ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಲೆಬುರುಡೆಗೆ ಗಾಯ; ಈಗ ಆರೋಗ್ಯ ಹೇಗಿದೆ? ಸೌದಿ ಅರೇಬಿಯಾ ಅಧಿಕಾರಿಗಳು ಕೊಟ್ರು ಮಹತ್ವದ ಅಪ್‌ಡೇಟ್‌

Flydubai Flight: ಸಹ ಪೈಲೆಟ್ ದಾಳಿಯಿಂದ ತಲೆಬುರುಡೆ ಮುರಿತಕ್ಕೆ ಒಳಗಾಗಿರುವ ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚಾರ್ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಕಾಕ್ ಪಿಟ್ ನಲ್ಲಿ ಇತ್ತೀಚೆಗೆ ಸ್ಮಿತ್ ಮಚ್ಚಾರ್ ಅವರ ಮೇಲೆ ಒಮಾನಿನ ಸಹ ಪೈಲೆಟ್ ಅಲ್-ಹಮ್ಮಾಮಿ ದಾಳಿ ನಡೆಸಿದ್ದನು.

ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತುರ್ತು ಶಸ್ತ್ರಚಿಕಿತ್ಸೆ

ಸಂಗ್ರಹ ಚಿತ್ರ -

ಅಬುಧಾಬಿ: ದುಬೈನಿಂದ (dubai) ಇಸ್ರೇಲ್ (Israel) ನ ಟೆಲ್ ಅವೀವ್‌ಗೆ ಸಾಗುತ್ತಿದ್ದ ಫ್ಲೈದುಬೈ ಎಫ್ ಝೆಡ್ 1073 (Flydubai attack) ವಿಮಾನದ ಕಾಕ್‌ಪಿಟ್‌ನಲ್ಲಿ ಒಮನ್ (Oman) ಮೂಲದ ಸಹ ಪೈಲಟ್‌ ಹಮಾಮ್ ಅಲ್-ಹಮ್ಮಾಮಿ ಕೊಡಲಿಯಿಂದ ದಾಳಿ (Omani co-pilot attack) ನಡೆಸಿದ್ದರಿಂದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಅವರ ತಲೆಬುರುಡೆ ಮುರಿತಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹಮಾಮ್ ಅಲ್-ಹಮ್ಮಾಮಿ ವಿಮಾನದ ನಿಯಂತ್ರಣ ಪಡೆದು ಅದನ್ನು ಇಸ್ರೇಲ್ ಮೇಲೆ ದಾಳಿ ನಡೆಸಲು ಉಪಯೋಗಿಸುವ ಯೋಜನೆಯನ್ನು ಹೊಂದಿದ್ದನು.

ಫ್ಲೈದುಬೈ ವಿಮಾನವನ್ನು ಪತನಗೊಳಿಸುವ ಹಮಾಮ್ ಅಲ್-ಹಮ್ಮಾಮಿಯ ಪ್ರಯತ್ನವನ್ನು ವಿಫಲಗೊಳಿಸಿದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ 170ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಿದರು. ಹಮಾಮ್ ಅಲ್-ಹಮ್ಮಾಮಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸ್ಮಿತ್ ಮಚ್ಚಾರ್ ತೀವ್ರ ನೋವು ಮತ್ತು ರಕ್ತಸ್ರಾವದ ನಡುವೆಯೂ ಹೋರಾಡಿ ಕಾಕ್‌ಪಿಟ್ ಬಾಗಿಲನ್ನು ತೆರೆದರು.

ತಕ್ಷಣವೇ ಸಿಬ್ಬಂದಿ ಮತ್ತು ಪ್ರಯಾಣಿಕರು ಅವರ ರಕ್ಷಣೆಗೆ ಧಾವಿಸಿ ವಿಮಾನ ಅಪಘಾತವನ್ನು ತಡೆಯುವಲ್ಲಿ ಯಶಸ್ವಿಯಾದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.

ಬ್ರಿಟನ್‌ನಲ್ಲಿ ಶಿಕ್ಷಣ, ಉಗ್ರವಾದಿ ವಿಚಾರಧಾರೆ: ಒಮನ್ ಏರ್‌ನಿಂದ ಕಿತ್ತು ಹಾಕಲ್ಪಟ್ಟ ಹಮಾಮ್ ಅಲ್-ಹಮ್ಮಾಮಿ ಫ್ಲೈದುಬೈ ಸಹ ಪೈಲಟ್‌ ಆಗಿದ್ದೇಗೆ?

