಗಳ ಪೈಕಿ ಒಂದನ್ನು ಎರಡು ಬಾರಿ ಹೊಡೆದುರುಳಿಸಿದೆ. ಆರೋಗ್ಯ ಸೌಲಭ್ಯಗಳಿಗಾಗಿ ಉದ್ದೇಶಿಸಲಾದ ತುರ್ತು ಸರಬರಾಜು ಸೌಲಭ್ಯವನ್ನು ರಷ್ಯಾ ನಾಶಪಡಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪಿಯನ್ ಕಚೇರಿ ತಿಳಿಸಿದೆ. ಈ ದಾಳಿಯಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ.