ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಮತ್ತೆ ವ್ಯಂಗ್ಯ: ಲೆಗೋ ಶೈಲಿಯ ವಿಡಿಯೊ ಬಿಡುಗಡೆ ಮಾಡಿ ಅಪಹಾಸ್ಯ
Iran mocks US President Donald Trump: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವ್ಯಂಗ್ಯ ಮಾಡುವ ಉದ್ದೇಶದಿಂದ ಲೆಗೋ ಶೈಲಿಯ ಡಿಸ್ ಟ್ರ್ಯಾಕ್ ವಿಡಿಯೊವನ್ನು ಇರಾನ್ ಬಿಡುಗಡೆ ಮಾಡಿದೆ. ವಾಷಿಂಗ್ಟನ್‌ನಲ್ಲಿ ನಡೆದ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್ ವೇಳೆ ನಡೆದ ಗುಂಡಿನ ದಾಳಿಯ ನಂತರ ಈ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನ್ನು ಅಣಕಿಸಿದ ಇರಾನ್ -
ವಾಷಿಂಗ್ಟನ್, ಏ. 27: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ವ್ಯಂಗ್ಯವಾಡುವ ಉದ್ದೇಶದಿಂದ ಲೆಗೋ ಶೈಲಿಯ ಡಿಸ್ ಟ್ರ್ಯಾಕ್ (Lego-Style Clip) ವಿಡಿಯೊವನ್ನು ಇರಾನ್ ಬಿಡುಗಡೆ ಮಾಡಿದೆ. ವಾಷಿಂಗ್ಟನ್‌ನಲ್ಲಿ ನಡೆದ ವೈಟ್ ಹೌಸ್ ಕರಸ್ಪಾಂಡೆಂಟ್ಸ್ ಡಿನ್ನರ್ ವೇಳೆ ನಡೆದ ಗುಂಡಿನ ದಾಳಿಯ ನಂತರ ಈ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಈ ಆನಿಮೇಟೆಡ್ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟಿದ್ದು, ವ್ಯಂಗ್ಯ ರೂಪದಲ್ಲಿ ಟ್ರಂಪ್ ಅವರ ನಾಯಕತ್ವ ಮತ್ತು ಭದ್ರತಾ ವ್ಯವಸ್ಥೆಗಳ ನಿರ್ವಹಣೆಯನ್ನು ಟಾರ್ಗೆಟ್ ಮಾಡಲಾಗಿದೆ. ವಿಡಿಯೊದಲ್ಲಿ ಭದ್ರತಾ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ದೃಶ್ಯಗಳನ್ನು ತೋರಿಸಲಾಗಿದೆ.
ಈ ವಿಡಿಯೊದಲ್ಲಿ ವೈಟ್ ಹೌಸ್ ಡಿನ್ನರ್ ವೇಳೆ ಗುಂಡಿನ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಉಂಟಾದ ಗೊಂದಲವನ್ನು ಉಲ್ಲೇಖಿಸಲಾಗಿದೆ. ಟ್ರಂಪ್ ಭಾಷಣ ಮಾಡುತ್ತಿದ್ದಾಗಲೇ, ಅವರನ್ನು ಹಾಗೂ ಇತರ ಉನ್ನತ ನಾಯಕರನ್ನು ತಕ್ಷಣವೇ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಸ್ಥಳದಿಂದ ಹೊರಕ್ಕೆ ಕರೆದೊಯ್ದರು.
ರ‍್ಯಾಪ್ ಶೈಲಿಯ ಡಿಸ್ ಟ್ರ್ಯಾಕ್ ಅನ್ನು ಬಳಸಿಕೊಂಡು ಟ್ರಂಪ್ ಆಡಳಿತವನ್ನು ನಾಟಕೀಯವಾಗಿ ಚಿತ್ರಿಸಿ, ಟೀಕಿಸಲಾಗಿದೆ. ಇದಲ್ಲದೆ, ಟ್ರಂಪ್ ಅಮೆರಿಕದಲ್ಲಿ ಮಾಧ್ಯಮವನ್ನು ನಿಯಂತ್ರಿಸಬಹುದಾದರೂ, ಇರಾನ್ ಮೇಲೆ ಅವರಿಗೆ ಯಾವುದೇ ನಿಯಂತ್ರಣ ಇಲ್ಲ ಎಂಬುದನ್ನೂ ಈ ವಿಡಿಯೊ ಮುಖಾಂತರ ತಿಳಿಸಲಾಗಿದೆ.
