Pahalgam Terror Attack: ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಿಯರು ಗೂಗಲ್‌ನಲ್ಲಿ ಹುಡುಕಿದ್ದು ಏನು ಗೊತ್ತೇ ?
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ವಿಶ್ವದಾದ್ಯಂತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನವೂ ಸೇರಿದಂತೆ ಹಲವಾರು ದೇಶಗಳು ಇದರ ಬೆಳವಣಿಗೆಯ ಬಗ್ಗೆ ಭಾರತದತ್ತ ಕುತೂಹಲದಿಂದ ನೋಡುತ್ತಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನಕ್ಕೆ ಯಾವ ರೀತಿಯಲ್ಲಿ ಚಾಟಿ ಬೀಸುತ್ತದೆ, ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏನು ಮಾಡುತ್ತದೆ ಎನ್ನುವ ಕುತೂಹಲ ಈಗ ಎಲ್ಲರಲ್ಲೂ ಇದೆ. ಈ ನಡುವೆ ಪಾಕಿಸ್ತಾನಿಯರು ಆನ್‌ಲೈನ್ ಮೂಲಕ ಹೆಚ್ಚಾಗಿ ಏನು ಹುಡುಕುತ್ತಿದ್ದಾರೆ ಗೊತ್ತೇ?


ಬೆಂಗಳೂರು: ಜಮ್ಮು ಕಾಶ್ಮೀರದ (jammu kashmir) ಪಹಲ್ಗಾಮ್ (Pahalgam ) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕ ದಾಳಿ (Terrorists Attack) ನಡೆದ ಬಳಿಕ ಪಾಕಿಸ್ತಾನಿಯರು ಆನ್‌ಲೈನ್ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಗಾಗಿ (PM Narendra Modi) ಹೆಚ್ಚಿನ ಹುಡುಕಾಟ ನಡೆಸಿದ್ದಾರೆ ಎಂಬುದನ್ನು ಗೂಗಲ್ ಟ್ರೆಂಡ್ ತೋರಿಸಿದೆ. ಇದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಅವರ ಕಳವಳಗಳನ್ನು ವ್ಯಕ್ತಪಡಿಸಿದೆ. ಪಾಕಿಸ್ತಾನಿಯರು ಹೆಚ್ಚಾಗಿ ಆನ್‌ಲೈನ್ ಮೂಲಕ "ಪಹಲ್ಗಾಮ್ ದಾಳಿ" ಮತ್ತು "ಮೋದಿ" ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ವಿಶ್ವದಾದ್ಯಂತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಾಕಿಸ್ತಾನವೂ ಸೇರಿದಂತೆ ಹಲವಾರು ದೇಶಗಳು ಇದರ ಬೆಳವಣಿಗೆಯ ಬಗ್ಗೆ ಭಾರತದತ್ತ ಕುತೂಹಲದಿಂದ ನೋಡುತ್ತಿದ್ದಾರೆ. ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನಕ್ಕೆ ಯಾವ ರೀತಿಯಲ್ಲಿ ಚಾಟಿ ಬೀಸುತ್ತದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಏನು ಮಾಡುತ್ತದೆ ಎನ್ನುವ ಕುತೂಹಲ ಈಗ ಎಲ್ಲರಲ್ಲೂ ಇದೆ.

ಪಹಲ್ಗಾಮ್ ದಾಳಿಯ ಬಳಿಕ ಆನ್‌ಲೈನ್ ನಲ್ಲಿ ಪರಿಸ್ಥಿತಿಯ ಬಗ್ಗೆ ಆಸಕ್ತಿ, ಕಳವಳ ಮತ್ತು ಊಹಾಪೋಹಗಳು ಹೆಚ್ಚಾಗಿವೆ. ಅಲ್ಲದೇ ಈ ದಾಳಿಯ ಬಳಿಕ ಪಾಕಿಸ್ತಾನದ ಇಂಟರ್ನೆಟ್ ಚಟುವಟಿಕೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಇದನ್ನೂ ಓದಿ: Viral Video: ಬಾಯಲ್ಲಿ ನೀರೂರಿಸುವ 'ಫ್ರೂಟ್ ಐಸ್ ಗೋಲಾ'; ಕ್ಯಾನ್ಸರ್‌ಗೆ ಆಹ್ವಾನ ಎಂದ ನೆಟ್ಟಿಗರು!
ಗೂಗಲ್ ಟ್ರೆಂಡ್ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಬಳಕೆದಾರರು ಪಹಲ್ಗಾಮ್ ದಾಳಿ, ಕಾಶ್ಮೀರ ದಾಳಿ, ಸಿಂಧೂ ಜಲ ಒಪ್ಪಂದ, ಭಾರತೀಯ ವಾಯುಪಡೆ, ಮೋದಿ, ಭಾರತದ ಸೇಡು, ಜಮ್ಮು.. ಮೊದಲಾದವುಗಳನ್ನು ಹೆಚ್ಚಾಗಿ ಹುಡುಕಾಡಿದ್ದಾರೆ. ಅದರಲ್ಲೂ ಪಹಲ್ಗಾಮ್ ಎಂಬ ಕೀವರ್ಡ್ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹುಡುಕಿದ ಮೂರನೇ ಪದವಾಗಿದೆ. ಇವು ಮಾತ್ರವಲ್ಲದೆ ಉಗ್ರರ ದಾಳಿಗೆ ಭಾರತದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಕುರಿತು ಜಾಲಾಡಿದ್ದಾರೆ. ಮೋದಿ ಪಹಲ್ಗಾಮ್ ಪ್ರತಿಕ್ರಿಯೆ ಮತ್ತು ಪಾಕಿಸ್ತಾನ ಸೇನೆಯ ಬಗ್ಗೆ ಭಾರತದ ಸುದ್ದಿ ಕುರಿತಾದ ಹುಡುಕಾಟಗಳೂ ನಡೆದಿವೆ.
ಇದು ಕೇವಲ ಗೂಗಲ್ ನಲ್ಲಿ ಮಾತ್ರ ನಡೆದಿಲ್ಲ, ಟ್ವಿಟ್ಟರ್, ಫೇಸ್ ಬುಕ್, ಯೂಟ್ಯೂಬ್ ನಲ್ಲೂ ಪಹಲ್ಗಾಮ್ ಟೆರರ್ ಅಟ್ಯಾಕ್, ಮೋದಿ ಹೆಸರಿನ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡಿಂಗ್‌ನಲ್ಲಿವೆ. ಹೆಚ್ಚಿನ ಬಳಕೆದಾರರು ದಾಳಿಯ ಬಗ್ಗೆ ಮುಂದೆ ಏನಾಗಬಹುದು ಎನ್ನುವ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ.