ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼನರೇಂದ್ರ ಮೋದಿ ಟಫ್‌ ಮ್ಯಾನ್‌ʼʼ: ಪ್ರಧಾನಿಯನ್ನು ಹೊಗಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

Quad Summit Meet: ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆಯುತ್ತಿರುವ ಕ್ವಾಡ್‌ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೊಮ್ಮೆ ಮುಖಾಮುಖಿಯಾದರು. ಈ ವೇಳೆ ಮೋದಿ ಅವರನ್ನು ಟ್ರಂಪ್‌ ಹೊಗಳಿದ್ದು, ಜಗತ್ತಿನ ಗಮನ ಸೆಳೆದಿದೆ.

ಪ್ರಧಾನಿ ಮೋದಿಯನ್ನು ಹೊಗಳಿದ ಡೊನಾಲ್ಡ್‌ ಟ್ರಂಪ್‌

ಮನಿಲಾದಲ್ಲಿ ನರೇಂದ್ರ ಮೋದಿ -

Ramesh Ballamoole
Ramesh Ballamoole Nov 17, 2026 5:25 PM

ಮನಿಲಾ, ನ. 17: ʼʼನರೇಂದ್ರ ಮೋದಿ ಟಫ್‌ ಮ್ಯಾನ್‌ʼʼ (ಬಲಶಾಲಿ ಮನುಷ್ಯ)-ಭಾರತದ ಪ್ರಧಾನಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೊಗಳಿದ ಪರಿ ಇದು. ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆಯುತ್ತಿರುವ ಕ್ವಾಡ್‌ ಶೃಂಗಸಭೆಯಲ್ಲಿ (Quad Summit Meet) ಭಾಗವಹಿಸಿದ ವೇಳೆ ಟ್ರಂಪ್‌ ಮತ್ತು ಮೋದಿ ಮುಖಾಮುಖಿಯಾದರು. ಈ ವೇಳೆ ತಮ್ಮ ʼಸ್ನೇಹಿತʼ ಮೋದಿ ಅವರ ಬಗ್ಗೆ ಟ್ರಂಪ್‌ ಮೆಚ್ಚುಗೆಯ ಮಾತುಗಳನ್ನಾಡಿದರು. ಹಿಂದೆ ಮೋದಿ ಅವರನ್ನು ಉತ್ತಮ ಸ್ನೇಹಿತ ಎಂದು ಟ್ರಂಪ್‌ ಕರೆದಿದ್ದರು. ಅಲ್ಲದೆ ಈ ವರ್ಷದ ಜೂನ್‌ನಲ್ಲಿ ಫ್ರಾನ್ಸ್‌ನಲ್ಲಿ ಆಯೋಜಿಸಿರುವ ಜಿ7 ಶೃಂಗಸಭೆ 2026ರ ವೇಳೆ ನಡೆದ ಭಾರತ-ಅಮೆರಿಕ ದ್ವಿಪಕ್ಷೀಯ ಮಾತುಕತೆ ವೇಳೆ ʼʼನರೇಂದ್ರ ಮೋದಿ ಮಹಾ ಪ್ರಚಂಡ ಮತ್ತು ಉತ್ತಮ ವ್ಯಾಪಾರಿʼʼ ಎಂದು ಟ್ರಂಪ್‌ ಬಣ್ಣಿಸಿದ್ದರು. ಅಲ್ಲದೆ , ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಗೌರವವಿದೆ ಎಂದಿದ್ದರು.

ಇದೀಗ ಕ್ವಾಡ್‌ ನಾಯಕರ ಫೋಟೊ ಸೆಷನ್‌ ವೇಳೆ ಮೋದಿ ಅವರತ್ತ ಕೈ ತೋರಿಸಿ, "ಹೇಳಬೇಕೆಂದರೆ, ಇವರು ಬಹಳ ಕಠಿಣ ನಿಲುವಿನ ವ್ಯಕ್ತಿ, ಸುಮ್ಮನೆ ತಿಳಿಸುತ್ತಿದ್ದೇನೆ ಅಷ್ಟೇ" ಎಂದು ಟ್ರಂಪ್ ಹೇಳಿದರು. ಈ ವೇಳೆ ಜಪಾನ್ ಪ್ರಧಾನಿ ಸನಾಯೆ ತಕೈಚಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಉಪಸ್ಥಿತರಿದ್ದರು. ಜಪಾನ್ ಪ್ರಧಾನಿಯತ್ತ ಕೈ ತೋರಿಸಿ "ಇವರು ಇನ್ನೂ ಟಫ್‌" ಎಂದೂ ಟ್ರಂಪ್ ನುಡಿದರು. ನಂತರ ತಮಾಷೆಯ ಧಾಟಿಯಲ್ಲಿ ಅಲ್ಬನೀಸ್ ಅವರತ್ತ ನೋಡಿ, "ನಮ್ಮ ನಡುವೆ ಎಲ್ಲವೂ ಸರಿಯಾಗಿದೆ" ಎಂದು ಹೇಳಿದರು. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಮೋದಿ ಅವರನ್ನು ಹೊಗಳಿದ ಟ್ರಂಪ್‌:



ಟ್ರಂಪ್ ಇದೇ ವೇಳೆ ಮೋದಿ, ತಕೈಚಿ ಮತ್ತು ಅಲ್ಬನೀಸ್ ಅವರನ್ನು ತಮ್ಮ ಸ್ನೇಹಿತರೆಂದು ಕರೆದರು ಹಾಗೂ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳೊಂದಿಗೆ ಅಮೆರಿಕ ಉತ್ತಮ ಬಾಂಧವ್ಯವನ್ನು ಹೊಂದಿದೆ ಎಂದು ಹೇಳಿದರು. "ಆರಂಭದಿಂದಲೂ, ನಾನು ಈ ಮೂವರೊಂದಿಗೆ ದೀರ್ಘಕಾಲದಿಂದ ಒಡನಾಟ ಹೊಂದಿದ್ದೇನ. ಅವರು ಅತ್ಯದ್ಭುತ ವ್ಯಕ್ತಿಗಳು. ಅವರು ನನ್ನ ಸ್ನೇಹಿತರು" ಎಂದು ಟ್ರಂಪ್ ತಿಳಿಸಿದರು.

ʼʼನರೇಂದ್ರ ಮೋದಿ ಮಹಾ ಪ್ರಚಂಡ, ಅವರ ಬಗ್ಗೆ ಅಪಾರ ಗೌರವವಿದೆʼʼ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಣ್ಣನೆ

ಮೋದಿ ಶ್ರೇಷ್ಠ ನಾಯಕ ಎಂದ ಟ್ರಂಪ್

ಕ್ವಾಡ್ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ಮತ್ತೊಮ್ಮೆ ಮೋದಿ ಅವರನ್ನು ಶ್ಲಾಘಿಸಿದರು. "ಅವರು ಒಬ್ಬ ಶ್ರೇಷ್ಠ ನಾಯಕ, ಇಡೀ ಜಗತ್ತಿನಾದ್ಯಂತ ಎಲ್ಲರಿಂದಲೂ ಅಪಾರ ಗೌರವವನ್ನು ಪಡೆದಿದ್ದಾರೆ" ಎಂದು ಅವರು ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ಕ್ವಾಡ್ ಅನ್ನು "ರಚನಾತ್ಮಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆ" ಎಂದು ಬಣ್ಣಿಸಿದರು. ಅಲ್ಲದೆ, ಈ ಶೃಂಗಸಭೆಯು ಮುಂದಿನ ಹಂತಕ್ಕಾಗಿ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸಲು ಸಹಕಾರಿಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಮೋದಿ ಅವರಿಗೆ ಟ್ರಂಪ್‌ ಮೆಚ್ಚುಗೆ:



ಕ್ವಾಡ್ ಗುಂಪಿನಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ಇದೆ. ಮನಿಲಾದಲ್ಲಿ ನಡೆದ ಈ ಸಭೆಯು ಟ್ರಂಪ್ ಅವರ ಪ್ರಸ್ತುತ ಅಧ್ಯಕ್ಷೀಯ ಅವಧಿಯಲ್ಲಿ ನಡೆದ ಮೊದಲ 'ಕ್ವಾಡ್' ನಾಯಕರ ಮಟ್ಟದ ಸಭೆ ಎನಿಸಿಕೊಂಡಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರವನ್ನು ಬಲಪಡಿಸಲು ಈ ನಾಲ್ಕು ರಾಷ್ಟ್ರಗಳು ಪ್ರಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.‌

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.