ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಸ್ರೇಲ್‌ ಫೈಟರ್ ಜೆಟ್ ದಾಳಿಗೆ ಇರಾನ್‌ ಯುದ್ಧ ವಿಮಾನ ಛಿದ್ರಛಿದ್ರ; ವಿಡಿಯೊ ರಿಲೀಸ್‌

US-Israel-Iran War: ಮಾರ್ಚ್‌ 4ರಂದು ಇರಾನ್‌ನ ರಾಜಧಾನಿ ಟೆಹರಾನ್‌ನಲ್ಲಿ ಇರಾನ್‌ ವಾಯುಪಡೆಯ YAK-130 ವಿಮಾನವನ್ನು ತನ್ನ F-35 ಸ್ಟೆಲ್ತ್ ಫೈಟರ್ ಜೆಟ್ ಬಳಸಿ ಹೊಡೆದುರುಳಿಸಿದ ವಿಡಿಯೊವನನು ಇಸ್ರೇಲ್‌ ಸೇನೆ ರಿಲೀಸ್‌ ಮಾಡಿದೆ. 40 ವರ್ಷಗಳಲ್ಲಿ ಇಸ್ರೇಲ್‌ ವಾಯುಪಡೆಯು ಮಾನವಸಹಿತ ವಿಮಾನದೊಂದಿಗೆ ಈ ರೀತಿ ದಾಳಿ ನಡೆಸುತ್ತಿರುವುದು ಇದೇ ಮೊದಲು.

ಇಸ್ರೇಲ್‌ ಫೈಟರ್ ಜೆಟ್ ದಾಳಿಗೆ ಇರಾನ್‌ ಯುದ್ಧ ವಿಮಾನ ಛಿದ್ರಛಿದ್ರ

ಇರಾನ್‌ ಯುದ್ಧ ವಿಮಾನ ಹೊಡೆದುರುಳಿಸಿದ ಇಸ್ರೇಲ್‌. -

Ramesh Ballamoole
Ramesh Ballamoole Mar 5, 2026 4:09 PM

ಟೆಹರಾನ್‌, ಮಾ. 5: ಅಮೆರಿಕ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ನಡೆಸಿದ ದಾಳಿಯ ಬಳಿಕ ಇದೀಗ ಜಾಗತಿಕವಾಗಿ ಯುದ್ಧದ ಕಾರ್ಮೋಡ ಕವಿದಿದೆ. ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನಷ್ಟು ತೀವ್ರಗೊಳ್ಳುವ ಬೀತಿ ಎದುರಾಗಿದೆ. ಈ ಮಧ್ಯೆ ಮಾರ್ಚ್‌ 4ರಂದು ಇರಾನ್‌ನ ರಾಜಧಾನಿ ಟೆಹರಾನ್‌ನಲ್ಲಿ ಇರಾನ್‌ ವಾಯುಪಡೆಯ YAK-130 ವಿಮಾನವನ್ನು ತನ್ನ F-35 ಸ್ಟೆಲ್ತ್ ಫೈಟರ್ ಜೆಟ್ ಬಳಸಿ ಹೊಡೆದುರುಳಿಸಿದ ವಿಡಿಯೊವನನು ಇಸ್ರೇಲ್‌ ಸೇನೆ ರಿಲೀಸ್‌ ಮಾಡಿದೆ. ಈ 16 ಸೆಕೆಂಡ್‌ ವಿಡಿಯೊದಲ್ಲಿ F-35 ಫೈಟರ್‌ ಜೆಟ್‌ ತನ್ನ ಮೊದಲ ಕಾರ್ಯಾಚರಣೆಯಲ್ಲಿ ಎದುರಾಳಿ ದೇಶದ ವಿಮಾನವನ್ನು ಧ್ವಂಸ ಮಾಡುತ್ತಿರುವುದು ಕಂಡು ಬಂದಿದೆ.

"ನಾನು ಗುರಿಯನ್ನು ಹೊಡೆದಿದ್ದೇನೆ, ನಾವು ದಾಳಿಯನ್ನು ಮುಂದುವರಿಸುತ್ತೇವೆ" ಎಂದು ಪೈಲಟ್ ಹೇಳುತ್ತಿರುವುದನ್ನು ವಿಡಿಯೊದಲ್ಲಿ ಕೇಳಬಹುದು. ಸುಮಾರು 40 ವರ್ಷಗಳಲ್ಲಿ ಇಸ್ರೇಲ್‌ ವಾಯುಪಡೆಯು ಮಾನವಸಹಿತ ವಿಮಾನದೊಂದಿಗೆ ಈ ರೀತಿ ದಾಳಿ ನಡೆಸುತ್ತಿರುವುದು ಇದೇ ಮೊದಲು.

ಇಸ್ರೇಲ್‌ ಹಂಚಿಕೊಂಡ ವಿಡಿಯೊ:



ಐಎಎಫ್ ಕಮಾಂಡರ್ ಮೇಜರ್ ಜನರಲ್ ಟೋಮರ್ ಬಾರ್ ಮತ್ತು ಎಫ್-35ಐ ಪೈಲಟ್ ಮಧ್ಯೆ ನಡೆದ ಸಂಭಾಷಣೆಯನ್ನು ಸಹ ಇಸ್ರೇಲ್ ಹಂಚಿಕೊಂಡಿದೆ. "ಟೆಹರಾನ್‌ ಆಕಾಶದಲ್ಲಿ ಕಂಡು ಬಂದ ಇರಾನ್‌ ಫೈಟರ್‌ ಜೆಟ್‌ನ ಐತಿಹಾಸಿಕ ಪತನವು ಇಸ್ರೇಲ್ ವಾಯುಪಡೆಯ ಶಕ್ತಿ ಮತ್ತು ದೃಢಸಂಕಲ್ಪದ ಅಭಿವ್ಯಕ್ತಿ. ನಿಮ್ಮೆಲ್ಲರ ಬಗ್ಗೆ ನನಗೆ ಹೆಮ್ಮೆ ಇದೆ. ಮುಂದಿನ ಕಾರ್ಯಾಚರಣೆ ಈಗಾಗಲೇ ನಿಮಗಾಗಿ ಕಾಯುತ್ತಿದೆ" ಎಂದು ಐಎಎಫ್ ಮುಖ್ಯಸ್ಥರದ್ದು ಎಂದು ಹೇಳಲಾದ ಧ್ವನಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಇಸ್ರೇಲ್‌ ಸೇನೆಯ ಎಕ್ಸ್‌ ಪೋಸ್ಟ್‌:



ನಿರಂತರ ದಾಳಿ

ಗುರುವಾರ ಇಸ್ರೇಲ್‌ ಸೇನೆಯು ಟೆಹರಾನ್‌ನಲ್ಲಿರುವ ಭದ್ರತಾ ಕಮಾಂಡ್ ಕೇಂದ್ರಗಳು ಮತ್ತು ಪಶ್ಚಿಮ ಇರಾನ್‌ನ ಇಸ್ಫಹಾನ್‌ನಲ್ಲಿರುವ ಕ್ಷಿಪಣಿ ಸಂಗ್ರಹಾಗಾರ ಸೇರಿದಂತೆ ಹಲವು ಕೇಂದ್ರಗಳ ಮೇಲೆ ದಾಳಿ ಮಾಡಿದೆ ಎಂದು ತಿಳಿಸಿದೆ.

"ಟೆಹರಾನ್‌ನಲ್ಲಿ ದಾಳಿಗೊಳಗಾದ ಗುರಿಗಳಲ್ಲಿ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಂಗ್ರಹಿಸಲು ಇರಾನ್‌ ಬಳಸುತ್ತಿದ್ದ ಭೂಗತ ಸ್ಥಳ. ಜತೆಗೆ ನಮ್ಮ ವಿಮಾನಗಳನ್ನು ಹೊಡೆಯಲು ಉದ್ದೇಶಿಸಲಾದ ಕ್ಷಿಪಣಿ ಸಂಗ್ರಹಣಾ ಸೌಲಭ್ಯಗಳನ್ನು ನಾಶಪಡಿಸಿದ್ದೇವೆ. ಹೆಚ್ಚುವರಿಯಾಗಿ ನಮ್ಮ ದೇಶ ಮತ್ತು ನಾಗರಿಕರಿಗೆ ಬೆದರಿಕೆ ಒಡ್ಡಿದ ಹಲವು ಉಡಾವಣಾ ತಾಣಗಳನ್ನು ಹೊಡೆದುರುಳಿಸಲಾಗಿದೆ" ಎಂದು ಇಸ್ರೇಲ್‌ ತಿಳಿಸಿದೆ. ಇತ್ತ ಇರಾನ್‌ ಕೂಡ ಇಸ್ರೇಲ್‌ ನಗರಗಳ ಮೇಲೆ ಆಕ್ರಮಣ ಮುಂದುವರಿಸಿದೆ.

ಇರಾನ್‌ ಸುಪ್ರೀಂ ಲೀಡರ್‌ ಯಾರೇ ಆದ್ರೂ ಟಾರ್ಗೆಟ್:‌ ಇಸ್ರೇಲ್‌ ಎಚ್ಚರಿಕೆ

ಮೃತ ಭಾರತೀಯರ ಗುರುತು ಪತ್ತೆ

ಈ ಮಧ್ಯೆ ಇತ್ತೀಚೆಗೆ ಇರಾನ್‌ ಒಮನ್ ಕೊಲ್ಲಿಯ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ಇಬ್ಬರು ಭಾರತೀಯರ ಗುರುತು ಪತ್ತೆಯಾಗಿದೆ. ಒಮನ್ ಕೊಲ್ಲಿಯಲ್ಲಿದ್ದ ಸ್ಕೈಲೈಟ್‌ ಎನ್ನುವ ಹಡಗಿನ ಮೇಲೆ ಇರಾನ್‌ ದಾಳಿ ನಡೆಸಿದ್ದು, ಇದರಲ್ಲಿ ಮೃತಪಟ್ಟ ಭಾರತೀಯರನ್ನು ಬಿಹಾರ ಮೂಲದ ಕ್ಯಾಪ್ಟನ್‌ ಆಶಿಶ್‌ ಕುಮಾರ್‌ ಮತ್ತು ರಾಜಸ್ಥಾನದ ದಲೀಪ್‌ ಸಿಂಗ್‌ ಎಂದು ಗುರುತಿಸಲಾಗಿದೆ.

15 ಭಾರತೀಯ ಮತ್ತು 5 ಇರಾನಿ ಸಿಬ್ಬಂದಿಯಿದ್ದ, ಪಲಾವ್‌ ದೇಶದ ಕಡೆ ಹೊರಟಿದ್ದ ಸ್ಕೈಲೈಟ್‌ ಹಡಗಿನ ಮೇಲೆ, ಹೊರ್ಮುಜ್‌ ಜಲಸಂಧಿಯ ಬಳಿಯಿರುವ ಒಮಾನ್‌ನ ಮುಸಂದಮ್‌ನ ದ್ವೀಪದ ಬಳಿ ಇರಾನ್‌ ದಾಳಿ ನಡೆಸಿತ್ತು.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.