ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಡಿಗಾಸ್‌ನಿಂದ ಬಂಪರ್‌ ಕೊಡುಗೆ, ಪ್ರವಾಸಿಗರಿಗೆ ಭಾರಿ ಡಿಸ್ಕೌಂಟ್‌; ವಿದೇಶಿ ಪ್ರವಾಸಗಳಲ್ಲಿ20,000 ರುಪಾಯಿವರೆಗೆ ದರ ಕಡಿತ!

Adigas Yatra: ರಾಜ್ಯದ ಪ್ರತಿಷ್ಠಿತ ಟ್ರಾವೆಲ್‌ ಸಂಸ್ಥೆ ಅಡಿಗಾಸ್‌ ಯಾತ್ರಾ ಇದೀಗ ತನ್ನ ಪ್ರವಾಸಿಗರಿಗೆ ಬಂಪರ್‌ ರಿಯಾಯಿತಿಯ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಅಂತಾರಾಷ್ಟ್ರೀಯ ಪ್ರವಾಸಗಳ ದರಗಳಲ್ಲಿ ಭಾರಿ ರಿಯಾಯಿತಿ ಪ್ರಕಟಿಸಿದೆ. ಸಂಸ್ಥೆಯ ʼನಮ್ಮ ಗ್ಯಾರಂಟಿʼ ಯೋಜನೆಯ ಅಡಿಯಲ್ಲಿ, ಎಲ್ಲ ವಿದೇಶಿ ಪ್ರವಾಸಗಳಿಗೆ 2,000 ರುಪಾಯಿಯಿಂದ ಗರಿಷ್ಠ 20,000 ರುಪಾಯಿಗಳವರೆಗೆ ಡಿಸ್ಕೌಂಟ್‌ ಪಡೆಯಬಹುದು.

ಅಡಿಗಾಸ್‌ನಿಂದ ಬಂಪರ್‌ ಕೊಡುಗೆ, ಪ್ರವಾಸಿಗರಿಗೆ ಭಾರಿ ಡಿಸ್ಕೌಂಟ್‌

ಸಾಂದರ್ಭಿಕ ಚಿತ್ರ ಮತ್ತು ಅಡಿಗಾಸ್‌ ಯಾತ್ರ ಲೋಗೊ -

Ramesh Ballamoole
Ramesh Ballamoole May 1, 2026 5:58 PM

ಬೆಂಗಳೂರು, ಮೇ 2: ರಾಜ್ಯದ ಪ್ರತಿಷ್ಠಿತ ಟ್ರಾವೆಲ್‌ ಸಂಸ್ಥೆ ಅಡಿಗಾಸ್‌ ಯಾತ್ರಾ (Adigas Yatra) ಇದೀಗ ತನ್ನ ಪ್ರವಾಸಿಗರಿಗೆ ಬಂಪರ್‌ ರಿಯಾಯಿತಿಯ ವಿಶೇಷ ಕೊಡುಗೆಯನ್ನು ಘೋಷಿಸಿದೆ. ವಿದೇಶ ಪ್ರವಾಸದಲ್ಲಿ ಅದ್ದೂರಿ, ಅತ್ಯಾಧುನಿಕ ಸೌಲಭ್ಯಗಳು, ಪುಷ್ಕಳ ಊಟೋಪಚಾರ ಮತ್ತು ಅದ್ಭುತ ಪ್ರವಾಸಿ ಅನುಭವವನ್ನು ಕಟ್ಟಿಕೊಡುವುದರಲ್ಲಿ ಸದಾ ಮುಂದಿರುವ ಅಡಿಗಾಸ್‌ ಯಾತ್ರಾ, ತನ್ನ ಅಂತಾರಾಷ್ಟ್ರೀಯ ಪ್ರವಾಸಗಳ ದರಗಳಲ್ಲಿ ಭಾರಿ ರಿಯಾಯಿತಿ ಪ್ರಕಟಿಸಿದೆ.

ಸಂಸ್ಥೆಯ ʼನಮ್ಮ ಗ್ಯಾರಂಟಿʼ ಯೋಜನೆಯ ಅಡಿಯಲ್ಲಿ, ಎಲ್ಲ ವಿದೇಶಿ ಪ್ರವಾಸಗಳಿಗೆ 2,000 ರುಪಾಯಿಯಿಂದ ಗರಿಷ್ಠ 20,000 ರುಪಾಯಿಗಳವರೆಗೆ ಡಿಸ್ಕೌಂಟ್‌ ದರದ ಅನುಕೂಲವನ್ನು ಪಡೆಯಬಹುದು.

ಒಂದು ವೇಳೆ ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಗರಿಷ್ಟ ಡಿಸ್ಕೌಂಟ್‌ ಅನ್ನು ಬಳಸದಿದ್ದರೆ, ದೇಶೀಯ ಪ್ರವಾಸದಲ್ಲಿ ಅದರ ಜತೆಗೆ 5,000 ರುಪಾಯಿಗಳ ಹೆಚ್ಚುವರಿ ಕೊಡುಗೆಯನ್ನೂ ಯಾವುದೇ ಸ್ವದೇಶಿ ಅಥವಾ ವಿದೇಶಿ ಪ್ರವಾಸಗಳಲ್ಲಿ ರಿಯಾಯತಿ ಪಡೆಯಬಹುದು! ಅಡಿಗಾಸ್‌ ಯಾತ್ರಾ ಸೀಮಿತ ಅವಧಿಗೆ ಈ ಕೊಡುಗೆಯನ್ನು ನೀಡುತ್ತಿದ್ದು, ಕೂಡಲೇ ಇದರ ಪ್ರಯೋಜನವನ್ನು ಪಡೆಯುವಂತೆ ಸಂಸ್ಥೆಯ ಸ್ಥಾಪಕರಾದ ಕೆ. ನಾಗರಾಜ ಅಡಿಗ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ.

