ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೋಂಡಿ ಬೀಚ್ ಗುಂಡಿನ ದಾಳಿ ಪ್ರಕರಣ: ಅಪ್ಪ ಸತ್ತರೂ ಭಾರತಕ್ಕೆ ಬಂದಿಲ್ಲ ಆರೋಪಿ ಸಾಜಿದ್ ಅಕ್ರಮ್

Sydney Bondi Beach shooting case: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಹೊಸ ಮಾಹಿತಿಯನ್ನು ತೆಲಂಗಾಣ ಪೊಲೀಸರು ಬಹಿರಂಗಪಡಿಸಿದ್ದಾರೆ. ಆರೋಪಿ ಸಾಜಿದ್ ಅಕ್ರಮ್ ತನ್ನ ತಂದೆಯ ಮರಣದ ಬಳಿಕವೂ ಭಾರತಕ್ಕೆ ಭೇಟಿ ನೀಡಿಲ್ಲ ಎಂದು ತಿಳಿಸಿದ್ದಾರೆ.

ಸಿಡ್ನಿ ಆರೋಪಿ ಸಾಜಿದ್ ಅಕ್ರಮ್‍ಗೆ ಭಾರತದ ಒಡನಾಟ ಇತ್ತ?

ಸಿಡ್ನಿ ಗುಂಡಿನ ದಾಳಿ (ಸಂಗ್ರಹ ಚಿತ್ರ) -

Priyanka P
Priyanka P Dec 17, 2025 1:05 PM

ಹೈದರಾಬಾದ್: ಸಿಡ್ನಿಯ ಬೋಂಡಿ ಬೀಚ್‌ನಲ್ಲಿ (Sydney Bondi Beach shooting case) ಯಹೂದಿಗಳ ಹಬ್ಬದ ಮೇಲೆ ನಡೆದ ದಾಳಿಯ ನಂತರ ಆಸ್ಟ್ರೇಲಿಯಾ (Australia) ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ 50 ವರ್ಷದ ಸಾಜಿದ್ ಅಕ್ರಮ್ (Sajid Akram) ತನ್ನ ತಂದೆಯ ಮರಣದ ನಂತರವೂ ಭಾರತಕ್ಕೆ ಭೇಟಿ ನೀಡಿಲ್ಲ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಇದರಿಂದಾಗಿ, ಕಳೆದ ಸುಮಾರು ಮೂರು ದಶಕಗಳಲ್ಲಿ ಹೈದರಾಬಾದ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಅವನಿಗೆ ಬಹಳ ಸೀಮಿತ ಸಂಬಂಧವಿತ್ತು ಎಂಬುದು ಸ್ಪಷ್ಟವಾಗುತ್ತದೆ.

ತೆಲಂಗಾಣ ಪೊಲೀಸರು ನೀಡಿರುವ ವಿವರವಾದ ಹೇಳಿಕೆಯಲ್ಲಿ, ಸಾಜಿದ್ ಅಕ್ರಮ್ ಮೂಲತಃ ಹೈದರಾಬಾದ್‌ನವನಾಗಿದ್ದು, 1998ರ ನವೆಂಬರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗುವ ಮೊದಲು ಬಿ.ಕಾಂ ಪದವಿಯನ್ನು ಪೂರ್ಣಗೊಳಿಸಿದ್ದಾನೆ. ಆತ ಭಾರತೀಯ ಪಾಸ್‌ಪೋರ್ಟ್ ಅನ್ನು ಇನ್ನೂ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಬೊಂಡಿ ಬೀಚ್‌ನಲ್ಲಿ ಯಹೂದಿಯರ ರಕ್ತಪಾತಗೈದ ಹಂತಕನಿಗೆ ಭಾರತೀಯ ಲಿಂಕ್‌

