ಅರ್ಧಶತಕದ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ನೂತನ ದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್!
ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಹರ್ಮನ್‌ಪ್ರೀತ್ ಕೌರ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 70 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 1000 ರನ್‌ಗಳನ್ನು ಕಲೆ ಹಾಕಿದ ಎರಡನೇ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ.

ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ 1000 ರನ್ ಗಳಿಸಿದ ಹರ್ಮನ್‌ಪ್ರೀತ್ ಕೌರ್. -

ಇಂದೋರ್: ಇಂಗ್ಲೆಂಡ್ ವಿರುದ್ಧದ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (Women's World Cup 2025) ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅರ್ಧಶತಕವನ್ನು ಬಾರಿಸಿದರು. ಇದರೊಂದಿಗೆ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 1000 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಈ ಸಾಧನೆ ಮಾಡಿದ ಭಾರತ ಮಹಿಳಾ ತಂಡದ ಎರಡನೇ ಆಟಗಾರ್ತಿ ಎಂಬ ನೂತನ ದಾಖಲೆಯನ್ನು ಬರೆದಿದ್ದಾರೆ. ಈ ಪಟ್ಟಿಯಲ್ಲಿ ಮಿಥಾಲಿ ರಾಜ್ (Mithali Raj) ಇದ್ದಾರೆ. ಇದಕ್ಕೂ ಮುನ್ನ ಇವರು ಈ ಸಾಧನೆಗೆ ಭಾಜನರಾಗಿದ್ದರು. ಇದೀಗ ಈ ಸಾಲಿಗೆ ಹರ್ಮನ್‌ಪ್ರೀತ್ ಕೌರ್ ಭಾಜನರಾಗಿದ್ದಾರೆ.
ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮಿಥಾಲಿ ರಾಜ್, 1,321 ರನ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ನ್ಯಾಟ್ ಸಿವರ್-ಬ್ರಂಟ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ 70 ರನ್‌ಗಳ ಬ್ಯಾಟಿಂಗ್ ಮಾಡಿದ ನಂತರ ಹರ್ಮನ್‌ಪ್ರೀತ್ ಕೌರ್ ಪ್ರಸ್ತುತ ಏಳನೇ ಸ್ಥಾನದಲ್ಲಿದ್ದಾರೆ. ಮಹಿಳಾ ವಿಶ್ವಕಪ್‌ನಲ್ಲಿ 1,000+ ರನ್‌ಗಳನ್ನು ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಡೆಬ್ಬಿ ಹಾಕ್ಲಿ (ನ್ಯೂಜಿಲೆಂಡ್) 1,501 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
INDW vs ENGW: ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್ ಸೋಲು, ಸೆಮಿಫೈನಲ್‌ಗೆ ಇಂಗ್ಲೆಂಡ್!
ಮಿಥಾಲಿ ರಾಜ್‌ಗೆ ಎರಡನೇ ಸ್ಥಾನ
ಅವರ ನಂತರ ಮಿಥಾಲಿ ರಾಜ್ (ಭಾರತ) 1,321 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಜಾನೆಟ್ ಬ್ರಿಟನ್ 1,299 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು ಷಾರ್ಲೆಟ್ ಎಡ್ವರ್ಡ್ಸ್ 1,231 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ 1,208 ರನ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ ಮತ್ತು ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ 1,151 ರನ್‌ಗಳೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ 1,021 ರನ್‌ಗಳೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ.
The skipper's turn to bring up 5️⃣0️⃣ 🔝
— BCCI Women (@BCCIWomen) October 19, 2025
Captain Harmanpreet Kaur also becomes just the 2️⃣nd #TeamIndia player to score 1000 runs in ICC women's World Cups 🙌
Updates ▶ https://t.co/jaq4eHaH5w#WomenInBlue | #CWC25 | #INDvENG | @ImHarmanpreet pic.twitter.com/uGkpCfPYG8
ಹರ್ಮನ್- ಮಂಧಾನ ಜೊತೆಯಾಟ
289 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನಾ ಮೂರನೇ ವಿಕೆಟ್‌ಗೆ 125 ರನ್‌ಗಳ ಪಾಲುದಾರಿಕೆಯೊಂದಿಗೆ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಆದರೆ ಭಾರತೀಯ ನಾಯಕಿ ಶತಕದ ಸಮೀಪಿಸುತ್ತಿದ್ದಂತೆ, ಇಂಗ್ಲೆಂಡ್ ನಾಯಕಿ ಸ್ಕಿವರ್-ಬ್ರಂಟ್ ಅವರಿಗೆ 70 ರನ್‌ಗಳಿಸಿ ಔಟ್ ಆದರು. ಈ ವಿಕೆಟ್ 31 ನೇ ಓವರ್‌ನಲ್ಲಿ ಪತನವಾಯಿತು.
England win by 4 runs. #TeamIndia fought hard in a closely contested match and will look to bounce back on Thursday.
— BCCI Women (@BCCIWomen) October 19, 2025
Scorecard ▶ https://t.co/jaq4eHaH5w#WomenInBlue | #CWC25 | #INDvENG pic.twitter.com/f9xKaO1ydg
ಭಾರತ ತಂಡಕ್ಕೆ ಹ್ಯಾಟ್ರಿಕ್ ಸೋಲು
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ, ಹೀದರ್ ನೈಟ್ (109 ರನ್) ಶತಕ ಹಾಗೂ ಎಮಿ ಜೋನ್ಸ್ (56 ರನ್) ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 288 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ಭಾರತ ತಂಡ, ಸ್ಮೃತಿ ಮಂಧಾನಾ (88 ರನ್), ಹರ್ಮನ್‌ಪ್ರೀತ್ ಕೌರ್ (70 ರನ್) ಹಾಗೂ ದೀಪ್ತಿ ಶರ್ಮಾ (50 ರನ್) ಅವರ ಅರ್ಧಶತಕಗಳ ಹೊರತಾಗಿಯೂ ತನ್ನ ಪಾಲಿನ 50 ಓವರ್‌ಗಳನ್ನು ಮುಗಿಸಿದರೂ 6 ವಿಕೆಟ್‌ಗಳ ನಷ್ಟಕ್ಕೆ 284 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಹ್ಯಾಟ್ರಿಕ್ ಸೋಲು ಒಪ್ಪಿಕೊಂಡಿತು.