ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬದ್ಗಾಮ್‌ ಎನ್‌ಕೌಂಟರ್‌ನಲ್ಲಿ ಸತ್ತ ಉಗ್ರನ ಗುರುತು ಪತ್ತೆ: ಲಷ್ಕರ್-ಎ-ತೊಯ್ಬಾ ಸದಸ್ಯ ಯಾಸಿರ್‌ ಹತನಾಗಿದ್ದು ಹೇಗೆ?

Budgam Encounter: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್‌ ಮತ್ತು ಸಿಆರ್‌ಪಿಎಫ್‌ ಜಂಟಿಯಾಗಿ ಸಡಸಿದ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಹತನಾದ ಉಗ್ರನನ್ನು, ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಸದಸ್ಯ ಯಾಸಿರ್‌ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಬದ್ಗಾಮ್‌ ಎನ್‌ಕೌಂಟರ್‌ನಲ್ಲಿ ಹತ ಉಗ್ರ ಪಾಕಿಸ್ತಾನದ ಯಾಸಿರ್‌

ಹತ ಉಗ್ರ ಯಾಸಿರ್‌ ಮತ್ತು ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Sep 5, 2026 4:51 PM

ಶ್ರೀನಗರ, ಸೆ. 5: ಒಂದು ತಿಂಗಳಿಂದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊಂಚ ತಣ್ಣಗಾಗಿದ್ದ ಉಗ್ರ ಚಟುವಟಿಕೆಗಳು ಮತ್ತೆ ಚುರುಕಾಗಿದ್ದು, ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ದಟ್ಟ್ ಅರಣ್ಯ ಪ್ರದೇಶದಲ್ಲಿ ಗುರುವಾರ (ಸೆಪ್ಟೆಂಬರ್‌ 3) ಆರಂಭವಾದ ʼಆಪರೇಷನ್‌ ಅಷ್ದಾರ್‌ʼ ಜಂಟಿ ಕಾರ್ಯಾಚರಣೆಯಲ್ಲಿ (Operation Ashdar) ಹತನಾದ ಉಗ್ರನ ಗುರುತನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದ್ದಾರೆ (Budgam Encounter). ಸತ್ತ ಭಯೋತ್ಪಾದಕನನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಕ್ರಿಯ ಸದಸ್ಯ ಯಾಸಿರ್‌ ಎಂದು ಗುರುತಿಸಲಾಗಿದೆ.

ಘಟನೆಯ ನಂತರ ಸಾಮಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ ಮಾಡಿರುವ ಜಮ್ಮು-ಕಾಶ್ಮೀರದ ಪೊಲೀಸರು, ದೇಶ ವಿರೋಧಿ ಶಕ್ತಿಗಳಿಗೆ ಎಚ್ಚರಿಕೆ ನೀಡುತ್ತಾ, ʼʼನೀವು ಓಡಬಹುದು, ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲʼʼ ಎಂದು ಸವಾಲು ಹಾಕಿದ್ದಾರೆ.

ಬದ್ಗಾಮ್‌ ಎನ್‌ಕೌಂಟರ್‌ನಲ್ಲಿ ಸತ್ತ ಉಗ್ರನ ಗುರುತು ಪತ್ತೆ:



