ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪರಮಾಣು ಶಸ್ತ್ರಾಸ್ತ್ರ ಹೊಂದಲು ಇರಾನ್ ಎಂದಿಗೂ ಬಯಸಿರಲಿಲ್ಲ: ಅಲಿ ಖಮೇನಿ ಆಪ್ತನ ಸ್ಪಷ್ಟನೆ

ಪರಮಾಣು ಶಸ್ತ್ರಾಸ್ತ್ರ ಒಳ್ಳೆಯದಲ್ಲ. ಇರಾನ್ ಎಂದಿಗೂ ಅದನ್ನು ಹೊಂದಲು ಬಯಸುವುದಿಲ್ಲ. ಪರಮಾಣು ಶಸ್ತ್ರಾಸ್ತ್ರ ಹೊಂದಲು ಇರಾನ್ ವಿರುದ್ಧ ವಿಧಿಸಿರುವ ನಿರ್ಬಂಧಗಳು ಮತ್ತು ಇದಕ್ಕಾಗಿ ಸಾಕಷ್ಟು ಮೇಲ್ವಿಚಾರಣೆ ಇದೆ. ಆದರೆ ಇತರ ಕೆಲವು ದೇಶಗಳಿಗೆ ಅಂತಹ ಯಾವುದೇ ನಿಯಮವಿಲ್ಲ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಸಹಾಯಕ, ಭಾರತದ ಪ್ರತಿನಿಧಿ ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ ಹೇಳಿದರು.

ಪರಮಾಣು ಶಸ್ತ್ರಾಸ್ತ್ರ ಕೆಟ್ಟದ್ದು ಎಂದ  ಖಮೇನಿ ಸಹಾಯಕ

ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ (ಸಂಗ್ರಹ ಚಿತ್ರ) -

ಇರಾನ್: ಪರಮಾಣು ಶಸ್ತ್ರಾಸ್ತ್ರ (nuclear weapons) ಹೊಂದುವ ವಿಚಾರದಲ್ಲಿ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ದ್ವಿಮುಖ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿದ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ (Iran's Supreme Leader Ali Khamenei) ಅವರ ಸಹಾಯಕ, ಭಾರತದ ಪ್ರತಿನಿಧಿ (Indian representative) ಡಾ. ಅಬ್ದುಲ್ ಮಜೀದ್ ಹಕೀಮ್ ಇಲಾಹಿ (Dr. Abdul Majeed Hakeem Elahi), ಇರಾನ್ (Iran) ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಯಸಲಿಲ್ಲ. ಯಾಕೆಂದರೆ ಅದು ಕೆಟ್ಟದು. ಕೆಲವು ಮಾನವೀಯ ಅಗತ್ಯಗಳನ್ನು ಪೂರೈಸಲು ಶಾಂತಿಯುತ ಉದ್ದೇಶಗಳಿಗಾಗಿ ದೇಶವು ಪರಮಾಣು ಶಕ್ತಿಯನ್ನು ಬಳಸಲು ಬಯಸುತ್ತದೆ ಎಂದು ತಿಳಿಸಿದರು.

ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಯಸಲಿಲ್ಲ. ಯಾಕೆಂದರೆ ಅದು ಕೆಟ್ಟದು ಎಂಬುದು ಗೊತ್ತಿದೆ. ಸಾಮಾಜಿಕ ಮತ್ತು ಮಾನವೀಯ ಚಿಕಿತ್ಸೆಗಾಗಿ ಇರಾನ್ ಪರಮಾಣುವನ್ನು ಶಾಂತಿಯುತ ಶಕ್ತಿಯನ್ನಾಗಿ ಬಳಸಲು ಬಯಸುತ್ತದೆ. ಆದರೆ ಇದಕ್ಕಾಗಿ ಎರಡು ಮಾನದಂಡಗಳಿವೆ. ಪರಮಾಣು ಶಸ್ತ್ರಾಸ್ತ್ರ ಹೊಂದುವ ವಿಚಾರದಲ್ಲಿ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಇರಾನ್ ವಿರುದ್ಧ ಸಾಕಷ್ಟು ನಿರ್ಬಂಧಗಳನ್ನು ಹೊರಡಿಸಿದವು. ಇರಾನ್‌ನ ಪರಮಾಣು ಶಕ್ತಿಯ ಮೇಲೆ ಸಾಕಷ್ಟು ಮೇಲ್ವಿಚಾರಣೆ ನಡೆಯುತ್ತಿದೆ. ಇತರ ಕೆಲವು ದೇಶಗಳು ಅದನ್ನು ಹೊಂದಿವೆ. ಅವು ಅದನ್ನು ಬಳಸುತ್ತವೆ. ಅವುಗಳಿಗೆ ಯಾವುದೇ ನಿಯಮವಿಲ್ಲ ಎಂದು ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತನನ್ನು ಕೊಂದಿದ್ದ ಚಿರತೆ ಸೆರೆ

