ಆರ್‌ಎಸ್‌ಎಸ್ ಯುವಕರ ವಿಶ್ವಾಸ ಹೆಚ್ಚಿಸುತ್ತದೆ: ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್
ಭಾರತೀಯ ಯುವಕರಲ್ಲಿ ಅಚಲ ವಿಶ್ವಾಸವಿದೆ. ಭಾರತದಲ್ಲಿ ವಸಾಹತುಶಾಹಿ ಚಿಂತನೆಗಳು ಇನ್ನೂ ಇವೆ. ಇದನ್ನು ಜಯಿಸಲು ಆರ್‌ಎಸ್‌ಎಸ್ ಯುವಕರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ನ್ಯೂಯಾರ್ಕ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಅವರು ಉದ್ಯಮ ಮುಖಂಡರು ಮತ್ತು ಕಾರ್ಯನಿರ್ವಾಹಕರೊಂದಿಗೆ ಮಾತನಾಡಿದರು.
ಸಂಗ್ರಹ ಚಿತ್ರ -
ನ್ಯೂಯಾರ್ಕ್: ಮೋಹನ್ ಭಾಗವತ್ (rss chief Mohan Bhagwat) ಅವರು ಭಾರತೀಯ ಯುವಕರ ಬಗ್ಗೆ ಪಕ್ಷಪಾತಿಯಾಗಿದ್ದರೆ ಎಂದು ಭಾರತೀಯ-ಅಮೆರಿಕನ್ ಉದ್ಯಮಿ ಆಶಾ ಜಡೇಜಾ ಮೋಟ್ವಾನಿ (Indian-American venture capitalist Asha Jadeja Motwani) ಹೇಳಿದರು. ಅವರು ನ್ಯೂಯಾರ್ಕ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಮೋಹನ್ ಭಾಗವತ್ ಅವರು ಭಾರತೀಯ ಯುವಕರಲ್ಲಿ ಅಚಲ ವಿಶ್ವಾಸವಿದೆ. ಭಾರತದಲ್ಲಿ ವಸಾಹತುಶಾಹಿ ಚಿಂತನೆಗಳು ಇನ್ನೂ ಇವೆ. ಇದನ್ನು ಜಯಿಸಲು ಆರ್‌ಎಸ್‌ಎಸ್ ಯುವಕರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ ಎಂದರು.
ನ್ಯೂಯಾರ್ಕ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಉದ್ಯಮ ಮುಖಂಡರು ಮತ್ತು ಕಾರ್ಯನಿರ್ವಾಹಕರನ್ನು ಭೇಟಿಯಾದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಯುಎಸ್ ಮತ್ತು ಭಾರತ ಸಂಬಂಧಗಳಲ್ಲಿ ನಂಬಿಕೆ ಇರುವುದಾಗಿ ಹೇಳಿದರು ಎಂದು ಭಾರತೀಯ-ಅಮೆರಿಕನ್ ಉದ್ಯಮ ಬಂಡವಾಳಶಾಹಿ ಆಶಾ ಜಡೇಜಾ ಮೋಟ್ವಾನಿ ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಮೆರವಣಿಗೆಯಲ್ಲಿ ಭಾಗವಹಿಸಿದ ಶಿಕ್ಷಕರ ಅಮಾನತು: ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ಆರ್‌ಎಸ್‌ಎಸ್‌ನ ಶತಮಾನೋತ್ಸವದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಮೂರು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಮೋಹನ್ ಭಾಗವತ್ ಸಭೆಯಲ್ಲಿ ಬಾಹ್ಯಾಕಾಶ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಿಂದ ಭಾರತದ ಭವಿಷ್ಯದವರೆಗೆ ಹಲವಾರು ವಿಷಯಗಳ ಕುರಿತು ಮಾತನಾಡಿದರು ಎಂದು ಮೋಟ್ವಾನಿ ಹೇಳಿದರು.
Mohan Bhagwat blew our socks off in New York. As head of India’s largest volunteer organization RSS, the man knows the pulse of India at the grassroots level like no one else. He was exceptionally bullish on the US India relationship and on the resilience of Indian youth to… pic.twitter.com/JF5dOwg2Lt
— Asha Jadeja Motwani (@ashajadeja) August 28, 2026
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ ಮೋಟ್ವಾನಿ, ಭಾರತದ ತಾಂತ್ರಿಕ ಮತ್ತು ಆರ್ಥಿಕ ಪಥದ ಕುರಿತು ಭಾಗವತ್ ಅವರು ತಮ್ಮ ದೃಷ್ಟಿಕೋನಗಳ ಬಗ್ಗೆ ತಿಳಿಸಿದರು ಎಂದರು.
ಯುವಕರ ಬಗ್ಗೆ ಭಾಗವತ್ ಅವರ ಮನೋಭಾವವನ್ನು ಶ್ಲಾಘಿಸಿದ ಮೋಟ್ವಾನಿ, ಅವರು ಭಾರತೀಯ ಯುವಕರ ಬಗ್ಗೆ ಅಚಲ ವಿಶ್ವಾಸ ಹೊಂದಿದ್ದಾರೆ. ಭಾರತೀಯ ಯುವಕರು ಅಭೂತಪೂರ್ವ ರೀತಿಯಲ್ಲಿ ಬದಲಾವಣೆಯನ್ನು ತರುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು ಎಂದರು.
ಶಾಲಾ ಮಕ್ಕಳೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ: ಹೈ-ಫೈವ್, ನಗು, ಸಂಭ್ರಮದ ಕ್ಷಣ ವೈರಲ್
ಮೋಹನ್ ಭಾಗವಂತ್ ಅವರು ಆಗಸ್ಟ್ 29ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್ ವತಿಯಿಂದ ನಡೆಯಲಿರುವ 'ಸಾರ್ವತ್ರಿಕ ಏಕತೆ ಆಚರಣೆ'ಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತೀಯ ವಲಸೆಗಾರರು ಮತ್ತು ಇತರ ಸಮುದಾಯಗಳ ಸುಮಾರು 6,000 ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.