ಇಲ್ಲಿದೆ ವಿಡಿಯೊ:
Wow. Iranian Lego diss track team is FAST. pic.twitter.com/ILdlraLfFq
— Malcolm Nance (@MalcolmNance) April 26, 2026
ಈ ವಿಡಿಯೊದಲ್ಲಿ, ಟ್ರಂಪ್ ಅವರನ್ನು ವ್ಯಂಗ್ಯವಾಡುತ್ತಾ, ಅವರ ಜನಪ್ರಿಯತೆ ಅಥವಾ ಪೋಲ್ ಸಂಖ್ಯೆಗಳು ಇಳಿದಾಗ, ಜನರ ಗಮನವನ್ನು ಮತ್ತೆ ತನ್ನ ಕಡೆಗೆ ಸೆಳೆಯಲು ಅವರು ನಾಟಕೀಯ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಇದಲ್ಲದೆ ಈ ವಿಡಿಯೊ ಟ್ರಂಪ್ ಅವರ ಸಾರ್ವಜನಿಕ ಚಿತ್ರಣದ ಮೇಲೂ ಟೀಕೆ ಮಾಡುತ್ತದೆ. ಅವರನ್ನು ಅಹಂಕಾರ ಹೊಂದಿರುವ ವ್ಯಕ್ತಿ ಎಂದು ಹೇಳಿದ್ದಲ್ಲದೆ, ದೇಶವು ಆರ್ಥಿಕ ಒತ್ತಡವನ್ನು ಎದುರಿಸುತ್ತಿದೆ ಎಂದು ಹೇಳಿದೆ. ಹಾಗೆಯೇ, ಕೆಲ ಬೆಂಬಲಿಗರೂ ಅವರ ನಾಯಕತ್ವದ ದೋಷಗಳನ್ನು ಗಮನಿಸಲು ಆರಂಭಿಸಿದ್ದಾರೆ ಎಂದು ವಿಡಿಯೊ ಹೇಳುತ್ತದೆ.
ಡೊನಾಲ್ಡ್ ಟ್ರಂಪ್ ಶಿಶುಕಾಮಿ, ಅತ್ಯಾಚಾರಿ, ದೇಶದ್ರೋಹಿ... ಶ್ವೇತಭವನದಲ್ಲಿ ದಾಳಿ ನಡೆಸಿದ ಬಂಧಿತನ ಆರೋಪ
ಈ ಟ್ರ್ಯಾಕ್‌ನಲ್ಲಿ ಖಾಲಿ ತಟ್ಟೆಗಳು, ತುರ್ತು ನಿರ್ಗಮನ ಮತ್ತು ನಾಟಕೀಯ ದೃಶ್ಯ ಎಂಬ ಪದಗಳನ್ನು ಬಳಸಲಾಗಿದೆ. ಭಯ ಮತ್ತು ಗೊಂದಲ ಉಂಟಾದರೂ, ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ ಎಂದು ಹೇಳುತ್ತದೆ. ಆದರೆ ವಾಸ್ತವವಾಗಿ ಡಿನ್ನರ್ ವೇಳೆ ಏನೂ ಸಂಭವಿಸಿಲ್ಲ. ಇದು ಕೇವಲ ಗೊಂದಲ ಮತ್ತು ನಾಟಕ ಮಾತ್ರವಾಗಿತ್ತು ಎಂದು ಟ್ರ್ಯಾಕ್ ಹೇಳುತ್ತದೆ.
ವಿಡಿಯೊದಲ್ಲಿ ಟ್ರಂಪ್ ಸಾರ್ವಜನಿಕವಾಗಿ ಬಲಿಷ್ಠನಂತೆ ವರ್ತಿಸಲು ಪ್ರಯತ್ನಿಸುತ್ತಾರೆ. ಆದರೆ ಹಿಂಬದಿಯಲ್ಲಿ ಜನರು ಅವರನ್ನು ಹಾಸ್ಯ ಮಾಡುತ್ತಾರೆ ಮತ್ತು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬುದನ್ನೂ ಹೇಳಲಾಗಿದೆ.
ಈ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಟ್ರಂಪ್ ಭಾಷಣ ಮಾಡುತ್ತಿದ್ದಾಗ ಅಚಾನಕ್ ಆಗಿ ಅಸ್ತವ್ಯಸ್ತಗೊಂಡಿತು. ನಂತರ ಅತಿಥಿಗಳನ್ನು ತಕ್ಷಣವೇ ಸ್ಥಳದಿಂದ ಹೊರಗೆ ಕರೆದೊಯ್ಯಲಾಯಿತು. ಈ ಕಾರ್ಯಕ್ರಮದಲ್ಲಿ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೇರಿದಂತೆ ಅನೇಕ ಪ್ರಮುಖ ನಾಯಕರು ಮತ್ತು ಇತರ ಹಿರಿಯ ಅಧಿಕಾರಿಗಳು ಹಾಗೂ ಕ್ಯಾಬಿನೆಟ್ ಸದಸ್ಯರು ಭಾಗವಹಿಸಿದ್ದರು.