ಅಡಿಗಾಸ್‌ ಯಾತ್ರಾದಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆ ಕುರಿತ ಮಾಹಿತಿ ಇಲ್ಲಿದೆ

"ಕಳೆದೊಂದು ವರ್ಷದಿಂದೀಚೆಗೆ ನಾನಾ ಜಾಗತಿಕ ಬಿಕ್ಕಟ್ಟು, ರುಪಾಯಿ ಮೌಲ್ಯ ಕುಸಿತ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಇರಾನ್-‌ ಅಮೆರಿಕ ಯುದ್ಧ ಸೇರಿ ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ದುಬಾರಿಯಾಗಿದೆ. ಹೀಗಿದ್ದರೂ, ಪ್ರವಾಸಿಗರಿಗೆ ದೇಶ-ವಿದೇಶಗಳ ಸಂದರ್ಶನ, ಮೋಜು-ಮಸ್ತಿಯ ಸಮೃದ್ಧ ಅನುಭವಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಡಿಗಾಸ್‌ ಯಾತ್ರಾ ಈ ವಿಶೇಷ ಡಿಸ್ಕೌಂಟ್‌ ಆಫರ್‌ ಅನ್ನು ನೀಡುತ್ತಿದೆ. ಸೀಮಿತ ಅವಧಿಗೆ ಲಭ್ಯವಿರುವ ಈ ಕೊಡುಗೆಯನ್ನು ಪ್ರವಾಸಿಗರು ಬಳಸಿಕೊಳ್ಳಬೇಕುʼʼ ಎಂದು ಕೆ. ನಾಗರಾಜ ಅಡಿಗ ತಿಳಿಸಿದ್ದಾರೆ.

Muktinatha

ಯಾವೆಲ್ಲ ದೇಶಗಳಿಗೆ ಆಫರ್‌ ಲಭ್ಯ?

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್, ಯುರೋಪ್‌, ಸಿಂಗಾಪೂರ, ಮಲೇಷ್ಯ, ಥಾಯ್ಲೆಂಡ್‌, ಸೌತ್‌ ಆಫ್ರಿಕಾ, ವಿಯೆಟ್ನಾಂ, ಕಾಂಬೋಡಿಯಾ, ಬಾಲಿ, ಶ್ರೀಲಂಕಾ, ನೇಪಾಳ-ಮುಕ್ತಿನಾಥ, ಕೈಲಾಸ ಮಾನಸ ಸರೋವರ ಯಾತ್ರಾಗೆ ರಿಯಾಯಿತಿಯ ಪ್ರಯೋಜನವನ್ನು ಪಡೆಯಬಹುದು.

"ಅಡಿಗಾಸ್‌ ಯಾತ್ರಾ ಈ ಹಿಂದಿನಿಂದಲೂ ಪ್ರವಾಸಿಗರಿಗೆ ಒದಗಿಸುವ ಸೇವೆಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡುವುದಿಲ್ಲ. ಪ್ರವಾಸಿಗರೇ ಪ್ರಭುಗಳುʼʼ ಎನ್ನುತ್ತಾರೆ ನಾಗರಾಜ ಅಡಿಗ. ವಿದೇಶಿ ಪ್ರವಾಸದಲ್ಲಿ ವೈಭವಯುತ ತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ, ಶ್ರೇಷ್ಠ ಮತ್ತು ವೈವಿಧ್ಯಮಯ ಊಟೋಪಚಾರಗಳು, ವಿಶ್ವವಿಖ್ಯಾತ ತಾಣಗಳಲ್ಲಿ ಪ್ರವಾಸಿ ಟಿಕೆಟ್‌ ದುಬಾರಿಯಾಗಿದ್ದರೂ, ಬಿಡದೆ ಪ್ರವಾಸಿಗರಿಗೆ ಒದಗಿಸಿ ಅದ್ಭುತ ಪ್ರವಾಸದ ಅನುಭವಗಳನ್ನು ಕಟ್ಟಿಕೊಡುವುದರಲ್ಲಿ ಅಡಿಗಾಸ್‌ ಯಾತ್ರಾ ಮನೆಮಾತಾಗಿದೆ. ಹಾಗಿದ್ದರೆ ಈಗಲೇ ತ್ವರೆ ಮಾಡಿ, ಭಾರಿ ಡಿಸ್ಕೌಂಟ್‌ ಆಫರ್‌ ನಿಮ್ಮದಾಗಿಸಿ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ; ಅಡಿಗಾಸ್‌ ಸಂಸ್ಥೆಯಿಂದ ವಿಶೇಷ ತರಬೇತಿ!

ಹೆಚ್ಚಿನ ಮಾಹಿತಿಗೆ ನೇರವಾಗಿ ನಮ್ಮ ಎಲ್ಲ ಕಚೇರಿಗಳನ್ನು ಅಥವಾ ದೂರವಾಣಿ ಸಂಖ್ಯೆ 080-26616678 / 7022259008 / 9449478944ಕ್ಕೆ ಸಂಪರ್ಕಿಸಿ ಅಥವಾ ನಮ್ಮ ವೆಬ್‌ಸೈಟ್‌ ವಿಳಾಸ: www. adigasyatra.com ಸಂದರ್ಶಿಸಬೇಕೆಂದು ವ್ಯವಸ್ಥಾಪಕಿ ಆಶಾ ಎನ್. ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.