India-UK Free Trade Agreement: ಭಾರತ-ಬ್ರಿಟನ್ ಐತಿಹಾಸಿಕ ಮುಕ್ತ-ವ್ಯಾಪಾರ ಒಪ್ಪಂದಕ್ಕೆ ಸಹಿ; ಭಾರತಕ್ಕೇನು ಲಾಭ?
ಭಾರತ ಮತ್ತು ಬ್ರಿಟನ್ ಐತಿಹಾಸಿಕವಾದ ಮುಕ್ತ-ವ್ಯಾಪಾರ ಒಪ್ಪಂದ ಅಥವಾ ಫ್ರೀ ಟ್ರೇಡ್ ಅಗ್ರಿಮೆಂಟ್‌ಗೆ ಸಹಿ ಹಾಕಿವೆ. ಇದರ ಪರಿಣಾಮ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ರುಪಾಯಿ ಲೆಕ್ಕದಲ್ಲಿ ಸುಮಾರು 2 ಲಕ್ಷದ 93 ಸಾವಿರ ಕೋಟಿ ರುಪಾಯಿ ಆಗಲಿದೆ.


ಲಂಡನ್: ಭಾರತ ಮತ್ತು ಬ್ರಿಟನ್ ಐತಿಹಾಸಿಕವಾದ ಮುಕ್ತ-ವ್ಯಾಪಾರ ಒಪ್ಪಂದ ಅಥವಾ ಫ್ರೀ ಟ್ರೇಡ್ ಅಗ್ರಿಮೆಂಟ್‌ಗೆ (India-UK Free Trade Agreement) ಸಹಿ ಹಾಕಿವೆ. ಇದರ ಪರಿಣಾಮ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ವ್ಯಾಪಾರವು ವಾರ್ಷಿಕ 34 ಶತಕೋಟಿ ಡಾಲರ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. ರುಪಾಯಿ ಲೆಕ್ಕದಲ್ಲಿ ಸುಮಾರು 2 ಲಕ್ಷದ 93 ಸಾವಿರ ಕೋಟಿ ರುಪಾಯಿ ಆಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹಾಗೂ ಬ್ರಿಟನ್ ಪ್ರಧಾನಿ ಕೇರ್ ಸ್ಟಾರ್ಮರ್ (Keir Starmer) ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಒಪ್ಪಂದದ ಮುಖ್ಯಾಂಶಗಳು ಮತ್ತು ಸ್ವಾರಸ್ಯಗಳು
ಒಪ್ಪಂದ ಪ್ರಕಾರ ಭಾರತವು ಬ್ರಿಟನ್‌ನಿಂದ ಭಾರತಕ್ಕೆ ಆಮದಾಗುವ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು 90% ಕಡಿತಗೊಳಿಸಲಿದೆ. ಅದೇ ರೀತಿ ಬ್ರಿಟನ್, ಭಾರತದಿಂದ ಬ್ರಿಟನ್‌ಗೆ ಆಮದಾಗುವ ಉತ್ಪನ್ನಗಳ ಮೇಲಿನ ಸುಂಕವನ್ನು 99% ಕಡಿತಗೊಳಿಸಲಿದೆ. ಈ ಐತಿಹಾಸಿಕ ಡೀಲ್‌ನಿಂದಾಗಿ ಲೆದರ್, ಟೆಕ್ಸ್‌ಟೈಲ್, ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ ಭಾರತಕ್ಕೆ ಲಾಭವಾಗುವ ನಿರೀಕ್ಷೆ ಇದೆ. ಬ್ರಿಟನ್‌ನಲ್ಲಿ ವ್ಯಾಪಾರಾವಕಾಶ ಹೆಚ್ಚುವ ಸಾಧ್ಯತೆ ಇದೆ.
Interacted with business leaders at Chequers. The signing of the India-UK CETA has opened up new avenues for trade and investment. It marks a pivotal step in strengthening our economic partnership.@Keir_Starmer @10DowningStreet pic.twitter.com/NFvjfyqXHi
— Narendra Modi (@narendramodi) July 24, 2025
ಫ್ರೀ ಟ್ರೇಡ್ ಅಗ್ರಿಮೆಂಟ್ ಅಥವಾ ಎಫ್‌ಟಿಎ ಬಳಿಕ ಭಾರತದ ಟೆಕ್ಸ್‌ಟೈಲ್ಸ್ ಉದ್ಯಮಿಗಳು ಬ್ರಿಟನ್‌ಗೆ ರಫ್ತು ಮಾಡುವ ಗಾರ್ಮೆಂಟ್ಸ್ ಉತ್ಪನ್ನಗಳ ಮೇಲೆ ಬಹುತೇಕ ಆಮದು ತೆರಿಗೆ ರದ್ದಾಗಲಿದೆ. ಜೆನರಿಕ್ ಔಷಧಗಳು, ಮೆಡಿಕಲ್ ಉಪಕರಣಗಳು, ಕೆಮಿಕಲ್ ಉತ್ಪನ್ನಗಳ ಮೇಲಿನ ತೆರಿಗೆ ಶೂನ್ಯವಾಗಲಿದೆ. ಇದು ನಮ್ಮ ರಫ್ತುದಾರರಿಗೆ ಲಾಭದಾಯಕವಾಗಲಿದೆ.
