WhatsApp Update: ಆಕ್ಟಿವ್ ಸಿಮ್ ಕಾರ್ಡ್ ಇಲ್ಲದೆ ಇನ್ನು ವಾಟ್ಸ್ಆ್ಯಪ್ ಬಳಕೆ ಅಸಾಧ್ಯ; ಏನಿದು ಹೊಸ ಕಾನೂನು?
ಭಾರತ ಸರ್ಕಾರ ಮೆಸೇಜಿಂಗ್ ಅಪ್ಲಿಕೇಷನ್ ಸಂಬಂಧಿಸಿದಂತೆ ಒಂದು ಹೊಸ ಪ್ರಮುಖ ನಿರ್ದೇಶನವನ್ನು ಜಾರಿ ಮಾಡಿದೆ. ಇದರಿಂದಾಗಿ ಬಳಸುವ ಕೋಟ್ಯಂತರ ಜನರ ಬಳಕೆ ವಿಧಾನದಲ್ಲಿ ಬದಲಾವಣೆ ಆಗುವುದು ಅನಿವಾರ್ಯವಾಗಲಿದೆ. ಇನ್ನು ಮುಂದೆ ಈ ಮೆಸೇಜಿಂಗ್ ಆ್ಯಪ್‌ಗಳನ್ನು ನೀವು ಬಳಸಬೇಕಾದರೆ ನಿಮ್ಮ ಬಳಿ ಆಕ್ಟಿವ್ ಸಿಮ್ ಕನೆಕ್ಷನ್ ಇರಬೇಕಾಗಿರುವುದು ಕಡ್ಡಾಯ.
ಸಾಂದರ್ಭಿಕ ಚಿತ್ರ -
ನವದೆಹಲಿ, ಡಿ. 2: ವಾಟ್ಸ್ಆ್ಯಪ್ (WhatsApp), ಟೆಲಿಗ್ರಾಂ, ಸಿಗ್ನಲ್, ಸ್ನ್ಯಾಪ್ ಚಾಟ್, ಜಿಯೋ ಚಾಟ್, ಅರಟ್ಟಾಯ್ ಮತ್ತು ಜೋಶ್‌ನಂತಹ ಮೆಸೇಜಿಂಗ್ ಆ್ಯಪ್ (Messaging App)ಗಳು ಇಂದು ನಮ್ಮ ಜೀವನದ ಭಾಗವಾಗಿ ಹೋಗಿವೆ. ಇವುಗಳಲ್ಲಿ ಒಂದಿಲ್ಲವಾದರೂ ನಮ್ಮ ದೈನಂದಿನ ಕೆಲಸ ಕಾರ್ಯಗಳು ನಡೆಯದು ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಇದೀಗ ಭಾರತ ಸರ್ಕಾರ (Indian Government) ಈ ಮೆಸೇಜಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದಂತೆ ಒಂದು ಹೊಸ ಪ್ರಮುಖ ನಿರ್ದೇಶನವನ್ನು ಜಾರಿ ಮಾಡಿದೆ. ಇದರಿಂದಾಗಿ ಈ ಆ್ಯಪ್‌ಗಳನ್ನು ಬಳಸುವ ಕೋಟ್ಯಂತರ ಜನರ ಬಳಕೆ ವಿಧಾನದಲ್ಲಿ ಬದಲಾವಣೆ ಆಗುವುದು ಅನಿವಾರ್ಯವಾಗಿದೆ.
