Sandalwood actor Ganeshrao Kesarkar: ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ: ಸಿನಿಮಾ ನಟ ಗಣೇಶ್‌ರಾವ್ ಕೇಸರ್‌ಕರ್ ಅಭಿಮತ
ನಾನೂ ಕೂಡ ಶಾಲಾ ಹಂತದಲ್ಲಿ ದೊರೆತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ವೇದಿಕೆಯಿಂದಲೇ ಇಂದು ಖ್ಯಾತ ನಟನಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಯರ‍್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದೇ ಆಗಲಿದೆ. ಯಾವುದನ್ನೂ ನಾವು ಅಮುಖ್ಯ ಎಂದು ಭಾವಿಸಿ ಕಡೆಗಣಿಸಬಾರದು.
-
ಚಿಕ್ಕಬಳ್ಳಾಪುರ : ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದಕ್ಕಿಂತ ಅವರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅಂತಹ ಶಿಕ್ಷಣ ಕೊಡಿಸುವುದರಿಂದ ಭವಿಷ್ಯ ಉತ್ತಮವಾಗಿರಲಿದೆ ಎಂದು ಕನ್ನಡ ಚಲನಚಿತ್ರನಟ ಗಣೇಶ್‌ರಾವ್ ಕೇಸರ್‌ಕರ್( Sandalwood actor Ganeshrao Kesarkar) ತಿಳಿಸಿದರು.
ನಗರದ ಪ್ರಕೃತಿ ಶಾಲೆಯ 19ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಲನಚಿತ್ರ ನಟ ಗಣೇಶ್‌ರಾವ್ ಕೇಸರ್‌ಕರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Actor Kishore Kumar: ಪ್ರಾಕೃತಿಕ ಸಂಪನ್ಮೂಲಗಳ ಉಳಿವಿಗೆ ಶ್ರಮಿಸೋಣ : ಸಮಸಮಾಜ ಕಟ್ಟೋಣ : ಚಿತ್ರನಟ ಕಿಶೋರ್‌ಕುಮಾರ್
ನಾನೂ ಕೂಡ ಶಾಲಾಹಂತದಲ್ಲಿ ದೊರೆತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ವೇದಿಕೆಯಿಂದಲೇ ಇಂದು ಖ್ಯಾತ ನಟನಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಯರ‍್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದೇ ಆಗಲಿದೆ. ಯಾವುದನ್ನೂ ನಾವು ಅಮುಖ್ಯ ಎಂದು ಭಾವಿಸಿ ಕಡೆಗಣಿಸಬಾರದು. ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ಮಕ್ಕಳಿಗೆ ಭವಿಷ್ಯ ಬೆಳಗುವ ವೇದಿಕೆಗಳಾಗುತ್ತವೆ ಎಂಬುದನ್ನು ನಾನು ಕಂಡಿದ್ದೇನೆ ಎಂದು ತಿಳಿಸಿದರು.
ಓದಿನ ಕಾಲದಲ್ಲಿ ಮಕ್ಕಳು ಸಮಯಕ್ಕೆ ಬೆಲೆ ನೀಡುವುದನ್ನು ಕಲಿಯಬೇಕು.ಓದಿರಲಿ ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮವೇ ಇರಲಿ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಆಗ ಮಾತ್ರ ಧೈರ್ಯವಾಗಿ ಬೆಳೆಯಲು ಸಾಧ್ಯ.ಹೀಗಾಗಿ ಸಾಂಸ್ಕೃತಿಕ ವೇದಿಕೆಗೆ ಉನ್ನತ ಸ್ಥಾನ ವಿದೆ ಎಂದರು.
ಶಿಕ್ಷಣದ ವಿಷಯದಲ್ಲಿ ಮಕ್ಕಳಿಗಿಂತ ಪೋಷಕರೇ ಒತ್ತಡಕ್ಕೆ ಒಳಗಾಗುವುದು ಹೆಚ್ಚು. ಮಕ್ಕಳಿಗಿರುವ ಆಸಕ್ತಿ ಅಭಿರುಚಿಯನ್ನು ಅರಿತು ಶಿಕ್ಷಣ ನೀಡಬೇಕು. ಎಲ್ಲರೂ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯವಿಲ್ಲ.ಹೀಗಾಗಿ ಮಕ್ಕಳ ಮನಸ್ಸು ಅರಿಯುವ ಕೆಲಸ ಮಾಡಬೇಕು ಎಂದರು.
ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ನಟರಾಜ(Gilla Nata Nataraj)ನ ಸಾಧನೆ ಕರ್ನಾಟಕ ಉದ್ದಗಲಕ್ಕೂ ಹಬ್ಬಿರುವುದು ಸಂತೋಷ. ಬಡವರ ಮಕ್ಕಳು ಹೇಗೆ ಬೆಳೆಯಬೇಕು ಎಂಬು ದನ್ನು ಸಾಧಿಸಿ ತೋರಿಸಿದ್ದಾನೆ.ಯಾವುದೇ ಸಾಧನೆಗೆ ದೇಹವೇ ಮಾಧ್ಯಮವಾಗಿರುವು ದರಿಂದ ಆಧೂ ಸದೃಢ ಆಗಿರಲಿ.ಶಿಕ್ಷಕರು ಯಾವುದೇ ಕಾರಣಕ್ಕೂ ಪ್ರತಿಭೆಯನ್ನು ಚಿವುಟ ಬೇಡಿ. ಯಾವುದೂ ಕೂಡ ವರ್ಜ್ಯ ಅಲ್ಲ. ಸಂಸ್ಕೃತಿ ಸಂಸ್ಕಾರ ಮಕ್ಕಳಲ್ಲಿ ಬೆಳೆಸಬೇಕು. ಕಲಾ ಸರಸ್ವತಿ ಆಶೀರ್ವಾದವಿದ್ದಲ್ಲಿ ಯಾರು ಯಾವ ಯಾವುದೋ ವೇದಿಕೆಯಲ್ಲಿ ಮಿಂಚ ಬಹುದು. ನಾನೂ ಕೂಡ ನಿಮ್ಮ ಮುಂದೆ ವೇದಿಕೆ ಮೇಲೆ ನಿಲ್ಲಲು ಸಾಧ್ಯವಾಗಿದೆ. ಸಾಧಕರ ಬದುಕು ಮತ್ತು ಸಾಧನೆ ಮಕ್ಕಳಿಗೆ ಸದಾ ಪ್ರೇರಣೆ ನೀಡಲಿದೆ ಎಂದು ಹೇಳಿ ಮಾತು ಮುಗಿಸಿದರು.
ಗಣೇಶ್ ರಾವ್ ಕೇಸರ್ಕರ್ ಮಾತು ಮುಗಿಸುವಾಗ ಜೈ ಭೀಮ್ ಎಂದು ಹೇಳಿದ್ದು ವಿದ್ಯಾರ್ಥಿ ಗಳ ಜೋರು ಕರತಾಡನಕ್ಕೆ ಕಾರಣವಾಗಿತ್ತು. ಜೋರು ಚಪ್ಪಾಳೆ ತಟ್ಪಿದ ವಿದ್ಯಾರ್ಥಿಗಳ ಒತ್ತಡದ ಮಣಿದ ಇವರು ತಮ್ಮ ಅಭಿನಯದ ಮೂಲಕ ಮಕ್ಕಳನ್ನು ಕ್ಷಣ ಕಾಲ ರಂಜಿಸಿದರು.
ಪ್ರಾಂಶುಪಾಲ ವೈ.ವಿ.ಆನಂದ್ ಮಾತನಾಡಿ, 2007ರಲ್ಲಿ ವೈ.ಎ.ನಾರಾಯಣಸ್ವಾಮಿ ಅವರ ಅಮೃತ ಹಸ್ತದಿಂದ ಚಾಲನೆ ನೀಡಿ ಪ್ರಾರಂಭವಾದ ನಮ್ಮ ಶಾಲೆ ಕೇವಲ 80 ಮಕ್ಕಳಿಂದ ಪ್ರಾರಂಭವಾಗಿದ್ದು ಇಂದು 700 ವಿದ್ಯಾರ್ಥಿಗಳು 24 ಕ್ಲಾಸ್ ರೂಂ, ಸುಸಜ್ಜಿತ ಕಟ್ಟಡ ಬೋಧಕ ವರ್ಗ ಹೊಂದಿದೆ. ಶೈಕ್ಷಣಿಕ ಸಾಧನೆಯಲ್ಲಿ ನಮ್ಮ ಶಾಲೆ ನಗರದ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಪೋಷಕರ ಪ್ರೀತಿ ವಿಶ್ವಾಸ ಉಳಿಸಿಕೊಂಡು 20 ವರ್ಷದತ್ತ ಸಾಗಿರುವುದೇ ಶೈಕ್ಷಣಿಕ ಶಿಸ್ತಿನ ಪ್ರತೀಕವಾಗಿದೆ. 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ 615 ಅಂಕಗಳನ್ನು ಪಡೆದು ಶಾಲೆಗೆ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಹೀಗಾಗಿ, ಪೋಷಕರಲ್ಲಿ ಮನವಿ ನಿಮ್ಮ ಮಕ್ಕಳನ್ನು ಆಸ್ತಿಯಾಗಿಸಿ ಮಕ್ಕಳಿಗೆ ಆಸ್ತಿ ಮಾಡಬೇಡಿ ಎಂದು ಮಾತು ಹೇಳಿ ಮುಗಿಸಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು, ಶಿಕ್ಷಕರನ್ನು, ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿದರು. ವಿದ್ಯಾರ್ಥಿಗಳಿಂದ ನಯನಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.
ಕಾರ್ಯಕ್ರಮದಲ್ಲಿ ಮುಖ್ಯಸ್ಥ ಸುಧಾ ಎಸ್.ಎಂ, ಸಂಸ್ಥಾಪಕ ಕಾರ್ಯದರ್ಶಿ ವೈ.ವಿ. ಆನಂದ್ ಮತ್ತಿತರರು ಇದ್ದರು.