ಭಾರತದಲ್ಲಿ 17 ವರ್ಷ ಪೂರೈಸಿದ ಹಾರ್ಲೆ-ಡೇವಿಡ್ಸನ್: ಹೀರೋ ಮೋಟೋಕಾರ್ಪ್ ಸಹಭಾಗಿತ್ವದಲ್ಲಿ ಬ್ರಾಂಡ್ ವಿಸ್ತರಣೆ ಮತ್ತು ಬೆಳವಣಿಗೆಗೆ ಹೊಸ ವೇಗ
ಹಾರ್ಲೆ-ಡೇವಿಡ್ಸನ್ ನ ಐಕಾನಿಕ್ ಬ್ರಾಂಡ್ ಹಾಗೂ ಉತ್ಪನ್ನ ಪರಂಪರೆ ಮತ್ತು ಭಾರತೀಯ ಗ್ರಾಹಕರ ಬಗ್ಗೆ ಹೀರೋ ಮೋಟೋಕಾರ್ಪ್ಗಿರುವ ಆಳವಾದ ತಿಳುವಳಿಕೆ, ಉತ್ಪಾದನಾ ಶ್ರೇಷ್ಠತೆ, ಎಂಜಿನಿಯ ರಿಂಗ್ ಸಾಮರ್ಥ್ಯ ಹಾಗೂ ವ್ಯಾಪಕ ಮಾರುಕಟ್ಟೆ ವ್ಯಾಪ್ತಿ ಎರಡೂ ಒಂದಾಗಿದೆ. ನಾವು ಒಟ್ಟಾಗಿ, ಭಾರತದ ಬೆಳೆಯುತ್ತಿರುವ ಪ್ರೀಮಿಯಂ ಮೋಟಾರ್ಸೈಕಲ್ ವಿಭಾಗದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಹೆಚ್ಚಿನ ಗ್ರಾಹಕರಿಗೆ ಹಾರ್ಲೆ-ಡೇವಿಡ್ಸನ್ ಬ್ರಾಂಡ್ ಅನುಭವವನ್ನು ಸುಲಭ ವಾಗಿ ಲಭ್ಯವಾಗುವಂತೆ ಮಾಡಿದ್ದೇವೆ.
-
ಬೆಂಗಳೂರು: ಹಾರ್ಲೆ-ಡೇವಿಡ್ಸನ್ ಅಧ್ಯಕ್ಷ ಮತ್ತು ಸಿಇಓ ಆದ ಆರ್ಟಿ ಸ್ಟಾರ್ಸ್ ಹಾಗೂ ಹೀರೋ ಮೋಟೋಕಾರ್ಪ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಪವನ್ ಮುಂಜಾಲ್ ಅವರು ಮಿಷನ್: ದಿ ಬಿಗ್ ರೈಡ್ ಎಂಬ ಯೋಜನೆ ಮೂಲಕ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ಬ್ರಾಂಡ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ.
ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ 17 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಹೀರೋ ಮೋಟೋಕಾರ್ಪ್ ಸಹಭಾಗಿತ್ವದಲ್ಲಿ ಕೈಗೊಂಡಿರುವ ಈ ಯೋಜನೆಯು ಸುಧಾರಿತ ಗ್ರಾಹಕ ಅನುಭವ, ವಿಶಾಲವಾದ ಡೀಲರ್ ಜಾಲ, ವಿಸ್ತೃತ ಉತ್ಪನ್ನ ಶ್ರೇಣಿ ಮತ್ತು ದೇಶದ ಬೆಳೆಯುತ್ತಿರುವ ಪ್ರೀಮಿಯಂ ಮೋಟಾರ್ಸೈಕಲ್ ಹಾಗೂ ಸವಾರರ ಸಮುದಾಯದೊಂದಿಗೆ ಆಳವಾದ ಬಾಂಧವ್ಯ ಬೆಸೆಯುವತ್ತ ಗಮನಹರಿಸಲಿದೆ.
ಈ ಕುರಿತು ಮಾತನಾಡಿದ ಹೀರೋ ಮೋಟೋಕಾರ್ಪ್ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಪವನ್ ಮುಂಜಾಲ್ ಅವರು, "ಹಾರ್ಲೆ-ಡೇವಿಡ್ಸನ್ ನೊಂದಿಗಿನ ನಮ್ಮ ಸಹಭಾಗಿತ್ವವು ಪರಸ್ಪರ ಪೂರಕ ಸಾಮರ್ಥ್ಯಗಳನ್ನು ಹೊಂದಿರುವ ಎರಡು ಬಲಿಷ್ಠ ಮತ್ತು ಮೌಲ್ಯಯುತ ಸಂಸ್ಥೆಗಳನ್ನು ಒಗ್ಗೂಡಿಸಿದೆ.
ಹಾರ್ಲೆ-ಡೇವಿಡ್ಸನ್ ನ ಐಕಾನಿಕ್ ಬ್ರಾಂಡ್ ಹಾಗೂ ಉತ್ಪನ್ನ ಪರಂಪರೆ ಮತ್ತು ಭಾರತೀಯ ಗ್ರಾಹಕರ ಬಗ್ಗೆ ಹೀರೋ ಮೋಟೋಕಾರ್ಪ್ಗಿರುವ ಆಳವಾದ ತಿಳುವಳಿಕೆ, ಉತ್ಪಾದನಾ ಶ್ರೇಷ್ಠತೆ, ಎಂಜಿನಿಯರಿಂಗ್ ಸಾಮರ್ಥ್ಯ ಹಾಗೂ ವ್ಯಾಪಕ ಮಾರುಕಟ್ಟೆ ವ್ಯಾಪ್ತಿ ಎರಡೂ ಒಂದಾಗಿದೆ. ನಾವು ಒಟ್ಟಾಗಿ, ಭಾರತದ ಬೆಳೆಯುತ್ತಿರುವ ಪ್ರೀಮಿಯಂ ಮೋಟಾರ್ಸೈಕಲ್ ವಿಭಾಗದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಹೆಚ್ಚಿನ ಗ್ರಾಹಕರಿಗೆ ಹಾರ್ಲೆ-ಡೇವಿಡ್ಸನ್ ಬ್ರಾಂಡ್ ಅನುಭವವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದ್ದೇವೆ. ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ನ 17 ವರ್ಷಗಳನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಈ ಭದ್ರ ಬುನಾದಿಯ ಮೇಲೆ ಮತ್ತಷ್ಟು ಬೆಳೆಯಲು ಮತ್ತು ಈ ಸಹಭಾಗಿತ್ವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿ ದ್ದೇವೆ" ಎಂದರು.
ಹಾರ್ಲೆ-ಡೇವಿಡ್ಸನ್ನ ಗ್ಲೋಬಲ್ ಸಿಇಒ ಆರ್ಟಿ ಸ್ಟಾರ್ಸ್ ಮಾತನಾಡಿ, "ಹೀರೋ ಮೋಟೋ ಕಾರ್ಪ್ನೊಂದಿಗಿನ ನಮ್ಮ ಸಹಭಾಗಿತ್ವವು ಭಾರತದಲ್ಲಿ ನಿರಂತರವಾಗಿ ಬೆಳೆಯಲು ನಮಗೆ ಭದ್ರ ಬುನಾದಿಯನ್ನು ಒದಗಿಸಿದೆ. ಇದು ಹಾರ್ಲೆ-ಡೇವಿಡ್ಸನ್ ನ ಜಾಗತಿಕ ಬ್ರಾಂಡ್ ಮನ್ನಣೆ ಮತ್ತು ಉತ್ಪನ್ನ ಪರಿಣತಿಯನ್ನು ಹೀರೋ ಮೋಟೋಕಾರ್ಪ್ನ ವ್ಯಾಪಕ ರಿಟೇಲ್ ಜಾಲದೊಂದಿಗೆ ಸಂಯೋಜಿಸುತ್ತದೆ.