ಹಾಗಾದರೆ ಬ್ರಿಟನ್‌ಗೆ ಏನು ಲಾಭವಾಗಲಿದೆ? ಬ್ರಿಟನ್‌ನ ಉದ್ಯಮಿಗಳು ಭಾರತದಲ್ಲಿ ಮಾರಾಟ ಮಾಡುವ ಮದ್ಯ, ಕಾರು, ಕಾಸ್ಮೆಟಿಕ್ಸ್, ಸಾಫ್ಟ್ ಡ್ರಿಂಕ್ಸ್, ಸ್ಕಾಚ್ ವಿಸ್ಕಿ, ಮೊದಲಾದ ಉತ್ಪನ್ನಗಳ ಮೇಲಿನ ಆಮದು ತೆರಿಗೆ ಇಳಿಕೆಯಾಗಲಿದೆ. ಯುನೈಟೆಡ್ ಕಿಂಗ್‌ಡಮ್‌ನ ಚಾಕೊಲೇಟ್‌ಗಳು, ಸ್ಕಾಚ್ ವಿಸ್ಕಿ, ಕಾರುಗಳ ದರಗಳು ಭಾರತದಲ್ಲಿ ಅಗ್ಗವಾಗಲಿದೆ.
ಈ ಒಪ್ಪಂದದ ಪರಿಣಾಮವಾಗಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೂಡಿಕೆ ಮಾಡಲು ಬಯಸುವ ಭಾರತದ ಉದ್ಯಮಿಗಳಿಗೆ ವೀಸಾ ಸಪೋರ್ಟ್ ಸಿಗಲಿದೆ.
ಬೆಂಗಳೂರು, ಹೈದರಾಬಾದ್, ಪುಣೆಯ ತಂತ್ರಜ್ಞರು, ಉದ್ಯಮಿಗಳು, ಹೂಡಿಕೆದಾರರಿಗೆ ಬ್ರಿಟನ್ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶ ಸಿಗಲಿದೆ. ತಮಿಳುನಾಡು, ತೆಲಂಗಾಣ ಮತ್ತು ಮಹಾರಾಷ್ಟ್ರದ ನುರಿತ ಕಾರ್ಮಿಕರಿಗೆ ಬ್ರಿಟನ್‌ನಲ್ಲಿ ಉದ್ಯೋಗಾವಕಾಶ ಸಿಗಲಿದೆ.
ಚನ್ನಪಟ್ಟಣದ ಗೊಂಬೆಗಳು ಬ್ರಿಟನ್ ಮಾರುಕಟ್ಟೆಯಲ್ಲಿ ರಾಜ್ಯದ ಕರಕುಶಲ ಸಂಸ್ಕೃತಿಯ ಪರಿಚಯ ಮಾಡಿಕೊಡಲಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳ ಕರಕುಶಲ ಉತ್ಪನ್ನಗಳಿಗೂ ಯುಕೆನಲ್ಲಿ ವ್ಯಾಪಾರಾವಕಾಶ ದೊರೆಯಲಿದೆ. ವೆಲ್ಲೂರಿನ ಪಾದರಕ್ಷೆಗಳು, ಶಾಂತಿ ನಿಕೇತನ, ಆಗ್ರಾ, ಕೊಲ್ಲಾಪುರ, ಕಾನ್ಪುರದ ಲೆದರ್ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗಲಿದೆ.
ಡಾರ್ಜಿಲಿಂಗ್‌ನ ಚಹಾ, ಬಿಹಾರದ ಮಖಾನಾ, ಆಂಧ್ರ ಪ್ರದೇಶದ ಬುಡಕಟ್ಟು ರೈತರು ಬೆಳೆಯುವ ಅರಕು ಕಾಫಿ, ಶುಂಠಿ, ಪಂಜಾಬಿನ ಬಾಸ್ಮತಿ ಅಕ್ಕಿ, ಕಾಶ್ಮೀರದ ಕೇಸರ, ಭಾಗಲ್ಪುರದ ಸಿಲ್ಕ್, ತಿರುಪ್ಪೂರ್‌ನ ಜವಳಿ, ಸೂರತ್‌ನ ಟೆಕ್ಸ್ ಟೈಲ್ಸ್, ಜೈಪುರದ ಜ್ಯುವೆಲ್ಲರಿ, ಜಲಂಧರ್‌ನ ಕ್ರಿಕೆಟ್ ಬ್ಯಾಟ್‌ಗಳು, ಉತ್ತರಪ್ರದೇಶದ ಖುರ್ಜಾ ಕುಂಬಾರಿಕೆಯ ಉತ್ಪನ್ನಗಳು ಯುಕೆಗೆ ರಫ್ತಾಗಲಿದೆ.
