ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬ್ರಹ್ಮೋಸ್‌ ಆಟಕ್ಕೆ ಪಾಕಿಸ್ತಾನ ಧ್ವಂಸ; ಆಪರೇಷನ್ ಸಿಂಧೂರ್ ನಿಂದ ಹಾನಿಗೊಳಗಾದ ವಾಯುನೆಲೆಯ ರಿಪೇರಿ ಶುರು ಮಾಡಿದ ಪಾಕ್‌!

ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಭೋಲಾರಿ ಏರ್‌ಬೇಸ್‌ನಲ್ಲಿದ್ದ ಮುನ್ನೆಚ್ಚರಿಕೆ ಎಚ್ಚರಿಕಾ ವಿಮಾನ lನಾಶವಾದ ನಂತರ, ಆ ವಿಮಾನ ಇರಿಸಿದ್ದ ಹ್ಯಾಂಗರ್‌ನ ಮೇಲ್ಚಾವಣಿಯನ್ನು ಪಾಕಿಸ್ತಾನ ತೆರವುಗೊಳಿಸಿದೆ ಎಂಬ ವರದಿಗಳು ಹೊರಬಂದಿವೆ. ಈ ಬೆಳವಣಿಗೆ ದಾಳಿಯ ಹಾನಿ ಪ್ರಮಾಣ ಹಾಗೂ ಸೇನಾ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಆಪರೇಷನ್‌ ಸಿಂದೂರ್‌ನಿಂದ ಹಾನಿಗೊಳಗಾದ ವಾಯುನೆಲೆ ರಿಪೇರಿ ಶುರು ಮಾಡಿದ ಪಾಕ್‌

ಘಟನೆಯ ದೃಶ್ಯ -

Profile
Sushmitha Jain Feb 9, 2026 12:28 PM

ಇಸ್ಲಾಮಾಬಾದ್‌: 2025ರ ಮೇ 10ರಂದು ಭಾರತೀಯ ವಾಯುಪಡೆ (IAF) ನಡೆಸಿದ ಭೀಕರ ದಾಳಿಯಲ್ಲಿ ಧ್ವಂಸಗೊಂಡಿದ್ದ ಭೋಲಾರಿ ವಾಯುನೆಲೆಯ (Bholari Airbase) ಹ್ಯಾಂಗರ್ ಅನ್ನು ಪಾಕಿಸ್ತಾನವು (Pakistan) ಪುನರ್ನಿರ್ಮಿಸಲು ಅಥವಾ ದುರಸ್ತಿ ಮಾಡಲು ಸಿದ್ಧತೆ ನಡೆಸುತ್ತಿದೆ. ಉಪಗ್ರಹ ಚಿತ್ರಗಳ ಪ್ರಕಾರ, ಹಾನಿಗೊಳಗಾದ ಹ್ಯಾಂಗರ್‌ನ ಹಸಿರು ಬಣ್ಣದ ಮೇಲ್ಛಾವಣಿಯನ್ನು ಈಗ ತೆರವುಗೊಳಿಸಲಾಗುತ್ತಿದೆ.

ಮೇ 9ರಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ, ಪಾಕಿಸ್ತಾನವು ಭಾರತದ ಮೇಲೆ ದೊಡ್ಡ ಮಟ್ಟದ ದಾಳಿಗೆ ಸಂಚು ರೂಪಿಸುತ್ತಿದೆ ಎಂಬ ಗುಪ್ತಚರ ಮಾಹಿತಿಯನ್ನು ನೀಡಿದ್ದರು. "ಪಾಕಿಸ್ತಾನ ಅಂತಹ ದಾಳಿಗೆ ಮುಂದಾದರೆ ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದರು.

ಇದರ ಬೆನ್ನಲ್ಲೇ ಭಾರತವು 'ಆಪರೇಷನ್ ಸಿಂಧೂರ್' ಆರಂಭಿಸಿ ಮೇ 10ರಂದು ಬೆಳಗಿನ 2ರಿಂದ 5 ಗಂಟೆಯ ನಡುವೆ ಪಾಕಿಸ್ತಾನದ ಚಕ್ಲಾಲಾ, ರಹಾವಾಲಿ, ರಫೀಕಿ, ರಹೀಂ ಯಾರ್ ಖಾನ್, ಸುಕ್ಕರ್, ಮುರಿದ್ ಮತ್ತು ನಾಯಾಚೋರ್ ಸೇರಿದಂತೆ ಸುಮಾರು 10 ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು.ಬೆಳಿಗ್ಗೆ 10ರಿಂದ 12ರ ನಡುವೆ, ಸರ್ಗೋಧಾ, ಭೋಲಾರಿ ಮತ್ತು ಜೇಕಬ್‌ಆಬಾದ್ ವಾಯುನೆಲೆಯ ಮೇಲೆ ಭಾರತ ಕ್ಷಿಪಣಿ ದಾಳಿ ನಡೆದಿದೆ. ಈ ವೇಳೆ ಪಾಕಿಸ್ತಾನದ ಅತ್ಯಾಧುನಿಕ 'ಏರ್-ಬೋರ್ನ್ ಅರ್ಲಿ ವಾರ್ನಿಂಗ್' (AEW&C) ವಿಮಾನವನ್ನು ಭಾರತ ಧ್ವಂಸಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ದುರಸ್ತಿ ಕಾರ್ಯ