ಹೈದರಾಬಾದ್‌ನಲ್ಲಿ ತನಗೆ ಸಂಬಂಧಿಕರಿದ್ದರೂ ಕಳೆದ 27 ವರ್ಷಗಳಿಂದ ಸಾಜಿದ್ ಅಕ್ರಮ್‍ಗೆ ಯಾರೊಂದಿಗೂ ಒಡನಾಟವಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಸ್ಟ್ರೇಲಿಯಾಕ್ಕೆ ವಲಸೆ ಬಂದ ನಂತರ ಭಾರತಕ್ಕೆ ಕೇವಲ ಆರು ಬಾರಿ ಭೇಟಿ ನೀಡಿದ್ದ. ಮುಖ್ಯವಾಗಿ ಆಸ್ತಿ ಸಂಬಂಧಿತ ವಿಷಯಗಳು ಮತ್ತು ವೃದ್ಧ ಪೋಷಕರನ್ನು ಭೇಟಿಯಾಗುವ ಸಲುವಾಗಿ ಭಾರತಕ್ಕೆ ಬಂದಿದ್ದ. ಅದು ಬಿಟ್ಟರೆ ಭಾರತದೊಂದಿಗೆ ಒಡನಾಟವಿರಲಿಲ್ಲ. ಅಕ್ರಮ್‍ನ ತಂದೆಯ ಮರಣದ ಸಮಯದಲ್ಲಿಯೂ ಅವನು ಭಾರತಕ್ಕೆ ಬಂದಿರಲಿಲ್ಲ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 14 ರಂದು ಬೋಂಡಿ ಬೀಚ್‌ನಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸುತ್ತಿದ್ದಂತೆ ಈ ಸ್ಪಷ್ಟೀಕರಣ ಹೊರಬಿದ್ದಿದೆ. ಈ ಆಘಾತಕಾರಿ ಘಟನೆಯಲ್ಲಿ ಸಾಜಿದ್ ಅಕ್ರಮ್ ಮತ್ತು ಆತನ ಮಗ 24 ವರ್ಷದ ನವೀದ್ ಅಕ್ರಮ್, ಹನುಕ್ಕಾ ಹಬ್ಬದಲ್ಲಿ ನೆರೆದಿದ್ದ ಜನರತ್ತ ಗುಂಡು ಹಾರಿಸಿದ್ದರು. ಗುಂಡಿನ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದು, 42 ಮಂದಿ ಗಾಯಗೊಂಡಿದ್ದರು.

ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆರೋಪಿ ಸಾಜಿದ್ ಅಕ್ರಮ್ ಹತನಾದ. ಹೀಗಾಗಿ ಸಾವಿನ ಸಂಖ್ಯೆ 16ಕ್ಕೇರಿತು. ಆತನ ಪುತ್ರ ನವೀದ್ ಗಾಯಗೊಂಡಿದ್ದು, ಪೊಲೀಸ್ ಕಣ್ಗಾವಲಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಸ್ಟ್ರೇಲಿಯಾ ಗುಂಡಿನ ದಾಳಿ ವೇಳೆ ಆಪದ್ಬಾಂದವನಾದ ಹಣ್ಣಿನ ವ್ಯಾಪಾರಿ; ಬರಿಗೈಲೇ ಭಯೋತ್ಪಾದಕನ ಹೆಡೆಮುರಿ ಕಟ್ಟಿದ ಅಹ್ಮದ್ ಯಾರು?

ಫಿಲಿಪೈನ್ಸ್‌ನ ವಲಸೆ ಬ್ಯೂರೋ, ಸಾಜಿದ್ ಅಕ್ರಮ್ ಭಾರತೀಯ ಪ್ರಜೆ ಮತ್ತು ಆಸ್ಟ್ರೇಲಿಯಾದ ನಿವಾಸಿ ಎಂದು ದೃಢಪಡಿಸಿತ್ತು. ದಾಳಿಗೆ ಸ್ವಲ್ಪ ಮೊದಲು ಫಿಲಿಪೈನ್ಸ್‌ಗೆ ಪ್ರಯಾಣಿಸಿದ್ದ ಎಂದು ತಿಳಿದುಬಂದಿದ್ದು. .

ತೆಲಂಗಾಣ ಪೊಲೀಸರು ಹೇಳುವ ಪ್ರಕಾರ, ಸಾಜಿದ್ ಅಕ್ರಮ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ ನಂತರ ಯುರೋಪಿಯನ್ ಮೂಲದ ಮಹಿಳೆಯನ್ನು ವಿವಾಹವಾದನು. ಈ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಇಬ್ಬರೂ ಆಸ್ಟ್ರೇಲಿಯಾದ ನಾಗರಿಕರಾಗಿದ್ದಾರೆ ಎಂದು ಹೇಳಿದ್ದಾರೆ.