Viral Video: ಬಾಯಲ್ಲಿ ನೀರೂರಿಸುವ 'ಫ್ರೂಟ್ ಐಸ್ ಗೋಲಾ'; ಕ್ಯಾನ್ಸರ್‌ಗೆ ಆಹ್ವಾನ ಎಂದ ನೆಟ್ಟಿಗರು!
ರಸ್ತೆ ಬದಿಯ ಮಾರಾಟಗಾರನೊಬ್ಬ ಬಣ್ಣಗಳನ್ನು ಮಿಕ್ಸ್ ಮಾಡಿದ ಹಣ್ಣುಗಳನ್ನು ತಯಾರಿಸಿದ 'ಗೋಲಾ'ದ ವಿಡಿಯೊ ವೈರಲ್(Viral Video) ಆಗಿದೆ. ಗುಜರಾತ್‍ನ ಅಹ್ಮದಾಬಾದ್‍ನ ಫುಡ್ ಸ್ಟ್ರೀಟ್‍ನಲ್ಲಿ ಈ ಖಾದ್ಯವನ್ನು ನೀಡಲಾಗುತ್ತದೆಯಂತೆ. ಇದನ್ನು ಕಂಡು ಕೆಲವು ನೆಟ್ಟಿಗರು ಬಾಯಲ್ಲಿ ನೀರು ಸುರಿಸಿದ್ದಾರೆ.ಆದರೆ ಈ ಬಣ್ಣಗಳಿಂದ ತಯಾರಿಸಿದ ಗೋಲಾ ತಿಂದ್ರೆ ಆರೋಗ್ಯದ ಗತಿಯೇನು ಎಂಬ ಚಿಂತೆ ಕೂಡ ಕಾಡ್ತಿದೆಯಂತೆ!


ಗಾಂಧಿನಗರ: ಸೋಶಿಯಲ್ ಮೀಡಿಯಾ ಎನ್ನುವುದು ಕೆಲವರಿಗೆ ಕ್ರೇಜ್ ಆಗಿಬಿಟ್ಟಿದೆ. ರೀಲ್ಸ್ ಮಾಡುವುದು, ಸ್ಟಂಟ್ಸ್ ಮಾಡುವುದರ ಜೊತೆಗೆ ಅಡುಗೆಯ ವಿಚಿತ್ರವಾದ ವಿಡಿಯೊಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತುತ್ತಿರುತ್ತದೆ. ಕಾಫಿಗೆ ಮ್ಯಾಗಿ ಹಾಕುವುದು, ಚಾಕೋಲೆಟ್‌ಗೆ ಇನ್ಯಾವುದೋ ಪದಾರ್ಥ ಬೆರೆಸುವುದು ಹೀಗೆ ಹತ್ತಾರು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದರಲ್ಲಿ ಕೆಲವೊಂದನ್ನು ನೆಟ್ಟಿಗರು ಇಷ್ಟಪಟ್ಟರೆ ಕೆಲವೊಂದನ್ನು ನೋಡಿ ಅಸಹ್ಯ ಪಟ್ಟಿದ್ದೂ ಇದೆ. ಇದೀಗ ಬೀದಿ ಬದಿಯ ಮಾರಾಟಗಾರನೊಬ್ಬ ತಯಾರಿಸಿದ ಬಣ್ಣದ ಹಣ್ಣುಗಳಿಂದ ತಯಾರಿಸಿದ 'ಐಸ್ ಗೋಲಾ'ದ ವಿಡಿಯೊ ವೈರಲ್(Viral Video) ಆಗಿದೆ. ಗುಜರಾತ್‍ನ ಅಹ್ಮದಾಬಾದ್‍ನ ಫುಡ್‌ಸ್ಟ್ರೀಟ್‍ನಲ್ಲಿ ವ್ಯಾಪಾರಿಯೊಬ್ಬ ತಯಾರಿಸಿದ ಈ ವಿಚಿತ್ರ ಗೋಲಾ ಕಂಡು ನೆಟ್ಟಿಗರು ಆಕರ್ಷಿತರಾದರೂ, ಇದು ಆರೋಗ್ಯದ ಬಗ್ಗೆ ಚಿಂತೆ ಮೂಡಿಸಿದೆಯಂತೆ.
ಏಪ್ರಿಲ್ 9 ರಂದು ಸೋಶಿಯಲ್ ಮೀಡಿಯಾ ಫುಡ್ ವ್ಲಾಗರ್ 'ಫುಡಿಕ್ರು' ಹಂಚಿಕೊಂಡ ಈ ವಿಡಿಯೊ ನೋಡಿ ಆಹಾರ ಪ್ರಿಯರ ಬಾಯಲ್ಲಿ ನೀರೂರಿದೆಯಂತೆ.ಬಣ್ಣ ಬಣ್ಣದ ಸಿರಪ್‌ಗಳ ಜೊತೆ ನೆನೆಸಿದ ಬೆರ್ರಿಗಳಿಂದ ತುಂಬಿದ ಕಂಟೇನರ್‌ನಲ್ಲಿ ದೊಡ್ಡ ಬಿಳಿ ಐಸ್ ಗೋಲಾ ಸ್ಟಿಕ್ ಅನ್ನು ಮುಳುಗಿಸಿದಾಗ ಅದು ಕೆಲವೇ ಸೆಕೆಂಡುಗಳಲ್ಲಿ, ನೇರಳೆ ಬಣ್ಣಕ್ಕೆ ತಿರುಗಿದೆಯಂತೆ. ನಂತರ ಅದನ್ನು ಪೇಪರ್ ಪ್ಲೇಟ್‍ನಲ್ಲಿ ಇಟ್ಟು ಗ್ರಾಹಕರಿಗೆ ನೀಡಲಾಗಿದೆ. ಅದೇ ರೀತಿ ಬಿಳಿ ಐಸ್ ಗೋಲಾ ಸ್ಟಿಕ್ ಅನ್ನು ಹಸಿರು, ನೀಲಿ, ಹಳದಿ ಬಣ್ಣದ ಹಣ್ಣಿನ ಸಿರಪ್‍ನಲ್ಲಿ ಮುಳುಗಿಸಲಾಗಿತ್ತು. ಈ ಸ್ಟಾಲ್‌ನಲ್ಲಿ ಐಸ್ ಗೋಲಾದ ಜೊತೆಗೆ ಮಾವು, ಕಿವಿ, ಬೆರ್ರಿ ಮತ್ತು ದಾಳಿಂಬೆಯಂತಹ ಹಣ್ಣುಗಳನ್ನು ಕೂಡ ನೀಡುತ್ತಾರಂತೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಶೇಷ ಖಾದ್ಯ ಅಹಮದಾಬಾದ್ ಚಂದ್ಖೇಡಾ ಪ್ರದೇಶದ ಒಎನ್ಜಿಸಿ ವೃತ್ತದ ಬಳಿಯ ಗ್ರೇಟ್ ಕಾಶ್ಮೀರ್ ಐಸ್ ಗೋಲಾ ಸ್ಟಾಲ್‍ನಲ್ಲಿ ಸಿಗುತ್ತದೆ ಎಂದು ಫುಡ್ ವ್ಲಾಗರ್ ತಿಳಿಸಿದ್ದಾನೆ. ಅನೇಕರು ಇದನ್ನು ಕಂಡು ಆಕರ್ಷಿತರಾದರೆ, ಇತರರು ಇದರಲ್ಲಿ ಬಳಸಿದ್ದ ಪದಾರ್ಥಗಳನ್ನು ನೋಡಿ ಶಾಕ್ ಆಗಿದ್ದಾರೆ."ಕ್ಯಾನ್ಸರ್ ಕೇವಲ ಒಂದು ತಿಂಗಳ ದೂರದಲ್ಲಿದೆ" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಕೆಲವರು ಖಾದ್ಯದ ಬಗ್ಗೆ ಅಸಹ್ಯಪಟ್ಟು ವಾಕರಿಕೆ ಎಮೋಜಿಗಳಿಂದ ಕಾಮೆಂಟ್ ಮಾಡಿದ್ದಾರೆ. ಆದರೆ ಈ ವಿಡಿಯೊ 50 ಮಿಲಿಯನ್ ವ್ಯೂವ್ಸ್ ಮತ್ತು ಒಂಬತ್ತು ಲಕ್ಷ ಲೈಕ್‍ಗಳನ್ನು ಗಳಿಸಿದೆ.
ಈ ರೀತಿಯ ವಿಚಿತ್ರವಾದ ಆಹಾರಗಳು ವೈರಲ್ ಆಗಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಶಾಂಘೈನ ರೆಸ್ಟೋರೆಂಟ್‍ವೊಂದು ತನ್ನ ವಿಚಿತ್ರ ಸಿಹಿತಿಂಡಿಗಾಗಿ ಸುದ್ದಿಯಾಗಿತ್ತು. ಅದು ಒಣಗಿದ ಆನೆ ಲದ್ದಿಯನ್ನು ತನ್ನ ಸಿಹಿತಿಂಡಿಯಲ್ಲಿ ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ. ಈ ಸಿಹಿ ತಿಂಡಿಯಲ್ಲಿ ಹೂವುಗಳು, ಗಿಡಮೂಲಿಕೆಗಳು ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಲಾಗಿದೆಯಂತೆ. ಈ ಖಾದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವಿವಾದವನ್ನು ಹುಟ್ಟುಹಾಕಿತ್ತು.
ಈ ಸುದ್ದಿಯನ್ನೂ ಓದಿ:Viral Video: ಮಗು ಉಸಿರಾಡೋಕೆ ಒದ್ದಾಡ್ತಿದ್ರೆ ಪಾಪಿ ತಾಯಿ ಮಾಡಿದ್ದೇನು ಗೊತ್ತಾ? ಇಲ್ಲಿದೆ ಶಾಕಿಂಗ್ ವಿಡಿಯೊ
ಫುಡ್ ಬ್ಲಾಗರ್ ಒಬ್ಬ ಶಾಂಘೈನ ಹೊಸ ರೆಸ್ಟೋರೆಂಟ್‍ನ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದನು. ಮತ್ತು ಈ ರೆಸ್ಟೋರೆಂಟ್ ಪರಿಸರ ಸ್ನೇಹಿ ಭಕ್ಷ್ಯಗಳನ್ನು ನೀಡಲು ಹೆಸರುವಾಸಿಯಾಗಿದೆ ಮತ್ತು ಅದೇರೀತಿ ವಿವಿಧ ರೀತಿಯ ಹೊಸ ಭಕ್ಷ್ಯಗಳನ್ನು ನೀಡುತ್ತದೆ ಎಂಬುದಾಗಿ ತಿಳಿಸಿದ್ದನು. ಇವುಗಳಲ್ಲಿ ಮರದ ಎಲೆಗಳು, ಜೇನುತುಪ್ಪದಿಂದ ಲೇಪಿತ ಐಸ್ ಕ್ಯೂಬ್‍ಗಳು ಮತ್ತು ಈಗ ಹೊಚ್ಚ ಹೊಸದಾಗಿ ತಯಾರಿಸಲಾದ ಆನೆಯ ಒಣಗಿದ ಲದ್ದಿಯಿಂದ ತಯಾರಿಸಿದ ಸಿಹಿ ತಿನಿಸು ಸೇರಿವೆ.