ಇನ್ನು ಮುಂದೆ ಈ ಮೇಲೆ ಹೇಳಿದ ಮೆಸೇಜಿಂಗ್ ಆ್ಯಪ್‌ಗಳನ್ನು ನೀವು ಬಳಸಬೇಕಾದರೆ ನಿಮ್ಮ ಬಳಿ ಒಂದು ಸಕ್ರಿಯ ಸಿಮ್ ಸಂಪರ್ಕ (Active SIM Connection) ಇರಬೇಕಾಗಿರುವುದು ಕಡ್ಡಾಯ. ಇದಕ್ಕೆ ಸಂಬಂಧಿಸಿದಂತೆ ದೂರಸಂಪರ್ಕ ಇಲಾಖೆಯು ಈ ಫ್ಲ್ಯಾಟ್ ಫಾರ್ಮ್‌ಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಇದು, ಟೆಲಿ ಕಮ್ಯುನಿಕೇಷನ್ ಸೈಬರ್ ಸೆಕ್ಯುರಿಟಿ ತಿದ್ದುಪಡಿ ಕಾಯ್ದೆ– 2025ಕ್ಕೆ ಸಂಬಂಧಿಸಿದ್ದಾಗಿದೆ. ಈ ತಿದ್ದುಪಡಿ ಕಾಯ್ದೆಯು ಭಾರತದಲ್ಲಿ ಆ್ಯಪ್-ಆಧಾರಿತ ಸಂವಹನ ಸೇವೆಗಳನ್ನು ದೂರಸಂಪರ್ಕ ಮಾದರಿಯ ನಿಯಂತ್ರಣಕ್ಕೊಳಪಡಿಸಿದೆ.
ಅರೇ...ಇದೇನಿದು ಹಣ್ಣಿನ ಮೊಮೊಸ್? ಭಾರಿ ವೈರಲ್ ಆಗ್ತಿದೆ ಈ ವಿಚಿತ್ರ ಖಾದ್ಯದ ವಿಡಿಯೊ
ಈ ಹೊಸ ಕಾನೂನಿನ ಪ್ರಕಾರ, ವಾಟ್ಸ್ಆ್ಯಪ್ ಸಹಿತ ಮೆಸೇಜಿಂಗ್ ಆ್ಯಪ್‌ಗಳು ಇನ್ನು ಮುಂದೆ ಅಧಿಕೃತವಾಗಿ ದೂರ ಸಂಪರ್ಕ ಗುರುತಿನ ಬಳಕೆದಾರ ಸ್ವತ್ತುಗಳಾಗಳಿವೆ (ಟಿಐಯುಇ). ಇದರಿಂದಾಗಿ ಇಂತಹ ಆ್ಯಪ್‌ಗಳನ್ನು ಇನ್ನು ಮುಂದೆ ಸಕ್ರಿಯ ಸಿಮ್ ಸಂಪರ್ಕವಿಲ್ಲದೆ ಬಳಸಲು ಸಾಧ್ಯವಿಲ್ಲ. 90 ದಿನಗಳೊಳಗಾಗಿ ಈ ಸೇವೆಗಳಿಗೆ ಸಿಮ್ ಕಾರ್ಡ್ ಸಂಪರ್ಕ ಇರುವಂತೆ ಖಚಿತಪಡಿಸಿಕೊಳ್ಳುವುದು ಅಗತ್ಯ..
ಇನ್ನು, ವಾಟ್ಸ್ಆ್ಯಪ್ ಸಹಿತ ಮೆಸೇಜಿಂಗ್ ಆ್ಯಪ್‌ಗಳನ್ನು ತಮ್ಮ ಕಂಪ್ಯೂಟರ್‌ಗಳ ವೆಬ್ ಬ್ರೌಸರ್ ಮೂಲಕ ಬಳಸುವ ಬಳಕೆದಾರರೂ ಸಹ ಪ್ರತೀ 6 ಗಂಟೆಗಳಿಗೊಮ್ಮೆ ಲಾಗ್ ಔಟ್ ಮಾಡುವುದು ಕಡ್ಡಾಯ. ಬಳಿಕ ಕ್ಯು.ಆರ್. ಕೋಡ್ ಮೂಲಕ ಪುನರ್ ದೃಢೀಕರಣ ಮಾಡಿಸಿಕೊಳ್ಳಬೇಕಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಸೈಬರ್ ಅಪರಾಧಕ್ಕೆ ಕಡಿವಾನ ಹಾಕಬಹುದು ಎನ್ನುವುದು ಸರ್ಕಾರದ ವಾದ. ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವವರು ಇಂತಹ ಮೆಸೇಜಿಂಗ್ ಆ್ಯಪ್‌ಗಳನ್ನು ಸಿಮ್ ನಿಯಂತ್ರಣವಿಲ್ಲದೇ ದುರ್ಬಳಕೆ ಮಾಡಿಕೊಳ್ಳಲು ಅಸಾಧ್ಯ ಎಂದೂ ಸರ್ಕಾರ ತಿಳಿಸಿದೆ.
ಮೆಸೆಜಿಂಗ್ ಆ್ಯಪ್ ವೆರಿಫೈ ಮಾಡುವುದರಲ್ಲಿ ಇರುವ ಕೊರತೆಗಳನ್ನು ಸರಿಪಡಿಸಲು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ದೂರ ಸಂಪರ್ಕ ಇಲಾಖೆ ಹೇಳಿಕೊಂಡಿದೆ. ಪ್ರಸ್ತುತ ಈ ಹೆಚ್ಚಿನ ಮೆಸೇಜಿಂಗ್ ಆ್ಯಪ್‌ಗಳು ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಒಮ್ಮೆ ಮಾತ್ರ ವೆರಿಫೈ ಮಾಡಿಕೊಳ್ಳುತ್ತವೆ. ಅದೂ ಸಹ ಬಳಕೆದಾರರು ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವ ಸಂದರ್ಭದಲ್ಲಿ. ಇದಾದ ಬಳಿಕ ಆ ಬಳಕೆದಾರ ತನ್ನ ಸಿಮ್ ಕಾರ್ಡ್ ತೆಗೆದುಹಾಕಿದರೂ ಅಥವಾ ನಿಷ್ಕ್ರಿಯಗೊಳಿಸಿದರೂ ಈ ಆ್ಯಪ್‌ಗಳು ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ.
ಆಪರೇಷನ್ ಸಿಂದೂರ್ ಯಶಸ್ಸಿನಲ್ಲಿತ್ತು ರಷ್ಯಾದ ಪ್ರಮುಖ ಪಾತ್ರ
ಈ ವ್ಯವಸ್ಥೆಯಿಂದಾಗಿ, ಮೆಸೇಜಿಂಗ್ ಆ್ಯಪ್‌ಗಳ ದುರ್ಬಳಕೆ ಮಾಡಲು, ಸೈಬರ್ ಕ್ರಿಮಿನಲ್‌ಗಳಿಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಮತ್ತು ಭಾರತದಿಂದ ಹೊರಗಿದ್ದುಕೊಂಡೇ ಕಾರ್ಯ ನಿರ್ವಹಿಸಲು ಅವಕಾಶವಿತ್ತು. ಮಾತ್ರವಲ್ಲದೆ ಸಿಮ್ ಬದಲಾಯಿಸಿ ಅಥವಾ ನಿಷ್ಕ್ರಿಯಗೊಳಿಸಿಯೂ ಈ ಸೇವೆಗಳನ್ನು ಬಳಸಬಹುದಾಗಿತ್ತು.
ಇದೀಗ, ಈ ಹೊಸ ನಿಯಮದ ಮೂಲಕ ಮೆಸೇಜಿಂಗ್ ಫ್ಲ್ಯಾಟ್‌ಫಾರ್ಮ್‌ಗಳ ಮೂಲಕ ವಂಚನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ ಎಂಬ ಭರವಸೆ ಮೂಡಿದೆ ಸೆಲ್ಯುಲರ್ ಅಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಐ) ಹೇಳಿಕೊಂಡಿದೆ.
ಇದೇ ಮಾದರಿಯ ಸುರಕ್ಷಾ ವಿಧಾನಗಳು ಈಗಾಗಲೇ ಡಿಜಿಟಲ್ ಪೇಮೆಂಟ್ ವಿಧಾನದಲ್ಲಿ ಜಾರಿಯಲ್ಲಿವೆ. ಅನಧಿಕೃತ ವ್ಯವಹಾರ ಚಟುವಟಿಕೆಗಳನ್ನು ತಡೆಗಟ್ಟಲು ಬ್ಯಾಂಕಿಂಗ್ ಮತ್ತು ಯುಪಿಐ ಆ್ಯಪ್‌ಗಳು ಕಠಿಣ ಸಿಮ್ ವೆರಿಫಿಕೇಶನ್ ನಿಯಮಗಳನ್ನು ಅನುಸರಿಸುತ್ತಿವೆ.