ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಭಾರತವನ್ನು ಸುಮ್ಮನೆ ಬಿಡುವುದಿಲ್ಲ: ಪಾಕ್ ಮಾಜಿ ರಾಯಭಾರಿಯ ವಿಲಕ್ಷಣ ಹೇಳಿಕೆ
Former Pakistani ambassador statement: ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಭಾರತವನ್ನು ಸುಮ್ಮನೆ ಬಿಡುವುದಿಲ್ಲ. ನವದೆಹಲಿ ಹಾಗೂ ಮುಂಬೈ ನಗರಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತೇವೆ ಎಂದು ಮಾಜಿ ಹೈಕಮಿಷನರ್ ಅಬ್ದುಲ್ ಬಾಸಿತ್ ಹೇಳಿದ್ದಾರೆ. ಈ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಅಬ್ದುಲ್ ಬಾಸಿತ್ (ಸಂಗ್ರಹ ಚಿತ್ರ) -
ಇಸ್ಲಾಮಾಬಾದ್, ಮಾ. 22: ಅಮೆರಿಕ ಪಾಕಿಸ್ತಾನದ (India-Pakistan) ಮೇಲೆ ದಾಳಿ ಮಾಡಿದರೆ ಇಸ್ಲಾಮಾಬಾದ್ ಭಾರತದ ಪ್ರಮುಖ ನಗರಗಳನ್ನು ಗುರಿಯಾಗಿಸಿ ದಾಳಿ ಮಾಡಲಿದೆ ಎಂದು ಪಾಕಿಸ್ತಾನದ ಮಾಜಿ ಹೈಕಮಿಷನರ್ ಅಬ್ದುಲ್ ಬಾಸಿತ್ (Abdul Basit) ನೀಡಿದ ಹೇಳಿಕೆಯು ಹೊಸ ವಿವಾದಕ್ಕೆ ಕಾರಣವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಹತ್ಯೆಯಾದ ನಂತರ ಭಾರತವು ಪ್ರತೀಕಾರ ತೀರಿಸಿಕೊಂಡಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ನಡೆಸಿತು. ಆ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿಯಿದೆ. ಈ ನಡುವೆ ಅಬ್ದುಲ್ ಬಾಸಿತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕ್ ಮಾಜಿ ರಾಯಭಾರಿಯ ಹೇಳಿಕೆಗೆ ಭಾರಿ ವಿವಾದ
ಕಾಲ್ಪನಿಕ ಸಂಘರ್ಷದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಬಾಸಿತ್, ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಪಾಕ್ ಹಲವು ಭಾರತೀಯ ನಗರಗಳನ್ನು ಗುರಿಯಾಗಿಸುತ್ತದೆ ಎಂದು ಹೇಳಿದರು. ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ನಾವು ಭಾರತದ ಮೇಲೆ ದಾಳಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಇಲ್ಲಿದೆ ಪೋಸ್ಟ್:
Former Pakistani High Commissioner to India Abdul Basit thinks if USA or any other country attacks Pakistan then Pakistan should attack India and we will see what happens after that.
— Incognito (@Incognito_qfs) March 21, 2026
Pakistan's existence is a threat to India. Everyone in Pakistan is a Jihadi. Anyone who doesn't… pic.twitter.com/5fmhhFx9S9
ನಮ್ಮ ಕ್ಷಿಪಣಿಗಳು ಅಮೆರಿಕವನ್ನು ತಲುಪದಿರಬಹುದು. ಆದರೆ ನಾವು ಯಾವುದೇ ಯೋಚನೆಯಿಲ್ಲದೆ ಭಾರತದ ಪ್ರಮುಖ ನಗರವಾದ ಮುಂಬೈ ಮತ್ತು ನವದೆಹಲಿಯ ಮೇಲೆ ದಾಳಿ ಮಾಡುತ್ತೇವೆ. ನಾವು ಅದನ್ನು ಬಿಡುವುದಿಲ್ಲ. ನಂತರ ಏನಾಗುತ್ತದೆ ಎಂದು ನೋಡೋಣ ಎಂದು ಅವರು ಸ್ಥಳೀಯ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಅಫ್ಘಾನಿಸ್ತಾನದ ತಾಲಿಬಾನ್ ಸೇನಾ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಪಾಕಿಸ್ತಾನ
ಈ ಹೇಳಿಕೆಗೆ ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುತ್ತೇವೆ ಎಂದು ನೀಡಿರುವ ಬಾಸಿತ್ ಹೇಳಿಕೆಯು, ಸದ್ಯ ಭಾರಿ ವಿವಾದಕ್ಕೆ ಕಾರಣವಾಗಿದೆ. ನಾವು ಹಾಗೆ ಆಗಬೇಕೆಂದು ಬಯಸುವುದಿಲ್ಲ ಎಂದು ಅವರು ಹೇಳಿದರು. ಇದು ಕೇವಲ ಕಾಲ್ಪನಿಕ, ಭಾರತವೂ ಅದನ್ನು ಬಯಸುವುದಿಲ್ಲ ಎಂದು ತಿಳಿಸಿದರು.
ಅಬ್ದುಲ್ ಬಾಸಿತ್ ಯಾರು?
ಅಬ್ದುಲ್ ಬಾಸಿತ್ 2014ರಿಂದ 2017ರವರೆಗೆ ಭಾರತದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಗಳು ಉದ್ವಿಗ್ನವಾಗಿದ್ದವು. ಅವರು ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದರು.
ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಯುದ್ಧ ನಡೆಸುತ್ತಿರುವುದರಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿದೆ. ಪ್ರತೀಕಾರವಾಗಿ ಇರಾನ್, ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಇದೆಲ್ಲದರ ಮಧ್ಯೆ ಪಾಕ್ ಮಾಜಿ ರಾಯಭಾರಿ ಈ ಹೇಳಿಕೆ ನೀಡಿದ್ದಾರೆ.