ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tit-For-Tat Strike: ಮುಂದುವರಿದ ಅಮೆರಿಕ - ಇರಾನ್ ಸಂಘರ್ಷ; ವಿಮಾನ, ರೈಲು ನಿಲ್ದಾಣ, ಸೇತುವೆಗಳೇ ಟಾರ್ಗೆಟ್

ಅಮೆರಿಕ ಸೇನಾ ಪಡೆಗಳು ಇರಾನ್ ಮೇಲೆ ಗುರುವಾರ ಮತ್ತಷ್ಟು ದಾಳಿ ನಡೆಸಿದೆ. ಟಿಟ್ -ಫಾರ್-ಟ್ಯಾಟ್ ದಾಳಿಯಲ್ಲಿ ಇರಾನ್ ನ ಮೂಲ ಸೌಕರ್ಯಗಳ ಮೇಲೆ ಗುರಿ ಇಡಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಸೇತುವೆಗಳನ್ನು ನಾಶ ಮಾಡಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಯುಎಸ್ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸಿದೆ.

ಇರಾನ್ ಮೇಲೆ ಮತ್ತಷ್ಟು ಹೊಸ ದಾಳಿ ನಡೆಸಿದ ಅಮೆರಿಕ

ಸಂಗ್ರಹ ಚಿತ್ರ -

ಟೆಹರಾನ್: ಕಳೆದ ಫೆಬ್ರವರಿ ಅಂತ್ಯದಲ್ಲಿ ಪ್ರಾರಂಭಗೊಂಡಿರುವ ಇರಾನ್ (iran) ಮತ್ತು ಯುಎಸ್ (US) ನಡುವಿನ ಸಂಘರ್ಷ ಮುಕ್ತಾಯವಾಗುವ ಹಂತವನ್ನು ತಲುಪಿ ಈಗ ಮತ್ತೆ ಭುಗಿಲೆದ್ದಿದೆ. ಅಮೆರಿಕಾದ ಸೇನಾ (US Attack) ಪಡೆಗಳು ಗುರುವಾರ ಇರಾನ್ ಮೇಲೆ ಹೊಸ ದಾಳಿಗಳನ್ನು (Iran war) ನಡೆಸಿದ್ದು, ಇದರಲ್ಲಿ ಮೂಲ ಸೌಕರ್ಯಗಳನ್ನೇ ಗುರಿಯಾಗಿಸಿಕೊಂಡಿದೆ. ಸೇತುವೆ, ಸಾರಿಗೆ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ನಾಶಪಡಿಸಲಾಗಿದೆ. ಮುಖ್ಯವಾಗಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಸೇತುವೆಗಳ ಮೇಲೆ ದಾಳಿ ನಡೆಸಲಾಗಿದೆ. ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಯುಎಸ್ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸಿದೆ.

ಮತ್ತೊಮ್ಮೆ ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷ ತೀವ್ರಗೊಂಡಿದೆ. ಯುದ್ಧ ಮುಕ್ತಾಯ ಒಪ್ಪಂದ ಮಾತುಕತೆಗಳು ಅಂತಿಮ ಹಂತದಲ್ಲಿರುವಾಗಲೇ ಇರಾನ್ ಮೇಲೆ ಯುಎಸ್ ತೀವ್ರ ದಾಳಿಯನ್ನು ನಡೆಸಿದೆ. ಇತ್ತೀಚೆಗೆಷ್ಟೇ ಯುದ್ಧ ಮುಕ್ತಾಯ ಒಪ್ಪಂದಕ್ಕೆ ಎರಡು ರಾಷ್ಟ್ರಗಳು ಸಹಿ ಮಾಡಿತ್ತು. ಇದರ ಬಳಿಕ ಹೊರ್ಮುಜ್ ಜಲ ಮಾರ್ಗದ ಮೇಲೆ ನಿಯಂತ್ರಣ ಸಾಧಿಸಲು ಇರಾನ್ ಮತ್ತು ಯುಎಸ್ ಪ್ರಯತ್ನಿಸುತ್ತಿದೆ. ಇದು ಈಗ ಸಂಘರ್ಷ ತೀವ್ರಗೊಳ್ಳಲು ಕಾರಣವಾಗಿದೆ.

ಕತಾರ್‌ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿ ಬೆಂಬಲ: ಹರೀಶ್ ಪಾಂಡೆ

ಯುಎಸ್ ಸೆಂಟ್ರಲ್ ಕಮಾಂಡ್ ಗುರುವಾರ ಸಂಜೆ ಇರಾನಿನ ಮೇಲೆ ಮತ್ತಷ್ಟು ದಾಳಿ ನಡೆಸಿದೆ. ಇದನ್ನು ತೀವ್ರಗೊಳಿಸಲಾಗುವುದು. ಇದು ಅಮೆರಿಕನ್ ಪಡೆಗಳ ದಾಳಿಯ ಆರನೇ ರಾತ್ರಿಯಾಗಿದೆ ಎಂದು ತಿಳಿಸಿದೆ.

