ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕಿಸ್ತಾನದಲ್ಲಿ ಲಷ್ಕರ್ ಕಮಾಂಡರ್ ಇಮ್ರಾನ್ ಹತ್ಯೆ? ಹಾಡಹಗಲೇ ಗುಂಡಿಕ್ಕಿ ಕೊಂದ ಅಪರಿಚಿತ ವ್ಯಕ್ತಿ: ವಿಡಿಯೊ ವೈರಲ್

Lashkar Commander Imran Killed?: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾದ ವೈರಲ್ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಮೃತನ ಗುರುತು, ಗುಂಡಿನ ದಾಳಿ ನಡೆದ ಸ್ಥಳ ಮತ್ತು ಘಟನೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ

ಪಾಕಿಸ್ತಾನದಲ್ಲಿ ಲಷ್ಕರ್ ಕಮಾಂಡರ್ ಇಮ್ರಾನ್ ಹತ್ಯೆ?

ಪಾಕಿಸ್ತಾನದಲ್ಲಿ ಲಷ್ಕರ್ ಕಮಾಂಡರ್ ಇಮ್ರಾನ್ ಹತ್ಯೆ? -

Priyanka P
Priyanka P Oct 14, 2026 3:48 PM

ಇಸ್ಲಾಮಾಬಾದ್, ಅ.14: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾದ ವೈರಲ್ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳಿಗೆ ಕಾರಣವಾಗಿದೆ. ಮೃತಪಟ್ಟವರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿರುವ ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಇಮ್ರಾನ್ ಎಂದು ಹೇಳಲಾಗಿದೆ. ಆದರೆ, ಮೃತನ ಗುರುತು, ಗುಂಡಿನ ದಾಳಿ ನಡೆದ ಸ್ಥಳ ಮತ್ತು ಘಟನೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ (crime news).

ಈ ವಿಡಿಯೊದಲ್ಲಿ ಅಕ್ಟೋಬರ್ 13, 2026 ರಂದು ಬೆಳಿಗ್ಗೆ 11:54 ಎಂದು ಸಮಯ ತೋರಿಸಲಾಗಿದೆ. ವಿಡಿಯೊದಲ್ಲಿ, ಬೈಕ್ ಸವಾರನೊಬ್ಬ ಸಂಕೀರ್ಣದ ಗೇಟ್‌ನಿಂದ ಹೊರಬರುತ್ತಿರುವುದನ್ನು ನೋಡಬಹುದು. ಈ ವೇಳೆ ಬಿಳಿ ಬಟ್ಟೆ ಧರಿಸಿದ ವ್ಯಕ್ತಿಯೊಬ್ಬರು ಅವನ ಬಳಿಗೆ ಬಂದು ಗುಂಡು ಹಾರಿಸಿದ್ದಾರೆ. ಬೈಕ್ ಸವಾರನು ತನ್ನ ವಾಹನವನ್ನು ತಿರುಗಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ.

ಈ ವೇಳೆ ಆಕ್ರಮಣಕಾರನು ಗುಂಡು ಹಾರಿಸುತ್ತಲೇ ಇದ್ದನು. ನಂತರ ದಾಳಿಕೋರನು ಒಂದು ಬ್ಯಾಗ್‌ನಿಂದ ಮತ್ತೊಂದು ಪಿಸ್ತೂಲನ್ನು ತೆಗೆದುಕೊಂಡು ಆ ವ್ಯಕ್ತಿಯ ಮೇಲೆ ಹಲವಾರು ಸುತ್ತು ಗುಂಡು ಹಾರಿಸಿದ್ದಾನೆ. ನಂತರ ಸಂಭ್ರಮಾಚರಣೆಯ ಸೂಚಕವಾಗಿ ಕಾಣುವ ಹಾಗೆ ತನ್ನ ಕೈಗಳನ್ನು ಮೇಲಕ್ಕೆತ್ತಿದ್ದಾನೆ. ನಂತರ ಬಂದೂಕುಧಾರಿ ಸ್ಥಳದಿಂದ ಓಡಿಹೋಗಿದ್ದಾನೆ.

ಇಲ್ಲಿದೆ ವಿಡಿಯೊ:



ಈ ವಿಡಿಯೊವನ್ನು ಹಂಚಿಕೊಂಡ ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು, ಈ ಘಟನೆಯನ್ನು ಲಷ್ಕರ್ ಹಿರಿಯ ಕಾರ್ಯಕರ್ತನ ಗುರಿಯಾಗಿಟ್ಟುಕೊಂಡು ನಡೆಸಲಾದ ಹತ್ಯೆ ಎಂದು ಹೇಳಿವೆ. ಕೆಲವು ಪೋಸ್ಟ್‌ಗಳು, ಮೃತ ವ್ಯಕ್ತಿಯು ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ನೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಿವೆ.

‘ಉಗ್ರವಾದದ ಬೆಂಕಿ ಪಾಕಿಸ್ತಾನವನ್ನೇ ಸುಡುತ್ತಿದೆ’: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಭಾರತ ವಾಗ್ದಾಳಿ

ಆದರೆ, ಈ ಹೇಳಿಕೆಗಳು ಆಧಾರರಹಿತವಾಗಿವೆ. ಈ ವಿಡಿಯೊದಲ್ಲಿ ಗುಂಡೇಟಿಗೆ ಒಳಗಾದ ವ್ಯಕ್ತಿ ಯಾರು? ಅವನಿಗೆ ಉಗ್ರಗಾಮಿ ಸಂಘಟನೆಯೊಂದಿಗೆ ಸಂಬಂಧವಿದೆಯೇ? ಅವನನ್ನು ಏಕೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬುದರ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಅಥವಾ ಸಾಕ್ಷ್ಯ ಸಿಕ್ಕಿಲ್ಲ. ವಿಡಿಯೊ ನೋಡಿದ ಮಾತ್ರಕ್ಕೆ ಈ ವಿಷಯಗಳನ್ನು ಸತ್ಯವೆಂದು ಹೇಳಲು ಸಾಧ್ಯವಿಲ್ಲ.

ಇಮ್ರಾನ್ ಎಂಬ ಲಷ್ಕರ್‌ನ ಪ್ರಮುಖ ಕಮಾಂಡರ್ ಪಾಕಿಸ್ತಾನದಲ್ಲಿ ಹತ್ಯೆಯಾಗಿದ್ದಾರೆ ಎಂಬ ಸುದ್ದಿಗೆ ಇನ್ನೂ ಯಾವುದೇ ಸ್ಪಷ್ಟೀಕರಣ ಸಿಕ್ಕಿಲ್ಲ. ಪಾಕಿಸ್ತಾನ ಪೊಲೀಸರು ಅಥವಾ ಸೇನೆ ಈ ಹತ್ಯೆಯನ್ನು ದೃಢಪಡಿಸಿಲ್ಲ.