ಹಮಾಮ್ ಅಲ್ ಹಮ್ಮಾಮಿಯ ಹಲ್ಲೆಯಿಂದ ಸ್ಮಿತ್ ಮಚ್ಚಾರ್ ಅವರು 'ಡಿಪ್ರೆಸ್ಡ್ ಫ್ರಾಕ್ಚರ್'ಗೆ ಒಳಗಾಗಿದ್ದಾರೆ. 'ಡಿಪ್ರೆಸ್ಡ್ ಫ್ರಾಕ್ಚರ್' ಎಂದರೆ ತಲೆಬುರುಡೆಯ ಮೂಳೆಯ ತುಂಡು ಒಳಗೆ ತಳ್ಳಲ್ಪಡುವುದು. ಹೀಗಾಗಿ ಅವರಿಗೆ ತುರ್ತಾಗಿ ಸೌದಿ ಅರೇಬಿಯಾದಲ್ಲಿ ತಲೆಬುರುಡೆಯ ಶಸ್ತ್ರಚಿಕಿತ್ಸೆ ನಡೆಸಲಾಯಿತು.

'ಡಿಪ್ರೆಸ್ಡ್ ಸ್ಕಲ್ ಫ್ರಾಕ್ಚರ್' ಎಂಬುದು ಗಂಭೀರವಾದ ಗಾಯವಾಗಿದೆ. ಇದರಿಂದ ಮೆದುಳಿಗೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ತಕ್ಷಣ ಇದಕ್ಕೆ ವೈದ್ಯಕೀಯ ಆರೈಕೆ ಅಥವಾ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಸ್ಮಿತ್ ಮಚ್ಚಾರ್ ಅವರ ಕೈಕಾಲು, ಎದೆ ಮತ್ತು ಹೊಟ್ಟೆಯ ಮೇಲ್ಭಾಗದಲ್ಲಿಯೂ ಗಾಯಗಳಾಗಿವೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ಅವರನ್ನು ಕಳೆದ ವಾರ ಸೌದಿ ಅರೇಬಿಯಾದಿಂದ ಅಬುಧಾಬಿಗೆ ವಿಮಾನದ ಮೂಲಕ ಕರೆತರಲಾಯಿತು. ಮಿಲಿಟರಿ ಆಸ್ಪತ್ರೆಯಲ್ಲಿ ವಿಶೇಷ ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ. ಕ್ಯಾಪ್ಟನ್ ಮಚ್ಛಾರ್ ಅವರ ಕುಟುಂಬಕ್ಕೆ ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ ಮತ್ತು ಅವರ ಆರೋಗ್ಯದ ಕುರಿತಾದ ನಿಯಮಿತ ಮಾಹಿತಿಯನ್ನು ಕುಟುಂಬಕ್ಕೆ ತಿಳಿಸಲಾಗುತ್ತಿದೆ ಎನ್ನಲಾಗಿದೆ.

ಲಖನೌಗೆ ಬಂದಿಳಿದ ದುಬೈಯಿಂದ ಥಾಯ್ಲೆಂಡ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ; ಕಾರಣವೇನು?

ಕಳೆದ ಬುಧವಾರ ಮುಂಜಾನೆ ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ ಎಫ್ ಝೆಡ್ 1073 ಪ್ರಯಾಣ ಆರಂಭವಾದ ಎರಡೂವರೆ ಗಂಟೆಗಳ ಅನಂತರ ಸುಮಾರು 18,000 ಅಡಿಗಳಷ್ಟು ಕೆಳಗೆ ಕುಸಿಯಿತು. ವಿಮಾನವು ಮೊದಲು ಏರ್ ಟ್ರಾಫಿಕ್ ಕಂಟ್ರೋಲರ್‌ಗಳಿಗೆ ತುರ್ತು ಸಂಕೇತವಾದ ಅಪಹರಣವನ್ನು ಸೂಚಿಸುವ 'ಸ್ಕವಾಕ್ ಕೋಡ್ 7500' ಅನ್ನು ರವಾನಿಸಿತ್ತು. ಬಳಿಕ ಸೌದಿ ಅರೇಬಿಯಾದ ತಬುಕ್‌ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು.