ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

12th Global Achievers Awards in South Africa: ವಿಶ್ವವಿಖ್ಯಾತ ಸನ್‌ʼಸಿಟಿಯಲ್ಲಿ ನಾಡಿನ ಸಾಧಕರಿಗೆ ಸನ್ಮಾನ

ಕರುನಾಡಿನ ಸಾಧಕರನ್ನು ವಿಶ್ವ ಮಟ್ಟದಲ್ಲಿ ಗೌರವಿಸುವ ವಿಭಿನ್ನ ಆಲೋಚನೆಯಾಗಿ ರುವ ಗ್ಲೋಬಲ್ ಅಚೀವರ್ಸ್‌ಅವಾರ್ಡ್ ಕಾರ್ಯಕ್ರಮ, ಪ್ರಕೃತಿಯ ಮುಗ್ಧತೆಯೊಂದಿಗೆ ಆಧುನಿಕತೆಯ ಗಾಂಭೀರ್ಯ ವನ್ನು ಮೈಗೂಡಿಸಿಕೊಂಡು, ಆಫ್ರಿಕಾ ಖಂಡದ ‘ಆರ್ಥಿಕ ಶಕ್ತಿ’ಯಾಗಿ ಹೊರ ಹೊಮ್ಮಿರುವ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಜರುಗಿತು.

ವಿಶ್ವವಿಖ್ಯಾತ ಸನ್‌ʼಸಿಟಿಯಲ್ಲಿ ನಾಡಿನ ಸಾಧಕರಿಗೆ ಸನ್ಮಾನ

-

ವಿವಿಧ ಕ್ಷೇತ್ರದ 13 ಸಾಧಕರನ್ನು ಗೌರವಿಸಿದ ವಿಶ್ವವಾಣಿ

ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ನೆರವೇರಿದ 12ನೇ ಗ್ಲೋಬಲ್ ಅಚೀವರ್ಸ್‌ ಅವಾರ್ಡ್

ಸನ್‌ಸಿಟಿ: ಕರುನಾಡಿನ ಸಾಧಕರನ್ನು ವಿಶ್ವ ಮಟ್ಟದಲ್ಲಿ ಗೌರವಿಸುವ ವಿಭಿನ್ನ ಆಲೋಚನೆಯಾಗಿ ರುವ ಗ್ಲೋಬಲ್ ಅಚೀವರ್ಸ್‌ಅವಾರ್ಡ್ ಕಾರ್ಯಕ್ರಮ, ಪ್ರಕೃತಿಯ ಮುಗ್ಧತೆಯೊಂದಿಗೆ ಆಧುನಿಕತೆ ಯ ಗಾಂಭೀರ್ಯವನ್ನು ಮೈಗೂಡಿಸಿಕೊಂಡು, ಆಫ್ರಿಕಾ ಖಂಡದ ‘ಆರ್ಥಿಕ ಶಕ್ತಿ’ಯಾಗಿ ಹೊರ ಹೊಮ್ಮಿರುವ ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಜರುಗಿತು.

ವಿಶ್ವದ ಬಹುಪಾಲು ಪ್ರವಾಸಿಗರಿಗೆ ಬಕೆಟ್ ಲಿಸ್ಟ್ ನಲ್ಲಿರುವ ದಕ್ಷಿಣ ಆಫ್ರಿಕಾದಲ್ಲಿ ವಿಶ್ವವಾಣಿ ಗ್ಲೋಬಲ್ ಫಾರಂ ಆಯೋಜಿಸಿರುವ 12ನೇ ಆವೃತ್ತಿಯ ಗ್ಲೋಬಲ್ ಅಚೀವಸ್ ಪ್ರಶಸ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅದರಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ನಡೆಯುವ ಜೋಹಾನ್ಸ್ ಬರ್ಗ್‌ನಿಂದ ಎರಡು ಗಂಟೆ ಪ್ರಯಾಣದ ದೂರದಲ್ಲಿರುವ ಸನ್‌ಸಿಟಿಯಲ್ಲಿ ಕನ್ನಡ ಡಿಂಡಿಮ ಮೊಳಗಿದ್ದು, ಕನ್ನಡ ಪತ್ರಿಕೋದ್ಯಮದ ಮತ್ತೊಂದು ಮೈಲುಗಲ್ಲು. ಸನ್‌ಸಿಟಿ ಯಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 13 ಸಾಧಕರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: 11th Global Achievers Awards Program by Vishwavani at Paris: ಪ್ಯಾರಿಸ್‌ನಲ್ಲಿ ಕನ್ನಡದ ಕಂಪನ್ನು ಸೂಸಿದ ‘ವಿಶ್ವವಾಣಿ’

