ಇರಾನ್ ವಿರುದ್ಧದ ಯುದ್ಧ ಅಮೆರಿಕವನ್ನೇ ನಾಶ ಮಾಡುತ್ತ? ಆ್ಯಪಲ್, ಮೈಕ್ರೋಸಾಫ್ಟ್ ಸೇರಿ 18 ಟೆಕ್ ಕಂಪನಿ ಮೇಲೆ ದಾಳಿಯ ಎಚ್ಚರಿಕೆ
US-Iran–Israel War: ಇರಾನ್ ಅಮೆರಿಕದ ಮೇಲೆ ಬಲವಾಗಿ ತಿರುಗಿ ಬೀಳುವ ಎಚ್ಚರಿಕೆ ನೀಡಿದೆ. ಬುಧವಾರ (ಏಪ್ರಿಲ್ 1) ಅಮೆರಿಕದ ಹೆಗ್ಗುರತಾದ, ಟೆಕ್ ದೈತ್ಯ ಕಂಪನಿಗಳಾದ ಆ್ಯಪಲ್, ಮೈಕ್ರೋಸಾಫ್ಟ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಅಮೆರಿಕದ ತಂತ್ರಜ್ಞಾನ ವಲಯವನ್ನು ಮತ್ತು ಕಂಪನಿಗಳನ್ನು ನಾಶಪಡಿಸುವುದಾಗಿ ಹೇಳಿದೆ.
ಸಾಂದರ್ಭಿಕ ಚಿತ್ರ -
ವಾಷಿಂಗ್ಟನ್, ಮಾ. 31: ಫೆಬ್ರವರಿ 28ರಂದು ಇಸ್ರೇಲ್ ಜತೆಗೂಡಿ ಇರಾನ್ ಮೇಲೆ ದಾಳಿ ಆರಂಭಿಸಿದ ಅಮೆರಿಕ ಇದೀಗ ಆರ್ಥಿಕವಾಗಿ ಜರ್ಝರಿತವಾಗಿದೆ. 1 ತಿಂಗಳು ಕಳೆದರೂ ಇರಾನ್ ಮಣಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ಇರಾನ್ ಅಮೆರಿಕದ ಮೇಲೆ ಬಲವಾಗಿ ತಿರುಗಿ ಬೀಳುವ ಎಚ್ಚರಿಕೆ ನೀಡಿದೆ (US-Iran–Israel War). ಬುಧವಾರ (ಏಪ್ರಿಲ್ 1) ಅಮೆರಿಕದ ಹೆಗ್ಗುರತಾದ, ಟೆಕ್ ದೈತ್ಯ ಕಂಪನಿಗಳಾದ ಆ್ಯಪಲ್, ಮೈಕ್ರೋಸಾಫ್ಟ್ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.
ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಅಮೆರಿಕದ ತಂತ್ರಜ್ಞಾನ ವಲಯವನ್ನು ಮತ್ತು ಕಂಪನಿಗಳನ್ನು ನಾಶಪಡಿಸುವುದಾಗಿ ಹೇಳಿದೆ. ಆ ಮೂಲಕ ಅಮೆರಿಕದ ಬೆನ್ನುಲುಬಿಗೆ ಬಲವಾದ ಪೆಟ್ಟು ಕೊಡಲು ಸಜ್ಜಾಗಿದೆ.
ಅಮೆರಿಕದ ಟೆಕ್ ಕಂಪನಿ ಮೇಲೆ ದಾಳಿಯ ಎಚ್ಚರಿಕೆ:
❗️Iran Vows To Attack IT Firms If 🇺🇸 Strikes Are Not Halted - Fars News Agency, Citing IRGC
— RT_India (@RT_India_news) March 31, 2026
Attacks will begin on 1 April at 8pm local time. A list of the companies that will be targeted reads:
Cisco, HP, Intel, Oracle, Microsoft, Apple, Google, Meta, IBM, Dell, Palantir,… pic.twitter.com/bdMpAlvdDh
ಯಾವೆಲ್ಲ ಕಂಪನಿಗಳು?
ಮೈಕ್ರೋಸಾಫ್ಟ್, ಗೂಗಲ್, ಆ್ಯಪಲ್, ಇಂಟೆಲ್, ಐಬಿಎಂ, ಟೆಸ್ಲಾ, ಬೋಯಿಂಗ್ ಮುಂತಾದ ದೈತ್ಯ ಕಂಪನಿಗಳು ಹಿಟ್ ಲಿಸ್ಟ್‌ನಲ್ಲಿವೆ ಎಂದು ವರದಿ ತಿಳಿಸಿದೆ. "ಏಪ್ರಿಲ್ 1ರ ರಾತ್ರಿ 8 ಗಂಟೆಯಿಂದ ಇರಾನ್‌ನಲ್ಲಿ ನಡೆದ ಪ್ರತಿಯೊಂದು ಭಯೋತ್ಪಾದಕ ಕೃತ್ಯಕ್ಕೆ ಪ್ರತಿಯಾಗಿ ಅಮೆರಿಕದ ಈ ಕಂಪನಿಗಳ ಘಟಕಗಳು ನಾಶವಾಗಲಿವೆ" ಎಂದು ಐಆರ್‌ಜಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕದ ಈ ಐಸಿಟಿ, ಎಐ ಮತ್ತು ಏರೋಸ್ಪೇಸ್ ಸಂಸ್ಥೆಗಳು ಇರಾನಿನಲ್ಲಿ ನಡೆದ ಹತ್ಯೆಗಳು, ಸೈಬರ್ ದಾಳಿಗಳು ಮತ್ತು ಮಿಲಿಟರಿ ದಾಳಿಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಆರೋಪಿಸಲಾಗಿದೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮತ್ತು ಸಮೀಪದ ನಿವಾಸಿಗಳು ತಮ್ಮ ಸುರಕ್ಷತೆಗಾಗಿ ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಐಆರ್‌ಜಿಸಿ ಸೂಚಿಸಿದೆ. ಸದ್ಯ ಅಮೆರಿಕ ಈ ಕಂಪನಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕದಿಂದ 900 ಕೆಜಿ ಬಂಕರ್ ಬಸ್ಟರ್ ಬಾಂಬ್ ದಾಳಿ, ವಿಡಿಯೋ ಹಂಚಿಕೊಂಡ ಟ್ರಂಪ್
ಹಿರಿಯ, ಪ್ರಮುಖ ನಾಯಕರ ಹತ್ಯೆ ಸೇರಿದಂತೆ ಇರಾನಿನ ಪ್ರಮುಖ ತಾಣಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿರುವ ದಾಳಿಗಳಿಗೆ ಪ್ರತೀಕಾರವಾಗಿ ಐಆರ್‌ಜಿಸಿ ಈ ಬೆದರಿಕೆ ಒಡ್ಡಿದೆ. ಇರಾನ್ ತನ್ನ ಪ್ರತೀಕಾರವನ್ನು ಸಾಂಪ್ರದಾಯಿಕ ಯುದ್ಧಭೂಮಿಗಳನ್ನು ಮೀರಿ ವಿಸ್ತರಿಸುವುದಾಗಿ ಪದೇ ಪದೆ ಪ್ರತಿಜ್ಞೆ ಮಾಡಿದ್ದು, ಆರ್ಥಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿನ ಕುಸಿತದ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಂಘರ್ಷವು ಸಾಂಪ್ರದಾಯಿಕ ಮಿಲಿಟರಿ ದಾಳಿಯನ್ನು ಮೀರಿ ತಂತ್ರಜ್ಞಾನ, ದತ್ತಾಂಶ ಕೇಂದ್ರಗಳು, ಕ್ಲೌಡ್ ಮೂಲಸೌಕರ್ಯ ಹಾಗೂ ವಿದ್ಯುತ್ ಸ್ಥಾವರ, ತೈಲ ಬಾವಿಗಳಂತಹ ವಿಶಾಲ ವ್ಯಾಪ್ತಿಗೆ ವಿಸ್ತರಿಸಿದೆ.
ಸುಮಾರು ಮೂರೂವರೆ ದಶಕಗಳ ಕಾಲ ಇರಾನ್‌ನ ಅನಭಿಷಕ್ತ ದೊರೆಯಾಗಿ ಮೆರೆದ ಸುಪ್ರಿಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರನ್ನು ಇಸ್ರೇಲ್-ಅಮೆರಿಕ ಜಂಟಿ ಕಾರ್ಯಾಚರಣೆ ಮೂಲಕ ಹೊಡೆದುರುಳಿಸುವ ಮೂಲಕ ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಆರಂಭವಾಯ್ತು. ಸದ್ಯ ಸಂಘರ್ಷ 30 ದಿನಗಳ ಗಡಿ ದಾಟಿದ್ದು, ಮತ್ತೊಂದು ಹಂತಕ್ಕೆ ಸಾಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಈ ಮಧ್ಯೆ ಈ ಸಂಘರ್ಷ 3ನೇ ಮಹಾಯುದ್ಧಕ್ಕೆ ದಾರಿ ಮಾಡಿ ಕೊಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.