ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranveer Singh: 'ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಸಿನಿಮಾ': ʻಧುರಂಧರ್‌ 2ʼ ಚಿತ್ರಕ್ಕೆ ನಟ ಅನುಪಮ್ ಖೇರ್ ಜೈಕಾರ

ಹಿರಿಯ ನಟ ಅನುಪಮ್ ಖೇರ್ ಅವರು 'ಧುರಂಧರ್: ದಿ ರಿವೆಂಜ್' ಸಿನಿಮಾವನ್ನು ವೀಕ್ಷಿಸಿ, ಇದು ಕೇವಲ ಸಿನಿಮಾವಲ್ಲ, ಭಾರತದ ಹೆಮ್ಮೆ ಎಂದು ಬಣ್ಣಿಸಿದ್ದಾರೆ. ರಣವೀರ್ ಸಿಂಗ್ ಅವರ ಪ್ರಬುದ್ಧ ನಟನೆ ಮತ್ತು ಆದಿತ್ಯ ಧರ್ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ.

ʻಇದು ವಿಶ್ವದರ್ಜೆಯ ಸಿನಿಮಾʼ; ರಣವೀರ್ ಸಿಂಗ್ ನಟನೆಗೆ ಅನುಪಮ್ ಖೇರ್ ಸಲಾಂ

-

Avinash GR
Avinash GR Mar 22, 2026 5:46 PM

ರಣವೀರ್‌ ಸಿಂಗ್‌ ನಟನೆಯ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ಹಿರಿಯ ನಟ ಅನುಪಮ್ ಖೇರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು, "ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವಂತಹ ಸಿನಿಮಾ" ಎಂದು ಅನುಪಮ್ ಖೇರ್ ಬಣ್ಣಿಸಿದ್ದಾರೆ. ಸಿನಿಮಾ ನೋಡಿದ ತಕ್ಷಣ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಅನುಪಮ್ ಖೇರ್, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

"ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ ನಂತರ, ನಾನು ಯಾವುದನ್ನಾದರೂ ಸ್ವಲ್ಪ ತಾಳ್ಮೆಯಿಂದಲೇ ಸಮೀಪಿಸಬೇಕು ಎಂದುಕೊಳ್ಳುತ್ತೇನೆ. ಆದರೆ ನೀವು ಯಾವುದನ್ನಾದರೂ ನಿಜವಾಗಿಯೂ ಇಷ್ಟಪಟ್ಟರೆ, ಅದನ್ನು ಪ್ರಶಂಸಿಸಲು ನಿಮ್ಮ ವಯಸ್ಸು ಅಥವಾ ಅನುಭವ ಅಡ್ಡಿ ಬರಬಾರದು. ಒಂದು ಸಿನಿಮಾ ಅಂತಿಮವಾಗಿ ಭಾವನಾತ್ಮಕವಾಗಿ ನಿಮಗೆ ಕನೆಕ್ಟ್ ಆಗಬೇಕು" ಎಂದು ಅನುಪಮ್‌ ಖೇರ್‌ ಹೇಳಿದ್ದಾರೆ.

Akshaye Khanna: 'ಧುರಂಧರ್ 2' ಕಲಾವಿದರ ಸಂಭಾವನೆ ಎಷ್ಟು? ರಣವೀರ್ ಸಿಂಗ್‌ಗೆ ಸಿಕ್ಕಿದೆ ಕೈತುಂಬಾ ಕಾಸು!

ಕೊನೆಯ ಅರ್ಧ ಗಂಟೆ ಅದ್ಭುತ

"ಈ ಸಿನಿಮಾವು ಆಧುನಿಕ ಭಾರತದ ಬಗ್ಗೆ ಮಾತನಾಡುತ್ತದೆ. ಇಲ್ಲಿ ಡ್ರಾಮಾ ಇರಬಹುದು, ಆದರೆ ಉದ್ದೇಶದಲ್ಲಿ ಯಾವುದೇ ಸುಳ್ಳಿಲ್ಲ. ಐಬಿ (IB) ಮತ್ತು ರಾ (RAW) ನಂತಹ ನಮ್ಮ ಗುಪ್ತಚರ ಸಂಸ್ಥೆಗಳ ಕೆಲಸವನ್ನು ಇದು ಎತ್ತಿ ತೋರಿಸುತ್ತದೆ. ಚಿತ್ರದ ಕೊನೆಯ ಅರ್ಧ ಗಂಟೆಯ ಸಾಹಸ ದೃಶ್ಯಗಳು ಅದ್ಭುತವಾಗಿವೆ" ಎಂದು ಅವರು ಮೆಚ್ಚುಗೆ ಸೂಚಿಸಿದ್ದಾರೆ.

"ನಾನು ನಟನೆ ಕಲಿಸುತ್ತೇನೆ, ಆಕ್ಟಿಂಗ್ ಸ್ಕೂಲ್ ನಡೆಸುತ್ತೇನೆ. ನಾನು ಒಬ್ಬರಿಗೆ ಸಲಾಂ ಹೊಡೆಯಬೇಕೆಂದರೆ ಅದಕ್ಕೆ ಬಲವಾದ ಕಾರಣವಿರಬೇಕು. ರಣವೀರ್, ನಿನ್ನ ಬಾಡಿ ಲಾಂಗ್ವೇಜ್ ಅದ್ಭುತವಾಗಿದೆ. ಎಂತಹ ಪ್ರಬುದ್ಧ ನಟನೆ? ಇಲ್ಲಿ ಪ್ರಾಬಲ್ಯ ಸಾಧಿಸುವ ಹಪಾಹಪಿಯಿಲ್ಲ, ಪಾತ್ರವನ್ನು ನಾವು ನಂಬುವಂತೆ ಮಾಡಿದ್ದಾರೆ. ಸಾರಾ ಅರ್ಜುನ್ ಅವರ ಕ್ಲೋಸಪ್ ಶಾಟ್‌ಗಳು ಮತ್ತು ಅರ್ಜುನ್ ರಾಂಪಾಲ್ ಅವರ ಅಭಿನಯ ರಿಮಾರ್ಕಬಲ್ ಆಗಿದೆ. ರಾಕೇಶ್ ಬೇಡಿ, ಸಂಜಯ್ ದತ್ ನಟನೆ ಬ್ರಿಲಿಯಂಟ್ ಆಗಿತ್ತು" ಎಂದು ಅನುಪಮ್‌ ಖೇರ್‌ ಹೇಳಿದ್ದಾರೆ.

Dhurandhar 2 movie : 300 ಕೋಟಿ ರೂಪಾಯಿ ಮೀರಿದ ಗಳಿಕೆ; 'ಧುರಂಧರ್' 2 ಸುನಾಮಿ!

ಆದಿತ್ಯ ಧರ್‌ ನಿಮಗೆ ಧನ್ಯವಾದಗಳು

"ಕೆಲವೊಮ್ಮೆ ಕ್ರಿಕೆಟ್ ಪಂದ್ಯಗಳು ನಮ್ಮನ್ನು ಒಂದುಗೂಡಿಸುತ್ತವೆ. ಆದರೆ ಮೊದಲ ಬಾರಿಗೆ ಒಂದು ಸಿನಿಮಾ ಭಾರತೀಯರನ್ನು ಈ ರೀತಿ ಒಂದುಗೂಡಿಸುತ್ತಿರುವುದನ್ನು ನಾನು ಗಮನಿಸಿದೆ. ಇಲ್ಲಿ ನೀವು ಭಾರತಕ್ಕಾಗಿ, ಹಿಂದುಸ್ತಾನಕ್ಕಾಗಿ ಹಂಬಲಿಸುತ್ತೀರಿ. ಇದು ವಿಶ್ವದರ್ಜೆಯ ಸಿನಿಮಾ. ನಾನು ಮನೆಗೆ ಹೋಗಿ ನಿರ್ದೇಶಕ ಆದಿತ್ಯ ಧರ್‌ ಅವರಿಗಾಗಿ ಪ್ರಾರ್ಥಿಸಿದೆ. ಇಂತಹ ಸಿನಿಮಾ ಮಾಡಿ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಜೈ ಹಿಂದ್" ಎಂದು ಅನುಪಮ್‌ ಖೇರ್‌ ಹೇಳಿದ್ದಾರೆ.

ಅನುಪಮ್‌ ಹಂಚಿಕೊಂಡಿರುವ ವಿಡಿಯೋ



ಅನುಪಮ್‌ಗೆ ರಣವೀರ್‌ ಸಿಂಗ್‌ ಧನ್ಯವಾದ

ಅನುಪಮ್ ಖೇರ್ ಅವರು ಹಂಚಿಕೊಂಡ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ನಟ ರಣವೀರ್ ಸಿಂಗ್ ಅವರು, "ಸರ್, ನಿಮ್ಮ ಮಾತುಗಳನ್ನು ಕೇಳಿ ನನಗೆ ಮಾತುಗಳೇ ಬರುತ್ತಿಲ್ಲ. ನಿಮ್ಮ ನಟನೆಯಿಂದ ಸ್ಫೂರ್ತಿ ಪಡೆದು ನಾವು ಬೆಳೆದಿದ್ದೇವೆ. ನೀವು ಹೀಗೆ ಹೇಳುವುದು ನನಗೆ ತುಂಬಾ ದೊಡ್ಡ ಮೆಚ್ಚುಗೆ. ನಿಮಗೆ ಕೋಟಿ ಕೋಟಿ ಪ್ರಣಾಮಗಳು," ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.