'ವ್ಯಾಂಟರ್' (Vantor) ಬಿಡುಗಡೆ ಮಾಡಿದ ಜನವರಿ 28ರ ಉಪಗ್ರಹ ಚಿತ್ರಗಳು, ಪಾಕಿಸ್ತಾನವು ಹಾನಿಗೊಳಗಾದ ಕಟ್ಟಡದ ಚಾವಣಿಯನ್ನು ಕಿತ್ತುಹಾಕುತ್ತಿರುವುದನ್ನು ತೋರಿಸಿವೆ. ಇದೇ ರೀತಿಯ ದುರಸ್ತಿ ಕಾರ್ಯಗಳು ಮುರಿದ್, ಸುಕ್ಕೂರ್ ಮತ್ತು ನೂರ್ ಖಾನ್ ವಾಯುನೆಲೆಗಳಲ್ಲೂ ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ.

ಮುಸ್ಲಿಮರಿಗೆ ಬಂದೂಕು ತೋರಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಡಿಯೊ ವೈರಲ್; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ದಾಳಿಯ ಕೇವಲ ನಾಲ್ಕು ಗಂಟೆಗಳ ನಂತರ, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು (DGMO) ಭಾರತದ DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯಿ ಅವರೊಂದಿಗೆ ಹಾಟ್‌ಲೈನ್ ಮೂಲಕ ಮಾತುಕತೆ ನಡೆಸಿ, ತಕ್ಷಣದ ಕದನ ವಿರಾಮಕ್ಕೆ (Ceasefire) ವಿನಂತಿಸಿದ್ದರು ಎಂದು ವರದಿಗಳು ಹೇಳಿವೆ. ಈ ಸಂಘರ್ಷದಲ್ಲಿ ಭೋಲಾರಿ ನೆಲೆಯಲ್ಲಿ ಒರ್ವ ಅಧಿಕಾರಿ ಸೇರಿದಂತೆ ಆರು ಪಾಕಿಸ್ತಾನಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಖಚಿತಪಡಿಸಿದ್ದಾರೆ.

ಭೋಲಾರಿಯ ಮೇಲೆ ಯಾವ ಆಯುಧ ಬಳಸಲಾಯಿತು ಎಂಬುದನ್ನು IAF ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಈ ಕಾರ್ಯಾಚರಣೆಯಲ್ಲಿ ಭಾರತವು ರಾಫೆಲ್ ಯುದ್ಧ ವಿಮಾನಗಳಿಂದ 'ಸ್ಕಾಲ್ಪ್' (SCALP) ಕ್ಷಿಪಣಿಗಳು, ಸುಖೋಯ್-30 ರಿಂದ 'ರಾಂಪೇಜ್' ಮತ್ತು 'ಬ್ರಹ್ಮೋಸ್' ಕ್ಷಿಪಣಿಗಳು ಹಾಗೂ ಮಿರಾಜ್-2000 ವಿಮಾನಗಳನ್ನು ಬಳಸಿದೆ ಎಂದು ವರದಿಯಾಗಿದೆ.

ಆಪರೇಷನ್ ಸಿಂಧೂರ್ ಆರಂಭವಾಗಿ 88 ಗಂಟೆಗಳ ಕಾಲ ನಡೆದ ಸುದೀರ್ಘ ಸಂಘರ್ಷದ ನಂತರ ಕದನ ವಿರಾಮ ಘೋಷಣೆಯಾಯಿತು. ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮುರಾದ್ ಅಲಿ ಶಾ ಅವರು ಹೇಳಿಕೆಯಲ್ಲಿ, ಭೋಲಾರಿಯ ಮೇಲಿನ ದಾಳಿಯಲ್ಲಿ ಒಬ್ಬ ಅಧಿಕಾರಿ ಸೇರಿ ಆರು ಪಾಕಿಸ್ತಾನ ವಾಯುಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.

ಸದ್ಯ ಪಾಕಿಸ್ತಾನದ ವಿವಿಧ ವಾಯು ನೆಲೆಗಳಲ್ಲಿ ಧ್ವಂಸಗೊಂಡ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸಿ, ಪುನರ್ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ.