‘ಮೋದಿ ಒಬ್ಬ ಅದ್ಭುತ ಮನುಷ್ಯ, ನನ್ನ ಸ್ನೇಹಿತ’; ಮತ್ತೆ ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿದ ಟ್ರಂಪ್
US President praises Modi: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ. ಮೋದಿ ಒಬ್ಬ ಅದ್ಭುತ ಮನುಷ್ಯ; ಅವರು ನನ್ನ ಸ್ನೇಹಿತರು ಎಂದು ಹೇಳಿದರು. ಅಲ್ಲದೆ ಮುಂಬರುವ ದಿನಗಳಲ್ಲಿ ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ (ಸಂಗ್ರಹ ಚಿತ್ರ) -
ದಾವೋಸ್, ಜ.22: ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump), ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಅದ್ಭುತ ವ್ಯಕ್ತಿ ಎಂದು ಹೊಗಳಿದರು.
ಪ್ರಧಾನಿ ಮೋದಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಅದ್ಭುತ ವ್ಯಕ್ತಿ ಮತ್ತು ನನ್ನ ಸ್ನೇಹಿತ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು. ಬಹು ನಿರೀಕ್ಷಿತ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಉತ್ತಮ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಸುಂಕದ ವಿಚಾರದಲ್ಲಿ ಪ್ರಧಾನಿ ಮೋದಿಗೆ ನನ್ನ ಮೇಲೆ ಅಸಮಾಧಾನವಿದೆ ಎಂದ ಡೊನಾಲ್ಡ್ ಟ್ರಂಪ್
ಈ ತಿಂಗಳ ಆರಂಭದಲ್ಲಿ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಕರೆ ಮಾಡದ ಕಾರಣ ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಆದರೆ ವಿದೇಶಾಂಗ ಸಚಿವಾಲಯವು ಈ ವಿವರಣೆ ತಪ್ಪಾಗಿದೆ ಎಂದು ಸ್ಪಷ್ಟಪಡಿಸಿತು. ಪರಸ್ಪರ ಲಾಭದಾಯಕವಾಗಿರುವ ವ್ಯಾಪಾರ ಒಪ್ಪಂದಕ್ಕೆ ಭಾರತ ಸದಾ ಸಿದ್ಧವಿದೆ ಎಂದು ಪುನರುಚ್ಚರಿಸಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಜನವರಿ 21) ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದರು. ಜಗತ್ತಿನ ನಾಯಕರಿಗೆ, ನೀತಿನಿರ್ಧಾರಕರಿಗೆ ಮತ್ತು ಉದ್ಯಮ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಗ್ರೀನ್‌ಲ್ಯಾಂಡ್ ಹಾಗೂ ಡೆನ್ಮಾರ್ಕ್ ಜನರ ಬಗ್ಗೆ ತನಗೆ ಅಪಾರ ಗೌರವವಿದೆ ಎಂದು ಹೇಳಿದರು. ಆದರೆ, ವಿಶಾಲವಾದ ಆರ್ಕ್ಟಿಕ್ ಪ್ರದೇಶವಾದ ಗ್ರೀನ್‌ಲ್ಯಾಂಡ್ ಅನ್ನು ಪರಿಣಾಮಕಾರಿಯಾಗಿ ರಕ್ಷಿಸುವ ಸಾಮರ್ಥ್ಯವು ಅಮೆರಿಕಕ್ಕೆ ಹೊರತುಪಡಿಸಿ ಯಾವುದೇ ನಾಟೋ ಮಿತ್ರ ರಾಷ್ಟ್ರಕ್ಕೂ ಸಾಧ್ಯವಿಲ್ಲ ಎಂದು ಅವರು ವಾದಿಸಿದರು.
ಇಲ್ಲಿದೆ ಟ್ರಂಪ್ ವಿಡಿಯೊ:
#WATCH 🎥 | 🚨🚨 MEGA EXCLUSIVE: US President Donald Trump spoke to Moneycontrol's Chandra R. Srikanth (@chandrarsrikant) at Davos 2026, expressing optimism about India-US trade relations.
— Moneycontrol (@moneycontrolcom) January 21, 2026
Praising Prime Minister Narendra Modi as a friend, Trump signaled that a positive… pic.twitter.com/jGPIo5PLW5
ಪ್ರತಿಯೊಂದು ನಾಟೊ ಮಿತ್ರ ರಾಷ್ಟ್ರಕ್ಕೂ ತನ್ನದೇ ಭೂಭಾಗವನ್ನು ರಕ್ಷಿಸುವ ಜವಾಬ್ದಾರಿ ಇದೆ. ಆದರೆ ವಾಸ್ತವವೆಂದರೆ, ಅಮೆರಿಕವನ್ನು ಹೊರತುಪಡಿಸಿ ಯಾವುದೇ ದೇಶವೂ ಗ್ರೀನ್‌ಲ್ಯಾಂಡ್ ಅನ್ನು ಭದ್ರಪಡಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಅವರು ಹೇಳಿದರು. ಇದೇ ವೇಳೆ ಡೆನ್ಮಾರ್ಕ್ ಜನರ ಮೇಲಿನ ಗೌರವವನ್ನೂ ಟ್ರಂಪ್ ವ್ಯಕ್ತಪಡಿಸಿದರು.
ಇದರ ನಡುವೆ, ತಮ್ಮ ಭಾಷಣದ ಬಳಿಕ ಯುರೋಪಿಯನ್ ಪಾರ್ಲಿಮೆಂಟ್ ಯುರೋಪಿಯನ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತು.
ಒಪ್ಪಂದದ ಭಾಗವಾಗಿ ಅಮೆರಿಕದ ಕೈಗಾರಿಕಾ ಸರಕುಗಳ ಮೇಲಿನ ತೆರಿಗೆಗಳನ್ನು (ಟ್ಯಾರಿಫ್) ತೆರವುಗೊಳಿಸುವ ಕುರಿತು ಮುಂದಿನ ವಾರಗಳಲ್ಲಿ ಮತದಾನ ನಡೆಸಲು ಯುರೋಪಿಯನ್ ಪಾರ್ಲಿಮೆಂಟ್ ಯೋಜನೆ ರೂಪಿಸಿತ್ತು. ಈ ಮತದಾನವು ಯುನೈಟೆಡ್ ಸ್ಟೇಟ್ಸ್ ಜೊತೆಗಿನ ವ್ಯಾಪಾರ ಒಪ್ಪಂದದ ಭಾಗವಾಗಿತ್ತು.