ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ನಿಮ್ಮ ಸೋಲನ್ನು ರಾಜತಾಂತ್ರಿಕ ಒಪ್ಪಂದವೆಂದು ಕರೆಯಬೇಡಿ"; ಟ್ರಂಪ್‌ ಹೇಳಿಕೆಗೆ ಖಡಕ್‌ ಎಚ್ಚರಿಕೆ ನೀಡಿದ ಇರಾನ್‌

ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೆ ಇರಾನ್‌ನ ಐಆರ್‌ಜಿಸಿ ತೀವ್ರ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ಪ್ರಭಾವ ಮಧ್ಯಪ್ರಾಚ್ಯದಲ್ಲಿ ಕುಗ್ಗುತ್ತಿದೆ ಎಂದು ಆರೋಪಿಸಿದೆ. ಇದೇ ವೇಳೆ, ಯುದ್ಧ ತೀವ್ರಗೊಂಡಿದ್ದು, ತೈಲ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ಹಾರ್ಮುಜ್ ಜಲಸಂಧಿ ಸ್ಥಗಿತಗೊಂಡಿದೆ.

ಟ್ರಂಪ್ ಹೇಳಿಕೆಗಳಿಗೆ ಐಆರ್‌ಜಿಸಿ ತೀವ್ರ ಪ್ರತಿಕ್ರಿಯೆ

ಐಆರ್‌ಜಿಸಿ ವಕ್ತಾರ -

Profile
Sushmitha Jain Mar 25, 2026 3:44 PM

ಟೆಹರಾನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಸಂಧಾನದ ಹೇಳಿಕೆಗಳನ್ನು ಇರಾನ್‌ (Iran)ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Islamic Revolutionary Guard Corps ) ಕಟುವಾಗಿ ಟೀಕಿಸಿದೆ. "ನಿಮ್ಮ ಸೋಲನ್ನು ಒಂದು ರಾಜತಾಂತ್ರಿಕ ಒಪ್ಪಂದವೆಂದು ಬಿಂಬಿಸಲು ಪ್ರಯತ್ನಿಸಬೇಡಿ (Do not call your defeat an agreement.)" ಎಂದು ಐಆರ್‌ಜಿಸಿ ವಕ್ತಾರರು ಎಚ್ಚರಿಸಿದ್ದು, ಮಧ್ಯಪ್ರಾಚ್ಯದಲ್ಲಿ ಅಮೆರಿಕ (US) ತನ್ನ ಹಳೆಯ ಆರ್ಥಿಕ ಮತ್ತು ಕಾರ್ಯತಂತ್ರದ ಸ್ಥಾನಮಾನವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಮೆರಿಕದ ಹೂಡಿಕೆಗಳು ಈ ಪ್ರದೇಶದಲ್ಲಿ ಉಳಿಯುವುದಿಲ್ಲ ಮತ್ತು ತೈಲ ಬೆಲೆಗಳು ಹಳೆಯ ಸ್ಥಿತಿಗೆ ಮರಳುವುದಿಲ್ಲ ಎಂದು ಇರಾನ್ ಹೇಳಿದೆ. ಇದೇ ವೇಳೆ, ಅಮೆರಿಕವು ಇಸ್ರೇಲ್‌ (Israel)ಗೆ ಆದ್ಯತೆ ನೀಡುವ ಮೂಲಕ ಮುಸ್ಲಿಂ ರಾಷ್ಟ್ರಗಳನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದ ಇರಾನ್, ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಂದಾಗಬೇಕೆಂದು ಕರೆ ನೀಡಿದೆ.

ಮತ್ತೊಂದೆಡೆ, ಇರಾನ್ ಅಧಿಕಾರಿಗಳೊಂದಿಗೆ "ಅತ್ಯಂತ ಉತ್ತಮ ಮತ್ತು ಉತ್ಪಾದಕ" ಮಾತುಕತೆಗಳು ನಡೆದಿವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಈ ಮಾತುಕತೆಯ ಹಿನ್ನೆಲೆಯಲ್ಲಿ ಇರಾನ್‌ನ ವಿದ್ಯುತ್ ಜಾಲದ ಮೇಲಿನ ದಾಳಿಯನ್ನು ಐದು ದಿನಗಳ ಕಾಲ ಮುಂದೂಡಿರುವುದಾಗಿ ಅವರು ತಿಳಿಸಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ $100 ಕ್ಕಿಂತ ಕೆಳಕ್ಕೆ ಕುಸಿದಿವೆ.

Gulf War: ಸುಸ್ತಾಗಿ ಸಂಧಾನಕ್ಕೆ ಮುಂದಾದ ಟ್ರಂಪ್‌, ತಾತ್ಕಾಲಿಕ ಯುದ್ಧ ವಿರಾಮಕ್ಕೆ ಪ್ರಸ್ತಾವನೆ, ಇರಾನ್‌ ಮುಂದೆ 15 ಅಂಶಗಳ ಯೋಜನೆ

ಆದರೆ, ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಕರ್ ಖಾಲಿಬಾಫ್ ಈ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಹಣಕಾಸು ಮತ್ತು ತೈಲ ಮಾರುಕಟ್ಟೆಗಳನ್ನು ನಿಯಂತ್ರಿಸಲು ಅಮೆರಿಕವು "ಸುಳ್ಳು ಸುದ್ದಿ"ಗಳನ್ನು ಹಬ್ಬಿಸುತ್ತಿದೆ ಎಂದು ಅವರು ದೂರಿದ್ದಾರೆ.

ಯುದ್ಧದ ತೀವ್ರತೆ ಕಡಿಮೆಯಾಗುವ ಬದಲು, ಇರಾನ್ ಸೇನೆಯು ಟೆಲ್ ಅವಿವ್ ಮತ್ತು ಡಿಮೋನಾ ಸೇರಿದಂತೆ ಇಸ್ರೇಲ್‌ನ ಪ್ರಮುಖ ನಗರಗಳು ಹಾಗೂ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದೆ. ಪ್ರಮುಖ ಜಾಗತಿಕ ತೈಲ ಸಾಗಣೆ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯನ್ನು ಇರಾನ್ ಸ್ಥಗಿತಗೊಳಿಸಿದ್ದು, ಅಮೆರಿಕ ಮತ್ತು ಇಸ್ರೇಲ್ ತಮ್ಮ ದಾಳಿಯನ್ನು ನಿಲ್ಲಿಸುವವರೆಗೆ ಇದನ್ನು ತೆರೆಯುವುದಿಲ್ಲ ಎಂದು ಪಟ್ಟು ಹಿಡಿದಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಎರಡೂ ದೇಶಗಳ ನಡುವೆ ರಹಸ್ಯ ಮಾತುಕತೆ ನಡೆಯುವ ಸಾಧ್ಯತೆಗಳಿದ್ದರೂ, ಯುದ್ಧದಿಂದಾಗಿ ಈಗಾಗಲೇ 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.