ಸುಧಾರಿತ ಬೇಡಿಕೆ ಮತ್ತು ನಿರಂತರ ರಿಟೇಲ್ ವೇಗವನ್ನು ಪ್ರತಿಬಿಂಬಿಸುವಂತೆ, ಈ ವರ್ಷ ನಮ್ಮ ಎಲ್ಲಾ ವಿಭಾಗಗಳಲ್ಲಿ ಮಾರುಕಟ್ಟೆ ಪಾಲು ಹೆಚ್ಚಾಗಿರುವುದನ್ನು ನಾವು ಕಂಡಿದ್ದೇವೆ. ಮುಂದಿನ ದಿನಗಳಲ್ಲಿ, ನಾವು ಹಾರ್ಲೆ-ಡೇವಿಡ್ಸನ್ ಸಮುದಾಯವನ್ನು ವಿಸ್ತರಿಸುವುದರೊಂದಿಗೆ ಸವಾರರು ಮತ್ತು ಡೀಲರ್ ಗಳೊಂದಿಗಿನ ನಮ್ಮ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅವಕಾಶವನ್ನು ಹೊಂದಿದ್ದೇವೆ" ಎಂದು ಹೇಳಿದರು.
ತನ್ನ ಭಾರತೀಯ ಕಾರ್ಯತಂತ್ರದ ಭಾಗವಾಗಿ, ಹಾರ್ಲೆ-ಡೇವಿಡ್ಸನ್ ಕಸ್ಟಮ್ ವೆಹಿಕಲ್ ಆಪರೇಷನ್ಸ್ (ಸಿವಿಓ), ಟೂರಿಂಗ್, ಕ್ರೂಸರ್ ಗಳು (ಸಾಫ್ಟ್ಟೈಲ್), ಅಡ್ವೆಂಚರ್ ಟೂರಿಂಗ್ ಮತ್ತು ಸ್ಪೋರ್ಟ್ ವಿಭಾಗಗಳಲ್ಲಿ ತನ್ನ ಜಾಗತಿಕ ಮೋಟಾರ್ಸೈಕಲ್ ಶ್ರೇಣಿಯನ್ನು ನೀಡುತ್ತಿದೆ. ಅಲ್ಲದೆ, ಬ್ರಾಂಡ್ ತನ್ನ ಹಾರ್ಲೆ-ಡೇವಿಡ್ಸನ್ ಎಕ್ಸ್ ಶ್ರೇಣಿಯ ಅಡಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುವುದನ್ನು ಮುಂದುವರಿಸಲಿದೆ.
ಉತ್ಸಾಹಿ ಸವಾರರ ಸಮುದಾಯವೇ ಹಾರ್ಲೆ-ಡೇವಿಡ್ಸನ್ ನ ಗುರುತಿನ ಕೇಂದ್ರಬಿಂದುವಾಗಿದೆ. ಮಾರ್ಚ್ 2027 ರವರೆಗೆ ರೋಮಾಂಚಕಾರಿ ಕಾರ್ಯಕ್ರಮಗಳ ಕ್ಯಾಲೆಂಡರ್ ಅನ್ನು ಇದು ಒಳಗೊಂಡಿದೆ. ಇದರಲ್ಲಿ ಉತ್ತರ ಮತ್ತು ಪೂರ್ವ ಎಚ್.ಓ.ಜಿ. ರೈಡ್ ಗಳು, ಫ್ಲಾಟ್ ಟ್ರ್ಯಾಕ್ ರೇಸಿಂಗ್ ಒಳಗೊಂಡ ಇಂಡಿಯಾ ಬೈಕ್ ವೀಕ್ನಲ್ಲಿ ಭಾಗವಹಿಸುವಿಕೆ, ಹಾರ್ಲೆ ರಾಕ್ ರೈಡರ್ಸ್ ಮತ್ತು ಕಸ್ಟಮ್ ಬಿಲ್ಡ್-ಆಫ್, ಇಂಡಿಯಾ ಎಚ್.ಓ.ಜಿ. ರಾಲಿ ಹಾಗೂ ಡೆಸ್ಟಿನೇಶನ್ ಎಕ್ಸ್ ಸೇರಿವೆ.
3,000 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಭಾರತದ ಹಾರ್ಲೆ ಓನರ್ಸ್ ಗ್ರೂಪ್ (ಎಚ್.ಓ.ಜಿ.), ಏಷ್ಯಾದ ಉದಯೋನ್ಮುಖ ಮಾರುಕಟ್ಟೆಗಳಲ್ಲಿಯೇ ಅತಿದೊಡ್ಡ ಎಚ್.ಓ.ಜಿ. ಜಾಲವಾಗಿದೆ. ಈ ಬಲಿಷ್ಠ ಸವಾರರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ, ನವೆಂಬರ್ 27–28, 2026 ರಂದು ಥೈಲ್ಯಾಂಡ್ನಲ್ಲಿ ನಡೆಯಲಿರುವ ಏಷ್ಯಾ ಹಾರ್ಲೆ ಡೇಸ್ ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ಭಾರತೀಯ ಹಾರ್ಲೆ-ಡೇವಿಡ್ಸನ್ ಸವಾರರು ಭಾಗವಹಿಸಲಿದ್ದಾರೆ. ಇದು ಈ ಪ್ರಾದೇಶಿಕ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿರುವ ಮಾರುಕಟ್ಟೆಗಳಲ್ಲಿ ಭಾರತವನ್ನು ಒಂದನ್ನಾಗಿಸಲಿದೆ.
2010 ರಲ್ಲಿ ತನ್ನ ಡೀಲರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಹಾರ್ಲೆ-ಡೇವಿಡ್ಸನ್ ಭಾರತದಲ್ಲಿ ಒಟ್ಟು 80,000 ಕ್ಕೂ ಹೆಚ್ಚು ಮೋಟಾರ್ಸೈಕಲ್ಗಳ ಗ್ರಾಹಕರ ನೆಲೆಯನ್ನು ದಾಟುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಹೀರೋ ಮೋಟೋಕಾರ್ಪ್ನೊಂದಿಗೆ ಜಂಟಿ ಯಾಗಿ ಅಭಿವೃದ್ಧಿಪಡಿಸಲಾದ ಹಾರ್ಲೆ-ಡೇವಿಡ್ಸನ್ ಎಕ್ಸ್ ಶ್ರೇಣಿಯು ಪ್ರಮುಖ ಬೆಳವಣಿಗೆಯ ಚಾಲಕವಾಗಿ ಹೊರಹೊಮ್ಮಿದ್ದು, 2023 ರಲ್ಲಿ ಬಿಡುಗಡೆಯಾದಾಗಿನಿಂದ 50,000 ಕ್ಕೂ ಹೆಚ್ಚು ಯುನಿಟ್ಗಳ ಮಾರಾಟದೊಂದಿಗೆ ಪ್ರೀಮಿಯಂ ಮೋಟಾರ್ಸೈಕಲ್ ಗ್ರಾಹಕರಲ್ಲಿ ಬ್ರಾಂಡ್ನ ವ್ಯಾಪ್ತಿಯನ್ನು ವಿಸ್ತರಿಸಿದೆ.
ಭಾರತದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ಹೀರೋ ಮೋಟೋಕಾರ್ಪ್ ಮತ್ತು ಹಾರ್ಲೆ-ಡೇವಿಡ್ಸನ್ ನಡುವಿನ ಈ ಕಾರ್ಯತಂತ್ರದ ಸಹಭಾಗಿತ್ವವು ರಾಯ್ಪುರ ಮತ್ತು ಇಂದೋರ್ನಲ್ಲಿ ಎರಡು ಹೊಸ ಪೂರ್ಣ-ಶ್ರೇಣಿಯ (ಫುಲ್-ಲೈನ್) ಡೀಲರ್ಶಿಪ್ಗಳನ್ನು ಸೇರ್ಪಡೆ ಗೊಳಿಸಲಿದೆ. ಇದರಿಂದ ಭಾರತದಾದ್ಯಂತ ಒಟ್ಟು ಡೀಲರ್ಶಿಪ್ಗಳ ಸಂಖ್ಯೆ 23ಕ್ಕೆ ಏರಲಿದೆ. ಇದಕ್ಕೆ ಪೂರಕವಾಗಿ, ಹಾರ್ಲೆ-ಡೇವಿಡ್ಸನ್ ಎಕ್ಸ್ ಮೋಟಾರ್ಸೈಕಲ್ಗಳ ಮಾರಾಟವನ್ನು ಬೆಂಬಲಿಸುವ ಹೀರೋ ಪ್ರೀಮಿಯಾ ಮಳಿಗೆಗಳ ಸಂಖ್ಯೆ 152ಕ್ಕೆ ವಿಸ್ತರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗಲಿದೆ.