ದಕ್ಷಿಣ ಆಫ್ರಿಕಾಕ್ಕೆ ಅಡಿಗಾಸ್ ಯಾತ್ರಾ ಸೊಬಗಿನ ಯಾತ್ರೆ
Adigas Yatra: ದಕ್ಷಿಣ ಆಫ್ರಿಕಾ ಎಂದರೆ ಪ್ರಕೃತಿ ಸೌಂದರ್ಯ ಕಣ್ಣಮುಂದೆ ಬರುತ್ತದೆ. ಇಲ್ಲಿನ ವನ್ಯಜೀವಿ ಸಂಪತ್ತು ಮತ್ತು ಶ್ರೀಮಂತ ಸಂಸ್ಕೃತಿಯಿಂದಲೂ ಜಾಗತಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿಗೆ ಪ್ರವಾಸ ಹೋಗಬೇಕು ಎನ್ನುವುದು ಎಲ್ಲರ ಕನಸು. ಅಡಿಗಾಸ್ ಯಾತ್ರಾದಿಂದ ಈ ಕನಸು ಸುಲಭವಾಗಿ ನೆರವೇರುತ್ತದೆ. ಈ ಕುರಿತಾದ ವಿವರ ಇಲ್ಲಿದೆ.
ಸಾಂದರ್ಭಿಕ ಚಿತ್ರ -
ದಕ್ಷಿಣ ಆಫ್ರಿಕಾ ಎಂದರೆ ಆಫ್ರಿಕಾ ಖಂಡದ ದಕ್ಷಿಣದ ತುತ್ತ ತುದಿಯಲ್ಲಿರುವ, ವರ್ಣರಂಜಿತ ಪ್ರಕೃತಿ ಸೌಂದರ್ಯವಿರುವ ರಾಷ್ಟ್ರ. ಇಲ್ಲಿನ ವನ್ಯಜೀವಿ ಸಂಪತ್ತು ಮತ್ತು ಶ್ರೀಮಂತ ಸಂಸ್ಕೃತಿಯಿಂದಲೂ ಜಾಗತಿಕ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಇದನ್ನು ಕಾಮನಬಿಲ್ಲಿನ ದೇಶ ಅಥವಾ ರೈನ್‌ಬೊ ನೇಶನ್ ಎಂದೂ ಕರೆಯಲಾಗುತ್ತದೆ. ಕನ್ನಡಿಗರು ತಪ್ಪದೇ ದಕ್ಷಿಣ ಆಫ್ರಿಕಾವನ್ನು (South Africa Tour) ನೋಡಬೇಕು. ಅಡಿಗಾಸ್ ಯಾತ್ರಾದಲ್ಲಿ (Adigas Yatra) ಜೊಹಾನ್ಸ್ ಬರ್ಗ್‌ನಿಂದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತದೆ. ನೀವು ಸನ್ ಸಿಟಿ, ಪಿಲಾನ್ಸ್ ಬರ್ಗ್, ಮಹುಲಾ, ಜಾರ್ಜ್, ಮೋಸಲ್ ಬೇ, ಕೇಪ್ ಟೌನ್, ಟೇಬಲ್ ಮೌಂಟೇನ್, ಹೌಟ್ ಬೇ, ಸೀಲ್ ಐಲೆಂಡ್, ಚಾಪ್‌ಮಾನ್ಸ್, ಪೀಕ್ ಡ್ರೈವ್, ಬೌಲ್ಡರ್ಸ್ ಬೀಚ್ ಮೊದಲಾದ ಸುಂದರ ಪ್ರವಾಸಿ ತಾಣಗಳಲ್ಲಿ ಮೋಜು-ಮಸ್ತಿ ಅನುಭವಿಸಬಹುದು.
ಕೇಪ್ ಟೌನ್‌ನಲ್ಲಿ ಹೆಲಿಕಾಪ್ಟರ್ ಸವಾರಿ ನಿಮ್ಮನ್ನು ಬೇರೆಯೇ ರೋಮಾಂಚಕ ಲೋಕಕ್ಕೆ ಕರೆದೊಯ್ಯುತ್ತದೆ. ಹವಾಮಾನ ಚೆನ್ನಾಗಿದ್ದರೆ ಟೇಬಲ್ ಮೌಂಟೇನ್ ಕೇಬಲ್ ಕಾರ್‌ನಲ್ಲೂ ವಿಹರಿಸಬಹುದು. ಕೇಪ್ ಟೌನ್‌ನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಕೇಪ್ ಆಫ್ ಗುಡ್ ಹೋಪ್‌ನಲ್ಲಿ ಅದ್ಭುತವಾದ ನಿಸರ್ಗವನ್ನು ಕಾಣಬಹುದು ಹಾಗೂ ಫೋಟೊ ಸ್ಟಾಪ್‌ನಲ್ಲಿ ಚೆಂದದ ಚಿತ್ರಗಳನ್ನು ಕ್ಲಿಕ್ಕಿಸಬಹುದು. ಭೂಗೋಳ ಮತ್ತು ಇತಿಹಾಸದಲ್ಲಿ ವಿಶೇಷ ಸ್ಥಾನಮಾನವಿರುವ ಅಟ್ಲಾಂಟಿಕ್ ಕರಾವಳಿಯಲ್ಲಿರುವ ಭೂ ಶಿರ ಇದಾಗಿದೆ. ಆರಂಭದಲ್ಲಿ ಇಲ್ಲಿನ ಬಿರುಗಾಳಿ ಮತ್ತು ರುದ್ರರಮಣೀಯ ಹವಾಮಾನ ಕಂಡು "ಕೇಪ್ ಆಫ್ ಸ್ಟೋರ್ಮ್ಸ್ʼ ಎಂಬ ಹೆಸರಿಡಲಾಗಿತ್ತು. ಆದರೆ ನಂತರ ಪೋರ್ಚುಗಲ್‌ನ ಅನ್ವೇಷಕರಿಗೆ ಈ ಮಾರ್ಗದ ಮೂಲಕ ಭಾರತವನ್ನು ತಲುಪಬಹುದು ಎಂಬ ಭರವಸೆ ಮೂಡಿದ್ದರಿಂದ "ಕೇಪ್ ಆಫ್ ಗುಡ್ ಹೋಪ್ʼ ಎಂಬ ಹೆಸರಿಡಲಾಯಿತು!

3 ಲಕ್ಷ ಜನರಿಗೆ ಪ್ರವಾಸ; ಅಡಿಗಾಸ್ ಯಾತ್ರಾಗೆ ಸಭಾಪತಿ ಹೊರಟ್ಟಿ ಪ್ರಶಂಸೆ
ಅಂದಹಾಗೆ ದಕ್ಷಿಣ ಆಫ್ರಿಕಾದ ಬಿಲ್ಡರ್ಸ್ ಬೀಚಿನಲ್ಲಿ ಮುದ್ದಾದ ಪೆಂಗ್ವಿನ್‌ಗಳನ್ನು ಕಂಡು ಆನಂದಿಸಬಹುದು. ಹೌಟ್ ಬೇನಲ್ಲಿ ದೋಣಿ ವಿಹಾರದ ಆಹ್ಲಾದಕರ ಅನುಭವ ನಿಮ್ಮದಾಗುತ್ತದೆ. ಕೇಪ್ ಟೌನ್ ನಗರದ ಸುತ್ತಾಟ ಕೂಡ ವಿಶಿಷ್ಟವಾಗಿರುತ್ತದೆ. ಕ್ಯಾನಲ್ ವಾಕ್ ಮಾಲ್, ಕ್ಯಾಂಗೋ ಕೇವ್ಸ್, ಕ್ಯಾಂಗೊ ಆಸ್ಟ್ರಿಚ್ ಪಕ್ಷಿಗಳ ಫಾರ್ಮ್, ಕಾಂಗೊ ವೈಲ್ಡ್ ಲೈಫ್ ಟೂರ್, ಪಿಲಾನ್ಸ್ ಬರ್ಗ್ ಗೇಮ್ ಡ್ರೈವ್, ನ್ಯಾಶನಲ್ ಪಾರ್ಕ್ ಸಂಚಾರ ಹೀಗೆ ವೈವಿಧ್ಯಮಯ ಪ್ರವಾಸ ನಮ್ಮ ಮೈಮನಗಳನ್ನು ತಣಿಸುತ್ತದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐತಿಹಾಸಿಕ ನಂಟು ಅತ್ಯಂತ ಆಳವಾದದ್ದು ಮತ್ತು ವಿಶೇಷವಾದದ್ದು. ಬ್ರಿಟಿಷ್ ವಸಾಹತುಶಾಹಿ ಆಡಳಿತ, ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ ಮತ್ತು ವರ್ಣಭೇದ ನೀತಿಯ ವಿರುದ್ಧದ ಜಂಟಿ ಹೋರಾಟಗಳು ಎರಡೂ ದೇಶಗಳನ್ನು ಭಾವುಕವಾಗಿ ಮತ್ತು ರಾಜತಾಂತ್ರಿಕವಾಗಿ ಒಂದುಗೂಡಿಸಿವೆ. ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ ಭಾರತವು 1990ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ಕ್ರಿಕೆಟ್ ಮೈದಾನದಲ್ಲೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪೈಪೋಟಿ ಜಗತ್ಪ್ರಸಿದ್ಧವಾಗಿದೆ. ಭಾರತೀಯರೆಂದರೆ ದಕ್ಷಿಣ ಆಫ್ರಿಕನ್ನರಿಗೆ ವಿಶೇಷ ಪ್ರೀತಿ ಮತ್ತು ಗೌರವಾದರ ಇದೆ.
ಅಡಿಗಾಸ್ ಯಾತ್ರಾದ ವಿಶೇಷತೆ ಏನೆಂದರೆ, ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಡುವುದು. 4 ಸ್ಟಾರ್ ಹೊಟೇಲ್‌ಗಳಲ್ಲಿ ವಸತಿ, ಭಾರತೀಯ - ಅಂತಾರಾಷ್ಟ್ರೀಯ ಭೋಜನ, ಎಂಟ್ರಿ ಟಿಕೆಟ್, ಸ್ಥಳೀಯ ಪರ್ಮಿಟ್, ಟ್ಯಾಕ್ಸ್, ವಿಮೆ, ವೀಸಾ ವ್ಯವಸ್ಥೆ ಸೇರಿದಂತೆ ಸಮಗ್ರ ಅನುಕೂಲಗಳನ್ನು ಒದಗಿಸ ಲಾಗುವುದೆಂದು ಸಂಸ್ಥಾಪಕ ಕೆ. ನಾಗರಾಜ ಅಡಿಗ ತಿಳಿಸಿದ್ದಾರೆ. ಹೀಗಾಗಿ ನೆಮ್ಮದಿಯಿಂದ ಪ್ರವಾಸದ ಅದ್ಭುತ ಅನುಭವ ನಿಮ್ಮದಾಗುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗೆ ಕೂಡಲೇ ಅಡಿಗಾಸ್ ಯಾತ್ರಾವನ್ನು ಸಂಪರ್ಕಿಸಿ: 080-26616678/ 7022259008/ 9449478944. website: www.adigasyatra.com