ಅಮೆರಿಕ- ಇರಾನ್ ಯುದ್ಧ ಮತ್ತೆ ಶುರು ? ಹೊರ್ಮೊಜ್‌ನಲ್ಲಿ ಮತ್ತೆ ದಾಳಿ, ಟ್ರಂಪ್ ಕಿಡಿ
ಹೊರ್ಮುಜ್ ಜಲ ಸಂಧಿಯಲ್ಲಿ ಸರಕು ಸಾಗಣೆಯ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಅಮೆರಿಕ ಸೇನಾ ಪಡೆಗಳು ಇರಾನ್ ಮೇಲೆ ಮತ್ತೆ ದಾಳಿಯನ್ನು ಪ್ರಾರಂಭಿಸಿದೆ. ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯ ಭಾಗದಲ್ಲಿ ಸಂಘರ್ಷ ಕೊನೆಯಾಗುವ ನಿರೀಕ್ಷೆ ಹುಟ್ಟಿದ ಬೆನ್ನಲ್ಲೇ ಈ ದಾಳಿ ಈಗ ಮತ್ತೆ ಜಾಗತಿಕ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಇರಾನ್ (iran war) ಎಂದಿಗೂ ಬುದ್ದಿ ಕಲಿಯುವುದಿಲ್ಲ. ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಕಿಡಿ ಕಾರಿದ್ದಾರೆ. ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸರಕು ಸಾಗಣೆಯ ಟ್ಯಾಂಕರ್ ಮೇಲೆ ಶನಿವಾರ ಇರಾನ್ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಅಮೆರಿಕ ಸೇನಾ ಪಡೆಯು ಇರಾನ್ ಮೇಲೆ ಮತ್ತೆ ದಾಳಿಯನ್ನು ಮಾಡಿದ ಬಳಿಕ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಅಮೆರಿಕಾದ ಸೇನಾ ಪಡೆಗಳು ಶುಕ್ರವಾರ ಇರಾನಿನ ಡ್ರೋನ್ ಸಂಗ್ರಹಣಾ ತಾಣಗಳು, ಕರಾವಳಿ ರಾಡಾರ್ ಸ್ಥಾನಗಳು ಮತ್ತು ಕ್ಷಿಪಣಿ ಮೇಲೆ ದಾಳಿ ನಡೆಸಿತ್ತು.
ಹೊರ್ಮುಜ್ ಜಲ ಸಂಧಿಯ ಮೂಲಕ ಹಾಡು ಹೋಗುತ್ತಿದ್ದ ತೈಲ ಟ್ಯಾಂಕರ್ ಮೇಲೆ ಟೆಹರಾನ್ ದಾಳಿ ನಡೆಸಿರುವುದಾಗಿ ಆರೋಪಿಸಿರುವ ಅಮೆರಿಕ ಸೇನಾ ಪಡೆಗಳು ಮತ್ತೆ ಶನಿವಾರ ಇರಾನ್ ಮೇಲೆ ದಾಳಿ ನಡೆಸಿದೆ. ಇರಾನ್‌ನೊಳಗಿನ ಅನೇಕ ಗುರಿಗಳ ಮೇಲೆ ದಾಳಿ ನಡೆಸಿದ್ದು, ಇದು ಯುದ್ಧವನ್ನು ಕೊನೆಗೊಳಿಸುವ ಮಾತುಕತೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿನ ಜಾಗತಿಕ ಮಟ್ಟದಲ್ಲಿ ಈಗ ಮತ್ತೆ ಯುದ್ಧದ ಭೀತಿ ಶುರುವಾಗಿದೆ.
ಅಫ್ಘಾನಿಸ್ತಾನದ ಹಿಂದೂ ಕುಶ್‌ನಲ್ಲಿ 6.2 ತೀವ್ರತೆಯ ಭೂಕಂಪ; ದೆಹಲಿಯಲ್ಲೂ ಭೂಮಿ ನಡುಗಿದ ಅನುಭವ
ಇರಾನ್ ಸೇನಾ ಪಡೆಯು ಹೊರ್ಮುಜ್ ಜಲಸಂಧಿಯ ಮೂಲಕ ಹಾದು ಹೋಗುತ್ತಿದ್ದ ಸುಮಾರು ಎರಡು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಪನಾಮ ಧ್ವಜದ ಟ್ಯಾಂಕರ್ 'ಕಿಕು' ಮೇಲೆ ದಾಳಿ ನಡೆಸಿದೆ. ಹಡಗಿಗೆ ಹಾನಿಯಾಗಿದ್ದು, ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ ಯುಎಸ್ ಸೆಂಟ್ರಲ್ ಕಮಾಂಡ್, ಯುಎಸ್ ಸೇನಾ ಪಡೆಯು ಇರಾನ್ ನ ಕಣ್ಗಾವಲು ಮೂಲಸೌಕರ್ಯ, ಸಂವಹನ ವ್ಯವಸ್ಥೆ, ವಾಯು ರಕ್ಷಣಾ ತಾಣಗಳು, ಡ್ರೋನ್ ಸಂಗ್ರಹಣಾ ಸೌಲಭ್ಯಗಳು ಮತ್ತು ಮೈನ್‌ಲೇಯರ್ ಸಾಮರ್ಥ್ಯಗಳು ಸೇರಿದಂತೆ 10 ಇರಾನಿನ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಹೇಳಿದ್ದು, ಇದಕ್ಕೆ ಸಂಬಂಧಿಸಿದ 38 ಸೆಕೆಂಡುಗಳ ವಿಡಿಯೋವನ್ನು ಕೂಡ ಹಂಚಿಕೊಂಡಿದೆ.
ಅಮೆರಿಕ ದಾಳಿಗೆ ಪ್ರತಿಕ್ರಿಯಿಸಿದ ಇರಾನ್, ಕದನ ವಿರಾಮ ಒಪ್ಪಂದವನ್ನು ಗೌರವಿಸಲಾಗಿದೆ. ಶನಿವಾರ ಬೆಳಗ್ಗೆ ಎಂ/ಟಿ ಕಿಕುವನ್ನು ಹೊಡೆದುರುಳಿಸಿದ ಬಳಿಕ ಅಮೆರಿಕ ಸೇನಾ ಪಡೆಯು ದಾಳಿಯನ್ನು ಮಾಡಿದ್ದು ಅದಕ್ಕೆ ತಮ್ಮ ಪಡೆಗಳು ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದೆ.
ಇರಾನ್ ಮತ್ತು ಯುಎಸ್ ನಡುವೆ ಸಂಘರ್ಷದ ವಾತಾವರಣ ಇದ್ದರೂ ಹೊರ್ಮುಜ್ ಜಲ ಮಾರ್ಗದಲ್ಲಿ ಸರಕು ಸಾಗಣೆಯ ಹಡಗುಗಳ ಸಂಚಾರ ಮುಂದುವರಿದಿದೆ. ಯುಎಸ್ ಪಡೆಗಳು ಎಚ್ಚರಿಕೆಯಲ್ಲಿದ್ದು, ಇರಾನ್ ನಡೆಸುವ ಪ್ರತಿಯೊಂದು ದಾಳಿ ಕೂಡ ಅದಕ್ಕೆ ಮಾರಕವಾಗಲಿದೆ ಎಂದು ಯುಎಸ್ ಮಿಲಿಟರಿ ಎಚ್ಚರಿಸಿದೆ.
U.S. Navy and Air Force fighter jets conducted strikes tonight on 10 Iranian military targets at multiple locations in and near the Strait of Hormuz for Iran's drone attack on M/T Kiku. pic.twitter.com/Z0TLZRqmF6
— U.S. Central Command (@CENTCOM) June 28, 2026
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕುರಿತು ಹೇಳಿಕೆ ನೀಡಿದ್ದು, ಯುಎಸ್ ಯುದ್ಧವನ್ನು ಪುನರಾರಂಭಿಸಲು ಒತ್ತಾಯಿಸಿದರೆ ಇರಾನ್ ಮುಂದೆ ಅಸ್ತಿತ್ವದಲ್ಲಿ ಇರುವುದಿಲ್ಲ. ಅವರು ಎಂದಿಗೂ ಬುದ್ದಿ ಕಲಿಯುವುದಿಲ್ಲ. ಅವರಿಗೆ ಬುದ್ದಿ ಕಲಿಸುವುದು ಸಾಧ್ಯವಿದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಇರಾನ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತೊಮ್ಮೆ ಯುಎಸ್ ಮಿಲಿಟರಿ ಅವರ ಮೇಲೆ ದಾಳಿ ನಡೆಸಿದೆ. ಇದೇ ರೀತಿ ಮುಂದುವರಿದರೆ ಮುಂದೆ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳ್ಳಬಹುದು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಇರಾನ್ ಕೂಡ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದು, ಗಲ್ಫ್ ಪ್ರದೇಶದಲ್ಲಿನ ಅಮೆರಿಕದ ವಾಯು ನೆಲೆಗಳು ಮುಂಬರುವ ದಿನಗಳಲ್ಲಿ ನರಕವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ.
ಹೊರ್ಮುಜ್ ಜಲ ಸಂಧಿಯ ಕರಾವಳಿಯ ಸಿರಿಕ್ ನಲ್ಲಿ ಅಮೆರಿಕ ನಡೆಸುವ ದಾಳಿಯು ಜಲ ಸಂಧಿ ಮೇಲಿನ ನಮ್ಮ ನಿಯಂತ್ರಣವನ್ನು ತೆರೆಯಲು ಆಗುವುದಿಲ್ಲ. ಈ ಪ್ರದೇಶದಲ್ಲಿ ಅಮೆರಿಕದ ನೆಲೆಗಳ ಲೆಕ್ಕಾಚಾರವು ಪ್ರತ್ಯೇಕ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಅವರು ನರಕಯಾತನೆ ಅನುಭವಿಸಲಿದ್ದಾರೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ ನೌಕಾಪಡೆಯ ಕಮಾಂಡರ್ ತಿಳಿಸಿದ್ದಾರೆ.
ಇರಾನ್ ಯುದ್ಧ ಮತ್ತೆ ಮಧ್ಯಪ್ರಾಚ್ಯ ಭಾಗದಲ್ಲಿ ಆತಂಕವನ್ನು ಉಂಟು ಮಾಡಿದೆ. ಇರಾನ್ ಪ್ರದೇಶದ ಮೇಲೆ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್ ಕುವೈತ್ ಮತ್ತು ಬಹ್ರೇನ್ ವಿರುದ್ಧ ದಾಳಿ ನಡೆಸಿದೆ. ಕುವೈತ್‌ನ ಅಲಿ ಅಲ್-ಸಲೇಮ್ ನೆಲೆ, ಬಹರೈನ್ ನ ಪೋರ್ಟ್ ಸಲ್ಮಾನ್‌ನಲ್ಲಿರುವ ಐದನೇ ಫ್ಲೀಟ್ ನೌಕಾ ನೆಲೆಯ ಮೇಲೆ ದಾಳಿ ನಡೆಸಿ ಎಂಟು ಪ್ರಮುಖ ಯುಎಸ್ ಮಿಲಿಟರಿ ಸೌಲಭ್ಯಗಳನ್ನು ನಾಶ ಪಡಿಸಿರುವುದಾಗಿ ಇರಾನ್‌ನ ಗಾರ್ಡ್‌ಗಳು ತಿಳಿಸಿವೆ.
ಸೆಶೆಲ್ಸ್ ಸಸ್ಯೋದ್ಯಾನದಲ್ಲಿ ದೈತ್ಯ ಆಮೆಗಳನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ; ಫೋಟೊ ಇಲ್ಲಿದೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುವೈತ್, ನಮ್ಮ ಸೈನ್ಯವು ಇರಾನ್ ದಾಳಿಯನ್ನು ತಡೆಯುತ್ತಿದೆ. ಕುವೈತ್ ವಾಯು ರಕ್ಷಣಾ ಪಡೆಗಳು ಪ್ರಸ್ತುತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸುತ್ತಿವೆ. ಸ್ಫೋಟದ ಶಬ್ದಗಳು ಕೇಳಿಬಂದರೆ ಜನರು ಭಯಭೀತರಾಗಬೇಕಿಲ್ಲ. ಅವು ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಅವರ ದಾಳಿಯನ್ನು ಪ್ರತಿಬಂಧಿಸುವುದರಿಂದ ಉಂಟಾಗುತ್ತಿವೆ. ಸೈರನ್ ಮೊಳಗುವ ಸ್ಥಳದಲ್ಲಿ ಜನರು ಶಾಂತವಾಗಿದ್ದು, ಸುರಕ್ಷಿತ ತಾಣಗಳಿಗೆ ತೆರಳುವಂತೆ ಅದು ಸೂಚಿಸಿದೆ.