ರೋಹಿತ್ ಔಟ್, ಕೊಹ್ಲಿ ಇನ್! ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ಪ್ಲೇಯಿಂಗ್ XI ಕಟ್ಟಿದ ಜೋಸ್ ಬಟ್ಲರ್
IPL 2026: ಪ್ರಸ್ತುತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಅವಧಿ ಮುಕ್ತಾಯವಾಗಿದೆ. ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಗುಜರಾತ್ ಟೈಟನ್ಸ್‌ನ ಜೋಸ್ ಬಟ್ಲರ್, ತಮ್ಮ ನೆಚ್ಚಿನ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ. ಇದರಲ್ಲಿ ಆರ್‌ಸಿಬಿ ತಂಡದಿಂದ ಮೂವರು ಆಟಗಾರರಿಗೆ ಅವಕಾಶ ನೀಡಿದೆ.
ಐಪಿಎಲ್‌ನ ಸಾರ್ವಕಾಲಕ ಶ್ರೇಷ್ಠ ಪ್ಲೇಯಿಂಗ್ XI ಆರಿಸಿದ ಜೋಸ್ ಬಟ್ಲರ್. -
ನವದೆಹಲಿ: ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್ (Jos Buttler) ಅವರು, ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL Playing XI) ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ XI ಅನ್ನು ಆರಿಸಿದ್ದಾರೆ. ಇದರಲ್ಲಿ ಅವರು ವೆಸ್ಟ್ ಇಂಡೀಸ್ ತಂಡದ ನಾಲ್ವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಆದರೆ, ಐಪಿಎಲ್‌ನ ಸಾರ್ವಕಾಲಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟು ವಿರಾಟ್ ಕೊಹ್ಲಿ (Virat Kohli) ಹಾಗೂ ಎಂಎಸ್ ಧೋನಿ ಅವರನ್ನು ಗುಜರಾತ್ ಟೈಟನ್ಸ್ ಆಟಗಾರ ಆರಿಸಿದ್ದಾರೆ. ಅಂದ ಹಾಗೆ ಆರ್‌ಸಿಬಿ ತಂಡದಿಂದ ಒಟ್ಟು ಮೂವರು ಆಟಗಾರರಿಗೆ ಜೋಸ್ ಬಟ್ಲರ್ ಸ್ಥಾನ ನೀಡಿದ್ದಾರೆ.
ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ʻಫಾರ್ ದಿ ಲವ್ ಆಪ್ ಕ್ರಿಕೆಟ್ʼ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಜೋಸ್ ಬಟ್ಲರ್, ರೋಹಿತ್ ಶರ್ಮಾ ಅವರನ್ನು ಹೊರಗಿಟ್ಟು ಆರಂಭಿಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಮೂಡಿ ಬಂದಿರುವ ಸ್ಥಿರ ಪ್ರದರ್ಶನದ ಸಲುವಾಗಿ ವಿರಾಟ್ ಕೊಹ್ಲಿಗೆ ಆರಂಭಿಕ ಸ್ಥಾನ ನೀಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಕ್ರಿಸ್ ಗೇಲ್ ಚುಟುಕು ಕ್ರಿಕೆಟ್‌ನ ಸಾರ್ವಕಾಲಕ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆಂದು ತಿಳಿಸಿದ್ದಾರೆ.
ರಸಿಖ್ ಸಲಾಂ ಔಟ್, ಮಂಗೇಶ್ ಯಾದವ್ ಇನ್; ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ?
"ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಅವರನ್ನು ಆರಂಭಿಕ ಸ್ಥಾನಕ್ಕೆ ಆಯ್ಕೆ ಮಾಡಿದ್ದೇನೆ. ಕೊಹ್ಲಿ ಒಂದು ಸೀಸನ್‌ನಲ್ಲಿ 970 ರನ್‌ಗಳನ್ನು ಬಾರಿಸಿದ್ದರು ಹಾಗೂ ಅವರು ಆರಂಭಿಕ ಸ್ಥಾನದಲ್ಲಿ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ. ಹಾಗಾಗಿ ಇವರನ್ನು ಕ್ರಿಸ್ ಗೇಲ್ ಜೊತೆಗೆ ಆರಂಭಿಕ ಸ್ಥಾನಕ್ಕ ಆರಿಸಿದ್ದೇನೆ, ಗೇಲ್ ಟಿ20 ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್," ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.
ಮಧ್ಯಮ ಕ್ರಮಾಂಕ ಹಾಗೂ ಆಲ್‌ರೌಂಡರ್‌ಗಳು
"ಸುರೇಶ್ ರೈನಾ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದಾರೆ. ಇವರ ಐಪಿಎಲ್ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿಲ್ಲ. ಇವರು ನನ್ನ ಸಾರ್ವಕಾಲಕ ತಂಡದಲ್ಲಿ ಯವಾಗಲೂ ಇದ್ದೇ ಇರುತ್ತಾರೆ. ಎಬಿ ಡಿ ವಿಲಿಯರ್ಸ್ ಕೂಡ ಖಚಿತವಾಗಿ ನನ್ನ ತಂಡದಲ್ಲಿದ್ದಾರೆ. ಎಬಿಡಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇನ್ನು ಮುಂಬೈ ಇಂಡಿಯನ್ಸ್ ಪರ ಯಶಸ್ವಿಯಾಗಿರುವ ಕೈರೊನ್ ಪೊಲಾರ್ಡ್ ಅವರನ್ನು ಕೂಡ ನಾನು ಮಧ್ಯಮ ಕ್ರಮಾಂಕಕ್ಕೆ ಆರಿಸಿದ್ದೇನೆ," ಎಂದು ಗುಜರಾತ್ ಆಟಗಾರ ತಿಳಿಸಿದ್ದಾರೆ.
JOS BUTTLER PICKS HIS ULTIMATE IPL XI [For The Love Of Cricket]
— Akshat (@Akshatgoel1408) April 27, 2026
1) Virat Kohli
2) Chris Gayle
3) Suresh Raina
4) AB De Villiers
5) Kieron Pollard
6) Andre Russell
7) MS Dhoni
8) Sunil Narine
9) Rashid Khan
10) Lasith Malinga
11) Jasprit Bumrah
Agree or any changes?? pic.twitter.com/100skVJcL6
ಇನ್ನು ಆಲ್‌ರೌಂಡರ್‌ಗಳ ಸ್ಥಾನಕ್ಕೆ ಜೋಸ್ ಬಟ್ಲರ್, ಆಂಡ್ರೆ ರಸೆಲ್ ಹಾಗೂ ಸುನೀಲ್ ನರೇನ್ ಅವರನ್ನು ಆಯ್ಕೆ ಮಾಡಿದ್ದಾರೆ. ಆಂಡ್ರೆ ರಸೆಲ್ ಸುಮಾರು ವರ್ಷಗಳ ಕಾಲ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದಾರೆ ಹಾಗೂ ಸಕ್ಸಸ್ ಕಂಡಿದ್ದಾರೆ. ಇನ್ನು ಇದೇ ತಂಡದ ಪ್ರಮುಖ ಸ್ಪಿನ್ನರ್ ಆಗಿ ಆಡುವ ಜತೆಗೆ ಆರಂಭಿಕ ಸ್ಥಾನದಲ್ಲಿ ಅಪಾಯಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರುವ ಸುನೀಲ್ ನರೇನ್ ಅವರನ್ನು ಬಟ್ಲರ್ ಆಯ್ಕೆ ಮಾಡಿದ್ದಾರೆ.
LSG vs KKR: ರಿಂಕು, ನರೇನ್ ಮಿಂಚು ಲಖನೌ ಎದುರು ಸೂಪರ್ ಓವರ್ ಥ್ರಿಲ್ಲರ್ ಗೆದ್ದ ಕೋಲ್ಕತಾ!
ಇನು ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ರಶೀದ್ ಖಾನ್ ಅವರನ್ನು ಆರಿಸಲಾಗಿದೆ. ಅವರು ಸನ್‌ರೈಸರ್ಸ್ ಹೈದರಾಬಾದ್ ಪರ ಹಲವು ವರ್ಷಗಳ ಆಡಿ ಸಕ್ಸಸ್ ಆಗಿರುವ ಅವರು, ಇದೀಗ ಗುಜರಾತ್ ಟೈಟನ್ಸ್ ಪರ ಆಡುತ್ತಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಲಸಿತ್ ಮಾಲಿಂಗಾಗೆ ಸ್ಥಾನ ಕಲ್ಪಿಸಿದ್ದಾರೆ. ಕೈರೊನ್ ಪೋಲಾರ್ಡ್ ಇವರಿಗೆ ವೇಗದ ಬೌಲಿಂಗ್‌ನಲ್ಲಿ ಸಾಥ್ ನೀಡಲಿದ್ದಾರೆ.
ಜೋಸ್ ಬಟ್ಲರ್ ಆಯ್ಕೆಯ ಸಾರ್ವಕಾಲಿಕ ಐಪಿಎಲ್ ಪ್ಲೇಯಿಂಗ್ Xi: ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಕೈರೊನ್ ಪೊಲಾರ್ಡ್, ಎಂಎಸ್ ಧೋನಿ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೇನ್, ರಶೀದ್ ಖಾನ್, ಜಸ್‌ಪ್ರೀತ್ ಬುಮ್ರಾ, ಲಸಿತ್ ಮಾಲಿಂಗ