ಪರಮಾಣು ಶಸ್ತ್ರಾಸ್ತ್ರ ನಿಷೇಧಕ್ಕೆ ಸಂಬಂಧಿಸಿ ಯುಎನ್ ಭದ್ರತಾ ಮಂಡಳಿಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಇರಾನ್‌ನ ಪರಮಾಣು ಚಟುವಟಿಕೆಗಳ ಕುರಿತ ನಿಲುವು ಸ್ಪಷ್ಟವಾಗದೆ ಉಳಿದಿದೆ. ಇರಾನ್ ವಿರುದ್ದದ ನಿರ್ಬಂಧಗಳನ್ನು ಮರುಸ್ಥಾಪಿಸಲು ಹಲವಾರು ಬೆಂಬಲಿಸಿದರೆ ಇನ್ನು ಕೆಲವರು ನಿರ್ಬಂಧಗಳನ್ನು ಶಾಶ್ವತವಾಗಿ ತೆಗೆದುಹಾಕಬೇಕು ಎಂದು ಒತ್ತಾಯಿಸಿದರು. ಇದು ಕಾನೂನುಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿತು ಎಂದರು.

ಇರಾನ್‌ನ ಪರಮಾಣುಚಟುವಟಿಕೆಯನ್ನು ಮಿತಿಗೊಳಿಸುವ 2015 ರ ಇರಾನ್ ಪರಮಾಣು ಒಪ್ಪಂದಕ್ಕೆ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಜೊತೆಗೆ ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್ (EU) ಸಹಿ ಹಾಕಿದೆ ಎಂದು ಅವರು ಹೇಳಿದರು.

ಇರಾನ್ ಮತ್ತು ಭಾರತದ ನಡುವಿನ ಸಂಬಂಧದ ಕುರಿತು ಮಾತನಾಡಿದ ಇಲಾಹಿ, ಗಣಿತ, ಖಗೋಳಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸಾಧನೆಗಳನ್ನು ಇರಾನ್‌ನಲ್ಲಿ ಅಧ್ಯಯನ ಮಾಡಲಾಗಿದೆ. ಇರಾನ್‌ನ ಜನರು ಯಾವಾಗಲೂ ಎರಡು ಪ್ರಾಚೀನ ನಾಗರಿಕತೆಗಳ ನಡುವಿನ ಸಂಬಂಧದ ಬಗ್ಗೆ ಕಲಿತಿದ್ದಾರೆ ಎಂದರು.

ಆಸ್ಟ್ರೇಲಿಯಾದಲ್ಲಿ ಮತ್ತೊಂದು ಶೂಟೌಟ್; ಬೋಂಡಿ ಬೀಚ್ ದಾಳಿಯ ಶೋಕಾಚರಣೆಯಂದೇ ಗುಂಡಿನ ದಾಳಿ, ಮೂವರು ಸಾವು

ಇರಾನ್ ಮತ್ತು ಭಾರತದ ನಡುವಿನ ಉತ್ತಮ ಸಂಬಂಧ ಮತ್ತು ಸಹಯೋಗವನ್ನೇ ಜನರು ಬಯಸುತ್ತಾರೆ. ಇರಾನ್ ಮತ್ತು ಭಾರತದ ನಡುವಿನ ಸಂಬಂಧ ಮತ್ತು ಸಹಯೋಗದ ಇತಿಹಾಸವು 3,000 ವರ್ಷಗಳ ಹಿಂದೆ ಇಸ್ಲಾಂ ಧರ್ಮದ ಉಗಮಕ್ಕೂ ಮುಂಚೆಯೇ ಇತ್ತು. ಆಗ ನಾವು ಭಾರತದ ತಾತ್ವಿಕ ಪುಸ್ತಕಗಳನ್ನೇ ಬಳಸುತ್ತಿದ್ದೆವು ಎಂದು ಅವರು ಹೇಳಿದರು.