ಆಪರೇಷನ್‌ ಅಷ್ದಾರ್‌ ಕಾರ್ಯಾಚರಣೆ

ಬದ್ಗಾಮ್‌ ಜಿಲ್ಲೆಯ ಅಟಾರಿ-ಅಷ್ದಾರ ಗಾಲಿ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ನಿಖರ ಮಾಹಿತಿ ದೊರೆತ ಆದಾರದ ಮೇಲೆ ಭಾರತೀಯ ಸೇನೆಯ ಚಿನಾರ-ಕಾರ್ಪ್ಸ್‌, ಜಮ್ಮು-ಕಾಶ್ಮೀರ ಪೊಲೀಸ್‌ ಮತ್ತು ಸಿಆರ್‌ಪಿಎಫ್‌ ಪಡೆಗಳು ಜಂಟಿಯಾಗಿ ಬೃಹತ್‌ ಕಾರ್ಯಾಚರಣೆ ಆರಂಭಿಸಿದವು. ಕಾರ್ಯಾಚರಣೆ ವೇಳೆ ಯೋಧರು ಅರಣ್ಯದಲ್ಲಿ ಉಗ್ರರ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿ ಎಚ್ಚರಿಕೆ ನೀಡಿದಾಗ ಭಯೋತ್ಪಾದಕರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ನಡಸಿದ ಪ್ರತಿದಾಳಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ ಎಂದು ವರದಿಯಾಗಿತ್ತು. ಸದ್ಯ ಈ ಉಗ್ರನನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಸದಸ್ಯ ಯಾಸಿರ್‌ ಎಂದು ಗುರುತಿಸಲಾಗಿದೆ. ಈ ವೇಳೆ ಉಗ್ರ ಯಾಸಿರ್‌ ಬಳಿಯಿದ್ದ 1 ರೈಫಲ್‌ ಹಾಗೂ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಸಿಕೊಳ್ಳಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಯಿಂದ ಉಗ್ರನ ಎನ್‌ಕೌಂಟರ್‌

ಹಿರಿಯ ಅಧಿರಿಾಗಳಿಂದ ಕಾರ್ಯಾಚರಣೆ

ಶುಕ್ರವಾರ ಕಾರ್ಯಾಚರಣೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಕಾಶ್ಮೀರ ವಲಯದ ಐಜಿಪಿ ಸುಜಿತ್‌ ಕುಮಾರ್‌ ಸುರಕ್ಷತಾ ಸ್ಥಿತಿಗತಿ ಹಾಗೂ ಶೋಧ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದ್ದಾರೆ. ಕಣಿವೆಯಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಎಕೌಂಟರ್‌ ವೇಳೆ ಗಾಯಗೊಂಡು ಓಡಿಹೋಗಿರುವ ಮತ್ತೊಬ್ಬ ಉಗ್ರ ಸ್ಥಳೀಯ ಅರಣ್ಯದಲ್ಲೇ ಅಡಗಿರುವ ಶಂಕೆ ಇದ್ದು, ಇಡೀ ಪ್ರದೇಶವನ್ನು ಸಿಆರ್‌ಪಿಎಫ್‌ಮತ್ತು ಸೇನೆ ಸಂಪೂರ್ಣವಾಗಿ ಸುತ್ತುವರಿದು ಶೋಧ ಕಾರ್ಯವನ್ನು ಮುಂದುವರಿಸಿದೆ.

ಪ್ರವಾಸಿಗರಿಗೆ ಸಲಹೆ

ಎನ್‌ಕೌಂಟರ್ ನಡೆದ ಅಷ್ಡಾರ್ ಗಾಲಿ ಪ್ರದೇಶವು ಪ್ರಸಿದ್ಧ ಪ್ರವಾಸಿ ತಾಣ ದೂಧ್‌ಪತ್ರಿ ಹತ್ತಿರದಲ್ಲೇ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ಮುಂದಿನ ಆದೇಶದವರೆಗೆ ದೂಧ್‌ಪತ್ರಿ ಪ್ರದೇಶಕ್ಕೆ ಭೇಟಿ ನೀಡದಂತೆ ಆಡಳಿತ ಮಂಡಳಿ ಸಲಹೆ ನೀಡಿದೆ. ಕಾಶ್ಮೀರ ಕಣಿವೆಯಲ್ಲಿ ಕಳೆದ ಕೆಲವು ತಿಂಗಳಿಂದ ತಣ್ಣಗಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಈ ಘಟನೆಯಿಂದ ಮತ್ತೆ ತೀವ್ರಗೊಂಡಿದೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.