ಅಮೆರಿಕ ಸೇನಾ ಪಡೆಗಳು ಇರಾನ್ ನ ಹಾರ್ಮೋಜ್ ಗನ್ ಪ್ರಾಂತ್ಯದ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇರಾನ್‌ನ ಏಕೈಕ ನಾಗರಿಕ ಪರಮಾಣು ಸ್ಥಾವರವಿರುವ ಪಶ್ಚಿಮ ನಗರವಾದ ಬುಶೆಹರ್‌ ಮೇಲೆಯೂ ಅಮೆರಿಕ ದಾಳಿಯನ್ನು ಮುಂದುವರಿಸಿದ್ದು, ಇಲ್ಲಿ ಗುರುವಾರ ಎರಡು ಸ್ಫೋಟಗಳಾಗಿವೆ ಎಂದು ಟೆಹರಾನ್ ಮಾಧ್ಯಮಗಳು ವರದಿ ಮಾಡಿವೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನಲ್ಲಿರುವ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಮೊದಲೇ ಎಚ್ಚರಿಕೆ ನೀಡಿದ್ದರು. ಈ ನಡುವೆಯೇ ಶ್ವೇತಭವನವು ಡೊನಾಲ್ಡ್ ಟ್ರಂಪ್ ಅವರು ಕದನ ಮುಕ್ತಾಯ ಮಾತುಕತೆ ನಡೆಸಲು ಸಿದ್ದರಾಗಿದ್ದಾರೆ ಎಂದು ಹೇಳಿದೆ.

ಅಹ್ವಾಜ್ ಬಳಿಯ ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಬಳಿ ಅಮೆರಿಕ ಸೇನಾ ಪದೇ ನಡೆಸಿರುವ ದಾಳಿಗೆ ಪ್ರತಿಯಾಗಿ ಇರಾನ್ ಜೋರ್ಡಾನ್‌ನಲ್ಲಿರುವ ಯುಎಸ್ ವಾಯುನೆಲೆಯ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ ಗುರುವಾರ ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಯುಎಸ್ ವೈಮಾನಿಕ ದಾಳಿ ನಡೆಸಿದ ಅನಂತರ ಆಸ್ಪತ್ರೆಯನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕುವೈತ್ ಮತ್ತು ಬಹ್ರೇನ್ ಮೇಲೆ ಇರಾನ್ ಶುಕ್ರವಾರ ದಾಳಿ ನಡೆಸಿದ್ದರಿಂದ ವಾಯುದಾಳಿ ಸೈರನ್‌ಗಳನ್ನು ಮೊಳಗಿಸಿದೆ. ದಾಳಿಗಳಿಗೆ ಕುವೈತ್ ಸೇನೆಯು ಪ್ರತಿಕ್ರಿಯೆ ನೀಡುತ್ತಿರುವುದಾಗಿ ಹೇಳಿದೆ.

ಯುನೈಟೆಡ್ ಸ್ಟೇಟ್ಸ್ ಇರಾನ್ ಬಂದರುಗಳ ಮೇಲಿನ ತನ್ನ ದಿಗ್ಬಂಧನವನ್ನು ಮತ್ತೆ ಹೇರಿದೆ. ಹೊರ್ಮುಜ್ ಜಲ ಮಾರ್ಗದ ಮೇಲೆ ನಾವು ನಿಯಂತ್ರಣ ಸಾಧಿಸುವುದನ್ನು ಮುಂದುವರಿಸುತ್ತೇವೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ಇರಾನಿನ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.

ಸಂಘರ್ಷವನ್ನು ಕೊನೆ ಗೊಳಿಸಲು ಮಾತುಕತೆಗಳನ್ನು ಪುನರಾರಂಭಿಸಲು ನಾವು ಪ್ರೋತ್ಸಾಹವನ್ನು ಮುಂದುವರಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ತಹಿರ್ ಅಂದ್ರಾಬಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್‌ನ ಉನ್ನತ ಸಮಾಲೋಚಕ ಮೊಹಮ್ಮದ್ ಬಾಘರ್ ಗಲಿಬಾಫ್, ಒಪ್ಪಂದದಲ್ಲಿನ ಷರತ್ತುಗಳು ಮಾನ್ಯವಾಗಿದ್ದು, ಅದು ಜಾರಿಗೆ ಬಂದರೆ ಮಾತ್ರ ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದ್ದಾರೆ.

ಟೆಹರಾನ್‌ನಲ್ಲಿ ಡೊನಾಲ್ಡ್‌ ಟ್ರಂಪ್ ಶವಪೆಟ್ಟಿಗೆಯ ಬೃಹತ್ ಹೋರ್ಡಿಂಗ್‌: ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ ಇರಾನ್‌; ಮತ್ತೊಂದು ಹಂತಕ್ಕೆ ಹೋಗುತ್ತ ಸಂಘರ್ಷ?

ಕಳೆದ ವಾರದಿಂದ ಯುಎಸ್ ನಡೆಸುತ್ತಿರುವ ದಾಳಿಯಿಂದ ಇರಾನ್‌ನಲ್ಲಿ ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ವಕ್ತಾರೆ ಫಾತಿಮೆಹ್ ಮೊಹಜೆರಾನಿ ತಿಳಿಸಿದ್ದಾರೆ.