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಅಸಾಮಾನ್ಯ ಸಾಧಕರಿಗೆ ‘ಗ್ಲೋಬಲ್ ಅಚೀವರ್ಸ್’ ಪ್ರಶಸ್ತಿ ನೀಡುವ ಜತೆಜತೆಗೆ ಎಂಟು ದಿನಗಳ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾದ ವಿಶ್ವಪ್ರಸಿದ್ಧ ಐತಿಹಾಸಿಕ, ಪಾರಂಪರಿಕ ಸ್ಥಳಗಳಿಗೆ ವಿಶ್ವವಾಣಿ ಸಮೂಹದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ನೇತೃತ್ವದ ನಿಯೋಗ ಭೇಟಿ ನೀಡಲಿದೆ. ಈ ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯರಾದ ಭೋಜೇಗೌಡ, ಮಾರುತಿರಾವ್ ಮುಳೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 40ಕ್ಕೂ ಹೆಚ್ಚು ಗಣ್ಯರಿದ್ದಾರೆ.

ಕಾಂಬೋಡಿಯಾ, ಫ್ರಾನ್ಸ್ ಸೇರಿದಂತೆ 11 ದೇಶಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಿದ ಬಳಿಕ ಬುಧವಾರದಂದು ದಕ್ಷಿಣ ಆಫ್ರಿಕಾದ ಸನ್‌ಸಿಟಿಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

medal R

ಸಮಾರಂಭದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ದಕ್ಷಿಣ ಆಫ್ರಿಕಾ ಪ್ರವಾಸೋದ್ಯಮದ ರೀಜನಲ್ ಜನರಲ್ ಮ್ಯಾನೇಜರ್ ಕೊಬಾನಿ ಗಾಡ್ನ್‌ವಿಲ್ ಮ್ಯಾಂಕೋಟ್ವ್ಯಾ, ದುಬೈನ ಪರ್ವ ಗ್ರೂಪ್‌ನ ಸಂಸ್ಥಾಪಕ ಎಚ್.ಪಿ. ನಿಲೇಶ್ ಭಾಗವಹಿಸಿದ್ದರು.

ಐತಿಹಾಸಿಕ ಮಹತ್ವವಿರುವ ಸನ್ ಸಿಟಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 13 ಮಂದಿ ಸಾಧಕ ರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯ ಕ್ರಮದಲ್ಲಿ ಭಾರತದ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಎಂಎಸ್ಐಎಲ್, ಸಿರಿ, ಪರ್ವ ಗ್ರೂಪ್, ಡಿಯಾಗೋ ಫೈನಾನ್ಸ್, ಅಮೃತ್ ನೋನಿ ಹಾಗೂ ಎಂಆರ್‌ಜಿ ಗ್ರೂಪ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ವಿಶ್ವವಾಣಿ ನಿಯೋಗದಲ್ಲಿದ್ದ ಗಣ್ಯರು

ವಿಶ್ವೇಶ್ವರ ಭಟ್ ಅವರ ನೇತೃತ್ವದ ನಿಯೋಗದಲ್ಲಿ 40 ಮಂದಿ ಇದ್ದರು. ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ವಿಶ್ವೇಶ್ವರ ಭಟ್ ಅವರ ಪತ್ನಿ ಸುಷ್ಮಾ ಭಟ್, ವಿಶ್ವವಾಣಿ ಸಿಇಒ ಚಿದಾನಂದ ಕಡಲಾಸ್ಕರ, ವಿಶ್ವವಾಣಿ ಮ್ಯಾನೇಜರ್ ನಾಗಾರ್ಜುನ್ ಮೋತಿಲಾಲ್, ಮಾರುತಿರಾವ್ ಮುಳೆ, ಆರ್ಯಾ ವಿಶಾಲ್, ವಿಶಾಲ್, ಗಂಗಾಧರ್ ಸಜ್ಜನ್, ನಾಗರಾಜ್ ಅಡಿಗ, ಸುಕುಮಾರ್ ಶೆಟ್ಟಿ, ಎಚ್.ಪಿ. ನೀಲೇಶ್, ದಿವ್ಯ, ಸಿದ್ದೇಶ್, ಲೀಲಾ ಮೋಹನ್, ಲಾವಣ್ಯ, ರಾಘವೇಂದ್ರ, ಅಚಲ ಭೋಜೇಗೌಡ, ನೀತಾ, ಬಸವರಾಜ ಉಪ್ಪಾರ್, ಅಕ್ಷತಾ, ನಾಗರಾಜ್, ಅರುಣಾ ಮಂಜುನಾಥ್, ರೇಖಾ ಇದ್ದರು.

ಸನ್‌ಸಿಟಿ ವೈಶಿಷ್ಟ್ಯವೇನು?

ವಿಶ್ವವಾಣಿ ಗ್ಲೋಬಲ್ ಫಾರಂ ದಕ್ಷಿಣ ಆಫ್ರಿಕಾದಲ್ಲಿ ಹಮ್ಮಿಕೊಂಡಿದ್ದ 12ನೇ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಇನ್ನುಳಿದ ಕಾರ್ಯಕ್ರಮಗಳಿಗಿಂತ ಭಿನ್ನವಾಗಿತ್ತು. ಏಕೆಂದರೆ, ಈ ಬಾರಿ ಕಾರ್ಯಕ್ರಮ ನಡೆದ ಸನ್‌ಸಿಟಿ ರೆಸಾರ್ಟ್ ಕೇವಲ ಐಷಾರಾಮಿ ರೆಸಾರ್ಟ್ ಮಾತ್ರವಾಗಿರದೇ, ಐತಿಹಾಸಿಕ ಮಹತ್ವ ಹೊಂದಿರುವ ರೆಸಾರ್ಟ್ ಸಹ ಆಗಿದೆ. ದಕ್ಷಿಣ ಆಫ್ರಿಕಾದ ನಾರ್ತ್ ವೆಸ್ಟ್‌ ಪ್ರಾಂತ್ಯದಲ್ಲಿರುವ ಸನ್ ಸಿಟಿ ರೆಸಾರ್ಟ್ ವಿಶ್ವಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರವಾಗಿ ಗುರುತಿಸಿ ಕೊಂಡಿದೆ. ಜೋಹಾನ್ಸ್ ಬರ್ಗ್‌ನಿಂದ ಸುಮಾರು ಎರಡು ಗಂಟೆ ದೂರದಲ್ಲಿರುವ ಈ ಐಷಾರಾಮಿ ಹೋಟೆಲ್‌ನಲ್ಲಿ, ಕ್ಯಾಸಿನೊ, ಗಾಲ ಮೈದಾನಗಳು ಹಾಗೂ ವ್ಯಾಲಿ ಆಫ್ ವೇ ಎನ್ನುವ ಜಲಕ್ರೀಡಾ ಉದ್ಯಾನವನವನ್ನು ಕಾಣಬಹುದಾಗಿದೆ ಸಮುಚ್ಛಯವಾಗಿದೆ. ಈ ಹೋಟೆಲ್ ತನ್ನ ವಿಶಿಷ್ಟ ಆಫ್ರಿಕನ್ ಶೈಲಿಯ ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. 1995ರಲ್ಲಿ ಇಲ್ಲಿ ಮಿಸ್ ಯುನಿವರ್ಸ್ ಸ್ಪರ್ಧೆ ಆಯೋಜನೆಯಾಗಿ ಜಾಗತಿಕ ಗಮನ ಸೆಳೆದಿತ್ತು. ‌

ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಗಳು ನಡೆಯುವ ಮೂಲಕ ಸನ್ ಸಿಟಿ ಜಾಗತಿಕ ಈವೆಂಟ್‌ಗಳ ತಾಣವಾಗಿ ಬೆಳೆದಿದೆ. ಪ್ರವಾಸೋದ್ಯಮ ಹಾಗೂ ಆತಿಥ್ಯ ವಲಯಕ್ಕೆ ಮಹತ್ವದ ಆದಾಯ ಒದಗಿಸುವ ಈ ರೆಸಾರ್ಟ್ ಪ್ರತಿ ವರ್ಷ ಸಾವಿರಾರು ದೇಶಿ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಸೌಲಭ್ಯಗಳು, ಭದ್ರತೆ ಮತ್ತು ವೈಭವದಿಂದ ಸನ್ ಸಿಟಿ ಆಫ್ರಿಕಾದ ಹೆಮ್ಮೆಯ ಪ್ರವಾಸೀ ತಾಣವಾಗಿದೆ.

ಪ್ರಶಸ್ತಿ ಪುರಸ್ಕೃತರು

ಎಸ್.ಎಲ್. ಭೋಜೇಗೌಡ

ಭಾರತಿ ಶೆಟ್ಟಿ

ಡಾ.ಯು.ಟಿ. ಇಫ್ತಿಕರ್ ಆಲಿ

ಮಲ್ಲಾಜಮ್ಮ

ಮಂಜುನಾಥ್ ಬಿ

ಬಿ. ವಾಮದೇವಪ್ಪ

ರಾಮಚಂದ್ರ ರವಿ

ಅಜಯ್ ಬಿ ಪೂಜಾರ

ಡಾ.ಪವನ್‌ಕುಮಾರ್

ಪಾಟೀಲ್

ನಂದೀಶ್ ಜಿ.ಎಚ್.

ಬಸವರಾಜ್ ಎನ್. ಕನ್ನಾಳೆ

ಲಾವಣ್ಯ ಗದೆ

ಅನುಪಮಾ ಕೆ. ಪಾಟೀಲ್