ಭಾರತದ ಡೇರಿ, ಆಪಲ್, ಓಟ್ಸ್, ಖಾದ್ಯ ತೈಲ ಸೆಕ್ಟರ್‌ಗಳನ್ನು ಒಪ್ಪಂದ ವ್ಯಾಪ್ತಿಗೆ ಸೇರಿಸಿಲ್ಲ. ಈ ಮೂಲಕ ಭಾರತ ಕೋರ್ ಕೃಷಿ ಸೆಕ್ಟರ್‌ಗೆ ಹಿತಾಸಕ್ತಿಯನ್ನು ನೋಡಿಕೊಳ್ಳಲಾಗಿದೆ.
* ಬ್ರಿಟನ್‌ನಿಂದ ಭಾರತಕ್ಕೆ ಆಮದಾಗುವ ವಸ್ತುಗಳಿಗೆ ಸುಂಕವನ್ನು ಭಾರತವು 15%ರಿಂದ 3%ಕ್ಕೆ ಇಳಿಕೆ ಮಾಡಲಿದೆ.
* ಭಾರತದಿಂದ ಬ್ರಿಟನ್‌ಗೆ ರಫ್ತಾಗುವ ಸಾಗರೋತ್ಪನ್ನಗಳ ಮೇಲಿನ ಸುಂಕ ಶೂನ್ಯಕ್ಕೆ ಇಳಿಯಲಿದೆ. ಸಿಗಡಿ, ಮೀನುಗಳ ರಫ್ತಿಗೆ ಟ್ಯಾಕ್ಸ್ ಬೀಳುವುದಿಲ್ಲ.
* ಭಾರತದ ಚಪ್ಪಲಿ, ಇತರ ಪಾದರಕ್ಷೆಗಳಿಗೆ ಬ್ರಿಟನ್‌ನಲ್ಲಿ ಸುಂಕ ಶೂನ್ಯವಾಗಲಿದೆ. ಈ ಮೊದಲು 16% ಇತ್ತು.
* ಭಾರತದ ಟೆಕ್ಸ್‌ಟೈಲ್ಸ್‌ಗಳಿಗೆ ಈ ಹಿಂದೆ 12% ಸುಂಕ ಇತ್ತು. ಅದು ಶೂನ್ಯಕ್ಕೆ ಇಳಿಯಲಿದೆ.
* ಬ್ರಿಟನ್‌ನಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಕಾಂಬೋಡಿಯಾದ ಪಾದರಕ್ಷೆ, ಟೈಲ್ಸ್, ಲೆದರ್ ಉತ್ಪನ್ನಗಳಿಗಿಂತ ಭಾರತದ್ದು ಅಗ್ಗವಾಗಲಿದ್ದು, ಆದ್ಯತೆ ಸಿಗಲಿದೆ.
* ಭಾರತದ ಜೆನೆರಿಕ್ ಔಷಧಗಳು, ಎಂಜಿನಿಯರಿಂಗ್ ಉತ್ಪನ್ನಗಳಿಗೆ ಶೂನ್ಯ ತೆರಿಗೆಯಾಗಲಿದೆ.
* ಭಾರತದ ಸಂಬಾರ ಪದಾರ್ಥಗಳು, ತರಕಾರಿ, ಹಣ್ಣುಗಳು, ಉಪ್ಪಿನಕಾಯಿಗಳ ರಫ್ತಿಗೆ ಬ್ರಿಟನ್‌ನಲ್ಲಿ ಸುಂಕ ಇರುವುದಿಲ್ಲ.
ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಪುಷ್ಟಿ ಸಿಗಲಿದೆ. ಭಾರತದ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಹೈ ಕ್ವಾಲಿಟಿ ಉತ್ಪನ್ನಗಳು ಸಿಗಲಿದೆ. ಕಾರ್ಮಿಕ ಕೇಂದ್ರಿತ ಸೆಕ್ಟರ್‌ಗಳಾದ ಟೆಕ್ಸ್‌ಟೈಲ್ಸ್, ಲೆದರ್, ಫುಟ್‌ವೇರ್, ಮರೀನ್, ಜೆಮ್ಸ್ ಆಂಡ್ ಜ್ಯುವೆಲ್ಲರಿ, ಆರ್ಗಾನಿಕ್ ಕೆಮಿಕಲ್ಸ್, ಪ್ಲಾಸ್ಟಿಕ್, ಆಟೊ ಬಿಡಿ ಭಾಗಗಳು, ಕರಕುಶಲ ವಸ್ತುಗಳ ವಲಯದಲ್ಲಿ ಭಾರತೀಯರಿಗೆ ಹೆಚ್ಚು ರಫ್ತು ಅವಕಾಶಗಳು ಸಿಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | BOB Recruitment 2025: 2,500 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಿದ ಬ್ಯಾಂಕ್ ಆಫ್ ಬರೋಡಾ; ಹೊಸ ಅಪ್‌ಡೇಟ್ ಬಗ್ಗೆ ಇಲ್ಲಿದೆ ಮಾಹಿತಿ