ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chen-Ning Yang: ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನಿ ಭೌತಶಾಸ್ತ್ರಜ್ಞ ಚೆನ್-ನಿಂಗ್ ಯಾಂಗ್ ವಿಧಿವಶ

1957ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಖ್ಯಾತ ಚೀನಿ ಭೌತಶಾಸ್ತ್ರಜ್ಞ ಚೆನ್ ನಿಂಗ್ ಯಾಂಗ್ ಅ.18ರಂದು ಬೀಜಿಂಗ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 103 ವರ್ಷ ವಯಸ್ಸಾಗಿತ್ತು. ಯಾಂಗ್ 1922ರಲ್ಲಿ ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದ ಹೆಫೀಯಲ್ಲಿ ಜನಿಸಿದರು.

ಖ್ಯಾತ ಚೀನಿ ಭೌತಶಾಸ್ತ್ರಜ್ಞ ನಿಧನ

ಚೆನ್ ನಿಂಗ್ ಯಾಂಗ್ -

Profile Sushmitha Jain Oct 18, 2025 9:11 PM

ಬೀಜಿಂಗ್: ಚೀನಿ ಭೌತಶಾಸ್ತ್ರಜ್ಞ ಮತ್ತು ನೋಬೆಲ್ ಪ್ರಶಸ್ತಿ (Nobel Prize) ಪುರಸ್ಕೃತ ಚೆನ್ ನಿಂಗ್ ಯಾಂಗ್ (Chen-Ning Yang) ಬೀಚಿಂಗ್‌ನಲ್ಲಿ ಶನಿವಾರ (ಅ. 18) 103ನೇ ವಯಸ್ಸಿನಲ್ಲಿ ನಿಧನರಾದರು. 1922ರಲ್ಲಿ ಚೆನ್ ನಿಂಗ್ ಯಾಂಗ್ ಪೂರ್ವ ಚೀನಾ(China)ದ ಅನ್‌ಹುಯಿ(Anhui) ಪ್ರಾಂತ್ಯದ ಹೆಫೆಯಿ(Hefei)ಯಲ್ಲಿ ಜನಿಸಿದರು. 1940ರ ದಶಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ (America)ಕ್ಕೆ ತೆರಳಿದ ಅವರು, ನಂತರ ಅಲ್ಲಿಯೇ ಹಲವು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಭೌತಶಾಸ್ತ್ರಕ್ಕೆ ಚೆನ್ ನಿಂಗ್ ಯಾಂಗ್ ನೀಡಿದ ಕೊಡುಗೆಗಳನ್ನು ಗುರುತಿಸಿ 1957ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದು ಚೀನಾದ ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಓದಿ: Ayodhya Diwali 2025: ಅಯೋಧ್ಯೆಯಲ್ಲಿ ಬೆಳಗಲಿದೆ 25 ಲಕ್ಷ ಹಣತೆ, ಮತ್ತೊಂದು ಗಿನ್ನೆಸ್ ದಾಖಲೆ ಸಜ್ಜು!

ಐನ್ಸ್‌ಟೈನ್ ಸಿದ್ಧಾಂತ (Einstein’s theory)ದಷ್ಟೇ ಮಹತ್ವ ಪಡೆದ ಯಾಂಗ್–ಮಿಲ್ಸ್ ಸಿದ್ಧಾಂತ
1954ರಲ್ಲಿ ಅಮೇರಿಕನ್ ಭೌತಶಾಸ್ತ್ರಜ್ಞ ರಾಬರ್ಟ್ ಮಿಲ್ಸ್ ಅವರೊಂದಿಗೆ ಸಹ-ಲೇಖಕರಾಗಿ ಯಾಂಗ್ ಪ್ರಕಟಿಸಿದ ಸಮೀಕರಣಗಳು ಭೌತಶಾಸ್ತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದವು. ಈ ಸಮೀಕರಣಗಳು ಎಲೆಕ್ಟ್ರೋ ಮ್ಯಾಗ್‌ನೇಟಿಕ್, ಪ್ರಬಲ ಮತ್ತು ದುರ್ಬಲ ಅಂತರ್ ಕ್ರಿಯೆಗಳನ್ನು ವಿವರಿಸುತ್ತವೆ.

ಯಾಂಗ್–ಮಿಲ್ಸ್ ಸಿದ್ಧಾಂತವು (Yang–Mills theory) ಆಧುನಿಕ ಭೌತಶಾಸ್ತ್ರದ ಮೂಲಸ್ತಂಭವಾದ ʼಸ್ಟಾಂಡರ್ಡ್ ಮಾಡಲ್ʼ (Standard Model) ಗಣಿತಕ್ಕೆ ಅಡಿಪಾಯ ಹಾಕಿತ್ತು. ಈ ಮಾದರಿಯು ಎಲ್ಲ ಪ್ರಾಥಮಿಕ ಕಣಗಳ ವರ್ತನೆ ಹಾಗೂ ಮೂಲಭೂತ ಶಕ್ತಿಗಳನ್ನು ಒಂದೇ ಸಿದ್ಧಾಂತದಲ್ಲಿ ಅರ್ಥೈಸುತ್ತದೆ ಎಂದು ಹಾಂಗ್‌ಕಾಂಗ್‌ನ ʼಸೌತ್ ಚೈನಾ ಮಾರ್ನಿಂಗ್ ಪೋಸ್ಟ್ʼ ವರದಿ ಮಾಡಿದೆ.

“ಚೆನ್ ನಿಂಗ್ ಯಾಂಗ್ 20ನೇ ಶತಮಾನದ ಶ್ರೇಷ್ಠ ಸೈದ್ಧಾಂತಿಕ ಭೌತಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು, ಯಾಂಗ್–ಮಿಲ್ಸ್ ಸಿದ್ಧಾಂತವಿಲ್ಲದೆ ಸ್ಟ್ಯಾಂಡರ್ಡ್ ಮಾದರಿಯೇ ಇಲ್ಲ” ಎಂದು ಶಾಂಘೈ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್‌ (Shanghai Institute for Advanced Studies)ನ ವಿಲ್ಚೆಕ್ ಕ್ವಾಂಟಮ್ ಸೆಂಟರ್‌(Wilczek Quantum Centre)ನ ಸಹ ನಿರ್ದೇಶಕಿ ಮತ್ತು ಭೌತಶಾಸ್ತ್ರ ಪ್ರಾಧ್ಯಾಪಕಿ ಶಿ ಯು(Shi Yu) ಹೇಳಿದ್ದಾರೆ.

ಇಷ್ಟೇ ಅಲ್ಲದೇ, “ಚೀನಾದ ಜನರು ‘ವಿಜ್ಞಾನದಲ್ಲಿ ನಾವು ಇತರರಿಗಿಂತ ಉತ್ತಮರಲ್ಲ' ಎಂಬ ನಂಬಿಕೆಯಿಂದ ಹೊರಬರಲು ಮತ್ತು ಮುಂಬರುವ ಪೀಳಿಗೆಗಳು ವಿಶ್ವದ ಅತ್ಯುತ್ತಮ ವಿಜ್ಞಾನಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬಹುದು ಎಂಬ ಆತ್ಮವಿಶ್ವಾಸ ಹೊಂದಲು ಯಾಂಗ್ ಅವರ ಸಾಧನೆಯೇ ಪ್ರೇರಣೆʼʼ ಶಿ ಯು ಹೇಳಿದ್ದಾರೆ.

ಯಾಂಗ್–ಮಿಲ್ಸ್ ಸಿದ್ಧಾಂತ ವಿಶ್ವಕ್ಕೆ ನೀಡಿದ ಅದ್ಭುತ ಕೊಡುಗೆ. ಅಲ್ಲದೇ ಭೌತಶಾಸ್ತ್ರದಲ್ಲಿ ಚೆನ್ ನಿಂಗ್ ಯಾಂಗ್ ಮಾಡಿದ ಸಾಧನೆಗಳು ಯುವ ಪೀಳಿಗೆಗಳಿಗೆ ದಾರಿ ದೀಪ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ.